Author: admin
ಮುಡಿಪುವಿನಲ್ಲಿ ಉಚಿತ ನೇತ್ರ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪ್ರಶಾಂತ್ ಕಾಮತ್ ಅಭಿಪ್ರಾಯ ಮುಡಿಪು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯ ಒಂಬತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರ್ನಾಡು ಇವರ ಜಂಟಿ ಸಹಯೋಗದೊಂದಿಗೆ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ ಮಂಗಳೂರು ಇಲ್ಲಿನ ನುರಿತ ವೈದ್ಯರ ತಂಡದವರಿಂದ ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರವು ಗೋಪಾಲಕೃಷ್ಣ ಸಭಾಗೃಹ ಅಮ್ಮೆಂಬಳ ಮುಡಿಪು ಇಲ್ಲಿ ಜರುಗಿತು. https://chat.whatsapp.com/FCEnlTkAKCC0MGPhXtX4i4 ಕುರ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮಾ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರ್ನಾಡು ಘಟಕದ ಅಧ್ಯಕ್ಷರಾದ ಮಮತಾ ಮಾತನಾಡಿ, ಗ್ರಾಮೀಣ ಪ್ರದೇಶ ಹಾಗೂ ಹಿಂದುಳಿದ ನಗರ ಪ್ರದೇಶಗಳಲ್ಲಿ ಇಂತಹ ಶಿಬಿರ ಆಯೋಜನೆ ಮಾಡುವುದು ಒಳ್ಳೆಯ ವಿಷಯ. ಆತ್ಮಶಕ್ತಿ ಸಹಕಾರಿ ಸಂಘವು ಇಂತಹ ಗುಣಮಟ್ಟದ ಶಿಬಿರಗಳನ್ನು ಆಯೋಜಿತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು. ಮಂಗಳ ಕಾಲೇಜು, ಮಂಗಳ ಆಸ್ಪತ್ರೆ…
ಹಳೆಯಂಗಡಿ: 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆಯ ಸಂಧರ್ಭದಲ್ಲಿ ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಮ್ಮಿಕೊಂಡ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಚಿತ್ರವನ್ನು ಸೋಮವಾರ ಡಾ.ರಾಜೇಂದ್ರ ಕುಮಾರ್ ಅವರಿಗೆ ಹಸ್ತಾಂತರ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ದ.ಕ ಮತ್ತು ಉಡುಪಿ ಜಿಲ್ಲಾಮಟ್ಟದಲ್ಲಿ ಹೈಸ್ಕೂಲ್ ಮಕ್ಕಳಿಗೆ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ಭಾವಚಿತ್ರ ರಚಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಚಿತ್ರಕಲೆಯನ್ನು ಅವರಿಗೆ ನೀಡಲಾಯಿತು. ಚಿತ್ರಕಲೆಯನ್ನು ಸ್ವೀಕರಿಸಿ ಮಾತನಾಡಿದ ಡಾ. ರಾಜೇಂದ್ರ ಕುಮಾರ್, ಪ್ರಿಯದರ್ಶಿನಿ ಸೊಸೈಟಿಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಯ ಅಭಿವೃದ್ಧಿಗೆ ಎಸ್ಸಿಡಿಸಿಸಿ ಬ್ಯಾಂಕಿನ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಹೇಳಿದರು. ಪ್ರಿಯದರ್ಶಿನಿ ಸೊಸೈಟಿ ಅಧ್ಯಕ್ಷರಾದ ಹೆಚ್ ವಸಂತ್ ಬೆರ್ನಾರ್ಡ್, ಸಿಇಒ ಸುದರ್ಶನ್ ಹಾಗೂ ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ…
ವೆನ್‌ಲಾಕ್, ಲೇಡಿಗೋಶನ್ ಆಸ್ಪತ್ರೆಯ ರೋಗಿಗಳ ಪರಿಚಾರಕರಿಗೆ ಮಿರಾಕಲ್ಸ್ ಆಫ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಿಂದ ಆಹಾರ ವಿತರಣೆ
ಮಂಗಳೂರು: ಸಹಕಾರಿ ಸಂಘಗಳು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಳ್ಳುತ್ತವೆ ಎಂಬ ಮಾದರಿ ಸಂದೇಶದೊಂದಿಗೆ ಇಲ್ಲಿನ ಮಿರಾಕಲ್ಸ್ ಆಫ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಕ್ರಿಸ್‌ಮಸ್ ಹಬ್ಬದ ವಿಶೇಷವಾಗಿ ಆಹಾರ ವಿತರಣಾ ಸೇವಾ ಕಾರ್ಯ ಹಮ್ಮಿಕೊಂಡಿತ್ತು. https://chat.whatsapp.com/FCEnlTkAKCC0MGPhXtX4i4 ಮಂಗಳೂರಿನ ವೆನ್‌ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳ ಸುಮಾರು 600ರಷ್ಟು ಪರಿಚಾರಕರಿಗೆ ಶನಿವಾರ ಆಹಾರ ವಿತರಣಾ ಸೇವೆಯ ಮೂಲಕ ಊಟದ ವ್ಯವಸ್ಥೆ ಮಾಡಿತ್ತು. ಎಂ ಫ್ರೆಂಡ್ಸ್ ತಂಡ ಸಹಯೋಗ ನೀಡಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ. ಭಟ್ ಆಗಮಿಸಿದ್ದರು. ಎಂ ಫ್ರೆಂಡ್ಸ್‌ನ ಕಾರ್ಯಕರ್ತರಾದ ಹನೀಫ್ ಹಾಜಿ, ರಶೀದ್, ಸಲೀಮ್ ಉಳ್ಳಾಲ, ಮಿರಾಕಲ್ಸ್ ಸಹಕಾರಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಜ್ಯೂಸ್ ಪಾಲ್ ಬಿ.ವೇಗಸ್, ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಇಕ್ಬಾಲ್ ಶೇಖ್, ಶಾಖಾ ವ್ಯವಸ್ಥಾಪಕರಾದ ಜೈಸನ್ ಆಲ್ವಿನ್ ಪಿಂಟೋ ಹಾಗೂ ಸಹಕಾರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ…
ಪರಿಸರ ಸ್ವಚ್ಛತೆಗಾಗಿ ಎಲ್ಲರಲ್ಲೂ ಜಾಗೃತಿ: ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ ಕಾರ್ಕಳ: ಸ್ವಚ್ಛತೆಯ ಜಾಗೃತಿ ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಬೇಕು. ನಮ್ಮ ಮನೆಯ ಕಸದ ನಿರ್ವಹಣೆಯ ಜವಾಬ್ದಾರಿಯನ್ನು ನಾವು ಕಸ ಹುಟ್ಟುವ ಮೂಲದಲ್ಲೇ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಆಗ ನಮ್ಮ ಪರಿಸರ ಸ್ವಚ್ಛ ಪರಿಸರವಾಗುತ್ತದೆ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ಭಾನುವಾರ ನಡೆದ 13ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಮಾತನಾಡಿದರು. https://chat.whatsapp.com/FCEnlTkAKCC0MGPhXtX4i4 ಕಾರ್ಕಳ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವದಿಸಿದರು. ಜೈನ್ ಮಿಲನ್ ಕಾರ್ಕಳದ ಅಧ್ಯಕ್ಷರಾದ ಅಶೋಕ್ ಎಚ್ ಎಂ., ಜೆಸಿಐ ಕಾರ್ಕಳದ ಅಧ್ಯಕ್ಷರಾದ ಶ್ವೇತಾ ಎಸ್ ಜೈನ್ ಮತ್ತು ರೋಟರಿ ಕ್ಲಬ್ ಕಾರ್ಕಳದ ಪಬ್ಲಿಕ್ ಇಮೇಜ್ ಇದರ ಅಧ್ಯಕ್ಷರಾದ ರೊಟೇರಿಯನ್ ಪಿಹೆಚ್ಎಫ್ ರೇಖಾ ಉಪಾಧ್ಯಾಯ ಇವರು ಹಸಿರು…
ವಿಶ್ವಕರ್ಮ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ ಕಾರ್ಕಳ: ಸ್ವಚ್ಛತೆಯ ಜಾಗೃತಿ ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಬೇಕು. ನಮ್ಮ ಮನೆಯ ಕಸದ ನಿರ್ವಹಣೆಯ ಜವಾಬ್ದಾರಿಯನ್ನು ನಾವು ಕಸ ಹುಟ್ಟುವ ಮೂಲದಲ್ಲಿಯೇ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಆಗ ನಮ್ಮ ಪರಿಸರ ಸ್ವಚ್ಛ ಪರಿಸರವಾಗುತ್ತದೆ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ಭಾನುವಾರ ನಡೆದ 13ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಮಾತನಾಡಿದರು. https://chat.whatsapp.com/FCEnlTkAKCC0MGPhXtX4i4 ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮವನ್ನು ಕಾರ್ಕಳ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವದಿಸಿದರು. ಜೈನ್ ಮಿಲನ್ ಕಾರ್ಕಳದ ಅಧ್ಯಕ್ಷರಾದ ಅಶೋಕ್ ಎಚ್ ಎಮ್, ಜೆಸಿಐ ಕಾರ್ಕಳದ ಅಧ್ಯಕ್ಷರಾದ ಶ್ವೇತಾ ಎಸ್ ಜೈನ್ ಮತ್ತು ರೋಟರಿ ಕ್ಲಬ್ ಕಾರ್ಕಳದ ಪಬ್ಲಿಕ್ ಇಮೇಜ್ ಇದರ ಅಧ್ಯಕ್ಷರಾದ ರೋಟೇರಿಯನ್ ಪಿ…
ವಿಶ್ವಕರ್ಮ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ ಕಾರ್ಕಳ: ಸ್ವಚ್ಛತೆಯ ಜಾಗೃತಿ ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಬೇಕು. ನಮ್ಮ ಮನೆಯ ಕಸದ ನಿರ್ವಹಣೆಯ ಜವಾಬ್ದಾರಿಯನ್ನು ನಾವು ಕಸ ಹುಟ್ಟುವ ಮೂಲದಲ್ಲಿಯೇ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಆಗ ನಮ್ಮ ಪರಿಸರ ಸ್ವಚ್ಛ ಪರಿಸರವಾಗುತ್ತದೆ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ಭಾನುವಾರ ನಡೆದ 13ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಮಾತನಾಡಿದರು. https://chat.whatsapp.com/FCEnlTkAKCC0MGPhXtX4i4 ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮವನ್ನು ಕಾರ್ಕಳ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವದಿಸಿದರು. ಜೈನ್ ಮಿಲನ್ ಕಾರ್ಕಳದ ಅಧ್ಯಕ್ಷರಾದ ಅಶೋಕ್ ಎಚ್ ಎಮ್, ಜೆಸಿಐ ಕಾರ್ಕಳದ ಅಧ್ಯಕ್ಷರಾದ ಶ್ವೇತಾ ಎಸ್ ಜೈನ್ ಮತ್ತು ರೋಟರಿ ಕ್ಲಬ್ ಕಾರ್ಕಳದ ಪಬ್ಲಿಕ್ ಇಮೇಜ್ ಇದರ ಅಧ್ಯಕ್ಷರಾದ ರೋಟೇರಿಯನ್ ಪಿ…
ಬಂಟ್ವಾಳ: ಬಂಟ್ವಾಳ ತಾಲೂಕಿನ ಕೊಯ್ಲದ ಅಣ್ಣಳಿಕೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ದಕ್ಷಿಣ ಕನ್ನಡ ಸೌಹಾರ್ದ ಸಹಕಾರಿ ಸಂಘದ ನೂತನ ಶಾಖೆ ಗುರುಪುರ ಕೈಕಂಬದಲ್ಲಿ ಡಿ.21ರಂದು ನಡೆಯಲಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಬೆಳಗ್ಗೆ 9ಕ್ಕೆ ಗುರುಪುರ ಕೈಕಂಬದ ಅಜೀಜ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಡಾ.ವೈ ಭರತ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಸಿಲ್ವೆಸ್ಟರ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಓಷಿನ್ ಕನ್‌ಸ್ಟ್ರಕ್ಷನ್ ಆಡಳಿತ ನಿರ್ದೇಶಕರಾದ ಇನಾಯತ್ ಅಲಿ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾದ ಪದ್ಮನಾಭ ಕೋಟ್ಯಾನ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಉದ್ಯಮಿ ರಾಜೇಶ್ ಕೊಟ್ಟಾರಿ ಕಂಪ್ಯೂಟರ್ ಉದ್ಘಾಟಿಸಲಿದ್ದಾರೆ. ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಷೇರು ಪತ್ರ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ.ಭಟ್ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂಧೇರಿ ಸಂಸ್ಥೆಯ ಪ್ರಾದೇಶಿಕ ಅಧಿಕಾರಿ ಇಮ್ಯಾನುಯೆಲ್ ಮೋನಿಸ್, ದ.ಕ. ಜಿಲ್ಲಾ ಒಕ್ಕೂಟ…
ವಿಟ್ಲ: ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಆರ್ ಸತೀಶ್ಚಂದ್ರ ಅವರನ್ನು ವಿಟ್ಲ ಗ್ರಾಮೀಣ ಸಹಕಾರಿ ಸಂಘದ ವತಿಯಿಂದ ಬುಧವಾರ ಅಭಿನಂದನೆ ಸಲ್ಲಿಸಲಾಯಿತು. https://chat.whatsapp.com/FCEnlTkAKCC0MGPhXtX4i4 ಕ್ಯಾಂಪ್ಕೊ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷರಾದ ಹೆಚ್ ಜಗನ್ನಾಥ್ ಸಾಲಿಯಾನ್ ಅವರು ಸತೀಶ್ಚಂದ್ರರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರಾದ ಜಯಂತಿ ಹೆಚ್ ರಾವ್, ಶುಭಲಕ್ಷ್ಮಿ, ದಯಾನಂದ ಆಳ್ವ ಕೆ., ದಿವಾಕರ ವಿ., ಗೋವರ್ಧನ ಕುಮಾರ್ ಐ., ಭಾಸ್ಕರ ಶೆಟ್ಟಿ, ರಾಮದಾಸ ಶೆಣೈ ವಿ., ವಿಶ್ವನಾಥ ಎಂ., ಸತೀಶ್ ಪಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಮೈಸೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆಯುತ್ತಿರುವ ಸೌಹಾರ್ದ ಸಹಕಾರಿಗಳ ಸಿಬ್ಬಂದಿಗಳ 10 ದಿನಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ 85 ಶಿಬಿರಾರ್ಥಿಗಳು ಬುಧವಾರ ಸಪ್ತಶ್ರೀ ಸೌಹಾರ್ದ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. https://chat.whatsapp.com/FCEnlTkAKCC0MGPhXtX4i4 ಈ ಸಂದರ್ಭದಲ್ಲಿ ಸಪ್ತಶ್ರೀ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎಂ.ಎಸ್.ಚಂದ್ರಶೇಖರ್, ಗೌರವ ಖಜಾಂಚಿಗಳಾದ ಕೃಷ್ಣವೇಣಿ ಎಂ.ಜಿ, ಸಹಕಾರಿಯ ನಿರ್ದೇಶಕರು, ಸಂಯುಕ್ತ ಸಹಕಾರಿಯ ತರಬೇತಿ ಸಲಹೆಗಾರರಾದ ವಿ.ಜೆ.ಕಾರಕೂನ್, ತರಬೇತಿ ಅಧಿಕಾರಿ ಬಾಬು ಪಠಾಣ, ವಿಶ್ವನಾಥ, ಮೈಸೂರು ಪ್ರಾಂತೀಯ ಸೌಹಾರ್ದ ಅಭಿವೃದ್ದಿ ಅಧಿಕಾರಿ ಸುರೇಶ್ ಆರ್.ಎಸ್, ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎ.ಪುರುಷೋತ್ತಮ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಮಾಸ್ ಲಿಮಿಟೆಡ್ ಅಧ್ಯಕ್ಷ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಹೇಳಿಕೆ ಸುಳ್ಯ: ಗ್ರಾಮೀಣ ಭಾಗದ ಕೃಷಿಕರು ಬೆಳೆಯುವ ಅಡಕೆಗೆ ಉತ್ತಮ ದರ ನೀಡಲು ಮಾಸ್ ಸಂಸ್ಥೆ ಬದ್ಧವಾಗಿದೆ. ಆದ್ದರಿಂದ ಮಾಸ್ ಅಡಕೆ ಖರೀದಿ ಕೇಂದ್ರದ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಮಂಗಳೂರು ಮಾಸ್ ಲಿಮಿಟೆಡ್ ಅಧ್ಯಕ್ಷ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಹೇಳಿದರು. https://chat.whatsapp.com/GnJ3FvCten7JlVtjNJYA58 ಮಂಗಳೂರು ಕೃಷಿಕರ ಸಹಕಾರಿ ಸಂಘ ಮಂಗಳೂರು ‘ಮಾಸ್ ಲಿಮಿಟೆಡ್’ನಿಂದ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ತೆರೆಯಲಾದ ಅಡಕೆ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಅಡಕೆ ಕೃಷಿಕರ ಹಿತ ಕಾಪಾಡುವ ಹಿತದೃಷ್ಟಿಯಿಂದ 2001ರಲ್ಲಿ ಮಾಸ್ ಸಂಸ್ಥೆ ಆರಂಭಗೊಂಡಿತು. 24 ವರ್ಷಗಳಲ್ಲಿ ಅತ್ಯುತ್ತಮ ಸೇವೆ ನೀಡಿದ್ದು, ಮಾಸ್‌ನ 12ನೇ ಅಡಕೆ ಖರೀದಿ ಕೇಂದ್ರ ಇಲ್ಲಿ ಉದ್ಘಾಟನೆಯಾಗಿದೆ. ಸುಳ್ಯದಲ್ಲಿ ಸುಸಜ್ಜಿತ ಅಡಕೆ ಸಂಸ್ಕರಣಾ ಘಟಕ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು. ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ…
