ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಭಾನುವಾರ ತಲಪಾಡಿಯ ಬಂಟರ ಸಂಘ ಹಾಗೂ ಶ್ರೀರಾಮ ಭಜನಾ ಮಂದಿರ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ, ಇವುಗಳ ಸಹಕಾರದೊಂದಿಗೆ ತಲಪಾಡಿಯ ಬಂಟರ ಚಾವಡಿ ಸಭಾಭವನದಲ್ಲಿ “ಬೃಹತ್ ಉಚಿತ ಆರೋಗ್ಯ – ಕಣ್ಣಿನ ತಪಾಸಣಾ ಶಿಬಿರ” ಆಯೋಜಿಸಲಾಯಿತು.
https://chat.whatsapp.com/Ge11n7QCiMj5QyPvCc0H19
ಮಂಗಳೂರಿನ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ನುರಿತ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. 250ಕ್ಕೂ ಅಧಿಕ ಜನ ಶಿಬಿರದ ಸದುಪಯೋಗ ಪಡೆದುಕೊಂಡರು. ಕಣ್ಣಿನ ಸಮಸ್ಯೆ ಇದ್ದ 48 ಜನರಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕಗಳನ್ನು ನೀಡಲಾಯಿತು. ಖಾಯಿಲೆಗಳಿಗೆ ಔಷಧ ಉಚಿತವಾಗಿ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯುಳ್ಳವರಿಗೆ ಬುಧವಾರ ಕೆಎಂಸಿ ಅತ್ತಾವರ ಆಸ್ಪತ್ರೆಗೆ ಬರಲು ಸೂಚಿಸಲಾಗಿದೆ. ಆಸ್ಪತ್ರೆಗೆ ಹೋಗಿ – ಬರಲು ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಅನೇಕರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಆವಶ್ಯಕತೆಯಿದ್ದು ಅವರಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕತ್ಸೆ ಮಾಡಲಾಗುತ್ತದೆ.
ಶ್ರೀಶಾ ಸೊಸೈಟಿಯು ಪ್ರತಿ ತಿಂಗಳೂ ಮಂಗಳೂರು ತಾಲೂಕಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿದೆ. ಈ ಶಿಬಿರವು 23ನೇ ಶಿಬಿರವಾಗಿತ್ತು. ಶಿಬಿರವನ್ನು ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಉದ್ಘಾಟಿಸಿದರು. ಸೊಸೈಟಿಯ ನಿರ್ದೇಶಕ ಐ.ಪ್ರಸನ್ನ ಕುಮಾರ ಶ್ರೀಶಾ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಶಾ ಸೊಸೈಟಿಯ ನಿರ್ದೇಶಕ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರದ ಸಂಚಾಲಕ ಸುರೇಶ್ ಬೈಂದೂರ್ ಶಿಬಿರದ ನೇತೃತ್ವ ವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com