ಮೂಡುಬಿದಿರೆಯಲ್ಲಿ ಸ್ಥಳಾಂತರಿತ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಶಾಖೆ ಉದ್ಘಾಟಿಸಿ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಮ್ಯಾನೇಜಿಂಗ್ ಟ್ರಸ್ಟ್ ವಿವೇಕ್ ಆಳ್ವ ಅಭಿಪ್ರಾಯ
ಮೂಡುಬಿದಿರೆ: ಬಂಟ ಸಮುದಾಯದ ಸಮಾನಮನಸ್ಕರ ಹೆಮ್ಮೆಯ ಆರ್ಥಿಕ ವ್ಯವಹಾರ ಸಂಸ್ಥೆಯಾಗಿ ಹುಟ್ಟಿಕೊಂಡ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಆರ್ಥಿಕ ಶಿಸ್ತು, ಬದ್ಧತೆಯ ವ್ಯವಹಾರಗಳಿಂದ ಎಲ್ಲ ಸಮುದಾಯಗಳ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಬೆಳೆಯುತ್ತಿರುವುದು ಶ್ಲಾಘನೀಯ. 20 ವರ್ಷಗಳಲ್ಲಿ ಅಷ್ಟೇ ಸಂಖ್ಯೆಯ ಶಾಖೆಗಳನ್ನು ಹೊಂದಿರುವ ಈ ಸೊಸೈಟಿಯು ಶರವೇಗದ ಬೆಳವಣಿಗೆಯಿಂದ 50 ಶಾಖೆಗಳನ್ನು ತೆರೆಯುವಂತಾಗಲಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಇಲ್ಲಿನ ಪುರಸಭಾ ಕಾರ್ಯಾಲಯದೆದುರಿನ ಫಾರ್ಚ್ಯೂನ್ ನೀತಿ ಹೈಟ್ಸ್ ಕಟ್ಟಡದಲ್ಲಿ ಸ್ಥಳಾಂತರಿತ, ಹವಾನಿಯಂತ್ರಿತ `ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19ನೇ ಶಾಖೆಯ ನೂತನ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಕೆ. ಶ್ರೀಪತಿ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ, ಅವಿಭಜಿತ ದ.ಕ.ಜಿಲ್ಲೆಯ ಕೇಂದ್ರ ಸ್ಥಾನದಲ್ಲಿದ್ದು ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಮೂಡುಬಿದಿರೆ ನಗರದಲ್ಲಿ ಆರ್ಥಿಕ ಸಂಸ್ಥೆಗಳ ಮೂಲಕ ಪ್ರಾಮಾಣಿಕ ವ್ಯವಹಾರ ನಡೆಯುತ್ತಿರುವುದನ್ನು ಗಮನಿಸಬಹುದಾಗಿದೆ. ಇದರಲ್ಲಿ ವಿಜಯ ಕ್ರೆಡಿಟ್ ಸಹಕಾರಿ ಸಂಸ್ಥೆಗೂ ಹೆಸರಿದೆ ಎಂದರು.
ಎಂಸಿಎಸ್ ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಹೋಟೆಲ್ ಪಂಚರತ್ನ ಇಂಟರ್ ನ್ಯಾಷನಲ್‌ನ ಪ್ರವರ್ತಕ ತಿಮ್ಮಯ್ಯ ಶೆಟ್ಟಿ ಶುಭ ಹಾರೈಸಿದರು.
ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕರ‍್ಯಾರು ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಹಕರ ತುಂಬು ಪ್ರೋತ್ಸಾಹದಿಂದಾಗಿ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗಿದೆ ಎಂದರು.
ನಿರ್ದೇಶಕ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ವಂದಿಸಿದರು. ಉಪಾಧ್ಯಕ್ಷ ಜಯಂತ ಶೆಟ್ಟಿ ಕೆ., ನಿರ್ದೇಶಕ ಮಂಡಳಿಯ ಸೀತಾರಾಮ ಶೆಟ್ಟಿ ಬಿ., ಬಾಲಕೃಷ್ಣ ಪೂಂಜ ಎಚ್., ಪುಷ್ಪರಾಜ್ ಶೆಟ್ಟಿ, ಕೃಷ್ಣ ರೈ ಟಿ., ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಪುರಂದರ ಶೆಟ್ಟಿ, ಮಂಜುನಾಥ ರೈ, ರಾಜು ಶೆಟ್ಟಿ ಬೆಂಗತ್ಯಾರು, ಜಯರಾಮ ಶೆಟ್ಟಿ, ಮುಂಡಾಡಿಗುತ್ತು, ಪ್ರಾದೇಶಿಕ ಪ್ರಬಂಧಕರಾದ ಸಂತೋಷ್ ಶೆಟ್ಟಿ, ಶಾಖಾ ಪ್ರಬಂಧಕ ಅಜಿತ್ ಶೆಟ್ಟಿ ಉಪಸ್ಥಿತರಿದ್ದರು. ಮೂಡುಬಿದಿರೆಯ ಗ್ರಾಹಕರು, ಗಣ್ಯರು ಭಾಗವಹಿಸಿದ್ದರು.

