Author: admin

ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌, ಸಹಕಾರ ಇಲಾಖೆ ಮತ್ತು ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮೇ 28ರಂದು ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಂಗವಾಗಿ ಸ್ವಚ್ಛತಾ ಸೇ ಸಹಕಾರ್‌ ಕಾರ್ಯಕ್ರಮ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಬೆಳಗ್ಗೆ 10ಕ್ಕೆ ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಆಂಟನಿ ಪ್ರಕಾಶ್‌ ಮೊಂತೇರೊ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕರೂ, ವಿಶ್ವಕರ್ಮ ಸಹಕಾರ ಬ್ಯಾಂಕ್‌ ಅಧ್ಯಕ್ಷರೂ ಆಗಿರುವ ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯ ಅವರು ವಿಷಯ ಮಂಡನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕರಾದ ಎಸ್‌.ಬಿ ಜಯರಾಮ ರೈ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕರಾದ ಮಂಜುನಾಥ ಎನ್‌.ಎಸ್‌, ಸಹಕಾರ…

Read More

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ತೊಕ್ಕೊಟ್ಟು ಶಾಖೆಯ ವತಿಯಿಂದ ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್, ಭಟ್ನಗರ ತೊಕ್ಕೊಟ್ಟು ಇವರ ಅಮೃತ ಮಹೋತ್ಸವ ಪ್ರಯುಕ್ತ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯ ತಂಡದವರಿಂದ ಉಚಿತ ದಂತ ತಪಾಸಣೆ ಮತ್ತು ಎ.ಜೆ. ಇನ್‌ಸ್ಟಿಟ್ಯೂಟ್ ಮತ್ತು ಮೆಡಿಕಲ್ ಸೈನ್ಸ್, ಮಂಗಳೂರು ಇವರ ನುರಿತ ತಜ್ಞ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರ ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಭಟ್ನಗರ ತೊಕ್ಕೊಟ್ಟು ಇದರ ಆವರಣದಲ್ಲಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿತು. https://chat.whatsapp.com/EbVKVnWB6rlHT1mWtsgbch ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಮುಖ್ಯ ಶಿಕ್ಷಕ ಜಯಾನಂದ ಅಂಚನ್‌ ಉದ್ಘಾಟಿಸಿದರು. ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ…

Read More

ವಿಶ್ವಕರ್ಮ ಬ್ಯಾಂಕ್‌ ಸಿಬ್ಬಂದಿಗಳ ಜೊತೆ ಸಂವಾದದಲ್ಲಿ ಪದ್ಮಶ್ರೀ ಡಾ.ಕೆ.ಎಸ್‌ ರಾಜಣ್ಣ ಅಭಿಪ್ರಾಯ ಮಂಗಳೂರು: ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಛಲ, ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡಾಗ ಮೇರು ಸಾಧನೆಯನ್ನು ಮಾಡುವುದಕ್ಕೆ ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಡಾ. ಕೆ. ಎಸ್. ರಾಜಣ್ಣ ಅವರು ಹೇಳಿದರು. ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಭಾನುವಾರ ಜರುಗಿದ ಬ್ಯಾಂಕಿನ ಸ್ಥಾಪಕ ಕಾರ್ಯದರ್ಶಿ ಹಿರಿಯ ಸಮಾಜಸೇವಕ ದಿವಂಗತ ಬೊಳೂರು ಹರಿಶ್ಚಂದ್ರ ಆಚಾರ್ಯ ಅವರ 112ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. https://chat.whatsapp.com/EbVKVnWB6rlHT1mWtsgbch ಅಬಲರ ಜೀವನಕ್ಕೆ ಅನುಕಂಪ ಬೇಡ. ಅಬಲರು ಅಥವಾ ದುರ್ಬಲರು ಎಂದು ಯಾರನ್ನಾದರೂ ನೋಡುವುದು ಸರಿಯಾದ ಕ್ರಮವಲ್ಲ. ಅಬಲರನ್ನು ಸಬಲರನ್ನಾಗಿ ಮಾಡುವ ಸೂಕ್ತ ಸೌಲಭ್ಯವನ್ನು ವ್ಯವಸ್ಥೆಯು ಒದಗಿಸಬೇಕು. ಆಗ ವಿಕಲಚೇತನರು ಸೇರಿದಂತೆ ಸಮಾಜದ ದುರ್ಬಲ ಹಿಂದುಳಿದ ವರ್ಗಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಅವರು ಬ್ಯಾಂಕಿನ ನಿರ್ದೇಶಕರನ್ನು ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್…

Read More

ಹಾಲಿನ ಉಪ ಉತ್ಪನ್ನಗಳಿಂದ ಎಥೆನಾಲ್‌ ಹೊರತೆಗೆಯುವ ಪ್ರಾಯೋಗಿಕ ಕಾರ್ಯಕ್ಕೆ ಆರಂಭಿಕ ಯಶ ನವದೆಹಲಿ: ಹಾಲಿನ ಉಪ ಉತ್ಪನ್ನಗಳಾದ ಚೀಸ್ ಮತ್ತು ಪನೀರ್ ವೇ ಬಳಸಿ ಬಯೋ ಎಥೆನಾಲ್ ಉತ್ಪಾದಿಸುವ ಅಮುಲ್ನ ಪ್ರಾಯೋಗಿಕ ಕಾರ್ಯಕ್ಕೆ ಆರಂಭಿಕ ಯಶಸ್ಸು ಲಭಿಸಿದೆ. https://chat.whatsapp.com/EbVKVnWB6rlHT1mWtsgbch ಅಮುಲ್‌ನ ಈ ಪ್ರಯೋಗದಲ್ಲಿ ಹಾಲಿನ ಉಪ ಉತ್ಪನ್ನವಾದ 4.5 ಲಕ್ಷ ಲೀಟರ್ ಪನೀರ್‌ ವೇ ಬಳಸಿದ್ದು, ಇದರಲ್ಲಿ 96.71% ಎಥೆನಾಲ್‌ನೊಂದಿಗೆ 20,000 ಲೀಟರ್ ರೆಕ್ಟಿಫೈಡ್ ಸ್ಪಿರಿಟ್ ಅನ್ನು ನೀಡಿದೆ. ಈ ಯಶಸ್ಸಿನೊಂದಿಗೆ ಪ್ರತಿದಿನ 50,000 ಲೀಟರ್ ಉತ್ಪಾದಿಸುವ ರೂ. 70 ಕೋಟಿ ವೆಚ್ಚದ ಬಯೋಎಥೆನಾಲ್ ಸ್ಥಾವರ ಸ್ಥಾಪಿಸುವ ನಿಟ್ಟಿನಲ್ಲಿ ಅಮುಲ್‌ ಕಾರ್ಯೋನ್ಮುಖವಾಗಿದೆ. ಈ ಉಪಕ್ರಮವು ಭಾರತದ ಎಥೆನಾಲ್-ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮಕ್ಕೆ ಪೂರಕವಾಗಿದ್ದು, ದೇಶದಲ್ಲಿ ಎಥೆನಾಲ್‌ನ ಬಳಕೆಯನ್ನು 8% ಹೆಚ್ಚಿಸಬಹುದು. ಅಮುಲ್ ತ್ಯಾಜ್ಯವನ್ನು ಮರುಬಳಕೆ ಮಾಡುವುದು ಮತ್ತು ಅದರ 3.6 ಮಿಲಿಯ ರೈತ-ಮಾಲೀಕರಿಗೆ ಹೊಸ ಆದಾಯದ ಹರಿವುಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694…

Read More

ಜೇನು ಚಾಕಲೇಟ್ ಲೋಕಾರ್ಪಣೆ ಮಾಡಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿಪ್ರಾಯ ಸುಳ್ಯ: ಜೇನು ಕೃಷಿ ಕ್ಷೇತ್ರಕ್ಕೆ ಆಧುನಿಕ ರೂಪ ನೀಡಿ ಜೇನು ಕೃಷಿಯನ್ನು ಲಾಭದಾಯಕವಾಗಿ ಮಾಡುವ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರಿ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು. ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ವತಿಯಿಂದ ಸುಳ್ಯದ ಬಂಗ್ಲೆಗುಡ್ಡೆಯಲ್ಲಿ ನಿರ್ಮಿಸಿದ ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಜೇನು ಚಾಕಲೇಟ್ ಲೋಕಾರ್ಪಣೆ ಮಾಡಿ ಮಾತನಾಡಿದರು. ಶುದ್ಧ ಜೇನು ತುಪ್ಪ ಆರೋಗ್ಯಕ್ಕೆ ಉತ್ತಮ. ಆದುದರಿಂದ ಗುಣಮಟ್ಟದ ಜೇನು ಉತ್ಪಾದನೆಗೆ ಪ್ರಯತ್ನ ಮಾಡಬೇಕು. ಜೇನು ಕೃಷಿಗೆ ಬೆಳೆ ಸಾಲ, ಬೆಳೆ ವಿಮೆ ನೀಡುವ ಬಗ್ಗೆ ಸರಕಾರದ ಹಂತದಲ್ಲಿ ನಿರ್ಧಾರ ಆಗಬೇಕು. ಆ ರೀತಿಯ ಪ್ರಯತ್ನಕ್ಕೆ ತಮ್ಮ ಸಹಕಾರ ಇದೆ ಎಂದು ಹೇಳಿದರು. https://chat.whatsapp.com/EbVKVnWB6rlHT1mWtsgbch ಮಿಶ್ರ, ಪೂರಕ ಕೃಷಿಗೆ ಒತ್ತು…

Read More

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ವತಿಯಿಂದ ಕರ್ನಾಟಕದಾದ್ಯಂತ ಎಂಟು ತರಬೇತಿ ಕೇಂದ್ರಗಳ ಮೂಲಕ ನೀಡಲಾಗುವ ಆರು ತಿಂಗಳ (ಜುಲೈ -ಡಿಸೆಂಬರ್‌ ಬ್ಯಾಚ್‌) ಡಿಪ್ಲೊಮಾ ಇನ್‌ ಕೋ ಆಪರೇಟಿವ್‌ ಮ್ಯಾನೇಜ್‌ಮೆಂಟ್‌(ಡಿಸಿಎಂ) ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ದೂರಶಿಕ್ಷಣ ಡಿಸಿಎಂ ಕೋರ್ಸ್‌ ಸಹಕಾರ ಸಂಘ/ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ ಅನ್ವಯ. https://chat.whatsapp.com/EbVKVnWB6rlHT1mWtsgbch ಆರು ತಿಂಗಳ ಕೋರ್ಸ್‌ ಜುಲೈ 1ರಿಂದ ಆರಂಭವಾಗಲಿದೆ. ಸಂಪರ್ಕ ರಹಿತ ಕೋರ್ಸ್‌ ಪ್ರವೇಶಕ್ಕೆ ಅವಕಾಶವಿದೆ. ಪ್ರವೇಶ ಪಡೆದವರಿಗೆ ಅಧ್ಯಯನ ಸಾಹಿತ್ಯ ನೀಡಲಾಗುತ್ತದೆ. 10 ದಿನಗಳ ಸಂಪರ್ಕ ತರಗತಿಗಳು ನಡೆಯುತ್ತವೆ. ಪದೋನ್ನತಿ ಮತ್ತು ವಾರ್ಷಿಕ ಬಡ್ತಿಗೆ ಅವಕಾಶವಿದೆ. ಈಗಾಗಲೇ ರಾಜ್ಯದಲ್ಲಿ ಮೂವತ್ತು ಸಾವಿರ ಸಹಕಾರಿ ಉದ್ಯೋಗಿಗಳು ತರಬೇತಿಯ ಪ್ರಯೋಜನ ಪಡೆದಿದ್ದಾರೆ. ಅರ್ಜಿಗಳನ್ನು ತರಬೇತಿ ಸಂಸ್ತೆಗಳಲ್ಲಿ ಅಥವಾ ಆನ್‌ಲೈನ್‌ ಮೂಲಕ ಸಲ್ಲಿಸಬಹುದು. ಆನ್‌ಲೈನ್‌ ಲಿಂಕ್‌: www.kscfdcm.co.in ತರಬೇತಿ ನೀಡುವ ಕೇಂದ್ರಗಳು: ಧಾರವಾಡ, ಮಡಿಕೇರಿ, ಮೈಸೂರು, ಕಲಬುರಗಿ, ಬೆಂಗಳೂರು, ಶಿವಮೊಗ್ಗ, ಮೂಡುಬಿದಿರೆ ಹಾಗೂ ಬೆಳಗಾವಿ. ಇದೇ ಕೋರ್ಸ್‌ನ ರೆಗ್ಯುಲರ್‌ ಡಿಸಿಎಂ ಕೋರ್ಸ್‌ಗೂ ಆಸಕ್ತರು ಅರ್ಜಿ ಸಲ್ಲಿಸಬಹುದು.…

Read More

ನವದೆಹಲಿ: ಭಾರತದಲ್ಲಿ ಸಹಕಾರಿ ಕ್ರಾಂತಿಗೆ ಹೊಸ ಮುನ್ನುಡಿ ಬರೆಯುತ್ತಿರುವ ಸಹಕಾರ ಸಚಿವಾಲಯವು ಹೊಸತೊಂದು ಅವಕಾಶವನ್ನು ತೆರೆದಿದ್ದು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ದ ಮೂಲಕ ತನ್ನ “ಸಹಕಾರ್ ಟ್ಯಾಕ್ಸಿ ಯೋಜನೆ”ಗೆ ಪಾಲುದಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. https://chat.whatsapp.com/EbVKVnWB6rlHT1mWtsgbch ಈ ಉಪಕ್ರಮವು ಆನ್‌ಲೈನ್ ಕ್ಯಾಬ್ ಒಟ್ಟುಗೂಡಿಸುವಿಕೆ ವೇದಿಕೆಯ ವಿನ್ಯಾಸ, ಅಭಿವೃದ್ಧಿ, ಅನುಷ್ಠಾನ ಮತ್ತು ಕಾರ್ಯಾಚರಣೆಯ ಮೂಲಕ ಸಹಕಾರಿ ಆಧಾರಿತ ಚಲನಶೀಲತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಈ ಕುರಿತ ಪೂರ್ವನಿಗದಿತ ಸಭೆಯನ್ನು ಮೇ 23ರಂದು ನಿಗದಿಪಡಿಸಲಾಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 25, 2025 ಆಗಿದೆ. ಆಸಕ್ತರು ವಿವರವಾದ ಮಾಹಿತಿ ಮತ್ತು ಟೆಂಡರ್ ದಾಖಲೆಗಳನ್ನು https://ncdc.in ನಲ್ಲಿ ತೆರೆಯಬಹುದು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಸಹಕಾರಿ ಕೃಷಿಗೆ ಸಬ್ಸಿಡಿ ನೀಡಲಾಗದು ಎಂಬ ಸರಕಾರದ ನಿಯಮ ಅಸಾಂವಿಧಾನಿಕ ಬೆಂಗಳೂರು: ಸಂಘ ಸಂಸ್ಥೆಗಳನ್ನು ರಚನೆ ಮಾಡಿಕೊಂಡು ಏತ ನೀರಾವರಿ ವ್ಯವಸ್ಥೆಯ ಮೂಲಕ ಕೃಷಿ ಚಟುವಟಿಕೆ ಮಾಡುತ್ತಿರುವ ರೈತರಿಗೂ ಸಬ್ಸಿಡಿ (ಕೃಷಿ ವಿದ್ಯುತ್ ದರ ಪ್ರೋತ್ಸಾಹ ಧನ) ವಿಸ್ತರಿಸುವ ಕುರಿತು ಮುಂದಿನ ಆರು ತಿಂಗಳಲ್ಲಿ ಕಾನೂನು ತಿದ್ದುಪಡಿ ಮಾಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಜತೆಗೆ ಸಹಕಾರಿ ವ್ಯವಸಾಯ ಭಾರತೀಯ ಕೃಷಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ಸಹಕಾರಿ ಕೃಷಿಗೆ ಅಡ್ಡಿ ತರುವಂತಹ ಸರಕಾರದ ನಿಯಮ ಅಸಂವಿಧಾನಿಕ ಎಂದು ನ್ಯಾಯಾಲಯ ತೀರ್ಪಿನಲ್ಲಿ ಪ್ರಕಟಿಸಿದೆ. https://chat.whatsapp.com/EbVKVnWB6rlHT1mWtsgbch ಸಹಕಾರಿ ಸಂಘಗಳ ಮೂಲಕ ಬಳಸುವ ವಿದ್ಯುತ್ ಸರಕಾರ ನಿಗದಿಪಡಿಸಿರುವ ವಿದ್ಯುತ್ ಬಳಕೆಯ ಮಿತಿಯನ್ನು ಮೀರುತ್ತದೆ ಎಂಬ ನೆಪವೊಡ್ಡಿ ಸಬ್ಸಿಡಿ ನಿರಾಕರಿಸುವ ರಾಜ್ಯ ಸರಕಾರದ 2008ರ ಸೆಪ್ಟೆಂಬರ್ 4ರ ಆದೇಶಕ್ಕೆ ರದ್ದು ಕೋರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀಮಂತ (ತಾತ್ಯಾ) ಪಾಟೀಲ್ ನೀರು ಬಳಕೆದಾರರ ಸಂಘ ಮತ್ತು ರವಳನಾಥ್ ಏತ ನೀರು ಬಳಕೆದಾರರ ಸಂಘ…

Read More

ಮಂಗಳೂರು: ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಆಯ್ಕೆಯಾಗಿದ್ದಾರೆ. https://chat.whatsapp.com/EbVKVnWB6rlHT1mWtsgbch ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿರುವ ದೇವಿಪ್ರಸಾದ್ ಶೆಟ್ಟಿ ಅವರನ್ನು ಕಳೆದ ಮಂಗಳವಾರ ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರ ಶಿಫಾರಸಿನ ಮೇರೆಗೆ ಈ ಆಯ್ಕೆ ನಡೆದಿದೆ. ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿದ್ದಾರೆ. ಬೆಳಪು ವ್ಯವಸಾಯ ಸೇವಾ ಸಹಕಾರ ಸಂಘ, ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬೆಳವು ಗ್ರಾಪಂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನು ದ.ಕ. ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಆಡಳಿತ ಮಂಡಳಿ ಸಭೆಯಲ್ಲಿ ಅಭಿನಂದಿಸಿದರು. ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್.ಕೋಟ್ಯಾನ್, ನಿರ್ದೇಶಕರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಸುಧಾಕರ್…

Read More

ಬೆಂಗಳೂರು: ವಸತಿ ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ನ ಮಾಲೀಕರ ಸಂಘವನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯ್ದೆ(ಕೆಒಎ)ಯಡಿಯೇ ನೋಂದಾಯಿಸಬೇಕೆಂದು ಪುನರುಚ್ಚರಿಸಿದ ಕರ್ನಾಟಕ ಹೈಕೋರ್ಟ್‌, ಕರ್ನಾಟಕ ಸಹಕಾರ ಸೊಸೈಟಿಗಳ ಕಾಯ್ದೆಯಡಿ ಮಾಡಿದ್ದ ನೋಂದಣಿಯನ್ನು ರದ್ದು ಮಾಡಿದೆ. https://chat.whatsapp.com/EbVKVnWB6rlHT1mWtsgbch ಯಲಹಂಕ ವ್ಯಾಪ್ತಿಯ ಅವಲಹಳ್ಳಿಯ ರಾಮ್‌ಕಿ ಒನ್‌ ನಾರ್ತ್‌ ಅಪಾರ್ಟ್‌ಮೆಂಟ್‌ನ ಮಾಲೀಕರ ಸಂಘದ ರೇಖಾ ಕಣ್ಣನ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾ.ಕೆ.ಎಸ್‌.ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಕರ್ನಾಟಕ ಸಹಕಾರ ಸೊಸೈಟಿಗಳ ಕಾಯ್ದೆಯಡಿ 2023ರ ಅ.19ರಂದು ಸೊಸೈಟಿಯನ್ನು ನೋಂದಣಿ ಮಾಡಿಕೊಂಡು ಡೆಪ್ಯುಟಿ ರಿಜಿಸ್ಟ್ರಾರ್‌ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದೆ. ಜೊತೆಗೆ ರಾಮ್‌ಕಿ ನಾರ್ತ್‌ ಹೆಸರಿನಲ್ಲಿ ಸಂಘವನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯ್ದೆ (ಕೆಎಒ)ಯಡಿ ನೋಂದಣಿ ಮಾಡಿಸುವಂತೆ ಆದೇಶ ನೀಡಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, ಸೇಲ್‌ ಡೀಡ್‌ ಜಾರಿಯಾಗುವ ಮುನ್ನ ಅಪಾರ್ಟ್‌ಮೆಂಟ್‌ ಮಾಲೀಕರು ಐದನೇ ಪ್ರತಿವಾದಿ ಬಿಲ್ಡರ್‌ ಪರ ಡೀಡ್‌ ಆಫ್‌ ಡಿಕ್ಲರೇಷನ್‌ ಕಮ್‌ ಅಂಡರ್‌ಟೇಕಿಂಗ್‌ ಮಾಡಿಕೊಂಡಿದ್ದರು. ಅದರಂತೆ ಡೀಡ್‌ ಆಫ್‌ ಡಿಕ್ಲರೇಷನ್‌ಗೆ ಸಹಿ ಮಾಡಿ…

Read More