ಶಿವಮೊಗ್ಗ: ಯಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ಹೆಚ್ ಕೆ ಹೊಸಗದ್ದೆ, ಉಪಾಧ್ಯಕ್ಷರಾಗಿ ಅಜಿತ್ ಕುಮಾರ್ ಹೆಚ್ ಆರ್ ಹಿರೇಬೈಲ್ ಅವರು ಆಯ್ಕೆಯಾಗಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಜನವರಿ 18ರಂದು ಚುನಾವಣೆ ನಡೆದು 11 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದರು. ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆದಿದ್ದು, ಅಧ್ಯಕ್ಷರಾಗಿ ಮಂಜುನಾಥ ಹೆಚ್ ಕೆ ಹೊಸಗದ್ದೆ ಮತ್ತು ಉಪಾಧ್ಯಕ್ಷರಾಗಿ ಅಜಿತ್ ಕುಮಾರ್ ಹೆಚ್ ಆರ್ ಹಿರೇಬೈಲ್ ಅವರನ್ನು ಸಹಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಂಜುನಾಥ ಹೆಚ್ ಕೆ ಹೊಸಗದ್ದೆ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಜಿ.ಎಚ್ ಲಕ್ಷ್ಮಣ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಆರ್ ಸಂತೋಷ್ ಸಹಕರಿಸಿದರು.
ನಿರ್ದೇಶಕರಾಗಿ ಸುಧೀರ್ ಕುಮಾರ್ ಎಸ್ ಎಸ್ ಸುಳುಗೋಡು, ರಮೇಶ್ ಅಚ್ಚುಮನೆ, ಮಂಜುನಾಥ್ ಹಿರೇಬೈಲ್, ಕುಂಞ ಅಹಮದ್ ಸುಳುಗೋಡು, ಸರಸ್ವತಿ ರತ್ನಾಕರ್ ಕೊಳವಾಡಿ, ಯಶೋದಾ ಚಂದ್ರಶೇಖರ್ ಸುಳುಗೋಡು, ಸತೀಶ್ ಹಿರೇಬೈಲು, ರಾಘವೇಂದ್ರ ಪ್ರಸಾದ್ ಸುಳುಗೋಡು, ಶೋಭಾ ಮಾನಿಗದ್ದೆ ಆಯ್ಕೆಯಾಗಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


