Author: admin
ಉಡುಪಿ: ವಿಶ್ವಕರ್ಮ ಸಹಕಾರ ಬ್ಯಾಂಕ್ ಇದರ ಸುವರ್ಣ ವರ್ಷಾಚರಣೆಯ ಅಂಗವಾಗಿ ಬ್ಯಾಂಕಿನ ಉಡುಪಿ ಶಾಖೆಯ ನೇತೃತ್ವದಲ್ಲಿ ಉಡುಪಿ ದೊಡ್ಡಣ್ಣಗುಡ್ಡೆ ಪರಿಸರದಲ್ಲಿ ಭಾನುವಾರ “ಸ್ವಚ್ಛತಾ ಹೀ ಸೇವಾ” ಘೋಷಣೆಯಡಿ ಬ್ಯಾಂಕಿನ ಸ್ವಚ್ಛ ಭಾರತ್ 17ನೇ ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು. https://chat.whatsapp.com/FCEnlTkAKCC0MGPhXtX4i4 ಕಾರ್ಯಕ್ರಮಕ್ಕೆ ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಇದರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಜೆಸಿಐ ದೊಡ್ಡಣ್ಣಗುಡ್ಡೆ ಪ್ರಕೃತಿ ಇದರ ಸಂಸ್ಥಾಪಕ ಎಂ.ಎನ್ ನಾಯಕ್ ಮತ್ತು ವಿಶ್ವಕರ್ಮ ಸಮಾಜ ಸೇವೆ ಸಂಘ, ಸಗ್ರಿ-ಚಕ್ರತೀರ್ಥ ಇದರ ಅಧ್ಯಕ್ಷರಾದ ಶ್ರೀಪತಿ ಆಚಾರ್ಯ ಮತ್ತು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ ಜೊತೆಗೂಡಿ ಚಾಲನೆ ನೀಡಿದರು. ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಇದರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಮಾತನಾಡಿ ಸ್ವಚ್ಛ ಪರಿಸರವು ಉತ್ತಮ ಆರೋಗ್ಯ ಮತ್ತು ಸುಸ್ಥಿರ ಸಮಾಜದ ಆಧಾರವಾಗಿದ್ದು, ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಜೀವನದ ಭಾಗವಾಗಿಸಿಕೊಳ್ಳಬೇಕು. ಈ ವಿಷಯದಲ್ಲಿ ಜಾಗೃತಿ ಮೂಡಿಸಿ ಎಚ್ಚರಿಸುವ ಮಾನವೀಯ ಹಾಗೂ ಸಾಮಾಜಿಕ ಕಾರ್ಯವನ್ನು ವಿಶ್ವಕರ್ಮ ಸಹಕಾರ ಬ್ಯಾಂಕ್ ಮಾಡುತ್ತಿರುವುದು…
✍️ ಸಾಣೂರು ನರಸಿಂಹ ಕಾಮತ್ ಪ್ರಾಚೀನ ಭಾರತದಲ್ಲಿ ವೇದಗಳ ಕಾಲದಿಂದಲೂ ಸಹಕಾರ ತತ್ವವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಋಗ್ವೇದವು //ಸಂಘ ಛಧ್ವಂ ಸಂವದಧ್ವಂ ಸಂವೋ ಮನಾಂಸಿ ಜಾನತಾಂ// ನಾವೆಲ್ಲರೂ ಒಟ್ಟಿಗೆ ಹೆಜ್ಜೆ ಹಾಕೋಣ. ಒಳ್ಳೆಯ ಮಾತುಗಳೊಂದಿಗೆ ಅರಿತು ಕಲಿತು ಬಾಳೋಣ ಎಂಬುದಾಗಿ ಹೇಳಿದೆ. https://chat.whatsapp.com/FCEnlTkAKCC0MGPhXtX4i4 ನಮ್ಮ ದೇಶದ ಸಹಕಾರಿ ಚಳವಳಿಗೆ 121 ವರ್ಷಗಳ ಸುಧೀರ್ಘ ಇತಿಹಾಸವಿದ್ದು ಸಹಕಾರ ರಂಗವು ಸಮಾಜದ ಎಲ್ಲಾ ಸ್ತರಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. “ಆಡು ಮುಟ್ಟದ ಸೊಪ್ಪಿಲ್ಲ; ಸಹಕಾರಿ ಕ್ಷೇತ್ರ ಮುಟ್ಟದ ಜಾಗವಿಲ್ಲ ” ಎಂಬಂತೆ ಹುಟ್ಟಿನಿಂದ ಚಟ್ಟದವರೆಗೆ ಮನುಷ್ಯನ ಜೀವನದ ಎಲ್ಲಾ ಹಂತಗಳಲ್ಲೂ ಎಲ್ಲಾ ಅವಶ್ಯಕತೆಗಳನ್ನು ಸಹಕಾರ ಕ್ಷೇತ್ರ ತನ್ನದೇ ಆದ ರೀತಿಯಲ್ಲಿ ಪೂರೈಸುತ್ತಿದೆ. ಸಹಕಾರಿ ದತ್ತಾಂಶದ ಪ್ರಕಾರ ಪ್ರಸ್ತುತ ನಮ್ಮ ದೇಶದಲ್ಲಿ 55 ವಿಧದ 8.4 ಲಕ್ಷ ಸಹಕಾರಿ ಸಂಘಗಳು ಸ್ಥಾಪನೆಯಾಗಿದ್ದು ದೇಶದ ಸುಮಾರು 30 ಕೋಟಿ ಜನ ಸಹಕಾರಿ ಸಂಘದ ಸದಸ್ಯರಾಗಿದ್ದಾರೆ. ವಿಶೇಷವಾಗಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಬ್ಯಾಂಕಿಂಗ್, ಶಿಕ್ಷಣ,…
ಉಡುಪಿ: ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಶುಕ್ರವಾರ ಉಡುಪಿ ಚಿತ್ತರಂಜನ್ ವೃತ್ತದ ಉಪೇಂದ್ರ ಕಟ್ಟಡದ ಒಂದನೇ ಮಹಡಿಯಲ್ಲಿ ಶುಭಾರಂಭಗೊಂಡಿತು. https://chat.whatsapp.com/FCEnlTkAKCC0MGPhXtX4i4 ನೂತನ ಸೊಸೈಟಿಯನ್ನು ಆನೆಗುಂದಿ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಿ, ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ತಮ್ಮ ಮುಂದಿನ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮಾಜಕ್ಕೆ ಆರ್ಥಿಕ ಶಕ್ತಿಯನ್ನು ನೀಡುವಲ್ಲಿ ಗುರಿಯನ್ನು ತಲುಪಲಿ ಎಂದರು. ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಸಮಾಜದ ಏಳಿಗೆಗಾಗಿ ಆರ್ಥಿಕ ವ್ಯವಸ್ಥೆಗೆ ಉತ್ತಮ ಕೊಡುಗೆಯನ್ನು ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನೀಡಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ಯ ಅವರು, ಸಹಕಾರ ಸಂಸ್ಥೆಗಳ ಸಮಾಜದ ಬೆಳವಣಿಗೆಗೆ ಪೂರಕ ಹಾಗೂ ಪರಿಣಾಮಕಾರಿ ಸಾಧನಗಳು. ಹೊಸ ರೀತಿಯ ಸಂಸ್ಥೆಗಳಿಂದ ಸಮಾಜವು ಬೆಳವಣಿಗೆ ವೇಗ ಸಿಗುತ್ತದೆ. ಈ ನಿಟ್ಟಿನಲ್ಲಿ ಉಡುಪಿ ಗೋಲ್ಡ್ ಸ್ಮಿತ್ಸ್ ಕೋಆಪರೇಟಿವ್ ಸಂಸ್ಥೆಯು…
ಶತಮಾನೋತ್ಸವ ಸಮಾರಂಭ, ಉದ್ದೇಶಿತ ಶತ ಸಂಭ್ರಮ ಕಟ್ಟಡದ ಶಂಕುಸ್ಥಾಪನೆ ಮಡಿಕೇರಿ: ಇಲ್ಲಿನ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಶತ ಸಂಭ್ರಮ ಸಮಾರಂಭ ಜ.11ರಂದು ನಡೆಯಲಿದ್ದು, ಆ ಪ್ರಯುಕ್ತ ಬೆಳಗ್ಗೆ 9.30ಕ್ಕೆ ಶತ ಸಂಭ್ರಮ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಮಡಿಕೇರಿಯ ಗುರು ಸದನಲ್ಲಿ ನಡೆಯಲಿದೆ. https://chat.whatsapp.com/FCEnlTkAKCC0MGPhXtX4i4 ಬೆಳಗ್ಗೆ 10.30ರಿಂದ ಮಡಿಕೇರಿಯ ಗೌಡ ಸಮಾಜ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಶತ ಸಂಭ್ರಮದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆಯ ಶಾಸಕ ಎ.ಎಸ್ ಪೊನ್ನಣ್ಣ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ದೇಶಿತ ಶತ ಸಂಭ್ರಮ ಕಟ್ಟಡದ ನೀಲಿನಕ್ಷೆ ಅನಾವರಣ ಮಾಡಲಿದ್ದಾರೆ. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸ್ಮರಣ ಸಂಚಿಕೆ, ಕ್ಯಾಲೆಂಡರ್ ಮತ್ತು ಉಡುಗೊರೆ ಅನಾವರಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಜಿ.ನಂಜನ…
ಬಂಟ್ವಾಳ: ಇಲ್ಲಿನ ಬಿ.ಸಿ. ರೋಡ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನಿ. ವತಿಯಿಂದ ಸಹಕಾರಿಯ ಪಿಗ್ಮಿ ಗ್ರಾಹಕರಿಗೋಸ್ಕರ ಉಚಿತ ಚಿನ್ನ ಮತ್ತು ಬೆಳ್ಳಿಯ ನಾಣ್ಯ ಗೆಲ್ಲುವ ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ಪ್ರಥಮವಾಗಿ ಬಿ.ಸಿ.ರೋಡ್ ನ ಹೋಟೆಲ್ ಉದ್ಯಮಿಗಳಾದ ನಾಗ ಕ್ಯಾಂಟೀನ್ ಮಾಲಕರಾದ ಗುರುದತ್ ಹೆಗಡೆ ಇವರು ಬೆಳ್ಳಿಯ ನಾಣ್ಯ ಅದೃಷ್ಟ ಗೆದ್ದುಕೊಂಡಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಇವರಿಗೆ ಶರ್ವಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ವೆಂಕಟೇಶ್ ಭಟ್ ಇವರು ಬೆಳ್ಳಿಯ ನಾಣ್ಯವನ್ನು ನೀಡಿದರು. ಜೊತೆಯಲ್ಲಿ ಸಹಕಾರಿಯ ಪಿಗ್ಮಿ ಸಂಗ್ರಹಕರಾದ ರೇಖಾ ಪ್ರಭು ಇದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.೦ ತಂತ್ರಾಂಶದಲ್ಲೇ ಡಿಜಿಟಲ್ ಇ ಸ್ಟಾಂಪ್ ಸೇವೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಪ್ರತಿ ಉಪ ನೋಂದಣಿ ಕಚೇರಿಯಲ್ಲೂ ಡಿಜಿಟಲ್ ಇ-ಸ್ಟಾಂಪ್ ತರಬೇತಿ ನೀಡಲು ಮಾರ್ಗಸೂಚಿ ಹೊರಡಿಸಿದೆ. https://chat.whatsapp.com/FCEnlTkAKCC0MGPhXtX4i4 ಕಾನೂನು ದಾಖಲೆಗಳಿಗೆ ಅಗತ್ಯವಾಗಿದ್ದ ಛಾಪಾ ಕಾಗದ ಮಾಯವಾಗಿ ಇ -ಸ್ಟಾಂಪ್ ಜಾರಿಗೆ ತರಲಾಗಿತ್ತು. ಇದೀಗ ಇ-ಸ್ಟಾಂಪ್‌ಗೂ ಬದಲಿ ವ್ಯವಸ್ಥೆ ಮಾಡಲಾಗಿದ್ದು, ಡಿಜಿಟಲ್ ಇ-ಸ್ಟಾಂಪ್ ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಟಾಂಪ್) ನಿಯಮಗಳು 2025 ಅನ್ನು ರಚಿಸಲಾಗಿದೆ. ಇದರ ಪ್ರಕಾರ ಜನ ಮನೆಯಿಂದಲೇ ಆನ್‌ಲೈನ್ ಮೂಲಕ ಇ-ಸ್ಟಾಂಪ್ ಪಡೆಯಬಹುದು. ಈ ವಿಷಯಕ್ಕೆ ಸಂಬಂಧಿಸಿ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಕಚೇರಿಯಿಂದ ರಾಜ್ಯಾದ್ಯಂತ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಸೌಹಾರ್ದ ಸಹಕಾರಿಗಳ ಸಿಬ್ಬಂದಿಗಳಿಗೆ ಪ್ರತಿ ಉಪ ನೋಂದಣಿ ಕಚೇರಿಯಲ್ಲಿ ಡಿಜಿಟಲ್…
ಜನವರಿ 22ರಂದು ಮೂಡುಬಿದಿರೆ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭ
ಮೂಡುಬಿದಿರೆ: ಇಲ್ಲಿನ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಸ್ಥಳಾಂತರಿತ ಸ್ವಂತ ಕಟ್ಟಡದ ಉದ್ಘಾಟನಾ ಸಮಾರಂಭ ಜನವರಿ 22ರ ಗುರುವಾರ ಮೂಡುಬಿದಿರೆ ಪುರಸಭೆಯ ಎದುರಿನ ಫಾರ್ಚೂನ್ ನೀತಿ ಹೈಟ್ಸ್ ಕಟ್ಟಡದಲ್ಲಿ ನಡೆಯಲಿದೆ. https://chat.whatsapp.com/FCEnlTkAKCC0MGPhXtX4i4 ಬೆಳಗ್ಗೆ 10ಕ್ಕೆ ಶಾಸಕ ಉಮಾನಾಥ ಎ.ಕೋಟ್ಯಾನ್ ಉದ್ಘಾಟನೆ ನೆರವೇರಿಸಲಿದ್ದು, ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಜಗದ್ಗುರು ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ರಂಜಿತ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ, ಉದ್ಯಮಿಗಳಾದ ಕೆ.ಶ್ರೀಪತಿ ಭಟ್, ಶಶಿಧರ ಶೆಟ್ಟಿ ನವಶಕ್ತಿ ಬೆಳ್ತಂಗಡಿ, ಮಾಜಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್, ಅಭಯಚಂದ್ರ ಜೈನ್, ಅಸೋಸಿಯೇಟ್ ಡೀನ್ ಡಾ.ಅಮರಶ್ರೀ ಅಮರನಾಥ ಶೆಟ್ಟಿ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ಬೆಳುವಾಯಿ ಸಹಕಾರಿ…
ಮೂಡುಬಿದಿರೆ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧೀನ ಸಂಸ್ಥೆಯಾದ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ (ಕೆಐಸಿಎಂ) ಮೂಡುಬಿದಿರೆ (ದಕ್ಷಿಣ ಕನ್ನಡ ಜಿಲ್ಲೆ) ಇಲ್ಲಿನ ಸಹಕಾರ ತರಬೇತಿ ಸಂಸ್ಥೆಯಲ್ಲಿ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ (ಡಿಸಿಎಂ) ತರಬೇತಿಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಜನವರಿ 15ರ ತನಕ ವಿಸ್ತರಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಸಹಕಾರ ಇಲಾಖೆ ಮತ್ತು ಸಹಕಾರ ಕ್ಷೇತ್ರದ ಸಹಕಾರ ಬ್ಯಾಂಕ್, ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಕೆಎಂಎಫ್ ಹಾಲು ಒಕ್ಕೂಟ ಮತ್ತು ಇತರ ಎಲ್ಲಾ ವರ್ಗ ಸಹಕಾರ ಸಂಘಗಳ ಉದ್ಯೋಗಗಳ ನೇಮಕಾತಿಯಲ್ಲಿ ಈ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಸುಸಜ್ಜಿತ ಕೊಠಡಿಯಲ್ಲಿ ಸ್ಮಾರ್ಟ್ ಕ್ಲಾಸ್ ಸಹಿತ ಆರು ತಿಂಗಳ ಕಂಪ್ಯೂಠರ್ ತರಬೇತಿ ನೀಡಲಾಗುವುದು. ಸಹಕಾರ ಸಂಘ/ ಸಂಸ್ಥೆಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳ ಪದೋನ್ನತಿಗೆ…
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಂಜಿಮೊಗರು ಶಾಖೆಯ ಒಂಬತ್ತನೇ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಉರುಂದಾಡಿ ಪಂಜಿಮೊಗರು, ಯುವವಾಹಿನಿ ಕೂಳೂರು ಘಟಕ, ಲಯನ್ಸ್ ಕ್ಲಬ್ ಮಂಗಳೂರು ಲೇಡಿಹಿಲ್ ಮತ್ತು ಲಯನ್ಸ್ ಕ್ಲಬ್ ಕುದುರೆಮುಖ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾವೂರು ಪ್ರಖಂಡ ಇವರ ಸಹಯೋಗದೊಂದಿಗೆ ಉರುಂದಾಡಿಯ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ ಸಭಾಭವನದಲ್ಲಿ ಜರುಗಿತು. https://chat.whatsapp.com/FCEnlTkAKCC0MGPhXtX4i4 ನಿಕಟಪೂರ್ವ ಕಾರ್ಪೋರೇಟರ್ ಅನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ,ಆತ್ಮಶಕ್ತಿ ಸಹಕಾರಿ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ನಿರಂತರವಾಗಿ ಆರೋಗ್ಯ ಶಿಬಿರ ಏರ್ಪಡಿಸುತ್ತ ಬಂದಿದ್ದು ಇಂತಹ ಸಮಾಜಮುಖಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಡಲಿ ಎಂದು ಶುಭ ಹಾರೈಸಿದರು. ಮಂಗಳ ಕಾಲೇಜು ,ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ ಇದರ ವಿದ್ಯಾರ್ಥಿನಿ ಮಂಜುಳಾ ಆರೋಗ್ಯದ ಮುಂಜಾಗ್ರತೆ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಅಧ್ಯಕ್ಷತೆ…
ತಾಯಿಯ ಆಧಾರ್ ಕಾರ್ಡ್ ಮೇಲೆ ಚಿಕಿತ್ಸೆ, ಸಹಕಾರಿ ಸಂಘಗಳ ಸದಸ್ಯರಿಗೆ ಅನ್ವಯ ಬೆಂಗಳೂರು: ರಾಜ್ಯದ ಸಾವಿರಾರು ಸಹಕಾರಿ ಸಂಘಗಳ ಲಕ್ಷಾಂತರ ಸದಸ್ಯರಿಗೆ ಚಿಕಿತ್ಸೆಗೆ ವರದಾನವಾಗಿರುವ ಯಶಸ್ವಿನಿ ಯೋಜನೆಯನ್ನು ಮುಂದುವರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿದ್ದು ಈ ಬಾರಿ ನವಜಾತ ಶಿಶುಗಳಿಗೂ ಯಶಸ್ವಿನಿ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ. https://chat.whatsapp.com/FCEnlTkAKCC0MGPhXtX4i4 ಈ ಕುರಿತು ಸಮಗ್ರ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸಹಕಾರ ಇಲಾಖೆ ನವಜಾತ ಶಿಶುಗಳಿಗೂ ಚಿಕಿತ್ಸೆಗೆ ಅವಕಾಶ ಕಲ್ಪಿಸಿದೆ. ಜನವರಿ 3ರಿಂದಲೇ ನೋಂದಣಿ ಆರಂಭವಾಗಿದ್ದು, ಈ ಬಾರಿ ರಾಜ್ಯಾದ್ಯಂತ 50 ಸಾವಿರಕ್ಕೂ ಅಧಿಕ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ತಾಯಿಯ ಆಧಾರ್ ಕಾರ್ಡ್ ಮೂಲಕ ನವಜಾತ ಶಿಶುಗಳ ಆರೋಗ್ಯಕ್ಕೆ ರಕ್ಷಾಕವಚವಾಗಿ ಯಶಸ್ವಿನಿಯನ್ನು ಬಳಸಿಕೊಳ್ಳಲು ಸಹಕಾರ ಇಲಾಖೆ ಮುಂದಾಗಿದೆ. ಯಶಸ್ವಿನಿ ಯೋಜನೆಯಲ್ಲಿ ನೋಂದಣಿ ಮಾಡುವವರಿಗೆ ಮಿತಿ ನಿಗದಿಪಡಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಸದಸ್ಯರಿಗೆ ಪ್ರತ್ಯೇಕ ನೋಂದಣಿ ಶುಲ್ಕ ನಿಗದಿ ಮಾಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ನಾಲ್ಕು ಜನ ಇರುವ ಕುಟುಂಬಕ್ಕೆ ವಾರ್ಷಿಕ 500 ರೂ.,…
