Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ವಲಯದ ಬೆಳವಣಿಗೆಗೆ ಪೂರಕವಾದ ಬಜೆಟ್: ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ
    News

    ಸಹಕಾರ ವಲಯದ ಬೆಳವಣಿಗೆಗೆ ಪೂರಕವಾದ ಬಜೆಟ್: ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ

    adminBy adminFebruary 2, 2026

    ಮಂಗಳೂರು: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ ಬಜೆಟ್ ಸಹಕಾರ ಕ್ಷೇತ್ರದ ದೂರಗಾಮಿ ಅಭಿವೃದ್ಧಿಗೆ ಪೂರಕವಾಗಿದೆ. ಬಜೆಟ್ ನಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳಿಗೆ ಆದಾಯ ತೆರಿಗೆ ಕಡಿತವನ್ನು ವಿಸ್ತರಿಸಿರುವುದು ಉತ್ತಮ ನಡೆ ಎಂದು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಆರ್. ಹರೀಶ್ ಆಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.

    https://chat.whatsapp.com/FCEnlTkAKCC0MGPhXtX4i4

    ಇದುವರೆಗೆ ತೆರಿಗೆ ಕಡಿತದ, ಪ್ರಯೋಜನವು ಹಾಲು ಉತ್ಪಾದನೆ, ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ ಪೂರೈಸುವಲ್ಲಿ ತೊಡಗಿರುವ ಸಹಕಾರಿ ಸಂಸ್ಥೆಗಳಿಗೆ ಅನ್ವಯಿಸುತ್ತಿದ್ದವು. ಈ ಬಾರಿ ಅವುಗಳ ಸದಸ್ಯರು ಬೆಳೆಸಿದ ಅಥವಾ ಬೆಳೆದ ಜಾನುವಾರು ಮೇವು ಮತ್ತು ಹತ್ತಿ ಬೀಜಗಳನ್ನು ಪೂರೈಸುವ ಪ್ರಾಥಮಿಕ ಸಹಕಾರಿ ಸಂಸ್ಥೆಗಳನ್ನು ಸಹ ಸೇರಿಸಿ ತೆರಿಗೆ ಕಡಿತದ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಾಥಮಿಕ ಕೃಷಿ ಸಹಕಾರಿ ಸಂಸ್ಥೆಗಳಿಗೂ ಹೆಚ್ಚುವರಿ ಬೆಂಬಲ ನೀಡಲು ಬಜೆಟ್ ನಲ್ಲಿ ಪ್ರಸ್ತಾಪವನ್ನು ಮಾಡಲಾಗಿದೆ.
    ಆಡಳಿತವು ಹೊಸ ರೀತಿಯ ತೆರಿಗೆ ಸುಧಾರಣೆಗೆ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದು ಒಂದು ಸಹಕಾರಿ ಸಂಘ ಮತ್ತೊಂದು ಸಹಕಾರಿ ಸಂಘದಿಂದ ಪಡೆದ ಲಾಭಾಂಶದ ಆದಾಯವನ್ನು ತೆರಿಗೆ ಕಡಿತವಾಗಿ ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
    ಸಹಕಾರ ಸಚಿವಾಲಯದ ಒಟ್ಟು ವೆಚ್ಚವನ್ನು 2026-27ರ ಸಾಲಿಗೆ 1,744.74 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದು 2025-26ರಲ್ಲಿ 1,186.29 ಕೋಟಿ ರೂ.ಗಳಷ್ಟಿತ್ತು.
    ಮುಂದಿನ ಸಾಲಿನ ಒಟ್ಟು 1,744.74 ಕೋಟಿ ರೂ.ಗಳಲ್ಲಿ, 47.77 ಕೋಟಿ ರೂ.ಗಳನ್ನು ಕೇಂದ್ರ ಸಹಕಾರ ಸಚಿವಾಲಯದ ಸ್ಥಾಪನಾ ವೆಚ್ಚಕ್ಕಾಗಿ ಮೀಸಲಿಡಲಾಗಿದೆ.
    ಜೊತೆಗೆ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (ಎನ್‌ಸಿಡಿಸಿ) ವಾರ್ಷಿಕ 500 ಕೋಟಿ ರೂ.ಗಳ ಸಹಾಯಧನ ಘೋಷಣೆ ಮಾಡಲಾಗಿದ್ದು, ಇದನ್ನು ಸಹಕಾರಿ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಸಹಕಾರಿ ಸಂಸ್ಥೆಗಳನ್ನು ಬಲಪಡಿಸಲು ಮೀಸಲೀಡಲಾಗಿದೆ.
    ಒಟ್ಟಾರೆಯಾಗಿ, ಈ ಬಜೆಟ್ ಸಹಕಾರ ಕ್ಷೇತ್ರದಲ್ಲಿ ತೆರಿಗೆ ಹೊರೆಗಳನ್ನು ಸಡಿಲಿಸುವ, ಸದಸ್ಯ ಕೇಂದ್ರಿತ ಹೆಚ್ಚುವರಿ ವಿತರಣೆಯನ್ನು ಉತ್ತೇಜಿಸುವ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಯ ಪ್ರಮುಖ ಚಾಲಕರಾಗಿ ಸಹಕಾರಿಗಳನ್ನು ಬೆಂಬಲಿಸುವ ಮೂಲಕ ಸಹಕಾರಿ ವಲಯವನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದೆ.
    ಯುವಶಕ್ತಿ, ಮಹಿಳಾ ಸಬಲೀಕರಣ, ರೈತರ ಆದಾಯ ವೃದ್ಧಿ, ಉದ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನಾಧಾರಿತ ಆರ್ಥಿಕತೆಯತ್ತ ಈ ಬಜೆಟ್ ಸ್ಪಷ್ಟ ಹಾಗೂ ದೃಢ ದೃಷ್ಟಿಕೋನವನ್ನು ಹೊಂದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

     

    Budget 2026 Central Co operative Ministry Co Operative Sector Dr. S R Harish Acharya Union Budget
    Previous Articleಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ
    Next Article ಸ್ವಚ್ಛತೆಯು ಜೀವನ ಶೈಲಿಯಾಗಲಿ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.