Author: admin
ಮಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ ನಿಯಮಿತ 2024-25ನೇ ಸಾಲಿನ ಸಾಮಾನ್ಯ ಸಭೆಯನ್ನು ಯೆಯ್ಯಾಡಿಯ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಶನಿವಾರ ನೆರವೇರಿಸಲಾಯಿತು. https://chat.whatsapp.com/EbVKVnWB6rlHT1mWtsgbch ಸಹಕಾರಿಯ ಅಧ್ಯಕ್ಷರಾದ ಉರ್ಬನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿಯ ಮೂಡುಬಿದಿರೆ ಶಾಖೆಯಲ್ಲಿ ನೂರು ಸ್ವಸಹಾಯ ಗುಂಪುಗಳಲ್ಲಿ 5 ಗುಂಪುಗಳಿಗೆ ಲಾಭಾಂಶವನ್ನು ನೀಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಸದಾಶಿವ ಬಂಗೇರ, ನಿರ್ದೇಶಕರಾದ ಶೈಲೇಶ್ ಮಲ್ಯ, ಎಡ್ವರ್ಡ್ ಸಿಕ್ವೇರ, ಕುಶಲ್ ಪೂಜಾರಿ, ರವಿಪ್ರಸಾದ್ ಶೆಟ್ಟಿ, ನವೀನ್‌ಚಂದ್ರ, ದಿನೇಶ್ ರಾವ್, ಸುಬ್ರಹ್ಮಣ್ಯ ರಾವ್, ಆರ್. ಕೆ ಪುರುಷೋತ್ತಮ್, ಅಶೋಕ್, ರವಿ ಸುವರ್ಣ, ಸುರೇಖಾ ಪುರುಷೋತ್ತಮ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವನ್ ಕೆ.ಎಸ್ ಉಪಸ್ಥಿತರಿದ್ದರು. ಸಹಕಾರಿ 2023-24ನೇ ಸಾಲಿನಲ್ಲಿ 13.5 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ಪ್ರಸ್ತುತ ಸಹಕಾರಿಯು 126 ಸ್ವಸಹಾಯ ಗುಂಪುಗಳನ್ನು ಹೊಂದಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಮಂಗಳೂರು: ಇಲ್ಲಿನ ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 2024-25ನೇ ಸಾಲಿನ 33ನೇ ವಾರ್ಷಿಕ ಸಾಮಾನ್ಯ ಸಭೆ ಸೊಸೈಟಿಯ ಅಧ್ಯಕ್ಷ ಎಸ್.ರಮಾನಂದ್ ಶೇಟ್ ಇವರ ಅಧ್ಯಕ್ಷತೆಯಲ್ಲಿ ದೈವಜ್ಞ ಕಲ್ಯಾಣ ಮಂಟಪದಲ್ಲಿ ನೆರವೇರಿತು. https://chat.whatsapp.com/EbVKVnWB6rlHT1mWtsgbch ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಂತೋಷ್ ಶೇಟ್ ವಾರ್ಷಿಕ ವರದಿ ಮಂಡಿಸಿದರು. 2024-25ನೇ ಸಾಲಿನಲ್ಲಿ ಸಂಘವು 55.68 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 10 ಡಿವಿಡೆಂಡ್ ಘೋಷಿಸಲಾಯಿತು. ಸಂಘವು 63.85 ಲಕ್ಷ ರೂಪಾಯಿ ಪಾಲು ಬಂಡವಾಳ, 21.96 ಕೋಟಿ ರೂಪಾಯಿ ಠೇವಣಿ ಹೊಂದಿದ್ದು ಸದಸ್ಯರಿಗೆ 19.80 ಕೋಟಿ ರೂಪಾಯಿ ಸಾಲ ನೀಡಿದೆ. ಸಂಘವು 2024- 2025ನೇ ಸಾಲಿನಲ್ಲಿ131 ಕೋಟಿ ರೂಪಾಯಿ ವ್ಯವಹಾರ ನಡೆಸಿದೆ. ಸಂಘವು ಸತತವಾಗಿ ‘ಎ’ ತರಗತಿಯ ಆಡಿಟ್ ವರ್ಗೀಕರಣ ಪಡೆಯುತ್ತ ಬಂದಿದೆ. ಸಭೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ…
ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ 2024-25ನೇ ಸಾಲಿನ 28ನೇ ವಾರ್ಷಿಕ ಮಹಾಸಭೆಯು ಭಾನುವಾರ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೊ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.2.75 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 18 ಡಿವಿಡೆಂಡ್ ಘೋಷಣೆ ಮಾಡಲಾಯಿತು. https://chat.whatsapp.com/EbVKVnWB6rlHT1mWtsgbch ಸಂಘದ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೊ ಇವರು ಸ್ವಾಗತಿಸಿ, ಸಂಘದ ಪ್ರಗತಿಯ ಅಂಕಿ ಅಂಶಗಳನ್ನು, ಮುಂದಿನ ಯೋಜನೆಗಳನ್ನು ಮಂಡಿಸಿದರು. ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ಸರ್ವರನ್ನು ಸ್ಮರಿಸುತ್ತಾ, ಗತ ಸಾಲಿನಲ್ಲಿ ದೈವಾಧೀನರಾದಂತಹ ಸಂಘದ ಸ್ಥಾಪಕ ಅಧ್ಯಕ್ಷರಾದ ದಿ.ಲಿಗೋರಿ ಲೋಬೊ ಹಾಗೂ ಸಂಘದಲ್ಲಿ ಸೇವೆ ಸಲ್ಲಿಸಿ ದೈವಾಧೀನರಾದ ನಿರ್ದೇಶಕರಿಗೆ ಹಾಗೂ ಸದಸ್ಯರಿಗೆ ಸಂತಾಪ ಸೂಚಿಸಿದರು. ಸಂಘವು ಪ್ರಸಕ್ತ ವರ್ಷದಲ್ಲಿ ರೂ.930.71 ಕೋಟಿ ವ್ಯವಹಾರ ನಡೆಸಿ, ಮಾರ್ಚ್ ಅಂತ್ಯಕ್ಕೆ ರೂ.3.87 ಕೋಟಿ ಪಾಲು ಬಂಡವಾಳ, ರೂ.121.69 ಕೋಟಿ ಠೇವಣಿ, ರೂ. 110.78 ಕೋಟಿ ಸದಸ್ಯರ ಹೊರಬಾಕಿ ಸಾಲದೊಂದಿಗೆ,…
ಮಂಗಳೂರು: ಇಲ್ಲಿನ ಜನತಾ ಬಜಾರ್ ಬಿಲ್ಡಿಂಗ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ತುಳುನಾಡು ವಿವಿಧೋದ್ದೇಶ ಸಹಕಾರ ಸಂಘದ 16ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಂಘದ ಅಧ್ಯಕ್ಷ ನಾಗಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದಲ್ಲಿ 63 ಲಕ್ಷ ರೂ. ಪಾಲು ಬಂಡವಾಳವಿದ್ದು, 3.93 ಕೋಟಿ ರೂ. ಠೇವಣಿ ಇದೆ. 2.03 ಕೋಟಿ ರೂ. ಸಾಲ ವಿತರಿಸಲಾಗಿದೆ. 51 ಲಕ್ಷ ರೂ. ವಿವಿಧ ನಿಧಿಗಳಿವೆ. ವರದಿ ವರ್ಷದಲ್ಲಿ 15.38 ಲಕ್ಷ ರೂ. ಲಾಭ ದಾಖಲಿಸಿದ್ದು, ಶೇ.12 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘದ ಉಪಾಧ್ಯಕ್ಷ ಸಂಜೀವ ಎಚ್., ನಿರ್ದೇಶಕರಾದ ಬಿ.ಪಿ ಹರೀಶ್ ಕುಮಾರ್, ಚಂಚಲಾ ತೇಜೋಮಯ, ಕೃತಿನ್ ಕುಮಾರ್, ಪದ್ಮನಾಭ ಕೋಟ್ಯಾನ್, ಪರಮೇಶ್ವರ ನಾಯ್ಕ್, ಆನಂದ ಪಾಂಗಾಳ, ಶಂಕರ ಕೃಷ್ಣ ಭಟ್, ಲೋಕನಾಥ ಪೂಜಾರಿ ಬಿ., ವಿಶ್ವನಾಥ ಅಮೀನ್ ಕಲ್ಲಾಪು, ಪ್ರತಿಭಾ ಶೆಟ್ಟಿ, ರಮಣಿ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ಭಾಗವಹಿಸಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694…
ಬಾಗಲಕೋಟೆ: ಇಲ್ಲಿನ ಶ್ರೀ ಕೂಡಲಸಂಗಮೇಶ್ವರ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 50 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಉಪಾಧ್ಯಕ್ಷ ಬಸಪ್ಪ ಟಕ್ಕಳಕಿ ತಿಳಿಸಿದರು. https://chat.whatsapp.com/EbVKVnWB6rlHT1mWtsgbch ಬಾಗಲಕೋಟೆಯಲ್ಲಿ ಭಾನುವಾರ ಜರುಗಿದ ಸಂಘದ 20ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ 2024 -25ರ ಸಾಲಿನಲ್ಲಿ 2030 ಸದಸ್ಯರನ್ನು ಹೊಂದಿದ್ದು, 18 ಕೋಟಿ ರೂ.ಗಳ ದುಡಿಯುವ ಬಂಡವಾಳವಿದೆ. 11 ಕೋಟಿ ರೂ.ಗೂ ಹೆಚ್ಚು ಹಣ ಸಾಲದ ರೂಪದಲ್ಲಿ ಸದಸ್ಯರಿಗೆ ನೀಡಲಾಗಿದೆ. ಒಂದೂವರೆ ಕೋಟಿ ಶೇರು ಬಂಡವಾಳವನ್ನು ಸಂಘ ಹೊಂದಿದೆ. ಸಂಘ ಪ್ರಾರಂಭವಾಗಿ 20 ವರ್ಷ ಪೂರೈಸಿದೆ. ಸಂಘದ ಅಮೋಘ ಬೆಳವಣಿಗೆ, ಸದಸ್ಯರುಗಳ ಸಹಕಾರ, ಹಗಲಿರುಳು ಶ್ರಮಿಸಿದ ಸಿಬ್ಬಂದಿ ವರ್ಗ, ನಿರ್ದೇಶಕ ಮಂಡಳಿಯ ಅವಿರತ ಪ್ರಯತ್ನದ ಫಲವಾಗಿ ಅತ್ಯಂತ ಕಡಿಮೆ ಅವದಿಯಲ್ಲಿ ಅತಿ ಶೀಘ್ರ ಪ್ರಗತಿಗೆ ಮುನ್ನೋಟ ಬರೆದು ಅದಕ್ಕೆ ಅನುಗುಣವಾಗಿ ಗುರಿ ಮುಟ್ಟಿದ್ದು ಸಂತೋಷವಾಗಿದೆ. 2005ರಲ್ಲಿ ಕೇವಲ ಐದು ಲಕ್ಷಗಳಿಂದ ಪ್ರಾರಂಭವಾಗಿದ್ದ…
ಮಂಗಳೂರು: ಸೈಂಟ್ ಅಲ್ಪೋನ್ಸಾ ಸೌಹಾರ್ದ ಸಹಕಾರಿ ಸಂಘದ ಎರಡನೇ ವಾರ್ಷಿಕ ಮಹಾಸಭೆ ಕಂಕನಾಡಿಯ ಸೈಂಟ್ ಅಲ್ಪೋನ್ಸಾ ಚರ್ಚ್ ಹಾಲ್‌ನಲ್ಲಿ ಭಾನುವಾರ ನಡೆಯಿತು. https://chat.whatsapp.com/EbVKVnWB6rlHT1mWtsgbch ಸೈಂಟ್ ಅಲ್ಪೋನ್ಸಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಮನೋಜ್ ಪಿ.ವಿ, ರೆ.ಫಾದರ್ ಅಗಸ್ಟಿನ್ ಪಿ ಹಾಗೂ ಎಲ್ಲಾ ನಿರ್ದೇಶಕರು ಸೇರಿ ದೀಪ ಬೆಳಗಿಸಿದರು. ಸಹಕಾರಿಯ ನಿರ್ದೇಶಕರಾದ ಜೇಮ್ಸ್ ಮುಂಡಟ್ಟು ವರ್ಕೀ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಟಿ.ಬಂಗೇರ ವಾರ್ಷಿಕ ಸಭೆಯ ಸೂಚನಾ ಪತ್ರ ಮಂಡಿಸಿದರು. ಸಹಕಾರಿಯ ಸಿಬ್ಬಂದಿ ವೇದಾವತಿ ಹಿಂದಿನ ಸಭೆಯ ನಡಾವಳಿಗಳನ್ನು ಮಂಡಿಸಿದರು. ನಿರ್ದೇಶಕರಾದ ಜಾಯ್ ವರ್ಗೀಸ್ ೨೦೨೪-೨೫ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡಿಸಿದರು. ನಿರ್ದೇಶಕ ಜಾರ್ಜ್ ಜೋಸೆಫ್ ಕೆ ೨೦೨೪-೨೫ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಹಾಗೂ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಸಹಕಾರಿಯ ಅಧ್ಯಕ್ಷ ಮನೋಜ್ ಪಿ.ವಿ, ಅಧ್ಯಕ್ಷೀಯ ಭಾಷಣದಲ್ಲಿ ಸಹಕಾರಿಯ ಏಳಿಗೆಯು ಸಹಕಾರಿಯ ಸದಸ್ಯರ ಸಹಕಾರದಿಂದ ಆಗುತ್ತದೆ. ಸದಸ್ಯರ ಸಹಕಾರ ಅತೀ ಮುಖ್ಯವೆಂದು ಹೇಳಿದರು. ಸಹಕಾರಿಯ ಮಾರ್ಗದರ್ಶಕರಾದ ಫಾದರ್ ಅಗಸ್ಟಿನ್ ಪಿ…
ಕಾರ್ಕಳ: ಇಲ್ಲಿನ ಕೊಂಕಣ್ ಕ್ಯಾಥೋಲಿಕ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಕಾರ್ಕಳ ಕ್ರಿಸ್ಟ್ ಕಿಂಗ್ ಚರ್ಚ್ ಸಭಾಭವನದಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಹಕಾರಿಯ ಅಧ್ಯಕ್ಷರಾದ ಡಾ|ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ರೋಶನ್ ಡಿಸೋಜ ವರ್ಷದ ವರದಿ ಮಂಡಿಸಿದರು. ಅಧ್ಯಕ್ಷ ಡಾ. ಪೀಟರ್ ಫರ್ನಾಂಡಿಸ್ ಮಾತನಾಡಿ, ಸಹಕಾರಿಯು ಹಿಂದಿನ ವರ್ಷ ರೂ. 81 ಕೋಟಿ ವ್ಯವಹಾರ ಮಾಡಿದ್ದು, ಮುಂದಿನ ವರ್ಷ 100 ಕೋಟಿ ರೂ. ವ್ಯವಹಾರ ಮಾಡುವ ಯೋಜನೆ ಮಾಡಲಾಗಿದೆ. ಅಲ್ಲದೆ ವರ್ಷದ ಠೇವಣಿ ಹಿಂದಿನ ವರ್ಷದಿಂದ 12% ವೃದ್ದಿಯಾಗಿರುತ್ತದೆ. ಸದಸ್ಯರಿಗೆ 10% ಡಿವಿಡೆಂಡ್ ನೀಡುವುದರ ಕುರಿತು ಘೋಷಿಸಿದರು. ನಂತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಾರ್ಕಳ ವಲಯದ 33 ಕ್ರೈಸ್ತ ವಿದ್ಯಾರ್ಥಿಗಳನ್ನು ಸನ್ಮಾನಿಲಾಯಿತು. ಮುಖ್ಯ ಅತಿಥಿಯಾಗಿ ಮಿಯಾರು ಚರ್ಚ್ ಧರ್ಮಗುರುಗಳಾದ ಅ|ವಂ| ಕ್ಯಾನೂಟ್ ಬರ್ಬೋಜ, ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳ ಪಾಲನಾ ಸಮಿತಿ ಉಪಾಧ್ಯಕ್ಷರಾದ ನೋವೆಲ್ ಡಿಸಿಲ್ವ…
ಹಂಪನಕಟ್ಟೆಯಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣಾ, ದಂತ ತಪಾಸಣಾ ಶಿಬಿರದಲ್ಲಿ ಲಯನ್ ನರಸಿಂಹ ಪೈ ಅಭಿಮತ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಂಪನಕಟ್ಟ ಶಾಖೆ ಮತ್ತು ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇವರ ಜಂಟಿ ಸಹಯೋಗದೊಂದಿಗೆ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸನ್ ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣಾ ಶಿಬಿರವು ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನ ಕಟ್ಟಡದ ಎರಡನೇ ಮಹಡಿಯಲ್ಲಿ ಇತ್ತೀಚೆಗೆ ಜರುಗಿತು. https://chat.whatsapp.com/EbVKVnWB6rlHT1mWtsgbch ಕಾರ್ಯಕ್ರಮವನ್ನು ನಿವೃತ್ತ ಸಹಕಾರಿ ಸಂಘಗಳ ಉಪನಿಬಂಧಕ ಚಂದ್ರಶೇಖರ್ ಸುವರ್ಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇದರ ಅಧ್ಯಕ್ಷ ಲಯನ್ ನರಸಿಂಹ ಪೈ ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮುಂದಾಳತ್ವದಲ್ಲಿ…
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಂಪೂರ್ಣ ಬೆಂಬಲ, ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಸಹಕಾರಿಗಳು ಬದ್ಧ: ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತಿರುವ ಧರ್ಮಸ್ಥಳದ ರಕ್ಷಣೆಗೆ ಎಲ್ಲರೂ ಕಟಿಬದ್ಧ: ಡಾ.ಎಂ ಮೋಹನ ಆಳ್ವ ಭಕ್ತರು, ಅಭಿಮಾನಿಗಳ ಪ್ರೀತಿ-ವಿಶ್ವಾಸ, ಗೌರವ, ಅಭಿಮಾನದಿಂದ ಹೆಚ್ಚಿನ ಉತ್ಸಾಹ: ಡಾ.ಡಿ.ವೀರೇಂದ್ರ ಹೆಗ್ಗಡೆ ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಹಲವು ರೀತಿಯ ಷಡ್ಯಂತ್ರಗಳನ್ನು ವಿರೋಧಿಸಿ ಭಾನುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಸಹಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮಜಾಗೃತಿ ಯಾತ್ರೆ ಕೈಗೊಂಡು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಸೂಚಿಸಿ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬ ಸಂದೇಶ ಸಾರಿದರು. https://chat.whatsapp.com/EbVKVnWB6rlHT1mWtsgbch ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ಸಹಕಾರಿಗಳು ಜೊತೆ ಸೇರಿ ಹಮ್ಮಿಕೊಂಡ ಧರ್ಮ ಜಾಗೃತಿ ಯಾತ್ರೆಯು ಆಯಾ ಕೇಂದ್ರಗಳಿಂದ ಸಾವಿರಾರು ವಾಹನಗಳ ಮೂಲಕ ಮಧ್ಯಾಹ್ನ 12 ಗಂಟೆಗೆ ಉಜಿರೆ ತಲುಪಿತು. ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ…
ಮಂಗಳೂರು: ಎಂಸಿಸಿ ಬ್ಯಾಂಕ್ ಮಂಗಳೂರು ತನ್ನ 12ನೇ ಎಟಿಎಂ ಅನ್ನು ಶನಿವಾರ ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟಿಸಿತು. https://chat.whatsapp.com/EbVKVnWB6rlHT1mWtsgbch ಈ ಎಟಿಎಂ ಅನ್ನು ಎಂಆರ್‌ಪಿಎಲ್‌ನ ಕಾರ್ಪೊರೇಟ್ ಬ್ರ‍್ಯಾಂಡಿoಗ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ ಚೀಫ್ ಜನರಲ್ ಮ್ಯಾನೇಜರ್ ಡಾ| ರುಡಾಲ್ಫ್ ಜೋಯರ್ ನೊರೊನ್ಹಾ ಉದ್ಘಾಟಿಸಿದರು. ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್ ಧರ್ಮಗುರು ರೆವರೆಂಡ್ ಫಾದರ್ ಜೋಕಿಮ್ ಫೆರ್ನಾಂಡಿಸ್ ಅವರು ಎಟಿಎಂ ಅನ್ನು ಆಶೀರ್ವದಿಸಿದರು. ಹೊಸದಾಗಿ ಉದ್ಘಾಟನೆಗೊಂಡ ಎಟಿಎಂನಿoದ ಮೊದಲ ನಗದು ಹಿಂಪಡೆಯುವಿಕೆಯನ್ನು ಬಳ್ಕುಂಜೆಯ ಸೇಂಟ್ ಪೌಲ್ಸ್ ಚರ್ಚ್ ಧರ್ಮಗುರು ರೆವರೆಂಡ್ ಫಾದರ್ ಪೌಲ್ ಸಿಕ್ವೇರ ಮಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಎನ್‌ಆರ್‌ಐ, ಕಥೋಲಿಕ್ ಸಭಾ ಕಿನ್ನಿಗೋಳಿಯ ಕಾರ್ಯದರ್ಶಿ ಹಾಗೂ ವಿನ್ಸೆಂಟ್ ಡಿ ಪಾಲ್ ಲೆಕ್ಕಪರಿಶೋಧಕ ಜೆರೋಮ್ ಡಿ’ಅಲ್ಮೇಡಾ ಮತ್ತು ಕಿನ್ನಿಗೋಳಿಯ ಮೆಸ್ಸರ್ಸ್ ಚೈತನ್ಯ ಮೆಡಿಕಲ್ಸ್ ಮತ್ತು ಸಾಗರಿಕಾ ಅರೇಂಜರ್ಸ್ ಮಾಲೀಕ ಧನಂಜಯ ಪಿ. ಶೆಟ್ಟಿಗಾರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಮತ್ತು ಶಾಖಾ ವ್ಯವಸ್ಥಾಪಕ ಅನಿಲ್ ಆರ್.ಡಿಸೋಜ ಹಾಜರಿದ್ದರು. ಅಧ್ಯಕ್ಷತೆಯನ್ನು ಎಂಸಿಸಿ…
