Author: admin
ಮಂಗಳೂರು: ಶ್ರೀಶಾ ಸೌಹಾರ್ದ ಸೊಸೈಟಿಯ ವತಿಯಿಂದ ಭಾನುವಾರ ಮಂಗಳೂರು ನಗರದ ಹೊರವಲಯದ ಸೋಮೇಶ್ವರ ಕಡಲ ತಡಿಯಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. https://chat.whatsapp.com/FCEnlTkAKCC0MGPhXtX4i4 ಶ್ರೀಶಾ ಸೊಸೈಟಿಯ ಎಲ್ಲಾ ಸಿಬ್ಬಂದಿಗಳು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಭಾಗವಹಿಸಿದ್ದು, ಈ ಸ್ವಚ್ಛತಾ ಕಾರ್ಯದಲ್ಲಿ ಬೀಚ್ ನಲ್ಲಿ ಹೇರಳವಾಗಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತು ಗ್ಲಾಸ್ ಬಾಟಲಿಗಳು, ಪ್ಲಾಸ್ಟಿಕ್ ಇತರೆ ತುಣುಕುಗಳನ್ನು ಹೆಕ್ಕಿ ಸಂಗ್ರಹಿಸಲಾಯಿತು. ಬೀಚ ನಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೆ ಶ್ರಮದಾನ ಮೂಲಕ ಪ್ಲಾಸ್ಟಿಕ್ ಮುಕ್ತಗೊಳಿಸಲಾಯಿತು. ಬೆಳಗ್ಗೆ 7 ಗಂಟೆಯಿಂದ 9ರವರಿಗೆ ನಡೆದ ಸ್ವಚ್ಛತಾ ಕಾರ್ಯದಲ್ಲಿ 20ಕ್ಕೂ ಹೆಚ್ಚು ಮೂಟೆಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ನಂತರ ಸಾಂದರ್ಭಿಕವಾಗಿ ಮಾತನಾಡಿದ ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ. ಎಸ್. ಗುರುರಾಜ್, ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಸ್ವಚ್ಛತೆ ಇದ್ದಲ್ಲಿ ದೇವರ ಸಾನ್ನಿಧ್ಯ ಇರುತ್ತದೆ. ಅಲ್ಲದೆ ಪರಿಸರ ಸ್ವಚ್ಛತೆಯಿಂದ ನಮ್ಮ ಸ್ವಾಸ್ತ್ಯವೂ ಹೆಚ್ಚುತ್ತದೆ. ಪ್ಲಾಸ್ಟಿಕ್ ಪರಿಸರಕ್ಕೆ ದೊಡ್ಡ ಮಾರಕ. ಅವನ್ನು ಸಮುದ್ರದ ಹಾಗೂ ನೆಲದ ಪ್ರಾಣಿ ಸಂಕುಲಗಳು…
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಹಿರಿಯ ಸದಸ್ಯರ ಮನೆಗೆ ಬಂದು ಬ್ಯಾಂಕಿಂಗ್ ಸೇವೆ ನೀಡುತ್ತಿರುವುದು ಶ್ಲಾಘನೀಯ
ಬೆಂದೂರ್‌ವೆಲ್ ಶಾಖೆಯ ೧೪ನೇ ವಾರ್ಷಿಕೋತ್ಸವ, ಗ್ರಾಹಕರ ಸಭೆಯಲ್ಲಿ ಶಂಕರ ಶೆಟ್ಟಿ ಅಭಿಪ್ರಾಯ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಹಿರಿಯ ಸದಸ್ಯರ ಮನೆಗೆ ಬಂದು ಬ್ಯಾಂಕಿಂಗ್ ಸೇವೆ ನೀಡುತ್ತಿರುವುದು ಶ್ಲಾಘನೀಯ. ಹಿರಿಯ ನಾಗರಿಕರಿಗೆ ಇದರಿಂದ ತುಂಬಾ ಪ್ರಯೋಜನವಾಗುತ್ತಿದೆ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರಾದ ಶಂಕರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬೆಂದೂರುವೆಲ್ ಶಾಖೆಯ 14ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು. https://chat.whatsapp.com/FCEnlTkAKCC0MGPhXtX4i4 ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಕೃತೀಶ್ ಕುಮಾರ್, ಪುಷ್ಪಲತಾ ಕೆ., ಮಾಧವ ಕೋಟ್ಯಾನ್, ಗೋಪಾಲ್ ಸುವರ್ಣ, ಕರುಣಾನಂದ ರಾವ್ ಹಾಗೂ ಅನಂತರಾಮ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಕೃತೀಶ್ ಕುಮಾರ್ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ನೇತೃತ್ವದಲ್ಲಿ ಸಂಘದ ಸದಸ್ಯರಿಗೆ ಉತ್ತಮವಾದ ಸೇವೆ ನೀಡುತ್ತಿದೆ. ಬೆಂದೂರ್‌ವೆಲ್ ಶಾಖೆಯಲ್ಲಿ ಗ್ರಾಹಕರ ಸಂಖ್ಯೆ ಜಾಸ್ತಿ ಇದ್ದು ಇಲ್ಲಿ ಸ್ಥಳದ ಕೊರತೆ…
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯಿಂದ ಪರಿಷ್ಕೃತ ಅಧಿಸೂಚನೆ ನವದೆಹಲಿ: ಕೇಂದ್ರ ಸರ್ಕಾರವು “ಸ್ಟಾರ್ಟ್‌ಅಪ್” ಪದವನ್ನು ಮರು ವ್ಯಾಖ್ಯಾನಿಸಿ, “ಡೀಪ್ ಟೆಕ್ ಸ್ಟಾರ್ಟ್‌ಅಪ್” ವರ್ಗವನ್ನು ಪರಿಚಯಿಸುವ ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಇದರ ಅಡಿಯಲ್ಲಿ ಸಹಕಾರಿ ಸಂಘಗಳನ್ನು ಔಪಚಾರಿಕವಾಗಿ ಸ್ಟಾರ್ಟ್‌ಅಪ್ ಗುರುತಿಸುವಿಕೆಯ ಚೌಕಟ್ಟಿನೊಳಗೆ ತರಲಿದೆ. https://chat.whatsapp.com/FCEnlTkAKCC0MGPhXtX4i4 ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ (DPIIT) ಹೊರಡಿಸಿದ ಪರಿಷ್ಕೃತ ಅಧಿಸೂಚನೆಯು 2019ರ ಸ್ಟಾರ್ಟ್‌ಅಪ್ ಅಧಿಸೂಚನೆಯನ್ನು ಬದಲಾಯಿಸಿದೆ. ಹೊಸ ಅಧಿಸೂಚನೆಯ ಪ್ರಕಾರ, ಭಾರತದಲ್ಲಿ ಖಾಸಗಿ ಸೀಮಿತ ಕಂಪನಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ, ಬಹು-ರಾಜ್ಯ ಸಹಕಾರಿ ಸಂಘ ಅಥವಾ ಸಂಬಂಧಿತ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ನೋಂದಾಯಿಸಲಾದ ಸಹಕಾರಿ ಸಂಘವಾಗಿ ನೋಂದಾಯಿಸಿದ್ದರೆ ಅದನ್ನು ಸ್ಟಾರ್ಟ್‌ಅಪ್ ಎಂದು ಗುರುತಿಸಲಾಗುತ್ತದೆ. ಸ್ಟಾರ್ಟ್ಅಪ್ ಆಗಿ ಅರ್ಹತೆ ಪಡೆಯಲು, ಆ ಸಂಸ್ಥೆಯು ಅದರ ಸ್ಥಾಪನೆ ಅಥವಾ ನೋಂದಣಿಯ ಹತ್ತು ವರ್ಷಗಳ ಒಳಗೆ ಇರಬೇಕು ಮತ್ತು ನೋಂದಣಿಯ…
ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಗ್ರಾಮಾಂತರ ಪ್ರದೇಶ ಶಿರ್ತಾಡಿಯಲ್ಲಿ 13 ವರ್ಷಗಳ ಹಿಂದೆ ಪ್ರಾರಂಭವಾದ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮೈತ್ರಿ ಸೌಧ -ಸಹಕಾರಿ ಸಂಘದ ವಾಣಿಜ್ಯ ಸಂಕೀರ್ಣ ಹಾಗೂ ಸಂಘದ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭ ಫೆ.8ರ ಭಾನುವಾರ ಲೋಕಾರ್ಪಣೆಗೊಳ್ಳಲಿದೆ. https://chat.whatsapp.com/FCEnlTkAKCC0MGPhXtX4i4 ಫೆಬ್ರವರಿ 8ರ ಸಂಜೆ 5.30ಕ್ಕೆ ಮೈತ್ರಿ ಸೌಧವನ್ನು ಶಿರ್ತಾಡಿಯ ಭುವನಜ್ಯೋತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಡಿಸೋಜ ಉದ್ಘಾಟಿಸಲಿದ್ದಾರೆ. ವಕೀಲ ಮಯೂರಕೀರ್ತಿ ಸಹಕಾರಿಯ ಕೇಂದ್ರ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಭಾಸ್ಕರ ದೇವಸ್ಯ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಮಾತೃಭೂಮಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕೊಂಪದವು, ಶಿರ್ತಾಡಿಯ ಹೆಲೆನ್ ಮರಿಯ ಲೋಬೊ, ನಾರಾವಿಯ ಆಶಾ ಸುರೇಶ್ ಗೌರವ ಉಪಸ್ಥಿತಿ ಇರಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ರಾತ್ರಿ 7 ಗಂಟೆಗೆ ಶರತ್ ಶೆಟ್ಟಿ ಕಿನ್ನಿಗೋಳಿ ನೇತೃತ್ವದ ವಿಜಯ ಕಲಾವಿದರು ಕಿನ್ನಿಗೋಳಿ ಇವರಿಂದ ವಿಜಯ…
ಫೆ.8ರಂದು ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬೆಂದೂರುವೆಲ್ ಶಾಖೆಯ 14ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಜಪ್ಪಿನಮೊಗರು ಇದರ ಗುರು ಮಂದಿರದ ಪ್ರತಿಷ್ಠಾಪನಾ ವರ್ಧಂತ್ಯುತ್ಸವದ ಪ್ರಯುಕ್ತ, ಎನ್.ಜಿ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಸಹಯೋಗದೊಂದಿಗೆ ಫೆ.8ರಂದು ಭಾನುವಾರ ಬೆಳಗ್ಗೆ 9.30ರಿಂದ ಮದ್ಯಾಹ್ನ 12.30ರವರೆಗೆ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಂರ್ಭಿಬೈದೆದಿ ಚಾವಡಿಯಲ್ಲಿ ಆಯೋಜಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಈ ವೈದ್ಯಕೀಯ ಶಿಬಿರದಲ್ಲಿ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮುಕ್ಕ ಸುರತ್ಕಲ್ ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ದಂತ ತಪಾಸಣೆ ಮತ್ತು ಜಾಗೃತಿ, ಹುಳುಕು ಹಲ್ಲುಗಳ ಭರ್ತಿ ಮಾಡುವುದು, ಹಲ್ಲುಗಳನ್ನು ಶುಚಿಗೊಳಿಸುವುದು, ಹಲ್ಲುಗಳನ್ನು ಕೀಳುವುದು ಹಾಗೂ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್, ಕದ್ರಿ, ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ…
ಬೆಳ್ತಂಗಡಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಳದಂಗಡಿ ಶಾಖೆಯ ಮೂರನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಅಳದಂಗಡಿ ಶಾಖೆಯಲ್ಲಿ ಜರುಗಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಸದಸ್ಯರಾದ ತುಳುಪುಲೆ, ರಾಜು ಪೂಜಾರಿ, ವಿಶ್ವನಾಥ್ ಕುದ್ಯಾಡಿ, ಪೂರ್ಣೇಶ್, ರತ್ನಾಕರ ಕೋಟ್ಯಾನ್, ಅಜರುದ್ದೀನ್, ದಯಾಕರ ರೈ, ಜಲಜಾ ವಿ.ಸಾಲ್ಯಾನ್, ಶೋಭಾ ಹಾಗೂ ನೀಲಯ್ಯ ಗೌಡ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಮನೋಹರ ಶೆಟ್ಟಿ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಿಬ್ಬಂದಿಗಳು ಗುಣಮಟ್ಟದ ಬ್ಯಾಂಕಿಂಗ್ ಸೇವೆ ನೀಡುತ್ತಿದ್ದಾರೆ. ಇನ್ನೂ ಹೆಚ್ಚಿನ ಸೇವೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು. ನೀಲಯ್ಯ ಗೌಡ ಮಾತನಾಡಿ ಶಾಖೆ ಆರಂಭದಿಂದಲೂ ಉತ್ತಮ ವ್ಯವಹಾರ ನಡೆಸುತ್ತಿದ್ದು, ಸಂಘದ ಸದಸ್ಯರ ಬೇಡಿಕೆಗಳನ್ನು ಈಡೇರಿಸುತ್ತಿದೆ ಎಂದು ಶ್ಲಾಘಿಸಿದರು. ಸುರೇಖಾ ಮಾತನಾಡಿ ಉಳಿತಾಯದ ದೃಷ್ಟಿಯಿಂದ ಆವರ್ತನ ಖಾತೆಯಲ್ಲಿ ಹಣ ಉಳಿತಾಯ ಮಾಡಿದ್ದು, ಇದರಿಂದ…
ಮಂಗಳೂರು: ಬೆಳ್ತಂಗಡಿ ತಾಲೂಕಿನ ಗುರುವಾಯನಕರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21ನೇ ಹವಾನಿಯಂತ್ರಿತ ಶಾಖೆಯು ವಾಮಂಜೂರು ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿ ಗುರುವಾರ ಉದ್ಘಾಟನೆಗೊಂಡಿತು. https://chat.whatsapp.com/FCEnlTkAKCC0MGPhXtX4i4 ವಾಮಂಜೂರು ಚರ್ಚ್ ಧರ್ಮಗುರು ವಂದನೀಯ ಜೇಮ್ಸ್ ಡಿಸೋಜ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಾಮಂಜೂರು ಪ್ರದೇಶದಲ್ಲಿ ಈ ಸೊಸೈಟಿ ತನ್ನ ಶಾಖೆ ಆರಂಭಿಸಿ ಜನರ ಸೇವೆಗೆ ಮುಂದಾಗಿದ್ದು ಇಲ್ಲಿನ ಜನರಿಗೆ ಅತ್ಯುತ್ತಮ ಸೇವೆ ಲಭಿಸಲಿ. ದೇವರ ಆಶೀರ್ವಾದ ನಿರಂತರ ಇರಲಿ ಎಂದು ಶುಭ ಹಾರೈಸಿದರು. ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಮಾತನಾಡಿ, ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವಂತಾಗಲಿ ಎಂದರು. ಮಾಜಿ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಶುಭ ಹಾರೈಸಿದರು. ವಿಜಯ ಸೊಸೈಟಿಯ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಕೊರ್ಯಾರು ಮಾತನಾಡಿ, 2005ರಲ್ಲಿ ಎಸ್. ಜಯರಾಮ ಶೆಟ್ಟಿ ಅವರು ಆರಂಭಿಸಿದ ಸಂಸ್ಥೆ 21ನೇ ಶಾಖೆ ತೆರೆಯುವ ಹಂತಕ್ಕೆ ತಲುಪಿದೆ. ಪ್ರಸ್ತುತ…
ಭಾರತದ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಬದಲಾವಣೆಯ ಗಾಳಿ ನವದೆಹಲಿ: ಹಲವಾರು ವರ್ಷಗಳಿಂದ ಓಲಾ ಮತ್ತು ಉಬರ್‌ನಂತಹ ಖಾಸಗಿ ಕ್ಯಾಬ್ ಕಂಪನಿಗಳ ಹಿಡಿತದಲ್ಲಿದ್ದ ಟ್ಯಾಕ್ಸಿ ಕ್ಷೇತ್ರಕ್ಕೆ ಸಹಕಾರ ಕ್ಷೇತ್ರದ ಮಹತ್ವಾಕಾಂಕ್ಷೆಯ ಭಾರತ್ ಟ್ಯಾಕ್ಸಿ (Bharat Taxi) ಅಧಿಕೃತ ಪ್ರವೇಶ ಪಡೆದಿದ್ದು ಗುರುವಾರ ದೇಶದ ಗೃಹ ಸಚಿವರೂ ಆಗಿರುವ ಸಹಕಾರ ಸಚಿವರು ಅಮಿತ್ ಷಾ ಭಾರತ್ ಟ್ಯಾಕ್ಸಿಗೆ ಹಸಿರು ನಿಶಾನೆ ತೋರಿಸಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಭಾರತ್ ಟ್ಯಾಕ್ಸಿ ವೇದಿಕೆಯಲ್ಲಿ ಚಾಲಕರನ್ನು ಸಾರಥಿಗಳು ಎಂದು ಕರೆಯಲಾಗುತ್ತಿದ್ದು, ಅವರಿಗೆ ಮಾಲೀಕತ್ವ, ಕಾರ್ಯಾಚರಣೆ ಹಾಗೂ ಆದಾಯ ಸೃಷ್ಟಿಗೆ ಪ್ರಮುಖ ಸ್ಥಾನ ನೀಡಲಾಗಿದೆ ಎಂದು ಅಮಿತ್ ಷಾ ತಿಳಿಸಿದರು. ಭಾರತ್ ಟ್ಯಾಕ್ಸಿ ಅಂದರೆ ಕೇಂದ್ರ ಸರ್ಕಾರವು ಸಹಕಾರ ಮಾದರಿಯಲ್ಲಿ ಆರಂಭಿಸಿರುವ ಹೊಸ ಕ್ಯಾಬ್ ಸೇವೆಯಾಗಿದೆ. ಇದು ಉಬರ್, ಓಲಾ ರೀತಿಯ ಖಾಸಗಿ ಕಂಪನಿಗಳಂತೆ ಕಾರ್ಯನಿರ್ವಹಿಸಿದರೂ, ಮೂಲಭೂತವಾಗಿ ವಿಭಿನ್ನವಾದ ಮಾದರಿ ಹೊಂದಿದೆ. ಇಲ್ಲಿ ಟ್ಯಾಕ್ಸಿ ಚಾಲಕರೇ ಮಾಲೀಕರಾಗಿದ್ದು, ಕಂಪನಿ ಮಧ್ಯವರ್ತಿಯಾಗಿ ದೊಡ್ಡ ಕಮಿಷನ್ ವಸೂಲಿ ಮಾಡುವ ವ್ಯವಸ್ಥೆ ಇಲ್ಲ. ಕೇಂದ್ರ ಸಹಕಾರ ಸಚಿವಾಲಯವು ಭಾರತ್…
ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ 2026-2031ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಎಸ್ ಆರ್ ಸತೀಶ್ಚಂದ್ರ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಳ್ಯ ನೆಲ್ಲೂರು ಕೆಮ್ರಾಜೆಯ ಉಮೇಶ್ ಪ್ರಭು ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಆಡಳಿತ ಮಂಡಳಿಯ ನಿರ್ದೇಶಕರುಗಳಾಗಿ ಸುಳ್ಯ ತಾಲೂಕು ಕಳಂಜ ಗ್ರಾಮದ ಚಂದ್ರಶೇಖರ ಭಟ್, ಮಂಗಳೂರು ತಾಲೂಕು ಉಲ್ಲಾಳದ ದಯಾನಂದ ನಾಯಕ್ ಕೆ, ಬಂಟ್ವಾಳ ತಾಲೂಕು ಪುಣಚ ಗ್ರಾಮದ ರವೀಶ ಪಿ, ಪುತ್ತೂರು ತಾಲೂಕು ಇರ್ದೆ ಗ್ರಾಮದ ರಾಜಗೋಪಾಲ ಬಿ, ಪುತ್ತೂರು ತಾಲೂಕು ನೆಹರು ನಗರದ ವಸಂತ ಶಂಕರ್, ಬೆಂಗಳೂರಿನ ಮಾಚೋಹಳ್ಳಿಯ ವೇದವ್ಯಾಸ ಕೆ, ಸುಳ್ಯ ತಾಲೂಕು ಸೋಣಂಗೇರಿಯ ಸಂಜೀವ ನಾಯಕ್, ಪುತ್ತೂರು ತಾಲೂಕು ನಿಡಳ್ಳಿ ಗ್ರಾಮದ ಕೆ ಹರೀಶ್ ಬೋರ್ಕರ್, ಪುತ್ತೂರಿನ ಆರ್ಯಾಪು ಗ್ರಾಮದ ದೇವಕಿ ಕೆ, ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ರಂಜಿತ ಆರ್ ಪ್ರಭು ಆಯ್ಕೆಯಾಗಿದ್ದಾರೆ. ಚುನಾವಣಾ…
ಮಂಗಳೂರು: ದೇಶಭಕ್ತಿ ಉದ್ದೀಪನಗೊಳಿಸುವ ಬಾರ್ಡರ್ -2 ಚಲನಚಿತ್ರವನ್ನು ಮಂಗಳೂರಿನ ಶ್ರೀಶಾ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಂ ಎಸ್ ಗುರುರಾಜ್ ತಿಳಿಸಿದ್ದಾರೆ. https://chat.whatsapp.com/FCEnlTkAKCC0MGPhXtX4i4 ನಮ್ಮ ಹೆಮ್ಮೆಯ ಸೈನಿಕರು ನಮ್ಮ ದೇಶದ ಗಡಿಗಳನ್ನು ಹಗಲಿರುಳು ಜೀವದ ಹಂಗು ತೊರೆದು ಕಾಯುತ್ತಿದ್ದಾರೆ. 1971ರಲ್ಲಿ ಬಾಂಗ್ಲಾದೇಶ ವಿಮೋಚನೆಯ ಸಂದರ್ಭದಲ್ಲಿ ಪಶ್ಚಿಮದ ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ಸೈನ್ಯ ಭಾರತದ ಒಳಗೆ ನುಗ್ಗಲು ಯತ್ನಿಸಿತ್ತು. ಅದನ್ನು ವೀರಾವೇಶದಿಂದ ಎದುರಿಸಿ, ಹಿಮ್ಮೆಟ್ಟಿಸಿ ಗಡಿಯನ್ನು ಒಂದಿಂಚೂ ಬಿಡದೆ ಕಾಪಾಡಿದ ನಮ್ಮ ಸೈನ್ಯದ ವೀರ ಗಾಥೆಯ ಚಿತ್ರಣವೇ *ಬಾರ್ಡರ್ 2* ಚಲನಚಿತ್ರ. ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಈ ಚಲನಚಿತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ. ಇಂತಹ ಚಿತ್ರವನ್ನು ಸೊಸೈಟಿಯ ಹಿತೈಷಿಗಳು ವೀಕ್ಷಿಸಬೇಕೆಂಬುದು ಶ್ರೀಶಾ ಅಪೇಕ್ಷೆ – ನಿರೀಕ್ಷೆ. ಇದಕ್ಕಾಗಿ ಶ್ರೀಶಾ ಸೌಹಾರ್ದ ಸೊಸೈಟಿಯು ಈ “ಬಾರ್ಡರ್ 2” ಚಲನಚಿತ್ರ ಪ್ರದರ್ಶನವನ್ನು ಆಸಕ್ತರಿಗೆ ಉಚಿತವಾಗಿ ಫೆಬ್ರವರಿ 8ರ ಭಾನುವಾರ ಸಂಜೆ 4 ಗಂಟೆಗೆ ಭಾರತ್ ಮಾಲ್ ನಲ್ಲಿರುವ ಭಾರತ್…
