Author: admin

ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಿಂದ ತಥಾಸ್ತು ಯೋಜನೆ ಸೆ.14ರಂದು ಹಸ್ತಾಂತರ ಮಾನವೀಯ ಕೈಂಕರ್ಯವಾಗಿ ಸಂಸ್ಥೆಯ ಬಡ ಗ್ರಾಹಕಿಗೆ ಬದುಕಿಗೊಂದು ಸೂರು ಯೋಜನೆ ಉಡುಪಿ: ಠೇವಣಿ ಸಂಗ್ರಹ, ಸಾಲ ವಿತರಣೆ ಇವೇ ಮೊದಲಾದ ಆರ್ಥಿಕ ವಹಿವಾಟುಗಳಲ್ಲೇ ವ್ಯಸ್ತವಾಗುತ್ತಿರುವ ಕೋಆಪರೇಟಿವ್‌ ಸೊಸೈಟಿಗಳು ವಿಭಿನ್ನ ಯೋಜನೆ, ಯೋಚನೆಗಳ ಮೂಲಕ ಮಾನವೀಯ ಕಾರ್ಯವನ್ನೂ ಮಾಡಬಲ್ಲವು ಎಂಬುದಕ್ಕೆ ಉಡುಪಿ ಜಿಲ್ಲೆಯ ಕೋಡಿ ಕನ್ಯಾಣದ ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಉತ್ತಮ ನಿದರ್ಶನ ನೀಡಿದೆ. ತಮ್ಮ ಸಂಸ್ಥೆಯ ಬಡ ಗ್ರಾಹಕಿಯೊಬ್ಬರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳನ್ನು ಸೇರಿಸಿಕೊಂಡು ಸುಂದರವಾದ ಮನೆಯೊಂದನ್ನು ನಿರ್ಮಿಸಿಕೊಟ್ಟಿದೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ತನ್ನ ಕ್ರಿಯಾಶೀಲ ವ್ಯವಸ್ಥಾಪನೆ, ದಕ್ಷ ಆಡಳಿತ ನಿರ್ವಹಣೆಯಿಂದ ಹೆಸರುವಾಸಿಯಾಗಿದೆ. ಜನಪರ ಕಾರ್ಯಚಟುವಟಿಕೆ, ಸಮಾಜಮುಖಿ ಕೈಂಕರ್ಯದಲ್ಲಿ ಗ್ರಾಹಕರ ಸಂಕಷ್ಟಗಳಿಗೆ ಧ್ವನಿಯಾಗಿ ಸ್ಪಂದಿಸಿದೆ. ಇದೇ ಕಾರ್ಯದಲ್ಲಿ ಮುಂದುವರಿದು ಸಂಸ್ಥೆಯ ಗ್ರಾಹಕಿ ಇಳಿ ವಯಸ್ಸಿನ ಭವಾನಿ ಜಿ.ನಾಯ್ಕ್‌ ಅವರ ಮನೆ ಸೋರುತ್ತಿರುವುದನ್ನು ಮನಗಂಡು ಅವರ ಮನೆಗೆ…

Read More

ಮಂಗಳೂರು: ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ಮಂಗಳವಾರ ಬಂಟ್ವಾಳ ತಾಲೂಕಿನ ಗುಡ್ಡೆ ಅಂಗಡಿ, ಅರಳದ ಸ್ನೇಹ ಭಾರತಿ ವಿದ್ಯಾಸಂಸ್ಥೆಯ “ನಮ್ಮ ಹಿರಿಯರ ಮನೆ”, ವೃದ್ಧಾಶ್ರಮಕ್ಕೆ ಭೇಟಿ ನೀಡಿ 60 ವರ್ಷ ದಾಟಿದ ವೃದ್ದರಿಗೆ ನಮ್ಮ ಸಂಸ್ಥೆಯ ವತಿಯಿಂದ 50 ಬೆಡ್‌ಶೀಟ್‌ ನೀಡಲಾಯಿತು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಂಸ್ಥೆಯ  ನಿರ್ದೇಶಕರಾದ ವೈ.ವಿ.ವಿಶ್ವಜ್ಞಮೂರ್ತಿ, ರೋಹಿಣಿ ಎಂ.ಪಿ, ಯು.ರಮೇಶ್ ರಾವ್ ಮತ್ತು ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಹಾಗೂ ಸಿಬ್ಬಂದಿ ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು. ಸ್ನೇಹಭಾರತಿಯ “ನಮ್ಮ ಹಿರಿಯರ ಮನೆ” ಆಶ್ರಮದ ನಿರ್ವಾಹಕರಾದ ರಾಮೇಗೌಡ ವಿಜಾಪುರ ಸಂಸ್ಥೆಗೆ ಶುಭ ಹಾರೈಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ 1.59 ಕೋಟಿ ರೂ. ಲಾಭ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಹೇಳಿಕೆ ಉಳ್ಳಾಲ: ಕೋಟೆಕಾರು ಗ್ರಾಮದ ಬೀರಿಯಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಸುಬ್ಬಣ್ಣಯ್ಯ ಹೆಸರಲ್ಲಿ ನಿರ್ಮಿಸಲಾಗಿರುವ ಕೆ.ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರು ಸಹಕಾರ ಸೌಧ ಸೆ.15ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕೋಟೆಕಾರು ವ್ಯವಸಾಯ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ಹೇಳಿದರು. ‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಸಭಾಂಗಣ, ಸಂಸದ ಕ್ಯಾ.ಬ್ರಿಜೇಶ್ ಚೌಟ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾದ ಐವನ್ ಡಿಸೋಜ, ಬಿ.ಎಂ‌.ಫಾರೂಕ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,…

Read More

2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಶೇ.16 ಡಿವಿಡೆಂಡ್ ಘೋಷಣೆ ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಬಿ.ಸಿ.ರೋಡ್‌ನ “ಸ್ಪರ್ಶಾ ಕಲಾಮಂದಿರ”ದಲ್ಲಿ ಇತ್ತೀಚೆಗೆ ಸಂಘದ ಅಧ್ಯಕ್ಷ ಜೀವನ್ ಲೊಯ್ಡ್ ಪಿಂಟೊ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2023-24ನೇ ಸಾಲಿನ ಆರ್ಥಿಕ ವರ್ಷ ರೂ. 2.10 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 16 ಡಿವಿಡೆಂಡ್ ಘೋಷಣೆ ಮಾಡಲಾಯಿತು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK 27ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ, ಸಂಘದ ಪ್ರಗತಿಯ ಅಂಕಿ ಅಂಶಗಳನ್ನು, ಮುಂದಿನ ಯೋಜನೆಗಳನ್ನು ಹಾಗೂ ಸದ್ರಿ ಆಡಳಿತ ಮಂಡಳಿಯ ಕೊನೆಯ ವಾರ್ಷಿಕ ಸಭೆಯ ಬಗ್ಗೆ ಪ್ರಸ್ತಾಪಿಸಿ, ಕಳೆದ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಠೇವಣಿ ಮತ್ತು ಸಾಲಗಳ ವಿಭಾಗದಲ್ಲಿ ಸಂಘವು ಸಾಧಿಸಿದ ಪ್ರಗತಿಯನ್ನು ಸಭೆಯ ಮುಂದಿಟ್ಟು, ಸಂಘವನ್ನು ಬೆಳೆಸಲು ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಅರ್ಪಿಸಿದರು. ಸಂಘದ ದೊಡ್ಡ ಕನಸಾಗಿರುವ ಪ್ರಧಾನ ಕಛೇರಿ ಹಾಗೂ ಬಿ.ಸಿ.ರೋಡ್ ಶಾಖೆಯ…

Read More

ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ ಪ್ರಧಾನ ಕಛೇರಿ ಹಾಗೂ ಬಿ.ಸಿ ರೋಡ್ ಶಾಖೆಯ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭ ಕೈಕಂಬ ಬಿ.ಸಿರೋಡ್ ಬಳಿ ಇರುವ ಸಂಘದ ನೂತನ ನಿವೇಶನದಲ್ಲಿ ಶನಿವಾರ ನಡೆಯಿತು. ಮೊಡಂಕಾಪು ವಲಯದ ಧರ್ಮಗುರು ವಂ|ಫಾ। ವಲೇರಿಯನ್ ಡಿಸೋಜ ಆಶೀರ್ವಚನ ನೆರವೇರಿಸುವ ಮೂಲಕ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಜೀವನ್ ಲೋಯ್ಡ್ ಪಿಂಟೊ ಹಾಗೂ ಉಪಾಧ್ಯಕ್ಷ ವಲೇರಿಯನ್ ಬರೆಟ್ರೊ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLKಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ, ಶಾಸಕ ರಾಜೇಶ್ ನಾಯ್ಕ್‌ ಯು, ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಪುರಸಭೆ ಸದಸ್ಯ ಮಹಮ್ಮದ್ ನಂದರಬೆಟ್ಟು ಭಾಗವಹಿಸಿದ್ದರು. ಸಂಘದ ಪರವಾಗಿ ಐವನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ವಿನ್ಸೆಂಟ್ ಕ್ಲಾಡಿ ಕಾರ್ಲೊ ವಂದಿಸಿದರು. ಸಿಬ್ಬಂದಿ ವಿವಿಯನ್ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ದೇಶ ಕಾಯುವ ಯೋಧರಿಗೆ ಲಾಭಾಂಶದ ಒಂದು ಪಾಲು ಘೋಷಣೆ ಮಂಗಳೂರು: ಸ್ವಸ್ತಿಕ್‌ ಸೌಹಾರ್ದ ಸೊಸೈಟಿ ಅಳಪೆ ಕರ್ಮಾರ್‌ ಪಡೀಲ್‌ ಇದರ ಏಳನೇ ವಾರ್ಷಿಕ ಮಹಾಸಭೆ ಭಾನುವಾರ ಅಳಪೆ ಕರ್ಮಾರ್‌ನ ಮಹಾದೇವಿ ಭಜನಾ ಮಂದಿರದಲ್ಲಿ ನಡೆಯಿತು. ಸ್ವಸ್ತಿಕ್‌ ಸೌಹಾರ್ದ ಸೊಸೈಟಿಯ ಅಧ್ಯಕ್ಷ ವಲ್ಸರಾಜ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶವನ್ನು ಕಾಯುವ ಯೋಧರಿಗಾಗಿ ನಮ್ಮ ಸಂಸ್ಥೆಯ ಲಾಭಾಂಶದ ಒಂದು ಪಾಲು ಮೀಸಲಿಡಲಾಗುವುದು. ದೇಶ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮೀಸಲಿಡುವ ಯೋಧರಿಗೆ ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಚಂದ್ರ ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆಯು 28.42.644 ರೂ. ಆದಾಯ ಹೊಂದಿದ್ದು, 16,95,495 ರೂ. ಒಟ್ಟು ವ್ಯವಹಾರ ದಾಖಲಿಸಿದೆ. ಶೇ.7 ಡಿವಿಡೆಂಡ್‌ ಘೋಷಿಸಲಾಗಿದೆ. ಸಂಸ್ಥೆಯು ಸದಸ್ಯರಿಗೆ ಸರಕಾರಿ ಹಾಗೂ ಸರಕಾರೇತರ ಸೇವೆಯನ್ನು ಸಿಎಸ್‌ಇ-ಇ-ಸರ್ವೀಸ್‌ ಮೂಲಕ ನೀಡುತ್ತಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.೮೦ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಸಾವನ್‌ ವಿ.ಶೆಟ್ಟಿ, ಭೂಷಣ್‌…

Read More

100ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ನವೆಂಬರ್‌ 25ರಿಂದ 30ರ ತನಕ ಪ್ರಗತಿ ಮೈದಾನದಲ್ಲಿ ಆಯೋಜನೆ ನವದೆಹಲಿ: ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ(ಐಸಿಎ)ದ ಮಹಾಸಭೆ ಮತ್ತು ಜಾಗತಿಕ ಮಹಾ ಅಧಿವೇಶನವು ಈ ಬಾರಿ ನವದೆಹಲಿಯಲ್ಲಿ ನಡೆಯಲಿದ್ದು, ಐತಿಹಾಸಿಕ ಕ್ಷಣಗಳಿಗಾಗಿ ಭಾರತ ಸಜ್ಜಾಗಿದೆ. ಇದೇ ಮೊದಲ ಸಲ ಭಾರತದಲ್ಲಿ ಈ ಅಧಿವೇಶನ ನಡೆಯಲಿದ್ದು, ನವಂಬರ್‌ 25ರಿಂದ 30ರ ತನಕ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ಈ ಐತಿಹಾಸಿಕ ಸಮಾವೇಶದಲ್ಲಿ 100ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇಫ್ಕೋ ಪ್ರಧಾನ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಇಫ್ಕೋದ ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ.ಯು.ಎಸ್‌.ಅವಸ್ಥಿ, ಸಹಕಾರ ಸಚಿವಾಲಯದ ಕಾರ್ಯದರ್ಶಿ ಆಶಿಶ್‌ ಭೂತಾನಿ, ಐಸಿಎಯ ಡೈರೆಕ್ಟರ್‌ ಜನರಲ್‌ ಜೆರೋನ್‌ ಡಗ್ಲಾಸ್‌ ಇವರು ಈ ಬಗ್ಗೆ ಮಾಹಿತಿ ನೀಡಿದರು. ಸಹಕಾರದಿಂದ ಸರ್ವರಿಗೂ ಸಮೃದ್ಧಿ ಎಂಬುದು ಈ ಬಾರಿಯ ಸಮಾವೇಶದ ಥೀಮ್‌. ಇದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ಸಮೃದ್ಧಿ ಎಂಬ ವಿಷಯಕ್ಕೆ ಹತ್ತಿರವಾಗಿದೆ…

Read More

ಶ್ರೀಶಾ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿ ವಿಭಿನ್ನ ಚಿಂತನೆ, ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಮಂಗಳೂರು: ಸಹಕಾರಿ ವಲಯದಲ್ಲಿ ವಿಭಿನ್ನವಾದ ಚಿಂತನೆ, ವೈಶಿಷ್ಟ್ಯಪೂರ್ಣ ಕಾರ್ಯ್ರಕ್ರಮಗಳೊಂದಿಗೆ ಮುನ್ನಡೆಯುತ್ತಿರುವ ಮಂಗಳೂರಿನ ಶ್ರೀಶಾ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯು ಆರಂಭದ ಐದು ವರ್ಷಗಳನ್ನು ಅರ್ಥಪೂರ್ಣವಾಗಿ ಪೂರೈಸುತ್ತಿದ್ದು 10 ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಸಹಕಾರಿ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸುತ್ತಿರುವ ಮತ್ತು ಸಮಾಜ ಮುಖಿ ಕಾರ್ಯಗಳ ಮೂಲಕ ಮಾದರಿಯಂತಿರುವ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಆರಂಭಗೊಂಡು ಕೇವಲ ಐದು ವರ್ಷಗಳಲ್ಲಿ ಐದು ಸಂಪೂರ್ಣ ಗಣಕೀಕೃತ ಮತ್ತು ಸುಸಜ್ಜಿತ ಶಾಖೆಗಳನ್ನ ಹೊಂದಿ ನಗುಮುಖದ ಸೇವೆಯನ್ನು ನೀಡುತ್ತಾ, ದಾಖಲೆಯ ವ್ಯವಹಾರ ನಡೆಸಿ, ದಾಖಲೆಯ ಲಾಭ ಗಳಿಸಿ ಉತ್ತಮ ಡಿವಿಡೆಂಟ್ ಅನ್ನು ತನ್ನ ಸದಸ್ಯರಿಗೆ ನೀಡುತ್ತಾ ಬಂದಿದೆ. ಶ್ರೀಶಾ ಸೊಸೈಟಿಗೆ ಈಗ ಐದು ವರ್ಷದ ಎಳೆಯ ಪ್ರಾಯ. ಸಾಮಾಜಿಕ ಬದ್ಧತೆ ಹಾಗೂ ಶಿಸ್ತುಬದ್ಧ ವೃತ್ತಿಪರತೆಯಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀಶಾ ಸೊಸೈಟಿಯು ಆರಂಭದ ಐದು ವರ್ಷಗಳನ್ನು ಪೂರೈಸುತ್ತಿರುವ ಈ ಶುಭವಸರದಲ್ಲಿ ಹತ್ತು ವಿಶೇಷ…

Read More

ಸಹಕಾರ ಸಚಿವಾಲಯದ ಹಿರಿಯ ಅಧಿಕಾರಿಗಳ ಮಾಹಿತಿ ನವದೆಹಲಿ: ಕೇಂದ್ರ ಸರ್ಕಾರದ ನೂತನ ಸಹಕಾರಿ ನೀತಿಯು ಬಹುತೇಕ ಅಂತಿಮಗೊಂಡಿದ್ದು, ಇನ್ನೆರಡು -ಮೂರು ತಿಂಗಳಲ್ಲಿ ಘೋಷಣೆಯಾಗಲಿದೆ ಎಂದು ಸಹಕಾರ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ. ನಾವು ಸಹಕಾರಿ ನೀತಿ ರೂಪಣೆಯ ಅಂತಿಮ ಹಂತದಲ್ಲಿದ್ದೇವೆ. ಮುಂದಿನ 2-3 ತಿಂಗಳಲ್ಲಿ ಇದು ಮಂಡನೆಯಾಗಲಿದೆ ಎಂದು ಸಹಕಾರ ಸಚಿವಾಲಯದ ಕಾರ್ಯದರ್ಶಿ ಆಶಿಶ್ ಕುಮಾರ್ ಭೂತಾನಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ನೇತೃತ್ವದ 47 ಮಂದಿಯ ತಂಡ ರಾಷ್ಟ್ರೀಯ ಸಹಕಾರಿ ನೀತಿಯನ್ನು ರೂಪಿಸಿದೆ. ಇದನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಭೂತಾನಿ ಮಾಹಿತಿ ನೀಡಿದರು. ದೇಶಾದ್ಯಂತ 65,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮುಂದಿನ ಫೆಬ್ರವರಿಯೊಳಗೆ ಕಂಪ್ಯೂಟರೀಕರಣಗೊಳ್ಳಲಿದೆ ಎಂದೂ ಅವರು ಮಾಹಿತಿ ನೀಡಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಮಂಗಳೂರು: ಕಳೆದ ಆಗಸ್ಟ್‌ 25ರಂದು ಜರಗಿದ ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ 58ನೇ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು. ಸಾಧಕರಾದ ಪಿ.ನಾರಾಯಣ ಆಚಾರ್ -ಕುಳಾಯಿ (ವೈದಿಕ ಕ್ಷೇತ್ರ), ಡಾ||ಎಸ್.ಪಿ.ಗುರುದಾಸ್ -ಮಂಗಳೂರು (ಹರಿಕಥಾ ಕ್ಷೇತ್ರ), ರಮೇಶ್ ಕೆ. -ಕಲ್ಲಡ್ಕ (ಕಲಾ ಕ್ಷೇತ್ರ), ಮೀನಾಕ್ಷಿ ನಾರಾಯಣ ಆಚಾರ್- ಬಂಟ್ವಾಳ (ನಾಟಿ ವೈದ್ಯೆ), ಶ್ರೇಯ ಎ.- ಅಲಂಕಾರು (ಯಕ್ಷಗಾನ ಕ್ಷೇತ್ರ) ಇವರಿಗೆ ಸಂಸ್ಥೆಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ, ಉಪಾಧ್ಯಕ್ಷ ಎ.ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸನ್ಮಾನ ನೀಡಿ ಗೌರವಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More