ಮೂಲ್ಕಿ ಶಾಖೆಯ ಗ್ರಾಹಕರ ಸಭೆಯಲ್ಲಿ ಸಂಘದ ಸದಸ್ಯೆ ಸರೋಜಿನಿ ಶ್ಲಾಘನೆ
ಮೂಲ್ಕಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮೂಲ್ಕಿ ಶಾಖೆಯು ಪ್ರಾರಂಭವಾದ ದಿನದಿಂದ ಇಂದಿನವರೆಗೂ ಉತ್ತಮ ರೀತಿಯಲ್ಲಿ ಗ್ರಾಹಕ ಸ್ನೇಹಿ ವ್ಯವಹಾರ ನಡೆಸುತ್ತಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತಮ್ಮ ಗ್ರಾಹಕರಿಗೆ ತ್ವರಿತಗತಿಯ ಸೇವೆಯನ್ನು ಒದಗಿಸುತ್ತಿದೆ” ಎಂದು ಸಂಘದ ಸದಸ್ಯರಾದ ಸರೋಜಿನಿ ಶ್ಲಾಘಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮೂಲ್ಕಿ ಶಾಖೆಯ 13ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶೀನ ಪೂಜಾರಿ, ಎಚ್.ವಾಸು ಪೂಜಾರಿ, ಸರೋಜಿನಿ, ಕುಶಾಲ ಎಸ್.ಕುಕ್ಯಾನ್ ಹಾಗೂ ಪ್ರಕಾಶ್ ಸುವರ್ಣ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಶೀನ ಪೂಜಾರಿ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅವರ ಮುಂದಾಳತ್ವದಲ್ಲಿ ನಿರಂತರವಾಗಿ ಲಾಭ ಗಳಿಸುತ್ತಿದೆ. ಸತತವಾಗಿ ಸದಸ್ಯರಿಗೆ ಡಿವಿಡೆಂಡ್ ನೀಡುತ್ತಿದ್ದು, ಕಳೆದ ಆರ್ಥಿಕ ಸಾಲಿನಲ್ಲಿ ಗ್ರಾಹಕರಿಗೆ ಶೇ.15 ಡಿವಿಡೆಂಡ್ ನೀಡಿರುವುದು ಸಂಘದ ಆರ್ಥಿಕ ಪ್ರಗತಿಯ ಸಂಕೇತವಾಗಿದೆ ಎಂದು ಹೇಳಿದರು. ಸಂಘದ ಸದಸ್ಯ ಹರಿಶ್ಚಂದ್ರ ಪಿ. ಸಾಲ್ಯಾನ್ ಮಾತನಾಡಿ, ಸಂಘವು ಪ್ರಾರಂಭಗೊಂಡ ಅತೀ ಕಡಿಮೆ ಅವಧಿಯಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೆ ಹೊರಜಿಲ್ಲೆಯಲ್ಲೂ 33 ಶಾಖೆಗಳನ್ನು ತೆರೆದು ಪ್ರಗತಿಪಥದತ್ತ ಸಾಗುತ್ತಿದೆ ಎಂದು ಹೇಳಿದರು. ಸಂಘದ ಗ್ರಾಹಕರಾದ ಮಾಧವ ಸನಿಲ್, ಲ್ಯಾನ್ಸಿ ಡಿ ಅಲ್ಮೇಡಾ, ಶಶಿಕಲ ಎಸ್ ಅಮೀನ್, ರಾಜೇಶ್ ಕುಮಾರ್, ಜಯ ಸಿ ಪೂಜಾರಿ, ರವೀಶ್ ಕಾಮತ್, ಸತೀಶ್ ಕುಮಾರ್ ಮತ್ತಿತ್ತರರು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘದ ಮೂಲ್ಕಿ ಶಾಖೆಯು 13ನೇ ವರ್ಷದ ಸಂಭ್ರಮದೊಂದಿಗೆ ಮುನ್ನಡೆಯುತ್ತಿದೆ. ಈ ಪ್ರಯುಕ್ತ ಸದಸ್ಯ ಗ್ರಾಹಕರಿಗೆ ಚಿನ್ನಾಭರಣಗಳಿಗೆ ಅಧಿಕ ಮೌಲ್ಯದೊಂದಿಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡುತ್ತಿದ್ದೇವೆ ಹಾಗೂ ಸಂಘದ ಎಲ್ಲಾ ಶಾಖೆಯಲ್ಲಿ ಇ -ಸ್ಟ್ಯಾಂಪಿಂಗ್ ಸೇವಾ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ. ಸಂಘವು ಮಾರ್ಚ್ ವರ್ಷಾಂತ್ಯಕ್ಕೆ 182 ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲ ನೀಡಿದೆ. ಈಗಾಗಲೇ ಸಂಘವು ಈ ಸಾಲಿನ ಅರ್ಧ ಆರ್ಥಿಕ ವರ್ಷದಲ್ಲಿ 153 ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲ ವಿತರಿಸಿದ್ದು, ಚಿನ್ನಾಭರಣ ಸಾಲ ನೀಡುವುದರಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು. ಚಿನ್ನಾಭರಣ ಸಾಲ ಎಲ್ಲರಿಗೂ ಅಗತ್ಯ ಇರುವಂತಹದು. ಅದರ ಸೌಲಭ್ಯವನ್ನು ಕೂಡ ನಾವು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ೦% ಸೇವಾ ಶುಲ್ಕದಲ್ಲಿ ನೀಡುತ್ತಿದ್ದೇವೆ. ಸಂಸ್ಥೆಯು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಹೊಂದಿರುತ್ತದೆ. ಸದಸ್ಯರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಆರೋಗ್ಯ ಶಿಬಿರವನ್ನು ಸಹ ನಿರಂತರವಾಗಿ ನಮ್ಮ ಸಂಘ ಹಮ್ಮಿಕೊಂಡು ಬರುತ್ತಿದೆ. ಸಂಘದಲ್ಲಿ 2 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸುತ್ತಿರುವ ಪಿಗ್ಮಿ ಸಂಗ್ರಾಹಕರಿಗೆ ಸಂಘದ ವತಿಯಿಂದ ಉಚಿತ ಆರೋಗ್ಯ ವಿಮೆಯ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ಸಂಘದ ನಿರ್ದೇಶಕರಾದ ಗೋಪಾಲ್ ಎಂ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು. ಶಾಖೆಯ ಸಿಬ್ಬಂದಿ ವರುಣ್ ರಾಜ್ ಸ್ವಾಗತಿಸಿ, ಶ್ವೇತಾ ವಂದಿಸಿದರು. ಶಾಖಾಧಿಕಾರಿ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

