Author: admin

ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಘೋಷಣೆ ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 30ನೇ ವಾರ್ಷಿಕ ಮಹಾಸಭೆ, ಸ೦ಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈಯವರ ಅಧ್ಯಕ್ಷತೆಯಲ್ಲಿ ಮ೦ಗಳೂರಿನ ಉರ್ವ ಸೆ೦ಟನರಿ ಚರ್ಚ್ ಹಾಲ್ನಲ್ಲಿ ಭಾನುವಾರ ಜರುಗಿತು. ಸ೦ಘವು 31-03-2024ಕ್ಕೆ ಅ೦ತ್ಯವಾದ 2023-24ನೇ ಸಾಲಿನಲ್ಲಿ ರೂ.12.01 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.25 ಡಿವಿಡೆ೦ಡ್ ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಂಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈಯವರು 2023-24ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮಂಡಿಸಿ ಮಾತನಾಡಿ, ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ಸಾರ್ವಕಾಲಿಕ ದಾಖಲೆಯ ರೂ. 151 ಕೋಟಿ ವೃದ್ಧಿಯನ್ನು ದಾಖಲಿಸಿ, 533 ಕೋಟಿ ಠೇವಣಾತಿ, ರೂ.453 ಕೋಟಿ ಸಾಲ, ರೂ.986 ಕೋಟಿ ಮೀರಿದ ಒಟ್ಟು ವ್ಯವಹಾರ, ರೂ.12.01 ಕೋಟಿ ನಿವ್ವಳ ಲಾಭ ಹಾಗೂ ರೂ. 3974 ಕೋಟಿ ಒಟ್ಟು ವಹಿವಾಟನ್ನು ಸಾಧಿಸಿದೆ. ಸಂಘದ ಸಾಧನೆಯ ಪ್ರಮುಖ ಮತ್ತೊಂದು ಅಂಶ ಒಟ್ಟು ಅನುತ್ಪಾದಕ ಆಸ್ತಿಯು…

Read More

ಮಂಗಳೂರು: ಎಸ್‌.ಕೆ ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ ಆಪರೇಟಿವ್‌ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಇತ್ತೀಚೆಗೆ ಪಂಚ ಕಸುಬುಗಳಲ್ಲಿ ಅದ್ವಿತೀಯ ಸಾಧನೆಗೈದ ಐವರು ಶಿಲ್ಪಿಗಳಿಗೆ ಎಸ್.ಕೆ.ಜಿ.ಐ.ಪಾಲ್ಕೆ – ಪ್ರಶಸ್ತಿ ಪ್ರದಾನ ಮಾಡಲಾಯಿತು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸ್ವರ್ಣಶಿಲ್ಪ ಕ್ಷೇತ್ರ ಸಾಧಕ ಎಚ್.ಗೋಪಾಲ ಆಚಾರ್ಯ ಬೆಳ್ತಂಗಡಿ, ಕಾಷ್ಠಶಿಲ್ಪ ಕ್ಷೇತ್ರದ ಸಾಧಕ ಮಾಧವ ಆಚಾರ್ಯ ಸಂತೆಕಟ್ಟೆ, ಉಡುಪಿ, ಎರಕ ಶಿಲ್ಪದ ಸಾಧಕ ರಾಮಚಂದ್ರ ಆಚಾರ್ಯ ಕುಂಟಾಡಿ, ಕಾರ್ಕಳ, ಅಯಸ್ ಶಿಲ್ಪ ಕ್ಷೇತ್ರದ ಸಾಧಕ ಸೀತಾರಾಮ ಆಚಾರ್ಯ ಗುಂಡಮಜಲು ಮುಡಿಪು  ಮತ್ತು ಶಿಲಾ ಶಿಲ್ಪ ಕ್ಷೇತ್ರದ ಸಾಧಕ ಸೂರ್ಯಕಾಂತ ಆಚಾರ್ಯ ಶಿರ್ವ ಇವರಿಗೆ 2023-24ರ ಸಾಲಿನ ಪ್ರಶಸ್ತಿಯನ್ನು ಸಂಸ್ಥೆ ಅಧ್ಯಕ್ಷರಾದ ಶ್ಪಿ.ಉಪೇಂದ್ರ ಆಚಾರ್ಯ, ಉಪಾಧ್ಯಕ್ಷರಾದ ಎ.ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ನೀಡಿ ಗೌರವಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಶ್ರೀ ಪೂರ್ಣಾನಂದ  ಸಹಕಾರಿ ವಾರ್ಷಿಕ ಸಭೆಯಲ್ಲಿ ಗಣೇಶ್ ಶೆಣೈ ಅಭಿಪ್ರಾಯ ಮಂಗಳೂರು: ನಾವಿಂದು ನೆಮ್ಮದಿಯ, ಸುರಕ್ಷಿತ ಜೀವನ ನಡೆಸಲು ಮೂಲ ಕಾರಣ ನಮ್ಮ ಭಾರತೀಯ ಸೇನಾಪಡೆಯ ಯೋಧರು. ಯೋಧರು ಅಹೋರಾತ್ರಿ ದೇಶದ ದುರ್ಗಮ ಗಡಿಗಳನ್ನು ಕಾಯುತ್ತಿರುವ ಕಾರಣ, ನಮಗೆ  ನಿಶ್ಚಿಂತೆಯ ಬದುಕು ಸುಗಮ ಸಾಧ್ಯವಾಗಿದೆ. ಇದೇ ವೇಳೆ,  ಬಲಿದಾನಿ ಯೋಧರ ಕುಟುಂಬಗಳ ಬದುಕು ನಿತ್ಯವೂ ಕ್ಷಣಕ್ಷಣವೂ ಆತಂಕದಿಂದ ಕೂಡಿರುವುದು ಕೂಡ ಅಷ್ಟೇ  ಸತ್ಯ. ರಾಷ್ಟ್ರರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿ ಕೊಡುವ ಯೋಧರ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ, ಅವರ ನೆಮ್ಮದಿಯ ನಾಳೆಗಾಗಿ  ಕಿಂಚಿತ್ತು ನೆರವಿನ ಹಸ್ತ ಚಾಚುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಗಣೇಶ್ ಶೆಣೈ ಹೇಳಿದರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಮಂಗಳೂರು ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಭಾನುವಾರ ಶ್ರೀ ಪೂರ್ಣಾನಂದ ವಿವಿಧೋದ್ದೇಶ  ಸೌಹಾರ್ದ ಸಹಕಾರಿ ಸಂಘದ  ೨೨ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಲಾಭಾಂಶದಲ್ಲಿ  ದೇಶದ ರಕ್ಷಣಾ ಯೋಧರಿಗೆ ಕೊಡುಗೆ…

Read More

ಬೆಳ್ತಂಗಡಿ: ಹಳೇಕೋಟೆ ವಾಣಿ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾಗಿ ಎಚ್‌.ಪದ್ಮ ಗೌಡ ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಪೂವಾಜೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ನಿರ್ದೇಶಕರಾಗಿ ಗೋಪಾಲಕೃಷ್ಣ ಬಿ.ಗುಲ್ಲೋಡಿ, ಜಯಾನಂದ ಗೌಡ ಟಿ ಪ್ರಜ್ವಲ್, ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ದೇವಸ, ಮಾಧವ ಗೌಡ ಬೆಳ್ತಂಗಡಿ, ಸುರೇಶ್ ಬಿ.ಕೌಡಂಗೆ, ಯಶವಂತ ಬಿ.ಟಿ ಬೆಳಾಲು, ಸುನೀಲ್ ಅಣವು, ಪುರಂದರ ಗೌಡ ಎನ್. ಮೊಗ್ರು, ಉಷಾದೇವಿ ಕಿನ್ಯಾಜೆ, ಭವಾನಿ ಕೆ.ಗೌಡ ಮೂಡಾಯೂರು, ಶ್ರೀನಾಥ್ ಕೆ.ಎಂ ನಡ ಆಯ್ಕೆಯಾಗಿದ್ದಾರೆ. ಸಹಕಾರಿಯ ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ಟಿ ಎಸ್ ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಮಂಗಳೂರು: ಇಲ್ಲಿನ ಸೈಂಟ್ ಅಲ್ಫೋನ್ಸಾ ಸೌಹಾರ್ದ ಸಹಕಾರಿ ಸಂಘದ ಮೊದಲನೇ ವಾರ್ಷಿಕ ಮಹಾಸಭೆ ಸೈಂಟ್ ಅಲ್ಫೋನ್ಸಾ ಚರ್ಚ್ ಹಾಲ್‌ನಲ್ಲಿ ಭಾನುವಾರ ನಡೆಯಿತು. ಮರ್ಸಿ ಟಿ ಪ್ರಾರ್ಥನೆ ಹಾಡಿದರು. ರೆ.ಫಾದರ್ ಮಾಣಿ ವೆಳುತ್ತೇಡತ್ತು ಪರಂಬಿಲ್, ರೆ.ಫಾದರ್ ಅಗಸ್ಟಿನ್, ಸಂಸ್ಥೆಯ ಅಧ್ಯಕ್ಷ ಜೇಮ್ಸ್ ಮುಂಡಟ್ಟು ವರ್ಕೀ ಹಾಗೂ ಸಂಘದ ಎಲ್ಲ ನಿರ್ದೇಶಕರು ದೀಪ ಬೆಳಗಿಸಿದರು. ಸಹಕಾರಿಯ ಉಪಾಧ್ಯಕ್ಷ ಕೆ.ಜೆ ಆಂಟೋನಿ ಸ್ವಾಗತ ಭಾಷಣ ಮಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಟಿ.ಬಂಗೇರ ವಾರ್ಷಿಕ ಸಭೆಯ ಸೂಚನಾ ಪತ್ರ ಮಂಡಿಸಿದರು. ಸಹಕಾರಿಯ ಸಿಬ್ಬಂದಿ ವೇದಾವತಿ ಹಿಂದಿನ ಸಭೆಯ ನಡಾವಳಿಗಳನ್ನು ಸಭೆಯಲ್ಲಿ ಮಂಡಿಸಿದರು. ನಿರ್ದೇಶಕ ಮನೋಜ್ ಪಿ.ವಿ ೨೦೨೩-೨೪ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡಿಸಿದರು. ನಿರ್ದೇಶಕ ಗಬ್ರಿಯಲ್ ವಿ.ವಿ ೨೦೨೩-೨೪ ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಹಾಗೂ ಪರಿಶೋಧಿತ ಲೆಕ್ಕ ಪತ್ರವನ್ನು ಮಂಡಿಸಿದರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಹಕಾರಿಯ ಅಧ್ಯಕ್ಷ ಜೇಮ್ಸ್ ಮುಂಡಟ್ಟು ವರ್ಕೀ ಅಧ್ಯಕ್ಷೀಯ ಭಾಷಣದಲ್ಲಿ ಸಹಕಾರಿಯ ಏಳಿಗೆಯು ಸಹಕಾರಿಯ ಸದಸ್ಯರ ಸಹಕಾರದಿಂದ ಆಗುತ್ತದೆ. ಸದಸ್ಯರ…

Read More

ಇಂದು ವಿಶ್ವ ತೆಂಗು ದಿನಾಚರಣೆ ಮಂಗಳೂರು: ತೆಂಗಿನಕಾಯಿ… ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ತೆಂಗಿನಕಾಯಿಗೂ ಒಂದು ದಿನವಿದೆ. 2009ರಲ್ಲಿ ವಿಶ್ವ ತೆಂಗಿನ ದಿನವನ್ನು ಪ್ರಾರಂಭಿಸಲಾಯಿತು. ಯುನೈಟೆಡ್ ನೇಷನ್ ಎಕನಾಮಿಕ್ ಆ್ಯಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಆ್ಯಂಡ್ ಪೆಸಿಫಿಕ್ (ಯುಎನ್-ಇಎಸ್‌ಸಿಎಪಿ) ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಎಪಿಪಿಸಿ ‌ ಏಷ್ಯನ್ ಪೆಸಿಫಿಕ್ ತೆಂಗಿನಕಾಯಿ ಸಮುದಾಯ (ಎಪಿಸಿಸಿ) ರಚನೆಯ ದಿನವನ್ನು ಸ್ಮರಿಸಲು ಪ್ರತಿವರ್ಷ ಸೆಪ್ಟೆಂಬರ್ 2 ಅನ್ನು ವಿಶ್ವ ತೆಂಗಿನ ದಿನವಾಗಿ ಆಚರಿಸಲಾಗುತ್ತದೆ. ಎಪಿಸಿಸಿ 18 ಸದಸ್ಯ ರಾಷ್ಟ್ರಗಳ ಅಂತರ್ ಸರಕಾರಿ ಸಂಸ್ಥೆಯಾಗಿದ್ದು, ಎಪಿಸಿಸಿಯ ಸ್ಥಾಪಕ ಸದಸ್ಯರಲ್ಲಿ ಭಾರತ ಕೂಡ ಒಂದು. ತೆಂಗಿನಕಾಯಿಗಳ ಪ್ರಾಮುಖ್ಯತೆ ಮತ್ತು ಉಪಯೋಗಗಳನ್ನು ಎತ್ತಿ ಹಿಡಿಯಲು ವಿಶ್ವ ತೆಂಗಿನ ದಿನವನ್ನು ಆಚರಿಸಲಾಗುತ್ತಿದೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಉತ್ಪಾದನೆಯಲ್ಲಿ ಭಾರತಕ್ಕೆ 3ನೇ ಸ್ಥಾನ ವಿಶ್ವದ ಪ್ರಮುಖ ತೆಂಗಿನಕಾಯಿ ಬೆಳೆಯುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ವಾರ್ಷಿಕ ತೆಂಗಿನ ಉತ್ಪಾದನೆಯು 20.82 ಲಕ್ಷ ಹೆಕ್ಟೇರ್‌ಗೆ 2395 ಕೋಟಿ ತೆಂಗಿನಕಾಯಿ ಬೆಳೆಯಲಾಗುತ್ತದೆ ಮತ್ತು ಒಂದು ಹೆಕ್ಟೇರ್‌ಗೆ ಉತ್ಪಾದಕತೆ 11,505 ತೆಂಗಿನಕಾಯಿ…

Read More

ಮಂಗಳೂರು; ಇಲ್ಲಿನ ಶ್ರೀ ಭಗವತೀ ಸಹಕಾರ ಬ್ಯಾಂಕಿನ 48ನೇ ಮಹಾಸಭೆ ಭಾನುವಾರ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೂಟಕ್ಕಳ ಸಭಾಭವನದಲ್ಲಿ ಜರುಗಿತು. ಭಗವತೀ ಕ್ಷೇತ್ರದ ಕಲೆಕಾರರಾದ ಗೋಪಾಲದಾಸ್ ದೀಪ ಪ್ರಜ್ವಲನೆ ಮಾಡಿದರು. ಬ್ಯಾಂಕಿನ ಅಧ್ಯಕ್ಷ ಮಾಧವ ಬಿ.ಎಂ. ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕಿ ಸುಷ್ಮಾ 2023-24ರ ಸಾಲಿನ ವರದಿ ಮಂಡಿಸಿದರು. ಉಪಪ್ರಧಾನ ವ್ಯವಸ್ಥಾಪಕಿ ಸರಿತಾ ಬಿ.ಎಂ ಆಯ-ವ್ಯಯ ಮಂಡಿಸಿದರು. ಬ್ಯಾoಕಿನ ಉಪಾಧ್ಯಕ್ಷ ದೇವದಾಸ್ ಕೊಲ್ಯ ಮಾತನಾಡಿ, ಸದಸ್ಯರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮ್ಮ ಬ್ಯಾoಕನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 2023-24ರ ಸಾಲಿನಲ್ಲಿ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ ಸದಸ್ಯರು ಹಾಗೂ ಉತ್ತಮ ಠೇವಣಿದಾರರನ್ನು ಸನ್ಮಾನಿಸಲಾಯಿತು. ಸದಸ್ಯರ ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಅತ್ಯುತ್ತಮ ಶಾಖೆಗಳಾಗಿ ಆಯ್ಕೆಯಾದ ಜಪ್ಪು ಶಾಖೆ ಮತ್ತು ಬಿ.ಸಿ.ರೋಡ್ ಶಾಖೆಗಳ ಸಿಬಂದಿಯನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಆನಂದ, ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ನಾರಾಯಣ, ಪ್ರಮುಖರಾದ ಕೆ.ವಿಶ್ವನಾಥ, ರಾಜೇಶ್, ಕಿರಣ್, ರಾಜೇಶ್ ಭಂಡಾರಿ, ಪದ್ಮನಾಭ, ಆಶಾ…

Read More

ವಿಟ್ಲ: ಸಹಕಾರಿ ಚಿಂತನೆಯಲ್ಲಿ ಆದರ್ಶ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯಿದೆ. ಸಹಕಾರಿ ತತ್ವ ಎಂಬುದು ಭಗವಂತ ಕರುಣಿಸಿದ ಆಧ್ಯಾತ್ಮಿಕ ವರ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಭಾನುವಾರ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಆಶೀರ್ವಚನ ನೀಡಿದರು. ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಯಿದ್ದರೆ ಸಂಸ್ಥೆ ಬೆಳವಣಿಗೆಯಾಗುತ್ತದೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಒಬ್ಬರಿಗೊಬ್ಬರ ಸಹಕಾರ ಅಗತ್ಯವಿದೆ. ಆಧ್ಯಾತ್ಮಿಕದ ಜತೆಗೆ ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ಸಹಕಾರವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ವಿಶಾಲ ದೃಷ್ಟಿಕೋನ ಹಾಗೂ ವಿಸ್ತಾರ ಚಿಂತನೆಯಿದ್ದಾಗ ಭವಿಷ್ಯದಲ್ಲಿ ಸದೃಢವಾಗಬಹುದು. ಯಾಂತ್ರಿಕ ಬದುಕಿಗೆ ನಿಯಂತ್ರಣ ಹಾಕದೇ ಹೋದರೆ ಮುಂದಿನ ದಿನಗಳಲ್ಲಿ ಅಪಾಯ ನಿಶ್ಚಿತ. ಸ್ವ ಉದ್ಯೋಗ, ಕೃಷಿ ಸಂಬಂಧಿ ವಿಚಾರದಲ್ಲಿ ಸಹಕಾರಿಗಳು ಹೆಚ್ಚು ತೊಡಗಿಸಿಕೊಳ್ಳಬಹುದಾಗಿದೆ ಎಂದರು. ಸಂಘದ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್ ರೈ ಮಾತನಾಡಿ ಸಹಕಾರಿ 2023-24ನೇ ಸಾಲಿನಲ್ಲಿ 19…

Read More

ಮೈಸೂರು: ಗುಂಡ್ಲುಪೇಟೆಯಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ವಿವೇಕಸಿರಿ ಸೇವಾ ಸೌಹಾರ್ದ ಸಹಕಾರಿ‌ ಸಂಘದ ಅಧ್ಯಕ್ಷರಾಗಿ ಸ್ವಾಮಿ ಎಂ.ಎಸ್ ಆಯ್ಕೆಯಾಗಿದ್ದಾರೆ. ಶುಕ್ರವಾರ ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಸ್ವಾಮಿ ಎಂ.ಎಸ್., ಉಪಾಧ್ಯಕ್ಷರಾಗಿ ಬಿ.ಕೆ. ಮಹದೇವಸ್ವಾಮಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಲೆಕ್ಕಪರಿಶೋಧನಾ ಇಲಾಖೆಯ ನಾಗರಾಜು ಕಾರ್ಯ ನಿರ್ವಹಿಸಿದರು. ಸಹಕಾರಿ ಸಂಘದ ನಿರ್ದೇಶಕರಾಗಿ ಕುಮಾರ್ ಸಿ., ರವಿಕುಮಾರ ಬಿ., ಕಾರ್ತಿಕ್, ಬಸವಣ್ಣ ಆರ್.ಎಸ್., ಶಿವಮಲ್ಲಪ್ಪ, ಸಿದ್ದರಾಜು., ಶಾಂತಪ್ಪ ಎಸ್. ಮೀನಾಕ್ಷಿ , ಶಾಲಿನಿ ಇವರುಗಳು ಆಯ್ಕೆಯಾಗಿರುತ್ತಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ನಿಂತಿಕಲ್ಲಿನಲ್ಲಿ ಕಾರ್ಯಾರಂಭ ಪುತ್ತೂರು: ಯಾವುದೇ ಕೆಲಸವಾದರೂ ಪ್ರಾಮಾಣಿಕ ಪ್ರಯತ್ನವಿದ್ದರೆ ಸಂಸ್ಥೆಗೆ ಯಶಸ್ಸು ಸಾಧ್ಯ. ಯಾವುದೇ ಸಂಸ್ಥೆಯಾದರೂ ಅದರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಮುರುಳ್ಯ -ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಧನಾ ಸಹಕಾರ ಸೌಧದಲ್ಲಿ ಶುಕ್ರವಾರ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ 21ನೇ ನೂತನ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ನಿಂತಿಕಲ್ಲಿನಲ್ಲಿ ನಮ್ಮ ಶಾಖೆ ಉದ್ಘಾಟನೆ ಆಗಿರುವುದು ಸಂತಸ ತಂದಿದೆ. ಧರ್ಮಶ್ರದ್ಧೆಯ ಕೆಲಸ ನಮ್ಮದಾಗಬೇಕು. ನಮ್ಮ ಸಂಸ್ಥೆಯ ಉದ್ದೇಶ ವಿವಿಧೋದ್ದೇಶವಾಗಿದೆ. ಲೌಕಿಕ ಬೆಳವಣಿಗೆಗೆ ಸಂಘ ಸಂಸ್ಥೆ, ಸಹಕಾರಿಯ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು. ಅರ್ಹತೆ ನೋಡಿ ಸಹಕಾರ ನೀಡುವ ಕೆಲಸವಾಗಬೇಕು. ಸಾಮಾನ್ಯ ಜನರಿಗೆ ಸೇವೆ ಸಿಗಬೇಕೆಂದು ಸಂಸ್ಥೆಯ ಉಗಮವಾಗಿದೆ. ಕೊಡು-ಕೊಳ್ಳುವಿಕೆಯ ಗುಣ…

Read More