Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸ್ವಚ್ಛತೆಯು ಜೀವನ ಶೈಲಿಯಾಗಲಿ
    News

    ಸ್ವಚ್ಛತೆಯು ಜೀವನ ಶೈಲಿಯಾಗಲಿ

    adminBy adminFebruary 3, 2026

    ವಿಶ್ವಕರ್ಮ ಬ್ಯಾಂಕ್‌ ಉಡುಪಿ ಶಾಖೆ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪ್ರಭಾಕರ ಪೂಜಾರಿ ಆಶಯ

    ಉಡುಪಿ: ಸ್ವಚ್ಛತೆ ಎಂಬುದು ಒಂದು ದಿನಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ. ಅದು ನಿತ್ಯ ನಿರಂತರ ಮುಂದುವರಿದು ಪ್ರತಿಯೊಬ್ಬರ ದಿನನಿತ್ಯದ ಜೀವನ ಶೈಲಿಯಾಗಬೇಕು. ಸಮಾಜದ ಪ್ರತಿಯೊಬ್ಬರೂ ಸ್ವಚ್ಛತೆಯ ಬಗ್ಗೆ ಜಾಗೃತರಾಗಬೇಕೆಂಬ ಉದ್ದೇಶದಿಂದ ವಿಶ್ವಕರ್ಮ ಸಹಕಾರ ಬ್ಯಾಂಕ್ ನಿರಂತರವಾಗಿ ಇಂತಹ ಶ್ರಮದಾನ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಉತ್ತಮ ವಿಚಾರ ಎಂದು ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಅವರು ವಿಶ್ವಕರ್ಮ ಬ್ಯಾಂಕಿನ ಉಡುಪಿ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದೊಂದಿಗೆ ಉಡುಪಿಯಲ್ಲಿ ಆಯೋಜಿಸಿದ 24ನೇ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
    ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ ಅಧ್ಯಕ್ಷ ವಿನಯ್ ಕುಮಾರ್ ಪೂಜಾರಿ ಕರಂಬಳ್ಳಿ, ಹಾಗೂ ನಮೋ ಫ್ರೆಂಡ್ಸ್ ದೊಡ್ಡಣಗುಡ್ಡೆ ಇದರ ಅಧ್ಯಕ್ಷ ರಾಜೇಶ್ ಕುಮಾರ್ ಹಸಿರು ನಿಶಾನೆ ತೋರಿಸಿ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


    ಉಡುಪಿ ನಗರದ ದೊಡ್ಡನಗುಡ್ಡೆ ಹುಡ್ಕೋ ಕಾಲನಿ ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿಯ ನಿಟ್ಟಿನಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ವಿಶ್ವಕರ್ಮ ಬ್ಯಾಂಕಿನ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪಡುಪಣಂಬೂರು, ನಿರ್ದೇಶಕರಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ನಿವೃತ್ತ ಸೇನಾನಿ ಕೇಶವ ಆಚಾರ್ಯ ದೊಡ್ಡಣಗುಡ್ಡೆ, ಜೆಸಿಐ ದೊಡ್ಡಣ್ಣಗುಡ್ಡೆ ಪ್ರಕೃತಿ ಇದರ ಅಧ್ಯಕ್ಷ ಜೆಸಿ ಭರತ್ ಕುಮಾರ್, ಸಂಸ್ಥಾಪನಾಧ್ಯಕ್ಷ ಜೆಸಿ ಎಂ.ಎನ್.ನಾಯಕ್, ಪದಾಧಿಕಾರಿ ಜೆಸಿ ಪ್ರಶಾಂತ್ ಆಚಾರ್ಯ, ಜೆಜೆಸಿ ಪ್ರಾರ್ಥನಾ ಹಾಗೂ ಸದಸ್ಯರು, ದೊಡ್ಡಣಗುಡ್ಡೆ ಮಹಿಳಾ ಮಂಡಳಿ ಅಧ್ಯಕ್ಷೆ ರಶ್ಮಿತಾ ಬಿ.ಶೆಟ್ಟಿ, ಉಪಾಧ್ಯಕ್ಷೆ ಚೈತ್ರ ಶರತ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಸೌಮ್ಯ ಯಶವಂತ್ ಹಾಗೂ ಸದಸ್ಯರು, ನಮೋ ಫ್ರೆಂಡ್ಸ್ ನ ಸದಸ್ಯರು, ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಇದರ ಸದಸ್ಯರು, ಸುಮಂತ್ ನೇತೃತ್ವದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು, ಬ್ಯಾಂಕಿನ ಸಿಬ್ಬಂದಿ, ಗ್ರಾಹಕರು ಹಿತೈಷಿಗಳು, ಹಾಗೂ ಸ್ಥಳೀಯರು ಸ್ವಯಂಸೇವಕರಾಗಿ ಶ್ರಮದಾನದಲ್ಲಿ ಪಾಲ್ಗೊಂಡರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Cooperative Department Giants Group Udupi Udupi Doddanagudde Udupi Nagarasabhe Vishwakarma Sahakara Bank Limited
    Previous Articleಸಹಕಾರ ವಲಯದ ಬೆಳವಣಿಗೆಗೆ ಪೂರಕವಾದ ಬಜೆಟ್: ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ
    Next Article Chubbsafes and Steelage ಕಂಪನಿಯ ಚಾನಲ್‌ ಪಾರ್ಟ್‌ನರ್‌ ವಸುಧಾ ಆಟೋಮೇಶನ್‌ನ ಹುಬ್ಬಳ್ಳಿ ಡಿಸ್‌ಪ್ಲೇ ಸೆಂಟರ್‌ ನಾಳೆ ಉದ್ಘಾಟನೆ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.