Author: admin

ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್‌ನ 49ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸ್ವರ್ಣ ಜಯಂತಿ ವರ್ಷದ “ಸ್ವರ್ಣ ಸಂಭ್ರಮ” ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಮೇ 11ರಂದು ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದ ಉದ್ಘಾಟನೆಯನ್ನು ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಮಾಡಲಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ.ಎಸ್. ಆರ್. ಹರೀಶ್ ಆಚಾರ್ಯ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್‌, ಕಟಪಾಡಿ ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ, ವಿಶ್ವಕರ್ಮ ಸಹಕಾರ ಬ್ಯಾಂಕ್‌ ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮುನಿಯಾಲು ದಾಮೋದರ ಆಚಾರ್ಯ, ಶ್ರೀ ಲಕ್ಷ್ಮೀ ಜ್ಯುವೆಲ್ಲರ್‌ನ ಮಾಲೀಕರಾದ ಬಿ.ಪ್ರವೀಣ್‌ ಶೇಟ್‌ ನಾಗ್ವೇಕರ್‌, ಮುನಿಯಾಲು ಸಂಜೀವಿನಿ ಫಾರ್ಮ್ಸ್‌ನ ಸವಿತಾ ರಾಮಕೃಷ್ಣ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬ್ಯಾಂಕಿನ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.‌ ನಮ್ಮ…

Read More

ಸಮಾವೇಶದಲ್ಲಿ ಮೂಡಿಬರಲಿದೆ ಮಹಿಳೆಯರ ಯಶೋಗಾಥೆ: ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾಹಿತಿ ಮಂಗಳೂರು: ಮೇ 10ರಂದು ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯಲಿರುವ ನವೋದಯ ಸ್ವ ಸಹಾಯ ಗುಂಪುಗಳ ರಜತ ಸಂಭ್ರಮ ಸಮಾರಂಭ ನ ಭೂತೋ ಎಂಬಂತೆ ಅದ್ದೂರಿಯಾಗಿ ನಡೆಯಲಿದೆ ಎಂದು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು. https://chat.whatsapp.com/EbVKVnWB6rlHT1mWtsgbch ಗೋಲ್ಡ್ ಫಿಂಚ್ ಮೈದಾನದಲ್ಲಿ ಸಮಾವೇಶ ನಡೆಯುವ ಸ್ಥಳದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಅವರು, ರಾಜ್ಯದಲ್ಲಿ ಇಂಥಹ ಸಮಾವೇಶ ಪ್ರಥಮ ಬಾರಿ ನಡೆಯುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಿ ಮಾಡಿರುವ ಕಾರ್ಯಕ್ರಮಗಳು ಇರಬಹುದು. ಆದರೆ ಒಂದೂವರೆ ಲಕ್ಷ ಮಹಿಳೆಯರು ಒಂದೇ ರೀತಿಯ ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲ ಸಲ. ಈ ಹಿಂದೆ ಎಂದೂ ನಡೆಯದ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. 25 ವರ್ಷಗಳ ಹಿಂದೆ ಆರಂಭವಾದ ನವೋದಯ…

Read More

ಹಣಕಾಸು ಇಲಾಖೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೂಚನೆ: ಸಚಿವ ಎಂ.ಬಿ ಪಾಟೀಲ್‌ ಹೇಳಿಕೆ ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಇಂಡಿ ತಾಲೂಕಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಹೇಗೆ ಅಗತ್ಯ ಆರ್ಥಿಕ ನೆರವು ಒದಗಿಸಬೇಕು ಎಂಬ ಬಗ್ಗೆ ಸರಿಯಾದ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್‌ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಒದಗಿಸಬೇಕಾದ ನೆರವು ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ಬೇಕಾಗಿದೆ. ಅವಧಿ ಸಾಲ, ರೈತರಿಗೆ ಮಾಡಬೇಕಿರುವ ಹಣ ಪಾವತಿ, ಕಬ್ಬಿನ ಕಟಾವು, ಸಾಗಣೆ, ಸಕ್ಕರೆ ಮತ್ತು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ವೆಚ್ಚಗಳ ಭಾರ ವಿಪರೀತವಾಗಿದೆ. ಈ…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೆ.ರವಿರಾಜ ಹೆಗ್ಡೆ, ಉಪಾಧ್ಯಕ್ಷರಾಗಿ ಉದಯ ಕೋಟ್ಯಾನ್‌ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರವಿರಾಜ್‌ ಹೆಗ್ಡೆ ಮತ್ತು ಉದಯ ಕೋಟ್ಯಾನ್‌ ಅವರನ್ನು ಆಯ್ಕೆ ಮಾಡಲಾಯಿತು. https://chat.whatsapp.com/EbVKVnWB6rlHT1mWtsgbch ಈ ಹಿಂದೆ ನಡೆಇದ್ದ ನಿರ್ದೇಶಕರ ಚುನಾವಣೆಯಲ್ಲಿ ಕುಂದಾಪುರ ಉಪವಿಭಾಗದಿಂದ ರವಿರಾಜ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ, ಉದಯ ಎಸ್.ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಸುಧಾಕರ ಶೆಟ್ಟಿ ಮುಡಾರು, ಎನ್.ಮಂಜಯ್ಯ ಶೆಟ್ಟಿ ಕೆ.ಶಿವಮೂರ್ತಿ, ಮಂಗಳೂರು ಉಪವಿಭಾಗದಿಂದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸುಚರಿತ ಶೆಟ್ಟಿ, ಬಿ.ಸುಧಾಕರ ರೈ, ನಂದರಾಮ ರೈ, ಪುತ್ತೂರು ಉಪವಿಭಾಗದಿಂದ ಎಸ್.ಬಿ.ಜಯರಾಮ ರೈ ಭರತ್ ಎನ್., ಕೆ.ಚಂದ್ರಶೇಖರ ರಾವ್, ಎಚ್.ಪ್ರಭಾಕರ, ಉಡುಪಿ ಜಿಲ್ಲಾ ಮಹಿಳಾ ಸ್ಥಾನ ಮಮತಾ ಆರ್.ಶೆಟ್ಟಿ, ದ.ಕ. ಜಿಲ್ಲಾ ಮಹಿಳಾ ಸ್ಥಾನದಿಂದ ಸವಿತಾ ಎನ್‌.ಶೆಟ್ಟಿ ವಿಜಯ ಸಾಧಿಸಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಮೇ 11ರಂದು ಸ್ವರ್ಣ ಜಯಂತಿ ವರ್ಷದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ವರ್ಷಪೂರ್ತಿ ನಡೆಯಲಿದೆ ವೈವಿಧ್ಯಮಯ ಕಾರ್ಯಕ್ರಮಗಳು ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಸ್ವರ್ಣ ಸಂಭ್ರಮ ಅಂಗವಾಗಿ ಮೇ 11ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಸ್ವರ್ಣ ಜಯಂತಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಹಾಗೂ 49ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್‌, ಕಟಪಾಡಿ ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ, ವಿಶ್ವಕರ್ಮ ಸಹಕಾರ ಬ್ಯಾಂಕ್‌ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷ ಮುನಿಯಾಲು ದಾಮೋದರ ಆಚಾರ್ಯ, ಶ್ರೀ ಲಕ್ಷ್ಮೀ ಜ್ಯುವೆಲ್ಲರ್‌ನ ಮಾಲೀಕ ಬಿ.ಪ್ರವೀಣ್‌ ಶೇಟ್‌ ನಾಗ್ವೇಕರ್‌, ಮುನಿಯಾಲು ಸಂಜೀವಿನಿ ಫಾರ್ಮ್ಸ್‌ನ ಸವಿತಾ ರಾಮಕೃಷ್ಣ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬ್ಯಾಂಕ್‌ ಅಧ್ಯಕ್ಷ ಡಾ.ಎಸ್‌ ಆರ್‌…

Read More

ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ಶನಿವಾರ ನಡೆಯಲಿದೆ ಬೃಹತ್‌ ಮಹಿಳಾ ಸಮಾವೇಶ: ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಮಾಹಿತಿ ಮಂಗಳೂರು: ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಅಂಗವಾಗಿ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ಮೇ 10ರಂದು ಬಹೃತ್‌ ಮಹಿಳಾ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ಎರಡು ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಅಲ್ಲದೆ ಕರ್ನಾಟಕದ ರಾಜ್ಯಪಾಲರು ಕೂಡ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಐತಿಹಾಸಿಕ ಕಾರ್ಯಕ್ರಮವಾಗಿ ಇದು ದಾಖಲಾಗಲಿದೆ ಎಂದು ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ಸಂಸ್ಥಾಪಕ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ತಿಳಿಸಿದರು. https://chat.whatsapp.com/EbVKVnWB6rlHT1mWtsgbch ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರ ಬಿಡುಗಡೆ ಮಾಡಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ದೇವೇಂದ್ರ ಫಡ್ನವೀಸ್‌, ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ರಜತ ಸಂಭ್ರಮವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಒಂದೂವರೆ ಲಕ್ಷ ಮಹಿಳೆಯರು ನೀಲಿ ಸಮವಸ್ತ್ರ…

Read More

ಹಿರೇಕೆರೂರ ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘದ ಆಶ್ರಯದ ವಿದ್ಯಾಸಂಸ್ಥೆ ಉನ್ನತ ಸಾಧನೆ ಹಿರೇಕೆರೂರು: ಹಿರೇಕೆರೂರ ತಾಲೂಕಾ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘ ನಿಯಮಿತ ಆಶ್ರಯದಲ್ಲಿ ನಡೆಯುತ್ತಿರುವ ಡಿ.ಆರ್ ತಂಬಾಕದ ಆಂಗ್ಲಮಾಧ್ಯಮ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉನ್ನತ ಸಾಧನೆ ಮಾಡಿದ್ದು ಶೇ.89.58 ಫಲಿತಾಂಶ ದಾಖಲಿಸಿದೆ. ಒಟ್ಟು 48 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. https://chat.whatsapp.com/EbVKVnWB6rlHT1mWtsgbch ತೇರ್ಗಡೆಯಾದ ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 21 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 08 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಸೀಮಾ ಬಸರಿಹಳ್ಳಿ 625ಕ್ಕೆ 619 ಶೇ.99.04 ಅಂಕ ಪಡೆದು ಹಿರೇಕೆರೂರು & ರಟ್ಟಿಹಳ್ಳಿ ಅವಳಿ ತಾಲೂಕಿಗೆ ದ್ವಿತೀಯ, ಕಾರ್ತೀಕ ಸಣ್ಣಮನಿ 618 ಶೇ. 98.88 ಅಂಕ ಪಡೆದು ಅವಳಿ ತಾಲೂಕಿಗೆ ತೃತೀಯ ಸ್ಥಾನ, ಶಶಿಧರ ಆರ್.ಡಿ 611 ಶೇ.97.76 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ, ಸುಶ್ಮಿತಾ ಬಂಗೇರ 608 ಅಂಕ ಪಡೆದು ನಾಲ್ಕನೇ ಸ್ಥಾನ, ಚಿನ್ಮಯಿಸ್ವಾಮಿ ಮಠದ 598 ಅಂಕ…

Read More

ಮಂಗಳೂರು; ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು ಇವರಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇವರ ಸಮನ್ವಯದಲ್ಲಿ ಮಂಗಳೂರು ಕೇಂದ್ರಿತವಾಗಿ ನಡೆಸಲ್ಪಡುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೊಮಾ (ಎಚ್.ಡಿ.ಸಿ.ಎಂ) ಅಧಿವೇಶನ ದೂರ ಶಿಕ್ಷಣ ಕೋರ್ಸಿನ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಮೂವರಿಗೆ ರ‍್ಯಾಂಕ್ ಲಭಿಸಿದೆ. https://chat.whatsapp.com/EbVKVnWB6rlHT1mWtsgbch ಪ್ರಥಮ ಸ್ಥಾನವನ್ನು ಕಳಂಜ- ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಗೀತಾಶ್ರೀ ಎಂ., ದ್ವಿತೀಯ ಸ್ಥಾನ ಭವ್ಯಶ್ರೀ ರೈ ಕೆ., ತೃತೀಯ ಸ್ಥಾನ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ಸೌಮ್ಯ ಡಿ. ಪಡೆದಿದ್ದಾರೆ. ಈ ಬ್ಯಾಚ್‌ನಲ್ಲಿ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ 127 ಶಿಕ್ಷಣಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 16 ಶಿಕ್ಷಣಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ಮತ್ತು 90 ಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 6 ಶಿಕ್ಷಣಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಪ್ರಾದೇಶಿಕ ಸಹಕಾರ ನಿರ್ವಹಣಾ ಕೇಂದ್ರ ಬೆಂಗಳೂರು, ಇವರು ನೀಡುತ್ತಿರುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೊಮಾ ದೂರ ಶಿಕ್ಷಣ…

Read More

ಮುಂದಿನ ದಿನಗಳಲ್ಲಿ ತೊಕ್ಕೊಟ್ಟು, ಉಳ್ಳಾಲದ ಪರಿಸರದಲ್ಲಿ ಆರೋಗ್ಯ ತಪಾಸಣೆ: ಚಿತ್ತರಂಜನ್‌ ಬೋಳಾರ್‌ ಮಾಹಿತಿ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮಾಡೂರು ಶಾಖೆಯ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮಾಡೂರು ಹಾಗೂ ಶ್ರೀ ವನದುರ್ಗಾ ಅಯ್ಯಪ್ಪ ಭಜನಾ ಮಂದಿರ ಇವರ ಜಂಟಿ ಸಹಯೋಗದಲ್ಲಿ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ತಜ್ಞ ವೈದ್ಯರಿಂದ ಉಚಿತ ದಂತ ತಪಾಸಣೆ ಮತ್ತು ಎ.ಜೆ. ಇನ್‌ಸ್ಟಿಟ್ಯೂಟ್ ಮತ್ತು ಮೆಡಿಕಲ್ ಸೈನ್ಸ್, ಮಂಗಳೂರು ಇಲ್ಲಿನ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರ ಭಾನುವಾರ ಮಾಡೂರಿನ ಮಾತೃಶ್ರೀ ಕಾಂಪ್ಲೆಕ್ಸ್‌ನ ಆವರಣದಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಶ್ರೀ ವನದುರ್ಗಾ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಭಾಸ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ವೈದ್ಯ ಡಾ|ಪ್ರಮಾದ ಪ್ರಭಾಕರ್ ಮಾತನಾಡಿ ಎಲ್ಲರೂ ಉದ್ಯೋಗದ ಜೊತೆಗೆ ಆರೋಗ್ಯದ…

Read More

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ನೂತನ ನಿರ್ದೇಶಕರ ಆಯ್ಕೆ ಸಂಬಂಧಿಸಿ ಶನಿವಾರ ನಡೆದ ಚುನಾವಣೆಯಲ್ಲಿ 16 ಮಂದಿ ಆಯ್ಕೆಯಾಗಿದ್ದು ಸಹಕಾರ ರತ್ನ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಬೆಂಬಲಿಗರ ಹೈನುಗಾರ ಸಹಕಾರಿಗಳ ಬಳಗ ವಿಜಯ ದಾಖಲಿಸಿದೆ. ಮೇ 6ರಂದು ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು 16 ನಿರ್ದೇಶಕ ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಡಾ|ಎಂ.ಎನ್‌ ರಾಜೇಂದ್ರ ಕುಮಾರ್‌ ಬೆಂಬಲಿತ ತಂಡದ ಅಭ್ಯರ್ಥಿಗಳು ಗೆದ್ದಿದ್ದಾರೆ. ನಿರ್ದೇಶಕರ ಚುನಾವಣೆಗೆ ಒಟ್ಟು 41 ಮಂದಿ ಅಂತಿಮ ಕಣದಲ್ಲಿದ್ದು, ಅವಿರೋಧ ಆಯ್ಕೆಗಾಗಿ ಮಾತುಕತೆ ನಡೆದರೂ ಫಲಕಾರಿಯಾಗದೆ ಚುನಾವಣೆ ನಡೆದಿತ್ತು. ಕುಂದಾಪುರ ಉಪವಿಭಾಗದಿಂದ ರವಿರಾಜ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ ಉದಯ ಎಸ್.ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಸುಧಾಕರ ಶೆಟ್ಟಿ ಮುಡಾರು, ಎನ್.ಮಂಜಯ್ಯ ಶೆಟ್ಟಿ ಕೆ.ಶಿವಮೂರ್ತಿ ಆಯ್ಕೆಯಾಗಿದ್ದಾರೆ. ಮಂಗಳೂರು ಉಪವಿಭಾಗದಿಂದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸುಚರಿತ ಶೆಟ್ಟಿ, ಬಿ.ಸುಧಾಕರ ರೈ, ನಂದರಾಮ ರೈ, ಪುತ್ತೂರು ಉಪವಿಭಾಗದಿಂದ ಎಸ್.ಬಿ.ಜಯರಾಮ ರೈ ಭರತ್ ಎನ್., ಕೆ.ಚಂದ್ರಶೇಖರ ರಾವ್, ಎಚ್.ಪ್ರಭಾಕರ,…

Read More