Author: admin

ವಾರ್ಷಿಕ ಮಹಾಸಭೆಯಲ್ಲಿ ಶೇ.15 ಡಿವಿಡೆಂಡ್‌ ಘೋಷಣೆ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 303.31 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್‌ ಘೋಷಣೆ ಮಾಡಲಾಯಿತು. ಪಡೀಲಿನ ಬೈರಾಡಿಕೆರೆ ಹತ್ತಿರದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಭಾನುವಾರ ನಡೆದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಈ ಮಾಹಿತಿ ನೀಡಿದರು. ಸಂಘದ 2023-24ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್‌ ಸಭೆಯಲ್ಲಿ ಮಂಡಿಸಿದರು. ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ ಮಾತನಾಡಿ ಸಂಘವು ಪ್ರಸ್ತುತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 33 ಶಾಖೆಗಳನ್ನು ಹೊಂದಿದ್ದು, 2023-24ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆದು, ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ ರೂ.275 ಕೋಟಿಗೂ ಮಿಕ್ಕಿ ಠೇವಣಿಗಳನ್ನು ಸಂಗ್ರಹಿಸಿ, ರೂ. 210 ಕೋಟಿಗೂ ಮಿಕ್ಕಿ ಸಾಲ ನೀಡುವ…

Read More

ಹಿರೇಕೆರೂರು ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘದಿಂದ ಶಿಕ್ಷಕರ ದಿನಾಚರಣೆ ಹಿರೇಕೆರೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೇಶದ ಭವಿಷ್ಯಕ್ಕೆ ಬೇಕಾಗಿರುವ ಸ್ವಸ್ಥ, ಸದೃಢ ಯುವಜನತೆಯನ್ನು ನಿರ್ಮಿಸುವಲ್ಲಿ ಹಾಗೂ ದೇಶದ ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು. ಹಿರೇಕೆರೂರು ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘದ ಆಶ್ರಯದಲ್ಲಿ ಸಹಕಾರಿ ವಿದ್ಯಾಸಂಸ್ಥೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ೧೩೬ನೇ ಜನ್ಮದಿನದ ಅಂಗವಾಗಿ ಹಿರೇಕೆರೂರು ಪಟ್ಟಣದ ಸಹಕಾರಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಮಕ್ಕಳಿಗೆ ಜ್ಞಾನ ತುಂಬುವುದರ ಜೊತೆಗೆ ಜೀವನ ಮೌಲ್ಯಗಳನ್ನು, ಆದರ್ಶಗಳನ್ನು ತುಂಬಿ ಭವ್ಯ ಭಾರತ ನಿರ್ಮಾಣದಲ್ಲಿ ಶಿಕ್ಷಕರು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅವರ ಪಾತ್ರ ಸಮಾಜದಲ್ಲಿ ಅತ್ಯಂತ ಹಿರಿದಾದುದು ಎಂದು ಶ್ಲಾಘಿಸಿದರು. ಸಹಕಾರಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಎಸ್.ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿ…

Read More

ಮಂಗಳೂರು: ದಕ್ಷಿಣ ಕನ್ನಡ ಸೌಹಾರ್ದ ಸಹಕಾರಿ ಅಣ್ಣಳಿಕೆ ಇದರ ಮೂರನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ರಂಗೋಲಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಸಹಕಾರಿಯ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿರುವ ಮನೆ ಮನೆಯಲ್ಲಿ ಸಹಕಾರಿ ಸದಸ್ವತ್ವ ಹೊಂದಿದೆ. ಒಂದು ಕುಟುಂಬದ ಅಭಿವೃದ್ಧಿ ಚಿಂತನೆಗೆ ಮಹತ್ವ ನೀಡಲಾಗುವುದು ಎಂದರು. ಸಹಕಾರಿಯ ಉಪಾಧ್ಯಕ್ಷ ದೇವಪ್ಪ ಕುಲಾಲ್ ಪಂಜಿಕಲ್ಲು ಮಾತನಾಡಿ, ಸಹಕಾರಿಯು ಕೇವಲ 24 ತಿಂಗಳ ಅವಧಿಯಲ್ಲಿ ಮೂರು ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ 1804 ಸದಸ್ಯರನ್ನು ಒಳಗೊಂಡು 2023-24ರ ವರ್ಷಾಂತ್ಯಕ್ಕೆ ರೂ. 1,45,625 ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಹಕಾರಿ ಪ್ರವರ್ತಕ ಸಂಸ್ಥೆಗಳಾದ ನೇತ್ರಾವತಿ ಕೃಷಿಕರ ಸಂಘಗಳ ಒಕ್ಕೂಟ ಬಂಟ್ವಾಳ, ನೇಸರ ಕೇಂದ್ರೀಯ ಸಮನ್ವಯ ಸಮಿತಿ ಗುರುಪುರ ಕೈಕಂಬ, ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟ ಗುರುಪುರ ಕೈಕಂಬ ಇವರ ಸಹಭಾಗಿತ್ವದಲ್ಲಿ ಮಲ್ಲೂರು ಪರಾರಿ ಬರ್ಕೆ ದಿ.ತ್ಯಾಂಪಣ್ಣ ಶೆಟ್ಟಿಯವರ ಸ್ಮರಣಾರ್ಥ ಭತ್ತದ ಬೇಸಾಯದೊಂದಿಗೆ ವಿಶೇಷ ಕೃಷಿ ಸಾಧನೆ ಮಾಡಿದ ರೈತರಿಗೆ…

Read More

ಬಂಟ್ವಾಳ: ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಪ್ರಧಾನ ಕಚೇರಿ ಮತ್ತು ಬಿ.ಸಿ.ರೋಡ್‌ ಶಾಖೆಯ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭ ಸೆ.7ರಂದು ಬೆಳಗ್ಗೆ 9.30ಕ್ಕೆ ಬಿ.ಸಿ.ರೋಡ್‌ ಕೈಕಂಬ ಬಳಿಯ ಬೆಸ್ಟ್‌ ಇಂಗ್ಲಿಷ್‌ ಮೀಡಿಯಂ ಶಾಲೆಯ ಸಮೀಪ ನಡೆಯಲಿದೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಮೊಡಂಕಾಪು ಇನ್ಫಂಟ್‌ ಜೀಸಸ್‌ ಚರ್ಚ್‌ನ ಧರ್ಮಗುರು ವಲೇರಯನ್‌ ಡಿಸೋಜ ಆಶೀರ್ವಚನ ನೀಡಲಿದ್ದಾರೆ. ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಜೀವನ್‌ ಲಾಯ್ಡ್‌ ಪಿಂಟೊ ಶಿಲಾನ್ಯಾಸ ಮಾಡುವರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ, ಬಂಟ್ವಾಳ ಶಾಸಕ ರಾಜೇಶ್‌ ನಾಯಕ್‌ ಯು., ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಪುರಸಭೆ ಸದಸ್ಯ ಮಹಮ್ಮದ್‌ ನಂದರಬೆಟ್ಟು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸೊಸೈಟಿಯ ಉಪಾಧ್ಯಕ್ಷ ವಲೇರಿಯನ್‌ ಬರೆಟ್ಟೊ, ನಿರ್ದೇಶಕರಾದ ಹೆನ್ರಿ ಪಾಸ್ಕಲ್‌ ಪಿರೇರ, ಹ್ಯೂಬರ್ಟ್‌ ಲೋಬೊ, ಎವ್ಜಿನ್‌ ಲೋಬೊ, ಡೆನಿಸ್‌ ಪಿಂಟೊ, ಫ್ರಾನ್ಸಿಸ್‌ ಮೆಂಡೋನ್ಸಾ, ಲಾದ್ರು ಮಿನೇಜಸ್‌, ರಿಚರ್ಡ್‌ ಮಿನೇಜಸ್‌, ಬೆನೆಡಿಕ್ಟಾ ಜಿ.ಮೊಂತೇರೊ, ಜಾನ್‌ ಪ್ರಕಾಶ್‌ ಪಿಂಟೊ, ವಿನ್ಸೆಂಟ್‌ ಕ್ಲಾಡಿ…

Read More

ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್‌ ರಮೇಶ್‌ ಅಭಿಪ್ರಾಯ ಮಂಗಳೂರು: ಸಹಕಾರ ಸಂಘಗಳು ಪ್ರತಿ ತಿಂಗಳ ಜಮಾ -ಖರ್ಚುಗಳನ್ನು ಜಿಲ್ಲಾ ಕಚೇರಿಗೆ ತಲುಪಿಸಬೇಕು. ಕಾಲಕಾಲಕ್ಕೆ ಲೆಕ್ಕಪತ್ರ ನಿರ್ವಹಣೆ ಮಾಡಬೇಕು. ಸಾಲ ನೀಡುವಾಗ ಕರಾರುವಕ್ಕಾದ ದಾಖಲೆ ಪತ್ರಗಳನ್ನು ತೆಗೆದುಕೊಂಡು ಕ್ರಮಬದ್ಧವಾಗಿ ಪರಿಶೀಲಿಸಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಹೆಚ್‌.ಎನ್‌ ರಮೇಶ್‌ ಕಿವಿಮಾತು ಹೇಳಿದರು. ಮಂಗಳೂರಿನ ಜನತಾ ಬಜಾರ್‌ನಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ದಕ್ಷಿಣ ಕನ್ನಡ ಜಿಲ್ಲಾ ಕಛೇರಿ ಉದ್ಘಾಟನೆ ಹಾಗೂ ಶ್ರೀನಿವಾಸ ಹೋಟೆಲ್‌ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ವಿಷಯಾಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಸಹಕಾರಿ ಸಂಘವಾಗಿರಲಿ, ಜಮೆ ಮತ್ತು ಖರ್ಚುಗಳ ಬಗ್ಗೆ ಹಾಗೂ ಬಾಕಿ ಹಣದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ದೃಢೀಕರಿಸಿಕೊಳ್ಳಬೇಕು. ಯಾವುದೇ ಕೆಲಸವನ್ನು ಕಾನೂನಿನ ಚೌಕಟ್ಟಿನಲ್ಲಿ, ಕ್ರಮಬದ್ಧವಾಗಿ ಮಾಡಿದರೆ, ಮುಂದೆ ವ್ಯಾಜ್ಯಗಳು ಬರದಂತೆ ತಡೆಯಬಹುದು ಎಂದು ಹೇಳಿದರು. ಕೇಂದ್ರ ಸಹಕಾರ ಸಚಿವಾಲಯವು ಏಕರೂಪ ತಂತ್ರಾಂಶ ಅಳವಡಿಸುವ ಮೂಲಕ ಎಲ್ಲ ರೀತಿಯ ಸಹಕಾರ ಸಂಘಗಳು ಒಂದೇ ಸೂತ್ರದಡಿ…

Read More

ಪ್ರತಿಷ್ಠಿತ ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ ಆಪರೇಟವ್‌ ಸೊಸೈಟಿಯಿಂದ ವಿದ್ಯಾರ್ಥಿಗಳಿಗೆ ಗೌರವ ಮಂಗಳೂರು: ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಗಳಿಸಿ ಅತ್ಯುನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಸ್ಥಾಪಕಾಧ್ಯಕ್ಷ ಕೆ.ಬಿ.ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಮ೦ಗಳೂರಿನ ಉರ್ವ ಸೆಂಟನರಿ ಸಭಾಭವನದಲ್ಲಿ ಜರಗಿತು. ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಐ.ಎಸ್.ಆರ್ ಅಂಡ್ ಸಿ.ಆರ್.ಎಲ್‌ನ ಉಪಾಧ್ಯಕ್ಷ ಹಾಗೂ ಮಾಜಿ ಉಪಕುಲಪತಿ ಪ್ರೊ. ಡಾ|ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಂಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಪ್ರಾಸ್ತಾವಿಕ ಮಾತನಾಡಿ,  ತಮ್ಮ 78ನೇ ವಯಸ್ಸಿನಲ್ಲಿ ಸಂಘವನ್ನು ಸ್ಥಾಪಿಸಲು ಮುಂದಾಳತ್ವ ವಹಿಸಿ ಆರಂಭಿಕ ೨೦ ವರ್ಷಗಳ ಕಾಲ ಸಂಘದಲ್ಲಿ ಅಧ್ಯಕ್ಷರಾಗಿ ಸಂಘದ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಿಕೊಟ್ಟ ಸಂಘದ ಸ್ಥಾಪಕಾಧ್ಯಕ್ಷ ದಿ.ಕೆ.ಬಿ.ಜಯಪಾಲ ಶೆಟ್ಟಿಯವರ ಸಾಧನೆಗಳನ್ನು ಯುವಪೀಳಿಗೆಗೆ ಪರಿಚಯಿಸಿಕೊಟ್ಟು…

Read More

ಉಪಾಧ್ಯಕ್ಷರಾಗಿ ಸಂಜೀವ ಅಡ್ಯಾರ್ ಆಯ್ಕೆ  ಸುಗಮವಾಗಿ ನಡೆದ ಚುನಾವಣಾ ಪ್ರಕ್ರಿಯೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ನೂತನ ಅಧ್ಯಕ್ಷರಾಗಿ ಮಾತೃಭೂಮಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಫಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಂಪ್‌ವೆಲ್‌ನಲ್ಲಿರುವ ಒಡಿಯೂರು  ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣಾ ರಿಟರ್ನಿಂಗ್‌ ಅಧಿಕಾರಿ ನವೀನ್‌ ಕುಮಾರ್‌  ಎಂ.ಎಸ್‌, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು. ನಿರ್ದೇಶಕರಾಗಿ ವಲ್ಸರಾಜ್‌ ಎ(ಸ್ವಸ್ತಿಕ್‌ ಸೌಹಾರ್ದ), ಹರೀಶ ಪುತ್ತೂರಾಯ(ಶಿವಳ್ಳಿ ಸಂಪದ), ದೇವಿಪ್ರಸಾದ್‌ ಕೆ(ಶ್ರೀ ಸರಸ್ವತಿ ಕ್ರೆಡಿಟ್‌ ), ಸುಮಲತಾ ನವೀನ್‌ಚಂದ್ರ ಸುವರ್ಣ(ಶ್ರೀ ಗುರು ಸೌಹಾರ್ದ), ವಿನೋದರ ಪೂಜಾರಿ(ಭಾರತ್‌ ಸೌಹಾರ್ದ), ಗಣೇಶ್‌ ಶೆಣೈ(ಶ್ರೀ ಪೂರ್ಣಾನಂದ), ಲ್ಯಾನ್ಸಿ ಎ.ಪಿರೇರ(ಬೆಳ್ತಂಗಡಿ ಪ್ರೇರಣಾ ಸೌಹಾರ್ದ), ಅಮೃತ್‌ ರೈ.ಯು(ಸಮಷ್ಟಿ ಸೌಹಾರ್ದ), ಎಂ.ಎಸ್‌.ಗುರುರಾಜ್‌(ಶ್ರೀಶಾ), ಸುಧಾಕರ್‌(ಗ್ರಾಮ ಸಮೃದ್ಧಿ ಸೌಹಾರ್ದ), ದಾಮೋದರ ಕುಲಾಲ್‌(ಶ್ರೀಮಾತಾ ಸೌಹಾರ್ದ), ಉರ್ಬಾನ್‌ ಪಿಂಟೋ(ಕರ್ನಾಟಕ ರಾಜ್ಯ ವಿದ್ಯುತ್‌…

Read More

ಉಡುಪಿ: ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆ ಮಂಗಳವಾರ ಸಹಕಾರಿಯ ನೋಂದಾಯಿತ ಕಚೇರಿಯಲ್ಲಿ ನಡೆಯಿತು. ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸೊಸೈಟಿಯ ಉಪಾಧ್ಯಕ್ಷ ಅಜಯ್ ಕುಮಾರ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಜೀವನ್‌ ಡಿಸೋಜ ಲೆಕ್ಕ ಪರಿಶೋಧನಾ ವರದಿ ವಾಚಿಸಿದರು. ಸಮಾಜಸೇವಕ ಸ್ಟೀವನ್ ಕೊಲಾಸೊ, ನಿವೃತ್ತ ಪ್ರಾಂಶುಪಾಲ ಡಾ.ನೇರಿ ಕರ್ನೇಲಿಯೋ ಉಪಸ್ಥಿತರಿದ್ದು, ಸಹಕಾರಿಯ ಅಭಿವೃದ್ಧಿ ಮತ್ತು ಸಹಕಾರಿಯ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಹಕಾರಿಯ ಅಧ್ಯಕ್ಷೆ ಜೆಸಿಂತಾ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಹಕಾರಿಯು ಅಭಿವೃದ್ಧಿ ಹೊಂದುತ್ತಿದ್ದು ತಮ್ಮೆಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದೆ ಎನ್ನಲು ಸಂತೋಷವಾಗುತ್ತದೆ ಎಂದು ತಿಳಿಸಿದರು. ಸೊಸೈಟಿಯ ನಿರ್ದೇಶಕರಾದ ಪ್ರಶಾಂತ್ ಕುಮಾರ್, ಜೂದ್ ನೆಲ್ಸನ್ ಡಿಸೋಜ, ಗುರುಚರಣ್ ನಾಯ್ಕ್, ರೋಹನ್ ಪ್ರಶಾಂತ್ ಕೊಲಾಸೊ, ಪ್ರಶಾಂತಿ ಪ್ರಿಯಾ ಕ್ಯಾಸ್ಟಲಿನೋ, ಸೀಮಾ, ಅಜಿತ್, ಸಿಬ್ಬಂದಿ ವರ್ಗ ಹಾಗೂ ಸಹಕಾರಿಯ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಕ ಜೀವನ್‌ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.…

Read More

ಉಡುಪಿ: ಶ್ರೀ ಮಹಾಲಿಂಗೇಶ್ವರ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿ ತೆಕ್ಕಟ್ಟೆ ಇದರ ಆರನೇ ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ತೆಕ್ಕಟ್ಟೆಯ ಹಯಗ್ರೀವ ಸಭಾಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕ ಕುಮಾರ್‌ ಪಿ ಅಧ್ಯಕ್ಷತೆಯಲ್ಲಿ ನಡೆಯಿತು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಂಸ್ಥೆಯ ಉಪಾಧ್ಯಕ್ಷ ಸುಧಾಕರ್‌ ಶೆಟ್ಟಿ, ನಿರ್ದೇಶಕರಾದ ಸುಬ್ಬಣ್ಣ ಉಪಾಧ್ಯಾಯ , ಎನ್‌.ಕರುಣಾಕರ ಶೆಟ್ಟಿ, ಎಂ.ಬಾಬು ಪೂಜಾರಿ, ಕೆ.ಪುಷ್ಪಲತಾ ಶೆಟ್ಟಿ, ವಿಜಯಲಕ್ಷ್ಮಿ ಅಡಿಗ, ಹಾಗೂ ಶಾಲಿನಿ ವಿ.ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಚಂದ್ರಕಾಂತ ಶೆಟ್ಟಿ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಉಡುಪಿ ಜಿಲ್ಲೆಯ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಪ್ರಶಾಂತ ಶೆಟ್ಟಿ ಹಾಗೂ ವೈದಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಕುಸುಮಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಗಣ್ಯರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಲೆಕ್ಕಪರಿಶೋಧಕ ರಾಜೀವ್‌ ಶೆಟ್ಟಿ ಮಲ್ಯಾಡಿ , ವಿಜಯ ಬ್ಯಾಂಕ್‌ ನಿವೃತ್ತ ಸೀನಿಯರ್‌ ಮ್ಯಾನೇಜರ್‌ ಮಂಜುನಾಥ ಶೆಟ್ಟಿ…

Read More

ಸಹಕಾರಿ ಸಂಘಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ಮುಂಬೈ: ಸಮಾಜದಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಹಕಾರಿ ಚಳುವಳಿಯು ನ್ಯಾಯ, ಏಕತೆ ಮತ್ತು ಭ್ರಾತೃತ್ವದ ಪರಿಕಲ್ಪನೆಗಳನ್ನು ಮುನ್ನೆಲೆಗೆ ತಂದು ಕಾರ್ಯ ನಿರ್ವಹಿಸುವುದರ ಜೊತೆಗೆ ವಿವಿಧ ವರ್ಗಗಳ ಜನರನ್ನು ಸೈದ್ಧಾಂತಿಕವಾಗಿ ಒಗ್ಗೂಡಿಸಿ ಸಾಮಾಜಿಕವಾಗಿ ಏಕತೆ ಮೂಡಿಸುವಲ್ಲಿ ಸಹಕರಿಸುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಮಹಾರಾಷ್ಟ್ರದ ಕೊಲ್ಹಾಪುರದ ವಾರನನಗರ ಶ್ರೀ ವಾರನ ಮಹಿಳಾ ಕೋ ಆಪರೇಟಿವ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರ ಬಹಳ ಪ್ರಮುಖವಾದುದು. ವೃತ್ತಿಪರ ನಿರ್ವಹಣಾ ಅಭ್ಯಾಸಗಳನ್ನು ಸಹಕಾರಿ ಕ್ಷೇತ್ರ ರೂಢಿಸಿಕೊಳ್ಳಬೇಕು. ದೇಶ -ವಿದೇಶಗಳಲ್ಲಿ ಮನೆಮಾತಾಗಿರುವ ಅಮುಲ್‌, ಲಿಜ್ಜತ್‌ ಹಪ್ಪಳದಂಥ ಸಹಕಾರಿಗಳ ಯಶಸ್ಸು ಭಾರತದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರವನ್ನು ವಿಶದೀಕರಿಸಿವೆ. ವಿಶೇಷವಾಗಿ ಹೈನುಗಾರಿಕಾ ವಲಯದಲ್ಲಿ ಸಹಕಾರ ವಲಯದಿಂದ ಮಹತ್ವದ ಸಾಧನೆ ದಾಖಲಾಗಿದೆ. ಭಾರತ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವೆನಿಸಿದ್ದರಲ್ಲಿ ಸಹಕಾರಿಗಳ…

Read More