ಐಸಿಎ ಏಷ್ಯಾ-ಪೆಸಿಫಿಕ್ ಸಂಶೋಧನಾ ಸಮ್ಮೇಳನದ ಧ್ಯೇಯವಾಕ್ಯ
ತಿರುವನಂತಪುರಂ: ಸಹಕಾರ ಕ್ಷೇತ್ರವೇ ಮುಂದಿನ ಕೈಗಾರಿಕಾ ಕ್ರಾಂತಿ…… ಈ ಧ್ಯೇಯವಾಕ್ಯವನ್ನಿಟ್ಟುಕೊಂಡು 18ನೇ ಐಸಿಎ ಏಷ್ಯಾ-ಫೆಸಿಪಿಕ್ ಸಂಶೋಧನಾ ಸಮ್ಮೇಳನವು ಕೇರಳದ ಅತಿ ಹಳೆಯ ಕೋ ಆಪರೇಟಿವ್ ಸೊಸೈಟಿಯಾದ ಉರಾಲುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ(ಯುಎಲ್‌ಸಿಸಿಎಸ್) ಮತ್ತು ಕೋಯಿಕ್ಕೋಡ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಹಯೋಗದಲ್ಲಿ ಅಕ್ಟೋಬರ್ 15ರಿಂದ 18ರ ತನಕ ನಡೆಯಲಿದೆ.
https://chat.whatsapp.com/Ge11n7QCiMj5QyPvCc0H19
“ಮುಂದಿನ ಕೈಗಾರಿಕಾ ಕ್ರಾಂತಿಯಲ್ಲಿ ಸಹಕಾರಿ ಸಂಸ್ಥೆಗಳು” ಎಂಬ ವಿಷಯದಲ್ಲಿ ಆಳವಾದ ಚರ್ಚೆಗಳು ಈ ಸಮಾವೇಶದಲ್ಲಿ ನಡೆಯಲಿದ್ದು, ತಾಂತ್ರಿಕ ಬೆಳವಣಿಗೆಗಳನ್ನು ಅಳವಡಿಸಿಕೊಂಡು ಭವಿಷ್ಯದಲ್ಲಿ ಹೇಗೆ ಔದ್ಯೋಗಿಕ ನೆಲೆಗಟ್ಟನ್ನು ಕಂಡುಕೊಳ್ಳಬಹುದು ಎಂಬ ವಿಷಯ ಇಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ದೇಶ -ವಿದೇಶಗಳ ವಿಷಯ ತಜ್ಞರು, ವಿದ್ವಾಂಸರು ಮತ್ತು ಸಹಕಾರಿ ವಲಯದ ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಸಮಾಜವು ಯಾಂತ್ರೀಕೃತಗೊಂಡು, ಡಿಜಿಟಲೀಕರಣ ಮತ್ತು ಜಾಗತೀಕರಣದ ಜಾಢಿನಲ್ಲಿ ಮುಂದುವರಿಯುತ್ತಿರುವಾಗ ಈ ಸಮಾವೇಶ ನಡೆಯುತ್ತಿರುವುದು ಮಹತ್ವ ಪಡೆದಿದೆ. ಯಾಂತ್ರೀಕೃತ ವ್ಯವಸ್ಥೆ, ಡಿಜಿಟಲೀಕರಣ, ಜಾಗತೀಕರಣದಂಥ ಶಕ್ತಿಗಳು ಕೈಗಾರಿಕೆಗಳು ಮತ್ತು ಕಾರ್ಮಿಕ ಮಾರುಕಟ್ಟೆಗಳನ್ನು ಆಮೂಲಾಗ್ರವಾಗಿ ಪರಿವರ್ತಿಸುತ್ತಿದ್ದು, ಸಹಕಾರಿ ಸಂಸ್ಥೆಗಳು ಕಾರ್ಪೊರೇಟ್-ಚಾಲಿತ ಮಾದರಿಗಳಿಗೆ ಸಮರ್ಥನೀಯ ಮತ್ತು ಸ್ಥಿತಿಸ್ಥಾಪಕ ಪರ್ಯಾಯವನ್ನು ಒದಗಿಸುತ್ತ, ಸಮುದಾಯ ಅಭಿವೃದ್ಧಿ ಮತ್ತು ಸಂಪತ್ತಿನ ವಿತರಣೆಯ ಮೇಲೆ ಕೇಂದ್ರೀಕೃತವಾಗಿ ಕೆಲಸ ಮಾಡುತ್ತಿವೆ. ಈ ಸಮಾವೇಶದಲ್ಲಿ ನಡೆಯುವ ಚರ್ಚೆಗಳು ಹೊಸ ಕೈಗಾರಿಕಾ ವಲಯದಲ್ಲಿ ಯಾವ ರೀತಿಯಲ್ಲಿ ಸಹಕಾರ ಕ್ಷೇತ್ರವು ಅಭಿವೃದ್ಧಿ ಪಥದಲ್ಲಿ ಸಾಗಬಹುದು ಎಂಬ ಬಗ್ಗೆ ಬೆಳಕು ಚೆಲ್ಲಲಿದೆ.
ವಿಶೇಷವಾಗಿ ಈ ಸಮಾವೇಶದಲ್ಲಿ ಯುವ ಮತ್ತು ಉದಯೋನ್ಮುಖ ವಿದ್ವಾಂಸರ ಕಾರ್ಯಾಗಾರವೂ ನಡೆಯಲಿದ್ದು ಮುಂದಿನ ಪೀಳಿಗೆಯ ಸಹಕಾರಿ ನಾಯಕರುಗಳ ಸೃಷ್ಟಿಗೆ ಇದು ವೇದಿಕೆ ಒದಗಿಸಲಿದೆ. ಈ ಕಾರ್ಯಾಗಾರದಲ್ಲಿ ಯುವ ಮತ್ತು ಉದಯೋನ್ಮುಖ ವಿದ್ವಾಂಸರುಗಳು ಸಹಕಾರ ಕ್ಷೇತ್ರದಲ್ಲಿನ ತಮ್ಮ ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಸಲಿದ್ದು, ಮುಂದಿನ ತಮ್ಮ ಕಾರ್ಯಯೋಜನಗೆಳ ಬಗ್ಗೆಯೂ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶ ಒದಗಿಸಲಾಗಿದೆ. ಸಮಾವೇಶದಲ್ಲಿ ವಿದ್ವಾಂಸರು, ಸಾಧಕರು, ನೀತಿ ನಿರೂಪಕರು, ಉದ್ಯಮಿಗಳು ಮೊದಲಾದ ವಿವಿಧ ಶ್ರೇಣಿಯ ಸಹಕಾರಿಗಳು ಭಾಗವಹಿಸಲಿದ್ದಾರೆ.
ಸಮಾವೇಶವು ಸಹಕಾರ ಕ್ಷೇತ್ರದ ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಜೊತೆಗೆ ಮುಂದಿನ ತಾಂತ್ರಿಕ ಪ್ರಗತಿ, ವೇಗವಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಹಕಾರಿಗಳು ಹೇಗೆ ಹೊಸ ಅವಕಾಶಗಳನು ಬಳಸಿಕೊಳ್ಳಬಹುದು ಮತ್ತು ಹೊಸತನಗಳನ್ನು ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆಯೂ ಬೆಳಕು ಚೆಲ್ಲಲಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com