ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ
ಉಡುಪಿ: ನಾವು ಬಾಳಿ ಬದುಕುವ ಪರಿಸರವನ್ನು ಮುಂದಿನ ಪೀಳಿಗೆಗೆ ಸಮೃದ್ಧಗೊಳಿಸಿ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದ್ದು. ಸ್ವಚ್ಛ ಪರಿಸರವನ್ನು ನಿರ್ಮಿಸುವರೇ ನಮ್ಮ ಕಸ, ನಮ್ಮ ಹೊಣೆ ಎಂಬ ಸಾಮಾಜಿಕ ಜವಾಬ್ದಾರಿಯನ್ನು ನಾವು ಹೊರಬೇಕಾಗಿದೆ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದಂತೆ ಭಾನುವಾರ ನಡೆದ 6ನೇ “ಸ್ವಚ್ಛ ಭಾರತ್ “– ಶ್ರಮದಾನದ ಸಂದರ್ಭದಲ್ಲಿ ಅವರು ಮಾತನಾಡಿದರು.
ಗುರು ಸೇವಾ ಪರಿಷತ್ ಉಡುಪಿ ಮಹಾಮಂಡಲದ ಅಧ್ಯಕ್ಷರಾದ ಸುಧಾಕರ ಆಚಾರ್ಯ ಮತ್ತು ಉಡುಪಿ ಜಿಲ್ಲಾ ಕಾರ್ಪೆಂಟರ್ಸ್ ಯೂನಿಯನ್ ಇದರ ಕಾರ್ಯದರ್ಶಿ ಜಯಕರ ಆಚಾರ್ಯ ಇವರು ಹಸಿರು ನಿಶಾನೆ ತೋರಿ ಶಮದಾನಕ್ಕೆ ಚಾಲನೆ ನೀಡಿದರು. ಉಡುಪಿಯ ಅಂಜುಮಾನ್ ರಸ್ತೆ ಹಾಗೂ ಸಿಟಿ ಬಸ್‌ಸ್ಟ್ಯಾಂಡ್ ಪರಿಸರದಲ್ಲಿ ಸ್ವಚ್ಛತೆಯ ಕಾರ್ಯ ನಡೆಯಿತು.


ಬ್ಯಾಂಕಿನ ನಿರ್ದೇಶಕರಾದ ಜಗದೀಶ್ ಜೆ. ಆಚಾರ್ಯ, ಬಿಜು ಜಯ ಆಚಾರ್ಯ, ಹರಿಪ್ರಸಾದ್, ಉಡುಪಿ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಳಿ, ನಿವೃತ್ತ ಸೈನಿಕ ಕೇಶವ ಆಚಾರ್ಯ ದೊಡ್ಡಣಗುಡ್ಡೆ, ಗುರು ಸೇವಾ ಪರಿಷತ್ ಉಡುಪಿ ಮಹಾಮಂಡಲದ ಪ್ರಮುಖರಾದ ರಾಘವೇಂದ್ರ ಆಚಾರ್ಯ ಹಾಗೂ ಸದಸ್ಯರು, ಉಡುಪಿ ಜಿಲ್ಲಾ ಕಾರ್ಪೆಂಟರ್ಸ್ ಯೂನಿಯನ್ ಅಧ್ಯಕ್ಷರಾದ ಅಚ್ಚುತ ಆಚಾರ್ಯ, ಪ್ರಧಾನ ಸಂಚಾಲಕರಾದ ಗೋಕುಲ ಆಚಾರ್ಯ, ಉಪಾಧ್ಯಕ್ಷರಾದ ಶ್ರೀಪತಿ ಆಚಾರ್ಯ ಹಾಗೂ ಸದಸ್ಯರು ಹಾಗೂ ಇತರ ಸಂಘ ಸಂಸ್ಥೆಗಳು ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಗ್ರಾಹಕ ವರ್ಗದವರು ಶ್ರಮದಾನದಲ್ಲಿ ಭಾಗವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


