Author: admin

1,000 ಕೋಟಿ ರೂ. ದಾಟಿದ ವ್ಯವಹಾರ, ಆರು ವರ್ಷಗಳಿಂದ ಶೇ.25ರಷ್ಟು ಡಿವಿಡೆಂಡ್‌: ಕೆ. ಜೈರಾಜ್ ಬಿ. ರೈ ಮಂಗಳೂರು: ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸುರತ್ಕಲ್ ಶಾಖೆಯ ನವೀಕೃತ ಶಾಖಾ ಕಛೇರಿಯನ್ನು ಹರುಷ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಇತ್ತೀಚೆಗೆ ಉದ್ಘಾಟಿಸಿದರು. https://chat.whatsapp.com/Ge11n7QCiMj5QyPvCc0H19 ಉದ್ಘಾಟನೆ ಬಳಿಕ ಮಾತನಾಡಿದ ಅವರು, ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಸದಸ್ಯ ಗ್ರಾಹಕರಿಗೆ ಹೆಚ್ಚಿನ ಅನುಕೂಲಗಳನ್ನು, ಸೌಲಭ್ಯಗಳನ್ನು ಒದಗಿಸುವುದು ಸಂಘದ ಕರ್ತವ್ಯ. ಈ ನಿಟ್ಟಿನಲ್ಲಿ ಸುರತ್ಕಲ್ ಶಾಖಾ ಕಛೇರಿಯನ್ನು ಆಧುನೀಕರಿಸಿ, ಹವಾನಿಯಂತ್ರಿತ ಸೌಲಭ್ಯಗಳೊಂದಿಗೆ ನವೀಕರಿಸಿ ಗ್ರಾಹಕರ ಸೇವೆಗೆ ಅರ್ಪಿಸಲಾಗಿದೆ. ಸಂಘವು ಸದಸ್ಯರ ಸಹಕಾರದಿಂದ ರೂ.1,000 ಕೋಟಿ ವ್ಯವಹಾರವನ್ನು ದಾಟಿದ್ದು, ಕಳೆದ ಆರು ವರ್ಷಗಳಿಂದ ಶೇ.25ರಷ್ಟು ಡಿವಿಡೆಂಡ್‌ ನೀಡುತ್ತಿದ್ದೇವೆ. ಸಂಘವು ಸಣ್ಣ ಮೊಬಲಗಿನ ರಿಟೇಲ್ ಸಾಲ ನೀಡುವಿಕೆಗೆ ಒತ್ತು ನೀಡುತ್ತಿದ್ದು, 40 ಸಾವಿರಕ್ಕಿಂತ ಹೆಚ್ಚು ಸಾಲಗಾರ ಗ್ರಾಹಕರಿದ್ದಾರೆ. ಸಾಲ…

Read More

ಮುಂದಿನ ದಶಕದೊಳಗೆ 25 ಶಾಖೆಗಳನ್ನು ತೆರೆಯುವ ಕನಸು, ಸಂಸ್ಥೆಯ ಅಧ್ಯಕ್ಷ ಜಿ.ಆರ್‌.ಪ್ರಸಾದ್‌ ಅಭಿಪ್ರಾಯ ಮಂಗಳೂರು: ಸಂಸ್ಥೆಯ ಗೌರವಾನ್ವಿತ ಗ್ರಾಹಕರು, ಸದಸ್ಯರು, ಠೇವಣಿದಾರರ ನಿರಂತರ ಗುಣಮಟ್ಟದ ವ್ಯವಹಾರ ಮತ್ತು ಪ್ರೋತ್ಸಾಹದ ಕಾರಣದಿಂದ ಪ್ರಣವ ಸಂಸ್ಥೆ ರಾಜ್ಯಮಟ್ಟದಲ್ಲಿ ಶಾಖೆಗಳನ್ನು ತೆರೆದು ಜನಮನ್ನಣೆಗೆ ಪಾತ್ರವಾಗಿದೆ. ಮುಂದಿನ ದಶಕದೊಳಗೆ 25 ಶಾಖೆಗಳನ್ನು ತೆರೆಯುವ ಗುರಿ ಹೊಂದಿದ್ದು ಬ್ಯಾಂಕ್‌ ಮಾದರಿಯ ವ್ಯವಹಾರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂದಡಿಯಿಡಲಾಗುತ್ತಿದೆ. ಸಂಸ್ಥೆಗೆ ಸ್ವಂತ ಕಟ್ಟಡದ ಪ್ರಧಾನ ಕಚೇರಿ ನಿರ್ಮಿಸುವ ನಿಟ್ಟಿನಲ್ಲಿ ಮಂಗಳೂರಿನ ಕುಲಶೇಖರದಲ್ಲಿ ಜಾಗ ಖರೀದಿಸಲಾಗಿದ್ದು, ಎಲ್ಲ ನಿರ್ದೇಶಕರ, ಸದಸ್ಯರ ಸಹಕಾರದಿಂದ ಶೀಘ್ರ ಕಟ್ಟಡ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳುವ ಚಿಂತನೆ ಇದೆ ಎಂದು ಪ್ರಣವ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಆರ್.ಪ್ರಸಾದ್‌ ಹೇಳಿದರು. ಪದವಿನಂಗಡಿಯಲ್ಲಿ ಭಾನುವಾರ ಪ್ರಣವ ಸೌಹಾರ್ದ ಸಹಕಾರಿಯ ಒಂಬತ್ತನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. https://chat.whatsapp.com/Ge11n7QCiMj5QyPvCc0H19 ಯೆಯ್ಯಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನ ಕಚೇರಿ ಸೇರಿದಂತೆ ವಾಮಂಜೂರು, ಬೆಂಗ್ರೆ, ಎಡಪದವು, ಪುತ್ತೂರು, ಸುಳ್ಯ, ಮೈಸೂರು ಮತ್ತು ಕುಶಾಲನಗರ ಸೇರಿ ಒಟ್ಟು ಎಂಟು…

Read More

84.05 ಲಕ್ಷ ರೂ. ಲಾಭ, ಸತತ ಎರಡನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸಾಧನಾ ಪುರಸ್ಕಾರ ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 27ನೇ ವಾರ್ಷಿಕ ಮಹಾಸಭೆ ಸೋಮವಾರ ಉಡುಪಿ ಶೋಕಮಾತಾ ಚರ್ಚ್‌ನಲ್ಲಿ ಸಂಘದ ಅಧ್ಯಕ್ಷ ಲೂವಿಸ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಜರಗಿತು. https://chat.whatsapp.com/Ge11n7QCiMj5QyPvCc0H19 ಸಂಘದ ಮುಖ್ಯ ಕಾರ್ಯನಿರ್ವಾಹಕ ಸಂದೀಪ್ ಎ.ಫೆರ್ನಾಂಡಿಸ್ ವಾರ್ಷಿಕ ವರದಿ ಮಂಡಿಸಿದರು. ಸಂಘವು 2023-24ನೇ ಸಾಲಿನಲ್ಲಿ ರೂ. 84.05 ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ 17% ಡಿವಿಡೆಂಡ್ ಘೋಷಿಸಲಾಯಿತು. ಲಯನ್ಸ್ ಕ್ಲಬ್ ಉಡುಪಿ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ಅಧ್ಯಕ್ಷರೂ ಆದ ಲೂವಿಸ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಅಶಕ್ತರೂ/ಅನಾರೋಗ್ಯ ಪೀಡಿತ 7 ಮಂದಿಗೆ ಮತ್ತು ಮಾನಸ ಪುನರ್ವಸತಿ ಮತ್ತು ನಿರ್ಮಿತಿ ಕೇಂದ್ರ,ಪಾಂಬೂರು ಇವರಿಗೆ ಆರ್ಥಿಕ ಸಹಾಯ ನೀಡಲಾಯಿತು. ಸಂಘವು ಸತತ 2ನೇ ಬಾರಿ ಪ್ರತಿಷ್ಠಿತ ದ.ಕ ಜಿಲ್ಲಾ ಕೇಂದ್ರ…

Read More

ಮೂಡುಬಿದಿರೆ: ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 11ನೇ ವಾರ್ಷಿಕ ಮಹಾಸಭೆ ಮೂಡುಬಿದಿರೆ ಸಮಾಜ ಮಂದಿರ ದಲ್ಲಿ ಭಾನುವಾರ ನಡೆಯಿತು. ಸಹಕಾರಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷ ಶಿವರಾಮ್ ಜೆ.ಶೆಟ್ಟಿ ಹಾಗೂ ನಿರ್ದೇಶಕ ವಿಶ್ವನಾಥ್, ಬಾಬು ಎಂ, ನಾಗರಾಜ್ ಶೆಟ್ಟಿ, ದಯಾನಂದ, ನಾರಾಯಣ ಶೆಟ್ಟಿ, ಶಾಂತಾ, ಗೀತಾಂಜಲಿ, ರೆನಿಟಾ ಗ್ರೇಸಿ ಡಿಸೋಜ ಸಭೆಯನ್ನು ಉದ್ಘಾಟಿಸಿದರು. https://chat.whatsapp.com/Ge11n7QCiMj5QyPvCc0H19 ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ,ಕಳೆದ 11 ವರ್ಷಗಳಲ್ಲಿ ಸಹಕಾರಿಯು ಪ್ರತಿ ವರ್ಷವೂ ಲಾಭದಲ್ಲಿದ್ದು ಈ ವರ್ಷ ರೂ. 36,48,266.80 ಲಾಭ ಗಳಿಸಿ ಸದಸ್ಯರಿಗೆ ಶೇ.12 ಡಿವಿಡೆಂಡ್‌ ನೀಡಲಾಗುತ್ತಿದೆ. ಅಲ್ಲದೆ ಸಾಲ ಪಡೆದ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಸಂಸ್ಥೆಯ ವತಿಯಿಂದ ಆರೋಗ್ಯ ವಿಮೆ ಕಾರ್ಡ್ ಮಾಡಲಾಗುವುದು. ಇದರಿಂದ ಸಾಲ ಪಡೆದ ಸದಸ್ಯರು ಅಪಘಾತದಲ್ಲಿ ಗಾಯಗೊಂಡರೆ, ಅಥವಾ ಅನಾರೋಗ್ಯ ಸಂಭವಿಸಿದರೆ ವಿವಿಧ ಚಿಕಿತ್ಸೆಗೆ ಖರ್ಚಿನ ಮೊತ್ತದಲ್ಲಿ ಸಹಕಾರಿಯು ರೂಪಾಯಿ 10,000/- ವರೆಗೆ ಭರಿಸುವುದಾಗಿ, ಹಾಗೂ ಸಾಲ ಪಡೆದ ಸದಸ್ಯರು…

Read More

ಮಂಗಳೂರು: ಸಿಂಚನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮಂಗಳೂರು ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ವಿ.ಟಿ ರಸ್ತೆಯ ಕೃಷ್ಣ ಮಂದಿರದಲ್ಲಿ ನಡೆಯಿತು. https://chat.whatsapp.com/Ge11n7QCiMj5QyPvCc0H19   ಸಹಕಾರಿಯ ಅಧ್ಯಕ್ಷೆ ಪ್ರಫುಲ್ಲಾ ಕಾಮತ್‌ ಎಂ. 2023-24ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡಿಸಿ ಲಾಭಾಂಶ ಘೋಷಣೆ ಮಾಡಿದರು. ಉಪಾಧ್ಯಕ್ಷ ಗುರುರಾಜ್‌, ನಿರ್ದೇಶಕರಾದ ಎಂ.ಆರ್‌.ಕಾಮತ್‌, ಡಾ.ಜಯವಂತ ನಾಯಕ್‌, ಮೋಹನ್‌ ನಾಯಕ್‌, ಅನಿಲ್‌ ಕುಮಾರ್‌, ಮಹೇಶ್‌ ಸುವರ್ಣ, ವೃತ್ತಿಪರ ನಿರ್ದೇಶಕರಾದ ಭಾರತಿ ಜಿ.ಭಟ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಯು. ಮತ್ತು ಸಂಸ್ಥೆಯ ಸಿಬ್ಬಂದಿಗಳು, ಸದಸ್ಯರು ಹಾಜರಿದ್ದರು. ಎಂ.ಆರ್‌.ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು, ಭಾರತಿ ಜಿ.ಭಟ್‌ ವಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಸದಸ್ಯರಿಗೆ ಶೇ.9 ಡಿವಿಡೆಂಡ್‌ ಘೋಷಣೆ, 10 ಮಂದಿ ನಾಟಿ ವೈದ್ಯರಿಗೆ ಗೌರವ, 30 ಮಕ್ಕಳಿಗೆ ವಿದ್ಯಾರ್ಥಿವೇತನ ಮೂಡುಬಿದಿರೆ: ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ಕರಿಂಜೆ ಇದರ ಆರನೇ ವಾರ್ಷಿಕ ಮಹಾಸಭೆ ಭಾನುವಾರ ಸಂಸ್ಥೆಯ ಅಧ್ಯಕ್ಷ ಸುಧಾಕರ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಷ್ಟ್ರವನ್ನು ಕಾಯುವ ಯೋಧರ ಹಿತರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ, ನಾವೆಲ್ಲರೂ ನೆಮ್ಮದಿಯಿಂದ ಇರಲು ಕಾರಣರಾಗಿರುವ ಭಾರತೀಯ ಸೇನೆಯ ಯೋಧರಿಗೆ ಗೌರವ ಸಲ್ಲಿಸುವ ಅಪೂರ್ವ ಕಾರ್ಯಕ್ರಮ ಮಹಾಸಭೆಯಲ್ಲಿ ನಡೆಯಿತು. https://chat.whatsapp.com/Ge11n7QCiMj5QyPvCc0H19 ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಭಾವನೆಯಿಂದ ಸಂಸ್ಥೆಯ ಜೊತೆ ಕೈಜೋಡಿಸಿ ಸಂಸ್ಥೆಯ ಏಳಿಗೆಗೆ ಸದಸ್ಯರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಕುವೆಟ್ಟು, ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಹೊಸ ಶಾಖೆ ತೆರೆಯುವ ಇಂಗಿತವನ್ನೂ ಸ್ವಾಮೀಜಿ ವ್ಯಕ್ತಪಡಿಸಿದರು. ಅಧ್ಯಕ್ಷ ಸುಧಾಕರ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಹೊಸ ಶಾಖೆ ತೆರೆಯುವ ವಿಷಯ ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳ ಸಮಾವೇಶ ನಡೆಸುವ ಇರಾದೆಯನ್ನೂ ವ್ಯಕ್ತಪಡಿಸಿದರು.…

Read More

ಹಿರೇಕೆರೂರು: ಕೆಸಿಸಿ ಬ್ಯಾಂಕ್‌ನೊಂದಿಗೆ ಉತ್ತಮ ವ್ಯಾವಹಾರಿಕ ಸಂಬಂಧ ಇಟ್ಟುಕೊಂಡು 2022 -23ನೇ ಸಾಲಿಗೆ ಅತ್ಯುತ್ತಮ ಸಹಕಾರಿ ಸಂಘವಾಗಿ ಕಾರ್ಯನಿರ್ವಹಿಸಿದ ಪ್ರಯುಕ್ತ ಕೆಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಟಿಎಪಿಸಿಎಂಎಸ್‌ (ಹಿರೇಕೆರೂರು ತಾಲೂಕು ವ್ಯವಸಾಯ ಉತ್ಪನ್ನ ಸಹಕಾರಿ ಮಾರಾಟ ಸಂಘ) ಅಧ್ಯಕ್ಷ ಎಸ್.ಎಸ್ ಪಾಟೀಲ ಹಾಗೂ ಪ್ರಧಾನ ವ್ಯವಸ್ಥಾಪಕ ಬಿ.ಜಿ.ಬಣಕಾರ್ ಅವರನ್ನು ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಬ್ರಹ್ಮಾವರ: ಇಲ್ಲಿನ ಬಾಂಧವ್ಯ ಸೌಹಾರ್ದ ಸಹಕಾರಿ ಸಂಘದ 2023 -2024ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಚಪ್ಟೇಗಾರ್ ಸಮುದಾಯ ಭವನ ಮಟಪಾಡಿ ರಸ್ತೆ ಬ್ರಹ್ಮಾವರದಲ್ಲಿ ಜರಗಿತು. https://chat.whatsapp.com/Ge11n7QCiMj5QyPvCc0H19 ಸಹಕಾರಿಯ ಅಧ್ಯಕ್ಷ ರಘುರಾಮ್ ನಾಯ್ಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುಭಾಶ್ಚoದ್ರ ಸ್ವಾಗತಿಸಿದರು, ನಿರ್ದೇಶಕ ಉಲ್ಲಾಸ್ ನಾಯಕ್ ವಂದಿಸಿದರು. ಸಹಕಾರಿಯ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕ್ರಿಯಾಶೀಲ ಸದಸ್ಯರುಗಳನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಸಂಘದ ಮುಖ್ಯಕಾರ್ಯನಿರ್ವಾಹಕ ಪುನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಉಚಿತ ದಂತ ತಪಾಸಣೆ, ಚಿಕಿತ್ಸಾ ಶಿಬಿರ ಉದ್ಘಾಟಿಸಿ ಹರೀಶ್‌ ಪಿ.ಡಿ ಅಭಿಪ್ರಾಯ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ೧೩ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಪ್ರಯುಕ್ತ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಪಡೀಲ್ ಬೈರಾಡಿಕೆರೆ ಹತ್ತಿರದ “ಆತ್ಮಶಕ್ತಿ ಸೌಧ”ದಲ್ಲಿ ಜರುಗಿತು. ಸಂಘದ ಸದಸ್ಯ ಹರೀಶ್ ಪಿ.ಡಿ ಉದ್ಘಾಟಿಸಿ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ ಮುಂದಾಳತ್ವದಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಜಾಗೃತಿ ಮೂಡಿಸುವಲ್ಲಿ ಸಫಲತೆ ಕಂಡಿದೆ ಎಂದು ಅಭಿಪ್ರಾಯಪಟ್ಟರು. ಶ್ರೀನಿವಾಸ್ ಇನ್‌ಸ್ಟಿಟ್ಯೂಟ್‌ ಆಫ್‌ ಡೆಂಟಲ್ ಸಾಯನ್ಸ್‌ನ ದಂತವೈದ್ಯರಾದ ಡಾ.ಶಿಫಾಲಿ ಸಾಲಿಯಾನ್ ಮಾತನಾಡಿ, ಈ ಶಿಬಿರದಲ್ಲಿ ಉಚಿತ ದಂತ ತಪಾಸಣೆ, ಹುಳುಕು ಹಲ್ಲುಗಳ ಭರ್ತಿ, ಶುಚಿಗೊಳಿಸುವುದು, ಕೀಳುವುದು ಮುಂತಾದ ಸೇವೆಗಳು ಲಭ್ಯವಿದ್ದು, ಸಂಘದ ಸದಸ್ಯರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್…

Read More

ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಸ್ತಾಂತರ, ಸದಸ್ಯರಿಗೆ ಶೇ.6 ಡಿವಿಡೆಂಡ್‌ ಮಂಗಳೂರು: ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನಿಯಮಿತ ಕಾವೂರು ಇದರ 4ನೇ ವಾರ್ಷಿಕ ಮಹಾಸಭೆ ಕಾವೂರು ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಭಾನುವಾರ ನಡೆಯಿತು. ಸಹಕಾರಿಯ ಸದಸ್ಯರಾದ ಪದ್ಮನಾಭ ಕಾರ್ನಾಡು, ಸುಧಾಕರ ಕರ್ಕೇರ, ಕೃಷ್ಣ ಎನ್.ಪೂಜಾರಿ, ಪ್ರಮೀಳಾ ಈಶ್ವರ್ , ಶಿಲ್ಪಾಕುಮಾರಿ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಕುಮಾರ್ ಮಾತನಾಡಿ, ನಾಲ್ಕು ವರ್ಷಗಳಲ್ಲಿ ಕಾವೂರು ಹಾಗೂ ಕೋಡಿಕಲ್‌ನಲ್ಲಿ ಎರಡು ಶಾಖೆಗಳನ್ನು ತೆರೆಯಲಾಗಿದೆ, ಸಹಕಾರಿಯು ಪ್ರತಿ ವರ್ಷದಲ್ಲಿ ಲಾಭದಲ್ಲಿದ್ದು ಈ ವರ್ಷ ರೂ. 3,65,714.70 ಲಾಭ ಗಳಿಸಿ ಸದಸ್ಯರಿಗೆ ಶೇ.6 ಡಿವಿಡೆಂಡ್‌ ಘೋಷಿಸಲಾಗಿದೆ ಎಂದು ತಿಳಿಸಿದರು. ಸಹಕಾರಿಯ ಶಾಖೆಗಳಲ್ಲಿ ಈ ಸ್ಟ್ಯಾಂಪಿಂಗ್‌,  ಆರ್‌ಟಿಜಿಎಸ್, ನೆಫ್ಟ್‌, ಆರ್.ಟಿ.ಸಿ ,ಮಿನಿ ಎಟಿಎಂ ಸೌಲಭ್ಯ ಹಾಗೂ ಕಡಿಮೆ ಬಡ್ಡಿಯಲ್ಲಿ ಚಿನ್ನಾಭರಣ ಸಾಲ ನೀಡಲಾಗುತ್ತಿದ್ದು ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು. https://chat.whatsapp.com/Ge11n7QCiMj5QyPvCc0H19 ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ…

Read More