ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಘೋಷಣೆ
ನವದೆಹಲಿ: ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ವಿಮಾ ಸೌಲಭ್ಯ ಒದಗಿಸಲು ಸರ್ಕಾರದಿಂದಲೇ ಕೋ ಆಪರೇಟಿವ್ ವಿಮಾ ಕಂಪನಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಲೋಕಸಭೆಯಲ್ಲಿ ಘೋಷಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸಹಕಾರಿ ಕ್ಷೇತ್ರದ ವಲಯದೊಳಗೆ ವಿಮಾ ಸೇವೆಗಳನ್ನು ಸುಗಮಗೊಳಿಸಲು ಸಹಕಾರಿ ವಿಮಾ ಕಂಪನಿಯ ಸ್ಥಾಪನೆಯಿಂದ ಲಕ್ಷಾಂತರ ಜನರಿಗೆ ಉಪಯೋಗವಾಗಲಿದೆ. ಪ್ರಸ್ತಾಪಿತ ಹೊಸ ಸಹಕಲಾರಿ ವಿಮಾ ಕಂಪನಿಯು ಸಹಕಾರಿ ಸಂಸ್ಥೆಗಳಿಗೆ ಸೂಕ್ತವಾದ ವಿಮಾ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಉತ್ತಮ ರಿಸ್ಕ್ ಕವರೇಜ್ ಮತ್ತು ಸಿಬ್ಬಂದಿಗಳಿಗೆ ಆರ್ಥಿಕ ಭದ್ರತೆಯನ್ನು ಇದು ಖಚಿತಪಡಿಸುತ್ತದೆ ಎಂದು ಅಮಿತ್ ಷಾ ತಿಳಿಸಿದರು. ಪ್ರಸ್ತಾಪಿತ ಸಹಕಾರಿ ವಿಮಾ ಕಂಪನಿಯು ಖಾಸಗಿ ವಲಯದ ವಿಮಾ ಕ್ಷೇತ್ರದವರ ಜೊತೆ ಸ್ಪರ್ಧೆ ನೀಡಲಿದೆ ಮತ್ತು ಈ ಉದ್ಯಮದಲ್ಲಿ ಪ್ರಮುಖ ಕಂಪನಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ ಎಂದು ಅಮಿತ್ ಷಾ ಹೇಳಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com