ಸಹಕಾರಿ ಸಚಿವ ಅಮಿತ್ ಷಾ ಸುಳಿವು
ನವದೆಹಲಿ: ಕೇಂದ್ರ ಸರ್ಕಾರವು ಶೀಘ್ರದಲ್ಲೇ ಓಲಾ, ಊಬರ್‌ನಂತೆ ಕೋ ಆಪರೇಟಿವ್ ಮಾದರಿಯಲ್ಲಿ ದೇಶಾದ್ಯಂತ ಟ್ಯಾಕ್ಸಿ ಸೇವೆ ಪ್ರಾರಂಭಿಸಲಿದೆ ಎಂದು ಕೇಂದ್ರ ಸಹಜಕಾರ ಸಚಿವ ಅಮಿತ್ ಷಾ ಗುರುವಾರ ಸಂಸತ್‌ನಲ್ಲಿ ಘೋಷಿಸಿದ್ದಾರೆ.
ಉಬರ್ ಮತ್ತು ಓಲಾಗೆ ಪರ್ಯಾಯವಾಗಿ ಸಹಕಾರಿ ಆಧಾರಿತ ವ್ಯವಸ್ತೆಯನ್ನು ಸರ್ಕಾರ ಪ್ರಾರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಸಹಕಾರ ಸೇ ಸಮೃದ್ಧಿ’ (ಸಹಕಾರದ ಮೂಲಕ ಸಮೃದ್ಧಿ) ಎಂಬ ದೃಷ್ಟಿಕೋನ ಕೇವಲ ಘೋಷಣೆಯಾಗಿ ಉಳಿದಿಲ್ಲ. ಅದನ್ನು ಒಂದೊಂದಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕಳೆದ ಮೂರುವರೆ ವರ್ಷಗಳಲ್ಲಿ, ಸಹಕಾರ ಸಚಿವಾಲಯವು ಅದನ್ನು ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯವಾಕ್ಯವನ್ನು ನನಸಾಗಿಸಲು ಅವಿಶ್ರಾಂತವಾಗಿ ಶ್ರಮಿಸಿದೆ ಎಂದು ಹೇಳಿದರು.
https://chat.whatsapp.com/EbVKVnWB6rlHT1mWtsgbch
ಮುಂಬರುವ ದಿನಗಳಲ್ಲಿ, ದ್ವಿಚಕ್ರ ವಾಹನ ಟ್ಯಾಕ್ಸಿಗಳು, ಆಟೋರಿಕ್ಷಾಗಳು ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಒಳಗೊಂಡಂತೆ ದೊಡ್ಡ ಪ್ರಮಾಣದ ಸಹಕಾರಿ ಟ್ಯಾಕ್ಸಿ ಸೇವೆಯನ್ನು ಪರಿಚಯಿಸಲಾಗುವುದು ಎಂದು ಹೇಳಿದ ಅಮಿತ್ ಷಾ, ಖಾಸಗಿ ರೈಡ್-ಹೇಲಿಂಗ್ ಕಂಪನಿಗಳಿಗಿಂತ ಭಿನ್ನವಾಗಿ, ಲಾಭವು ಮಾಲೀಕರಿಗೆ ಹೋಗುತ್ತದೆ, ಈ ಮಾದರಿಯ ಗಳಿಕೆಯು ನೇರವಾಗಿ ಚಾಲಕರಿಗೆ ಹೋಗುತ್ತದೆ ಎಂದು ಹೇಳಿದರು.
ಯಾವುದೇ ಮಧ್ಯವರ್ತಿ ಕಮಿಷನ್ ತೆಗೆದುಕೊಳ್ಳದೆ, ನೇರವಾಗಿ ಚಾಲಕರ ಆದಾಯವನ್ನು ಈ ವ್ಯವಸ್ಥೆಯಡಿ ಹೆಚ್ಚಿಸಬಹುದು ಮತ್ತು ಪ್ರಯಾಣಿಕರಿಗೆ ಹೆಚ್ಚು ಕೈಗೆಟುಕುವ ದರಗಳನ್ನು ನೀಡಬಹುದು. ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸರ್ಕಾರದ ದಾಖಲೆಯನ್ನು ಗಮನಿಸಿದರೆ, ಈ ಸಹಕಾರಿ ಮಾದರಿಯು ಬಲವಾದ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ. ಇದು ಯಶಸ್ವಿಯಾದರೆ, ಸರ್ಕಾರ ಬೆಂಬಲಿತ ಸಹಕಾರಿ ರೈಡ್-ಹೇಲಿಂಗ್ ಸೇವೆಯನ್ನು ಸ್ಥಾಪಿಸಿದ ಮೊದಲ ದೇಶ ಭಾರತವಾಗಲಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com