Author: admin

ಮಂಡ್ಯ: ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ ಒಕ್ಕೂಟದ ಕಚೇರಿಯಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆಯ ಪ್ರಯುಕ್ತ ಸಹಕಾರ ಧ್ವಜಾರೋಹಣ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ಒಕ್ಕೂಟದ ಅಧ್ಯಕ್ಷರಾದ ಬಿ.ಟಿ ಗುರುರಾಜ ಶೆಟ್ಟಿ, ಉಪಾಧ್ಯಕ್ಷರಾದ ಎಸ್.ಸಿದ್ದಲಿಂಗಯ್ಯ, ನಿರ್ದೇಶಕರಾದ ವೆಂಕಟೇಶ ಗೌಡ, ಬಿ.ವಿ ಕೃಷ್ಣಪ್ಪ, ರಮೇಶ್, ಬಸವೇಗೌಡ, ಕೃಷ್ಣಗೌಡ, ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲೆಯ ಸಹಕಾರಿಗಳಾದ ಮಾತಪ್ಪ, ಗುರುಪ್ರಸಾದ್ ಹಾಗೂ ಒಕ್ಕೂಟದ ಸಿಬ್ಬಂದಿ ಮಿತ್ರರು ಸೇರಿ ಕಾರ್ಯಕ್ರಮ ಆಚರಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಂಜಿಮೊಗರು ಶಾಖೆಯ ಒಂಬತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಜನವರಿ 4ರಂದು ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವು ಪಂಜಿಮೊಗರು ಉರುಂದಾಡಿಯ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಲ್ಲಿ ನಡೆಯಲಿದೆ. https://chat.whatsapp.com/FCEnlTkAKCC0MGPhXtX4i4 ಉರುಂದಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಯುವವಾಹಿನಿ ಕೂಳೂರು ಘಟಕ, ಲಯನ್ಸ್ ಕ್ಲಬ್ ಮಂಗಳೂರು ಲೇಡಿಹಿಲ್ ಮತ್ತು ಲಯನ್ಸ್ ಕ್ಲಬ್ ಕುದುರೆಮುಖ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾವೂರು ಪ್ರಖಂಡ ಇವರ ಜಂಟಿ ಸಹಯೋಗದಲ್ಲಿ ಬೆಳಗ್ಗೆ 9.30ರಿಂದ ಮದ್ಯಾಹ್ನ 12.30ರವರೆಗೆ ನಡೆಯಲಿದೆ. ಈ ವೈದ್ಯಕೀಯ ಶಿಬಿರದಲ್ಲಿ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮುಕ್ಕ ಸುರತ್ಕಲ್ ಇವರ ನುರಿತ ವೈದ್ಯರ ತಂಡದವರಿಂದ ದಂತ ತಪಾಸಣೆ ಮತ್ತು ಜಾಗೃತಿ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು, ಹಲ್ಲುಗಳ ಶುಚಿತ್ವ, ಹಲ್ಲು ಕೀಳುವುದು ಹಾಗೂ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ ಇವರ ನುರಿತ ವೈದ್ಯರ ತಂಡದವರಿಂದ…

Read More

ರಾಯಚೂರು: ಇಲ್ಲಿನ ಮಾಸ್ಕಿ ತಾಲೂಕು ಬಳಗನೂರು ಶ್ರೀ ಮಾರುತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದಲ್ಲಿ ಗುರುವಾರ ಸೌಹಾರ್ದ ಸಹಕಾರಿ ದಿನ ಆಚರಣೆಯ ಅಂಗವಾಗಿ ಸಹಕಾರಿ ಧ್ವಜಾರೋಹಣ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಅಧ್ಯಕ್ಷರಾದ ಬಿ.ಶಿವನಾಥ್‌, ಉಪಾಧ್ಯಕ್ಷರಾದ ಮಲ್ಲನಗೌಡ ಗಡ್ಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಎಂ, ಗ್ರಾಹಕರಾದ ಶರಣಪ್ಪ ಕುಂಬಾರ್‌ ಹಾಜರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಬೆಂಗಳೂರು: ಇಲ್ಲಿನ ರಾಜಾಜಿನಗರ ಮಹಾಗಣಪತಿ ನಗರದ ಬನವಾಸಿ ಸೌಹಾರ್ದ ಸಹಕಾರಿ ಸಂಘದಲ್ಲಿ ಗುರುವಾರ ಸೌಹಾರ್ದ ಸಹಕಾರಿಗಳ ದಿನಾಚರಣೆ ಅಂಗವಾಗಿ ಸಹಕಾರಿ ಧ್ವಜಾರೋಹಣ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಉಪಾಧ್ಯಕ್ಷರಾದ ಬಾಬು ಎಸ್ ಕುಂಬಾರ್, ವ್ಯವಸ್ಥಾಪಕರಾದ ಶಿವಶರಣಪ್ಪ, ಆಡಳಿತಾಧಿಕಾರಿ ಶಂಬಯ್ಯ ಕೆ ಎಲ್, ನಿರ್ದೇಶಕರಾದ ಮಂಜುನಾಥ ಎನ್, ನಾರಾಯಣಸ್ವಾಮಿ ಹೆಚ್, ಸಿಬ್ಬಂದಿಗಳಾದ ಭೂಮಿಕಾ ಜಿ ಆರ್, ಉಷಾ ಜಿ ಜೆ, ಸದಸ್ಯರಾದ ರಂಗನಾಥಪ್ಪ ಎಮ್ ಪಿ, ಡಿ ಕೆ ಕೆಂಪಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಮಂಗಳೂರು: ಇಲ್ಲಿನ ಗೋವರ್ಧನಗಿರಿ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಗುರುವಾರ ಸೌಹಾರ್ದ ದಿನಾಚರಣೆ ಅಂಗವಾಗಿ ಸಹಕಾರಿ ಧ್ವಜಾರೋಹಣ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ದಕ್ಷಿಣ ಕನ್ನಡ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಂದನ್ ಬಿ ಎಸ್, ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಗೌರವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಕೊಟ್ಟಾರಿ, ಗೋವರ್ಧನಗಿರಿ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತೇಶ್‌, ಆಡಳಿತಾಧಿಕಾರಿ ತೇಜಸ್ವಿನಿ, ಸಿಬ್ಬಂದಿಗಳಾದ ಸೌಮ್ಯ, ಸುಪ್ರಿಯಾ, ಉಷಾ ಶೆಟ್ಟಿ, ಭವಿತ್‌ ಕೆ., ಹೇಮಲತಾ, ಶರಣ್‌ ಮೊದಲಾದವರು ಹಾಜರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಉಡುಪಿ: ಸೌಹಾರ್ದ ಸಹಕಾರಿ ದಿನಾಚರಣೆ ಪ್ರಯುಕ್ತ ಅಂಬಲಪಾಡಿಯ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ರಕ್ತ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ರಕ್ತ ಪರೀಕ್ಷೆ ಮಾಡುವವರಿಗೆ ವಿಶೇಷ ರಿಯಾಯಿತಿ ನೀಡಲಾಯಿತು. https://chat.whatsapp.com/FCEnlTkAKCC0MGPhXtX4i4 ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ರಾಜು ಸಿ.ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿಯ ಉಪಾಧ್ಯಕ್ಷರಾದ ಗೋವಿಂದ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಸೊಸೈಟಿಯ ನಿರ್ದೇಶಕರಾದ ಶೇಖರ್ ಸಾಲಿಯಾನ್ ಆದಿ ಉಡುಪಿ, ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಮಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಕಾಯ್ದೆಯು ಜಾರಿಯಾದ ದಿನದ ಅಂಗವಾಗಿ ಜನವರಿ ಒಂದರಂದು ಆಚರಿಸುವ ಸೌಹಾರ್ದ ಸಹಕಾರಿ ದಿನದ ಪ್ರಯುಕ್ತ ಗುರುವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ದಕ್ಷಿಣ ಕನ್ನಡ ಜಿಲ್ಲಾ ಸಂಪರ್ಕ ಕಚೇರಿಯಲ್ಲಿ ಸಹಕಾರಿ ಧ್ವಜಾರೋಹಣ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ ಭಟ್, ದಕ್ಷಿಣ ಕನ್ನಡ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಂದನ್ ಬಿ ಎಸ್, ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಗೌರವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಕೊಟ್ಟಾರಿ, ಯುವ ಸ್ಪಂದನ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಅತ್ಯಾಡಿ, ಗೋವರ್ಧನ ಗಿರಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತೇಶ್, ಸಿಬ್ಬಂದಿ ಭವಿತ್ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಆತ್ಮಶಕ್ತಿ ಸಹಕಾರಿ ಸಂಘದ ಆರೋಗ್ಯ ಶಿಬಿರದಲ್ಲಿ ಬ್ರಹ್ಮಕುಮಾರಿ ಬಿ.ಕೆ ವಿಶ್ವೇಶ್ವರಿ ಅಭಿಪ್ರಾಯ ಮಂಗಳೂರು: ಶಾರೀರಿಕ ಆರೋಗ್ಯದ ಜೊತೆಗೆ ಮನುಷ್ಯನ ಮನಸ್ಥಿತಿಯೂ ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ಧ್ಯಾನವು ತುಂಬಾ ಪ್ರಯೋಜನಕಾರಿ. ಉತ್ತಮ ಆರೋಗ್ಯಕ್ಕಾಗಿ ಔಷಧಗಳ ಜೊತೆಗೆ ಪ್ರತಿ ದಿನ ಧ್ಯಾನ ಮಾಡುವುದೂ ಉಪಯುಕ್ತವಾದುದು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಂಗಳೂರು ವಿಭಾಗ ಮುಖ್ಯಸ್ಥರಾದ ಬಿ.ಕೆ ವಿಶ್ವೇಶ್ವರಿ ಹೇಳಿದರು. https://chat.whatsapp.com/FCEnlTkAKCC0MGPhXtX4i4 ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೊಟ್ಟಾರ ಶಾಖೆಯ ತೃತೀಯ ವಾರ್ಷಿಕೋತ್ಸವ ಪ್ರಯುಕ್ತ ಸಂಜೀವಿನಿ ಡಿವೈನ್ ಹಾಲಿಸ್ಟಿಕ್ ವೆಲ್‌ನೆಸ್ ಸೆಂಟರ್ ಉರ್ವಸ್ಟೋರ್ ಇವರ ಸಹಯೋಗದೊಂದಿಗೆ ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಮುದಾಯ ದಂತ ಆರೋಗ್ಯ ವಿಭಾಗ ದೇರಳಕಟ್ಟೆ ಇವರ ನುರಿತ ವೈದ್ಯರ ತಂಡದವರಿಂದ ಉರ್ವಸ್ಟೋರ್‌ನ ಸಂಜೀವಿನಿ ಡಿವೈನ್ ಹಾಲಿಸ್ಟಿಕ್ ವೆಲ್‌ನೆಸ್ ಸೆಂಟರ್‌ನಲ್ಲಿ ಭಾನುವಾರ ಆಯೋಜಿಸಿದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಹಿರಿಯ ಧಾರ್ಮಿಕ ಮುಖಂಡ ಯು.ಮಾಧವ ಸುವರ್ಣ ಮಾತನಾಡಿ…

Read More

ಲಾಭದಾಯಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆ 49,238ಕ್ಕೆ ಏರಿಕೆ ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI), 2023-24ರಲ್ಲಿ ಭಾರತದಲ್ಲಿ ಬ್ಯಾಂಕಿಂಗ್‌ ಪ್ರವೃತ್ತಿ ಮತ್ತು ಪ್ರಗತಿಯ ಕುರಿತಾದ ತನ್ನ ವರದಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕಾರ್ಯಗಳು ಹಾಗೂ ಅವುಗಳ ಪ್ರಗತಿಯ ಹಿನ್ನೋಟವನ್ನು ನೀಡಿದೆ. https://chat.whatsapp.com/FCEnlTkAKCC0MGPhXtX4i4 ಮಾರ್ಚ್ 2024ರ ಅಂತ್ಯದ ವೇಳೆಗೆ, ಪ್ಯಾಕ್ಸ್‌ಗಳಲ್ಲಿ ಒಟ್ಟು 16.37 ಕೋಟಿ ಸದಸ್ಯತ್ವವಿದೆ. 4.95 ಕೋಟಿ ಸಾಲಗಾರರಿಗೆ ಸಾಲ ನೀಡಲಾಗಿದೆ. ಒಟ್ಟು ಸದಸ್ಯತ್ವದ ಒಟ್ಟು ಶೇಕಡಾ 44.2ರಷ್ಟು ಸಣ್ಣ ರೈತರು. ಶೇಕಡಾ 24.9ರಷ್ಟು ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರು. ಸಾಲಗಾರ-ಸದಸ್ಯರ ಅನುಪಾತವು ಮಾರ್ಚ್ 2024ರ ಅಂತ್ಯಕ್ಕೆ ಶೇಕಡಾ 30.2ರಷ್ಟಿದ್ದು, ಅದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 30.7ರಷ್ಟಿತ್ತು. 2023-24ರ ಅವಧಿಯಲ್ಲಿ, ಪ್ಯಾಕ್ಸ್‌ಗಳಲ್ಲಿ ಒಟ್ಟು ಸಂಪನ್ಮೂಲಗಳಲ್ಲಿನ ಬೆಳವಣಿಗೆಯು ಹಿಂದಿನ ವರ್ಷದಲ್ಲಿ ಶೇಕಡಾ 14.2ರಿಂದ ಶೇಕಡಾ 9.8ಕ್ಕೆ ಇಳಿದಿದೆ. ಬಾಕಿ ಉಳಿದಿರುವ ಒಟ್ಟು ಸಾಲಗಳು ಮತ್ತು ಮುಂಗಡಗಳಲ್ಲಿ ಶೇಕಡಾ 80ಕ್ಕಿಂತ…

Read More

ಬಂಟ್ವಾಳ: ಕರಾವಳಿ ಜಿಲ್ಲೆಗಳ ಬಹುತೇಕ ಅಡಕೆ ಮರಗಳಿಗೆ ಎಲೆಚುಕ್ಕೆ ರೋಗ ಬಾಧಿಸಿದ್ದು ಇದನ್ನೇ ನಂಬಿಕೊಂಡಿರುವ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ರೈತರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ ಹಣ ತೀರಿಸಲಾಗದೆ ಪರದಾಡುತ್ತಿದ್ದು, ಇಂಥ ಸಂಕಷ್ಟ ಸ್ಥಿತಿಯಲ್ಲಿರುವ ರೈತರಿಗೆ ಸರಕಾರ ನಷ್ಟ ಪರಿಹಾರ ಒದಗಿಸಿಕೊಡಬೇಕು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳ ರೈತರ ಪ್ರಮುಖ ಬೆಳೆಯಾದ ಅಡಕೆ ಮರಗಳಿಗೆ ಎಲೆಚುಕ್ಕೆ ರೋಗವು ಕಾಣಿಸಿಕೊಂಡಿದ್ದು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಸಾವಿರಾರು ಅಡಕೆ ಮರಗಳು ಸಾಯುತ್ತಿದ್ದು, ಅಡಕೆ ಇಳುವರಿ ಸಹ ಗಣನೀಯವಾಗಿ ಇಳಿಮುಖವಾಗಿದೆ. ಈ ವರ್ಷ ನಿರಂತರವಾಗಿ ಸುರಿದ ಮಳೆಯ ಪ್ರಭಾವದಿಂದ ಕೊಳೆರೋಗದಿಂದಾಗಿ ಕಂಗೆಟ್ಟಿರುವ ಅಡಕೆ ಬೆಳೆಗಾರರಿಗೆ ಎಲೆಚುಕ್ಕೆ ರೋಗದಿಂದಾಗಿ ಅಡಕೆ ಮರಗಳೇ ಸಾಯುತ್ತಿರುವ ಪರಿಸ್ಥಿತಿಯಲ್ಲಿ ಅಡಕೆ ಬೆಳೆಗಾರರು ಪರ್ಯಾಯ ಮಾರ್ಗವಿಲ್ಲದೆ ಚಿಂತೆಯಲ್ಲಿ ತೊಡಗಿದ್ದಾರೆ. ಕರಾವಳಿ ಜಿಲ್ಲೆಗಳ ಬಹುತೇಕ ಆರ್ಥಿಕ ವ್ಯವಹಾರವು ಅಡಕೆ ಬೆಳೆಗಾರರಿಂದಲೇ ಅವಲಂಬಿತವಾಗಿದ್ದು, ಅಡಿಕೆ ಬೆಳೆಯನ್ನೇ ನಂಬಿರುವ ರೈತರು…

Read More