Author: admin
ಮಂಗಳೂರು: ಎಂ.ಸಿ.ಸಿ. ಬ್ಯಾಂಕಿನಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಮಿಲಾಗ್ರಿಸ್ ಚರ್ಚ್ನ ಧರ್ಮಗುರು ವಂದನೀಯ ಬೊನವೆಂಚರ್ ನಜರೆತ್ ಪವಿತ್ರ ಬಲಿಪೂಜೆ ನೆರೆವೇರಿಸಿದರು. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಜೆರಾಲ್ ಜೂಡ್ ಡಿಸಿಲ್ವಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್ ವೇದಿಕೆಯಲ್ಲಿದ್ದರು. ದ್ವಜಾರೋಹಣ ನೆರವೇರಿಸಿ ಮಾತನಾಡಿದ ತಾರಾನಾಥ್ ಗಟ್ಟಿ, ನಮ್ಮ ದೇಶದ ಸ್ವಾತಂತ್ರ‍್ಯೋತ್ಸವದ ಸಂಭ್ರಮಾಚರಣೆಯಲ್ಲಿ ಪ್ರಮುಖ ಸಹಕಾರಿ ಬ್ಯಾಂಕ್, ಎಂ.ಸಿ.ಸಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯೊಂದಿಗೆ ಭಾಗವಹಿಸಲು ಸಂತೋಷವಾಗುತ್ತಿದೆ. ಎಂ.ಸಿ.ಸಿ ಬ್ಯಾಂಕ್ ನೆಲೆ ನಿಂತಿರುವ ‘ಬಾವುಟಗಡ್ಡೆ’ ಪ್ರದೇಶ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರದೇಶವಾಗಿದ್ದು, ಇಲ್ಲಿನ ಅನೇಕ ಮಹನೀಯರು ತಮ್ಮ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಭಾರತದ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ನಾಗರಿಕನೂ ಎತ್ತಿ ಹಿಡಿಯಬೇಕಾಗಿದೆ ಎಂದು ಕರೆ ನೀಡಿದರು. https://chat.whatsapp.com/Ge11n7QCiMj5QyPvCc0H19 ಬ್ಯಾಂಕಿನ ಸಿಬ್ಬಂದಿ ದೇಶಭಕ್ತಿ ಗೀತೆಗಳನ್ನು ಹಾಡಿ ಸಭಿಕರಲ್ಲಿ ದೇಶಪ್ರೇಮವನ್ನು…
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2023-24ರ ಸಾಲಿನ ಸಾಧನಾ ಪ್ರಶಸ್ತಿಯನ್ನು ಬುಧವಾರ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ಪ್ರದಾನ ಮಾಡಲಾಯಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಟಿ.ಜಿ. ರಾಜಾರಾಮ ಭಟ್, ಎಂ. ವಾದಿರಾಜ್ ಶೆಟ್ಟಿ, ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಎಸ್.ಬಿ.ಜಯರಾಮ ರೈ, ಡಾ.ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಕೆ.ಹರಿಶ್ಚಂದ್ರ, ಎಂ.ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಜೈರಾಜ್ ಬಿ.ರೈ, ಕುಶಾಲಪ್ಪ ಗೌಡ ಪಿ., ಎಸ್. ಎನ್.…
ಮಂಗಳೂರು: ವಜ್ರಮಹೋತ್ಸವ ಸಂಭ್ರಮದಲ್ಲಿರುವ ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಮಂಗಳೂರು ಇದರ ವತಿಯಿಂದ ಆಗಸ್ಟ್ 18ರಂದು ಭಾನುವಾರ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ವಜ್ರಮಹೋತ್ಸವ ವರ್ಷ ಆಚರಿಸುತ್ತಿರುವ ಅಂಗವಾಗಿ ಭಾನುವಾರ ಮಧ್ಯಾಹ್ನ 3ಕ್ಕೆ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಬಳಿಯ ಶ್ರೀ ರಾಧಾಕೃಷ್ಣ ಹಾಲ್(ಬಾಳಂಭಟ್ ಹಾಲ್)ನಲ್ಲಿ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಐಸಿ ನಿಟ್ಟೆ ಇನ್‌ಕ್ಯುಬೇಶನ್ ಸೆಂಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅನಂತಪದ್ಮನಾಭ ಆಚಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಉಪನ್ಯಾಸಕ ಡಾ.ಎಸ್.ಪಿ.ಗುರುದಾಸ್ ಮುಖ್ಯ ಭಾಷಣ ಮಾಡಲಿದ್ದಾರೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಶಾಸಕ ಡಿ.ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಮೇಲ್ ಮಾಡಿ: ಇಮೇಲ್: sahakaraspandana@gmail.com ಮಾಹಿತಿಗೆ: 9901319694
ಮಂಗಳೂರು: ದೇಶದ ಸ್ವಾತಂತ್ರ್ಯದ ನಿಜ ಅರ್ಥವನ್ನು ದೇಶದ ಜನ ಅರ್ಥೈಸಿಕೊಳ್ಳಬೇಕು, ಹಲವಾರು ಹೋರಾಟಗಾರರ ತ್ಯಾಗ, ಬಲಿದಾನ ಮೂಲಕ ದೊರಕಿಸಿಕೊಟ್ಟಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು ಹಾಗೂ ಇವತ್ತು ದೇಶದ ಬಾಹ್ಯ ಭದ್ರತೆಯ ಜೊತೆ ತಲೆದೋರಿರುವ ಆಂತರಿಕ ಭದ್ರತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದು ನಿವೃತ್ತ ಸೇನಾನಿ ರವಿಚಂದ್ರ ಹೇಳಿದರು. ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಧ್ವಜಾರೋಹಣಗೈದು ಸಂದೇಶ ನೀಡಿದರು. ಅಧ್ಯಕ್ಷತೆ ವಹಿಸಿದ ಬ್ಯಾಂಕಿನ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳು ಕೇವಲ ಸರಕಾರಿ ಕಾರ್ಯಕ್ರಮಗಳಾದೇ ದೇಶದ ಸರ್ವ ಜನರ ಸಾಮೂಹಿಕ ಆಚರಣೆಯ ಸ್ವರೂಪವನ್ನು ಪಡೆದುಕೊಳ್ಳಬೇಕೆಂಬ ಆಶಯ ವ್ಯಕ್ತಪಡಿಸಿದರು. ಈ ಸಂದರ್ಭ ಬ್ಯಾಂಕಿನ ಹಿರಿಯ ಸದಸ್ಯ ಮಣ್ಣಗುಡ್ಡೆ ಯೋಗೀಶ್ ಆಚಾರ್ಯ, ರಾಜೇಂದ್ರ ಪೇಜಾವರ, ಬ್ಯಾಂಕಿನ ಸಲಹೆಗಾರ ಜಯರಾಮ ಶೆಟ್ಟಿ, ಕಾಳಿಕಾ ಸೇವಾ ಸಮಿತಿಯ ಅಧ್ಯಕ್ಷ ವಿವೇಕ್ ಜೆ, ನಿರ್ದೇಶಕಿ ರೇಶ್ಮಾ ಚಂದನ್, ಹಿರಿಯ ವಕೀಲ…
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಜಗದೀಶ್ ಹೆಬ್ಬಾರ್ ಕಾರಿಜ, ಉಪಾಧ್ಯಕ್ಷರಾಗಿ ಆರೂರು ವಾಸುದೇವ ರಾವ್ ಆಯ್ಕೆ
ಮೈಸೂರು: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಆಶೀರ್ವಾದದಿಂದ 2019ರಲ್ಲಿ ಸ್ಥಾಪನೆಗೊಂಡ ಮೈಸೂರಿನ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸೌಹಾರ್ದ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಜಗದೀಶ್ ಹೆಬ್ಬಾರ್ ಕಾರಿಜ ಆಯ್ಕೆಯಾಗಿದ್ದಾರೆ. 2024-25 ರಿಂದ 2029-30 ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆ ಆಗಸ್ಟ್ 4ರಂದು ನಡೆದು ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಪದಾಧಿಕಾರಿಗಳ ಚುನಾವಣೆ ಆಗಸ್ಟ್ 12ರಂದು ನಡೆದಿದ್ದು, ಅಧ್ಯಕ್ಷರಾಗಿ ಜಗದೀಶ್ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಕಳೆದ 25 ವರ್ಷಗಳಿಂದ ಅನೇಕ ಸಂಘ ಸಂಸ್ಥೆಗಳಲ್ಲಿ ನಾಯಕತ್ವ ವಹಿಸಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದು ಜಾಗರಣ ವೇದಿಕೆ, ಸಹಕಾರ ಭಾರತಿ, ವಿಶ್ವ ಹಿಂದು ಪರಿಷದ್‌ಗಳಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿರುತ್ತಾರೆ. ಪ್ರಸ್ತುತ ವಿಶ್ವ ಹಿಂದು ಪರಿಷತ್‌ನ ಮೈಸೂರು ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ 24 ವರ್ಷಗಳ ಅನುಭವದೊಂದಿಗೆ ತರಬೇತುದಾರರಾಗಿ, ಸಲಹೆಗಾರರಾಗಿ ಸಹಕಾರ ಸಂಘಗಳ ಸ್ಥಾಪನೆಯಲ್ಲಿ ಸಹಾಯಕರಾಗಿದ್ದಾರೆ. https://chat.whatsapp.com/Ge11n7QCiMj5QyPvCc0H19 ಸಂಸ್ಥೆಯ ಉಪಾಧ್ಯಕ್ಷರಾಗಿ ಆರೂರು ವಾಸುದೇವ ರಾವ್…
ನಬಾರ್ಡ್ ವಾರ್ಷಿಕ ವರದಿಯಲ್ಲಿ ಉಲ್ಲೇಖ ನವದೆಹಲಿ: ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿ ಸಂಘಗಳಿದ್ದರೂ 18,497 ಗ್ರಾಮ ಪಂಚಾಯಿತಿಗಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮುಟ್ಟಿಲ್ಲ. ನಬಾರ್ಡ್‌ನ 2023-24ರ ವಾರ್ಷಿಕ ವರದಿ ಈ ಮಾಹಿತಿ ತೆರೆದಿಟ್ಟಿದೆ. ದೇಶದ ಐದು ರಾಜ್ಯಗಳಲ್ಲೇ ಒಟ್ಟಾರೆ ಸಹಕಾರಿಗಳ 57 ಶೇಕಡಾ ಸಂಖ್ಯೆಯಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲೇ ಈ 57 ಶೇಕಡಾ ಸಹಕಾರಿಗಳ ಸಂಖ್ಯೆಯಿದೆ. ದೇಶದಲ್ಲಿ ಸಹಕಾರಿ ಕ್ಷೇತ್ರದ ಚಟುವಟಿಕೆಗಳು ವಿಶಾಲವಾಗಿ ಹರಡಿದ್ದರೂ ಎಲ್ಲಾ ರಾಜ್ಯಗಳಲ್ಲಿ ಇದು ಒಂದೇ ಸಮನಾಗಿಲ್ಲ. ಮಹಾರಾಷ್ಟ್ರ ಒಂದರಲ್ಲೇ ದೇಶದ ಸಹಕಾರಿಗಳ ಪೈಕಿ ನಾಲ್ಕನೇ ಒಂದರಷ್ಟು ಸಂಖ್ಯೆಯಿದೆ ಎಂದು ವರದಿ ಹೇಳಿದೆ. 18,497 ಗ್ರಾಮ ಪಂಚಾಯಿತಿಗಳಲ್ಲಿ ಪ್ಯಾಕ್ಸ್‌ನ ಚಟುವಟಿಕೆಗಳು ಇನ್ನೂ ಶುರುವಾಗಿಲ್ಲ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. https://chat.whatsapp.com/Ge11n7QCiMj5QyPvCc0H19 ಏಷ್ಯಾ ವಲಯದಲ್ಲಿ ಭಾರತವು ಅತಿ ಹೆಚ್ಚು ಸಹಕಾರಿಗಳನ್ನು ಹೊಂದಿರುವ ಎರಡನೇ ದೇಶವೆನಿಸಿದೆ.(ಜಪಾನ್ ನಂತರದ ಸ್ಥಾನ) ಜಾಗತಿಕವಾಗಿ ಆರನೇ…
ಮಂಗಳೂರು: ಆಟಿ ತಿಂಗಳಲ್ಲಿ ತುಳುನಾಡಿನ ಜನ ಆಚರಣೆ ಮಾಡುವ ಆಟಿಡೊಂಜಿ ದಿನವನ್ನು “ಆಟಿದ ಪೊಲಬು” ಎಂಬ ಹೆಸರಿನಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಮಂಗಳೂರು ಇದರ ಪ್ರಧಾನ ಕಛೇರಿ ಪಡೀಲ್‌ನ “ಆತ್ಮಶಕ್ತಿ ಸೌಧ”ದಲ್ಲಿ ಭಾನುವಾರ ಆಚರಿಸಲಾಯಿತು. ಹಿರಿಯ ನಾಟಿ ವೈದ್ಯ ಕಲಾಯಿ ಈಶ್ವರ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟಿ ತಿಂಗಳ ಮಹತ್ವವನ್ನು ತಿಳಿಸಿ, ನಾಟಿ ಔಷಧಿ ಪದ್ದತಿಗಳ ಬಗ್ಗೆ ಮಾಹಿತಿ ನೀಡಿದರು. ಕಂಕನಾಡಿ ನಗರ ಪೊಲೀಸ್ ಠಾಣೆಯ ಕ್ರೈಂ ಬ್ರಾಂಚ್‌ನ ಪರಶುರಾಮ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಧಿಕವಾಗುತ್ತಿರುವ ಸೈಬರ್ ಅಪರಾಧದ ಬಗ್ಗೆ ಜಾಗೃತಿ ವಹಿಸುವಂತೆ ಹಾಗೂ ಮುನ್ನೆಚರಿಕೆ ವಹಿಸಬೇಕಾದ ಜಾಗೃತಿಯ ವಿಷಯದಲ್ಲಿ ಮಾಹಿತಿ ನೀಡಿದರು. ಮೂಲ್ಕಿ ಪೋಲಿಸ್ ಠಾಣೆಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಅನಿತಾ ಕೆ. ಮಾತನಾಡಿ, ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಟ್ಟು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಹಲವಾರು ಜಿಲ್ಲಾ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವುದು ಶ್ಲಾಘನೀಯ. ಮಹಿಳೆಯರು ಅಪರಾಧಗಳ ಬಗ್ಗೆಯೂ ಜಾಗೃತಿ ವಹಿಸಬೇಕು.…
ರಾಷ್ಟ್ರೀಯ ಸಹಕಾರಿ ನೀತಿ ಸಮಿತಿ ಅಧ್ಯಕ್ಷ ಸುರೇಶ್ ಪ್ರಭು ಅಭಿಪ್ರಾಯ ಉಡುಪಿ: ದೇಶದಲ್ಲಿ ಜಾರಿಗೆ ತರಲುದ್ದೇಶಿಸಿರುವ ರಾಷ್ಟ್ರೀಯ ಸಹಕಾರಿ ನೀತಿಯಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಏಕರೂಪಿ ತಂತ್ರಜ್ಞಾನದ ಅಳವಡಿಕೆಗೆ ಆದ್ಯತೆ ನೀಡಲಾಗಿದೆ ಎಂದು ರಾಷ್ತ್ರೀಯ ಸಹಕಾರಿ ನೀತಿ ಸಮಿತಿಯ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಸುರೇಶ್ ಪಿ.ಪ್ರಭು ಹೇಳಿದರು. ಉಡುಪಿಯಲ್ಲಿ ಭಾನುವಾರ ಸಹಕಾರ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾದ ಸತ್ಕಾರ ಕೂಟದಲ್ಲಿ ಮಾತನಾಡಿದರು. ಭವಿಷ್ಯದ ಭಾರತದಲ್ಲಿ ಸಹಕಾರಿ ಕ್ಷೇತ್ರವು ಆರ್ಥಿಕ, ವಾಣಿಜ್ಯಿಕ, ಔದ್ಯಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಸಹಕಾರಿ ಕ್ಷೇತ್ರದಲ್ಲಿ ದೇಶವ್ಯಾಪಿ ಏಕರೂಪಿ ತಂತ್ರಜ್ಞಾನ ಜಾರಿಗೊಳಿಸಿ ಭವಿಷ್ಯದ ಆರ್ಥಿಕತೆಯ ನಾಯಕತ್ವ ವಹಿಸಲು ಸಹಕಾರಿ ಕ್ಷೇತ್ರವನ್ನು ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು. ಸಹಕಾರ ಭಾರತಿಯು ರಾಷ್ಟ್ರೀಯ ಮಟ್ಟದಲ್ಲಿ ಸಹಕಾರಿ ಕ್ಷೇತ್ರದ ಶುದ್ಧೀಕರಣ, ವೃದ್ಧೀಕರಣ ಮತ್ತು ಆಧುನೀಕರಣಕ್ಕೆ ಶ್ರಮಿಸುತ್ತಿರುವ ಏಕೈಕ ಸರಕಾರೇತರ ಸಂಘಟನೆ ಎಂದು ಸುರೇಶ್ ಪ್ರಭು ಶ್ಲಾಘಿಸಿದರು. ಉಡುಪಿ ಜಿಲ್ಲೆಯಲ್ಲಿ ಕೂಡಾ ಬ್ಯಾಂಕಿಂಗ್, ಶಿಕ್ಷಣ ಮತ್ತು ಆರೋಗ್ಯ…
ವಿಲೇವಾರಿ ತ್ವರಿತಗೊಳಿಸಲು ಆರ್‌ಬಿಐ ಕ್ರಮ ನವದೆಹಲಿ: ಹಣಕಾಸಿಗೆ ಸಂಬಂಧಿಸಿ ಮಹತ್ವದ ಕ್ರಮವೊಂದನ್ನು ಘೋಷಿಸಿರುವ ಆರ್‌ಬಿಐ ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್ ಕ್ಲಿಯರೆನ್ಸ್‌ಗೆ ಅವಕಾಶ ನೀಡಿದೆ. ಮುಂದೆ ಚೆಕ್ ಕ್ಲಿಯರೆನ್ಸ್‌ಗೆ ಎರಡು –ಮೂರು ದಿನ ಕಾಯಬೇಕಿಲ್ಲ. ಕೆಲವೇ ಗಂಟೆಗಳಲ್ಲಿ ಹಾಕಿದ ಚೆಕ್ ಕ್ಲಿಯರ್ ಆಗಿ ಚೆಕ್‌ನ ಮೊತ್ತ ಬ್ಯಾಂಕ್‌ಗೆ ಜಮಾ ಆಗಲಿದೆ. ಈ ಹೊಸ ವ್ಯವಸ್ಥೆಯನ್ನು ಆರ್‌ಬಿಐ ಗುರುವಾರ ಘೋಷಣೆ ಮಾಡಿದೆ. ಪ್ರಸ್ತುತ ಬ್ಯಾಚ್ ಪ್ರೊಸೆಸಿಂಗ್ ಮಾದರಿಯಲ್ಲಿ ಚೆಕ್ ಪ್ರಾಸೆಸಿಂಗ್ ಮಾದರಿಯಲ್ಲಿ ಚೆಕ್ ಟ್ರಂಕೇಶನ್ ಸಿಸ್ಟಮ್ ಮೂಲಕ ಚೆಕ್ ನಗದು ಆಗುವ ಪ್ರಕ್ರಿಯೆ ನಡೆಯುತ್ತಿತ್ತು. ಇದಕ್ಕೆ ಕನಿಷ್ಠ ಎರಡು ದಿನಗಳ ಪ್ರಕ್ರಿಯೆ ಬೇಕಿತ್ತು. ಇದರ ಬದಲಿಗೆ ಚೆಕ್ ಹಾಕಿದ ಕೂಡಲೇ ಮಾದನ್ನು ನಗದಾಗಿ ಪರಿವರ್ತಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ವ್ಯವಸ್ಥೆ ಜಾರಿಯಾದರೆ ಚೆಕ್ ಹಾಕಿದ ಕೆಲವೇ ಗಂಟೆಗಳಲ್ಲಿ ಅದರ ವಿಲೇವಾರಿ ಆಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ. https://chat.whatsapp.com/Ge11n7QCiMj5QyPvCc0H19 ರೆಪೋ ದರ ಯಥಾಸ್ಥಿತಿ ಸತತ ಒಂಬತ್ತನೇ ಬಾರಿ…
ಮಹತ್ವದ ತೀರ್ಪು ಪ್ರಕಟಿಸಿದ ಕರ್ನಾಟಕ ಹೈಕೋರ್ಟ್ ಬೆಂಗಳೂರು: ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿ ಸೆಕ್ಷನ್ 128A ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಗುರುವಾರ ಮಹತ್ವದ ತೀರ್ಪು ನೀಡಿದೆ. ಇದರಿಂದ ಸಹಕಾರ ಸಂಘಗಳ ಸ್ವಾಯತ್ತೆಗೆ ಧಕ್ಕೆ ಎಂದು ಸಹಕಾರ ಸಂಘಗಳ ಪರ ಹಿರಿಯ ವಕೀಲ ಎ.ಕೇಶವ ಭಟ್ ವಾದಿಸಿದ್ದರು. ಇದು ಸಂವಿಧಾನಬಾಹಿರ. ತಿದ್ದುಪಡಿ ಸಂವಿಧಾನದ ಆರ್ಟಿಕಲ್ 19(1)ಸಿ ಯ ಉಲ್ಲಂಘನೆ ಎಂದು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಹೈಕೋರ್ಟ್ ಪೀಠ ತೀರ್ಪು ಪ್ರಕಟಿಸಿದೆ. https://chat.whatsapp.com/Ge11n7QCiMj5QyPvCc0H19 ರಾಜ್ಸಯ ಸರ್ಕಾರವು 2023ರಲ್ಲಿ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ಮಾಡಿದ್ದ ತಿದ್ದುಪಡಿಯನ್ನು ನ್ಯಾಯಾಲಯ ಸಂವಿಧಾನಬಾಹಿರವೆಂದು ಆದೇಶಿಸಿದೆ. ಈ ವಿಚಾರದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ಗುರುವಾರ ಪ್ರಕಟಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಕೇಶವ್ ಭಟ್, ಮೊದಲಿನಿಂದಲೂ ಸಹಕಾರ ಸಂಘಗಳ ಬಳಿ ಇದ್ದ ಸಿಬ್ಬಂದಿಯ ನೇಮಕ, ವರ್ಗಾವಣೆ…
