Author: admin

ಉಡುಪಿ: ಇಲ್ಲಿನ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಬ್ಯಾಂಕಿನ ಸದಸ್ಯರ ಮಕ್ಕಳು 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85 ಹಾಗೂ 2023-2024ನೇ ಸಾಲಿನ ಅಂತಿಮ ಪದವಿಯಲ್ಲಿ ಶೇ.75 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇ.70 ಅಂಕ ಗಳಿಸಿದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಬ್ಯಾಂಕಿನ ಅಧ್ಯಕ್ಷ ಶಾಸಕ ಯಶಪಾಲ್ ಎ.ಸುವರ್ಣ ತಿಳಿಸಿದ್ದಾರೆ. ಇತರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95, ದ್ವಿತೀಯ ಪಿಯುಸಿ ಶೇ.90 2023-24ರ ಪದವಿಯಲ್ಲಿ ಶೇ.80 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇ.75 ಅಂಕ ಪಡೆದಿರಬೇಕು. ಅರ್ಜಿಗಳು ಬ್ಯಾಂಕಿನ ಎಲ್ಲ ಶಾಖೆ ಹಾಗೂ ಅಧಿಕೃತ ವೆಬ್ ಸೈಟ್ www.mahalakshmi coopbank.com <http://www.mahalakshmicoop bank.com ನಲ್ಲಿ ಲಭ್ಯವಿದೆ. ಜುಲೈ 19ರಂದು ಅರ್ಜಿ ಸಲ್ಲಿಸಲು ಕಡೇ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್:…

Read More

ಕಲಬುರಗಿ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ರಾಜ್ಯಾಧ್ಯಕ್ಷ ನಂಜುಂಡ ಸ್ವಾಮಿ ಇವರು ಜೂನ್ 12ರಂದು ಕಲಬುರಗಿ ಬ್ರಹ್ಮಪುರ ಕೊಂಡೇದಗಲ್ಲಿಯ ಆದಿಶಕ್ತಿ ಸೌಹಾರ್ದ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು. https://chat.whatsapp.com/EbVKVnWB6rlHT1mWtsgbch ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರಾದ ರಮೇಶ ಹೊಸಪೇಟಿ, ಸುಧಾ ಮೂಕಿ, ಬಸಮ್ಮ ಹಿರೇಮಠ, ನಿಜಲಿಂಗಪ್ಪ ಪಾಟೀಲ, ಮಲ್ಲಿನಾಥ ಪಾಟೀಲ, ಸೂರ್ಯಕಾಂತ ಹೊಸಪೇಟೆ, ಶರಣು ಕಲಶೆಟ್ಟಿ, ಬಾಲಚಂದ್ರ ನೆಲ್ಲೂರ ಮತ್ತು ಬಸವರಾಜ ಅಷ್ಟಗಿ ಉಪಸ್ಥಿತರಿದ್ದರು. ಅಧ್ಯಕ್ಷರು ಸಂಸ್ಥೆಯ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸುರತ್ಕಲ್‌ ಸ್ಥಳಾಂತರಿತ ಶಾಖೆಗೆ ಚಾಲನೆ ನೀಡಿ ಗಣ್ಯರ ಅಭಿಪ್ರಾಯ ಸುರತ್ಕಲ್‌: ಸುರತ್ಕಲ್ ಪೂರ್ವ ಆರ್ಕೇಡ್‌ನಲ್ಲಿ 2013ರಿಂದ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಯನ್ನು ಶುಕ್ರವಾರ ಸುರತ್ಕಲ್ ಮುಖ್ಯ ರಸ್ತೆಯಲ್ಲಿರುವ ವಿಜಯ್ ಮಹಲ್ ಕಾಂಪ್ಲೆಕ್ಸ್‌ನ ಸುಸಜ್ಜಿತ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಳಿಸಲಾಯಿತು. https://chat.whatsapp.com/EbVKVnWB6rlHT1mWtsgbch ಕಂಕನಾಡಿ ಗರಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುರತ್ಕಲ್‌ ಶಾಖೆ ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರ ಆಗಿರುವುದು ತುಂಬ ಸಂತೋಷದ ವಿಷಯ. ನಮ್ಮದೇ ಸೊಸೈಟಿ ಆಗಬೇಕೆಂಬ ನಮ್ಮ ಮಹದಾಸೆಗೆ ಆತ್ಮಶಕ್ತಿ ಸಹಕಾರಿ ಶಕ್ತಿ ನೀಡಿದೆ. ಈ ಸಂಸ್ಥೆಯು ಇಷ್ಟು ವೇಗವಾಗಿ 33 ಶಾಖೆಗಳನ್ನು ಮಾಡಿರುವುದು ಅಸಾಮಾನ್ಯ ಸಾಧನೆ. ಇದರಲ್ಲಿ ಚಿತ್ತರಂಜನ್‌ ಬೋಳಾರ್‌ ಅವರ ಕ್ರಿಯಾಶೀಲ ನಾಯಕತ್ವ, ಎಲ್ಲ ಸಿಬ್ಬಂದಿಗಳ ಅವಿರತವಾದ ಶ್ರಮ ಮತ್ತು ಆಡಳಿತ ಮಂಡಳಿಯವರ ಸಹಕಾರ ಇದೆ ಎಂದು ಶ್ಲಾಘಿಸಿದರು. ಗಣಕೀಕೃತ ವ್ಯವಸ್ಥೆಗೆ ಚಾಲನೆ ನೀಡಿದ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ,…

Read More

ಉಡುಪಿ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಹಾಗೂ ಸಾಮಾನ್ಯ ಸೇವಾ ಕೇಂದ್ರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯದ ಸೌಹಾರ್ದ ಸಹಕಾರಿಗಳ ಸಾಮಾನ್ಯ ಸೇವಾ ಕೇಂದ್ರಗಳ ಉದ್ಘಾಟನಾ ಸಮಾರಂಭ ಜೂನ್‌ 23ರಂದು ಬೆಳಗ್ಗೆ 10.30ಕ್ಕೆ ಉಡುಪಿಯ ಹೋಟೆಲ್‌ ಡಯಾನಾದಲ್ಲಿ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಉಡುಪಿಯ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಸಿಎ ಬಿ.ನಂಜನಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಸಿಇಸಿ ಇ-ಗವರ್ನೆನ್ಸ್‌ ಸರ್ವೀಸಸ್‌ ಇಂಡಿಯಾದ ಸ್ಟೇಟ್‌ ಹೆಡ್‌ ಶಕೀಬ್‌ ಅಹ್ಮದ್‌, ಬಿ2ಸಿ ಹೆಡ್‌ ರಜತ್‌ ಟಿ.ಕೆ, ಸಹಕಾರ ಸಂಘಗಳ ಉಡುಪಿ ಜಿಲ್ಲಾ ಉಪನಿಬಂಧಕಿ ಲಾವಣ್ಯ ಕೆ.ಸಿ.ಎಸ್‌, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜುನಾಥ ಎಸ್.ಕೆ, ಭಾರತಿ ಜಿ.ಭಟ್‌, ಸೌಹಾರ್ದ ಸಹಕಾರಿಗಳ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಪಿ.ಜಗನ್ನಾಥ ಶೆಟ್ಟಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಪಾಧ್ಯಕ್ಷ ಎ.ಆರ್.ಪ್ರಸನ್ನ ಕುಮಾರ್, ವ್ಯವಸ್ಥಾಪಕ…

Read More

ಹಿರೇಕೆರೂರ: ಹಿರೇಕೆರೂರ ತಾಲೂಕ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಅಧೀನ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಜೂನ್‌ 21ರಂದು ಬೆಳಗ್ಗೆ 9.45ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಹಿರೇಕೆರೂರ ಸಿ.ಇ.ಎಸ್.ಕ್ಯಾಂಪಸ್‌ನಲ್ಲಿ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಶಾಸಕ ಯು.ಬಿ.ಬಣಕಾರ ಉದ್ಘಾಟಿಸಲಿದ್ದಾರೆ. ಹಿರೇಕೆರೂರ ಹೆಚ್.ಟಿ.ವಿ.ಎಸ್.ಎಸ್.ಬಿ ಅಧ್ಯಕ್ಷ ಎಸ್.ಬಿ.ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರೇಕೆರೂರ ಹೆಚ್.ಟಿ.ವಿ.ಎಸ್.ಎಸ್.ಲಿ ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ, ತಹಶೀಲ್ದಾರ್‌ ಪ್ರಭಾಕರ ಹೆಚ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಹಿರೇಕೆರೂರ ಹೆಚ್.ಟಿ.ವಿ.ಎಸ್.ಎಸ್.ಬಿ ಉಪಾಧ್ಯಕ್ಷ ಎಂ.ವಿ.ಹೊಂಬರಡಿ, ಬಿ.ಆರ್.ಟಿ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ಬಿ.ತಂಬಾಕದ, ಹೆಚ್.ಟಿ.ವಿ.ಎಸ್.ಎಸ್.ಲಿ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ ಪಾಲ್ಗೊಳ್ಳಲಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಮಂಗಳೂರು: ಸುರತ್ಕಲ್ ಪೂರ್ವ ಆರ್ಕೇಡ್‌ನಲ್ಲಿ 2013ರಿಂದ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಯು ಸುರತ್ಕಲ್ ಮುಖ್ಯ ರಸ್ತೆಯಲ್ಲಿರುವ ವಿಜಯ್ ಮಹಲ್ ಕಾಂಪ್ಲೆಕ್ಸ್‌ನ ಸುಸಜ್ಜಿತ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಳ್ಳಲಿದೆ. ಜೂನ್ 20ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಸ್ಥಳಾಂತರ ಶಾಖೆಯನ್ನು ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ಅಧ್ಯಕ್ಷರಾದ ಚಿತ್ತರಂಜನ್ ಕೆ. ಉದ್ಘಾಟಿಸಲಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಹಕಾರ ತತ್ವದ ಮೂಲಕ ಜನಸೇವೆಯ ಸದುದ್ದೇಶದ ಧ್ಯೇಯದೊಂದಿಗೆ ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ 30.01.2012ರಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವರಾದ ಬಿ.ಜನಾರ್ದನ ಪೂಜಾರಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು, ದಶಮಾನೋತ್ಸವ ಸಂದರ್ಭ ಪಡೀಲ್‌ನಲ್ಲಿ ಸ್ವಂತ ಆಡಳಿತ ಹಾಗೂ ಪ್ರಧಾನ ಕಚೇರಿಯನ್ನು ಹೊಂದಿ, ಕಾರ್ಯನಿರ್ವಹಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉನ್ನತ ಸಾಧನೆಯ ಹಾದಿಯಲ್ಲಿದೆ. ದಿನಾಂಕ 17.01.2020ರಂದು ಸ್ವಂತ ನಿವೇಶನದಲ್ಲಿ ಸ್ವಂತ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸವೂ ಬಿ.ಜನಾರ್ದನ ಪೂಜಾರಿಯವರಿಂದ ನೆರವೇರಿ, 30.01.2022ರಂದು ಲೋಕಾರ್ಪಣೆಗೊಂಡಿದೆ. ಸಂಘದ ದಶಮಾನೋತ್ಸವದ ಸಂದರ್ಭ ಸುಸಜ್ಜಿತವಾದ ಹವಾನಿಯಂತ್ರಿತ ಸ್ವಂತ ಕಟ್ಟಡ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯ ಏಕಮಾತ್ರ ವಿವಿಧೋದ್ದೇಶ…

Read More

ಬ್ರಹ್ಮಾವರ: ಇಲ್ಲಿನ ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ಇದರ ವತಿಯಿಂದ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹೇರಾಡಿ ಇದರ 1ರಿಂದ 7ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಬುಧವಾರ ಜರುಗಿತು. https://chat.whatsapp.com/EbVKVnWB6rlHT1mWtsgbch ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ರತ್ನಾಕರ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಅನನ್ಯ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ರತ್ನಾಕರ ಶೆಟ್ಟಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಘ, ನಿರ್ದೇಶಕರಾದ ರಾಜೇಂದ್ರ, ಶಾಲಾ ಮುಖ್ಯ ಶಿಕ್ಷಕ ರತ್ನಾಕರ ಶೆಟ್ಟಿ, ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷ ಮೋಹನ್ ಪೂಜಾರಿ, ಸಹ ಸಂಚಾಲಕ ಜಯಾನಂದ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪೋಷಕರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.ಶಾಲಾ ಸಂಚಾಲಕ ಹಾಗೂ ಮುಖ್ಯ ಶಿಕ್ಷಕರು ಸಹಕಾರಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಸಹಕಾರಿಯ ಸಿಇಒ ಮೇಘ ಶಾಲಾ ಮಕ್ಕಳಿಗೆ ಶುಭ ಹಾರೈಸಿದರು.

Read More

ಕಾರ್ಕಳದ ಕುಂಟಾಡಿಯಲ್ಲಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಿಸ್ತರಣಾ ಕೌಂಟರ್ ಉದ್ಘಾಟನೆ ಮಂಗಳೂರು: ಸಹಕಾರಿ ಕ್ಷೇತ್ರವು ಜನರ ಬಳಿ ತೆರಳಿ ಸಮರ್ಪಕ ಸೇವೆ ನೀಡುವುದರಿಂದ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ವಿಭಿನ್ನವಾಗಿದೆ. ಗ್ರಾಮಾಂತರ ಪ್ರದೇಶದ ಜನರಿಗೆ ನೆರವಾಗುವ ಉದ್ದೇಶದಿಂದ, ಇದೀಗ ಕುಂಟಾಡಿಯಲ್ಲಿ ವಿಸ್ತರಣಾ ಕೌಂಟರ್ ತೆರೆಯಲಾಗಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್‌ಡಿಸಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. https://chat.whatsapp.com/EbVKVnWB6rlHT1mWtsgbch ಕುಂಟಾಡಿ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಭಾನುವಾರ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಾರ್ಕಳ ಶಾಖೆಯ ವಿಸ್ತರಣಾ ಕೌಂಟರ್ ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳಿಗೂ ಬ್ಯಾಂಕ್ ಎಂಬ ಪದ ಬಳಕೆ ಮಾಡುವಂತೆ ಹಾಗೂ ಸರಕಾರದ ಹಣ ವಿತರಣೆಯಂತಹ ಕಾರ್ಯವನ್ನು ಸಹಕಾರಿ ಸಂಸ್ಥೆಯ ಮೂಲಕ ನಡೆಸುವಂತೆ ಮನವಿ ಮಾಡಿದ್ದು, ಈ ಬಗ್ಗೆ ಕೇಂದ್ರ ಸರಕಾರದ ಜತೆ ಮಾತುಕತೆ ಕೂಡಾ ನಡೆಸಲಾಗುತ್ತಿದೆ ಎಂದು ಹೇಳಿದರು. ಕುಂಟಾಡಿ ಶ್ರೀ ರಕ್ತೇಶ್ವರಿ ದೈವಸ್ಥಾನದ ಆಡಳಿತ ಮೊಕ್ತೇಸರ…

Read More

ಬೆಂಗಳೂರು: ಬಿಎಂಆರ್‌ಸಿಎಲ್ ಜೊತೆಗಿನ ಹೊಸ ಒಪ್ಪಂದದಡಿಯಲ್ಲಿ ಅಮುಲ್ ಬೆಂಗಳೂರು ಮೆಟ್ರೋ 10 ನಿಲ್ದಾಣಗಳಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲಿದೆ. ಅಮುಲ್‌ ಡೈರಿ ಉತ್ಪನ್ನಗಳು, ಚಾಕೊಲೇಟ್‌ಗಳು, ತಿಂಡಿಗಳು ಮತ್ತು ಎಣ್ಣೆಗಳನ್ನು ಇಲ್ಲಿ ಮಾರಾಟ ಮಾಡಲಾಗುವುದು. https://chat.whatsapp.com/EbVKVnWB6rlHT1mWtsgbch ಬಿಎಂಆರ್‌ಸಿಎಲ್‌ನ ಶುಲ್ಕೇತರ ಆದಾಯ ಹೆಚ್ಚಿಸುವ ಗುರಿ ಹೊಂದಿರುವ ಈ ಕ್ರಮವು ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್ ಜೊತೆಗಿನ ಸ್ಪರ್ಧೆಯನ್ನು ಹೆಚ್ಚಿಸಲಿದೆ. ನಂದಿನಿಯ ಮಾತೃಸಂಸ್ಥೆ ಕೆಎಂಎಫ್ ಈ ಹಿಂದೆ ಅಮುಲ್ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸುವುದನ್ನು ವಿರೋಧಿಸಿದ್ದು, ಅಮುಲ್‌ ಪ್ರವೇಶವು ಇಲ್ಲಿನ ಸ್ಥಳೀಯ ರೈತರಿಗೆ ಹಾನಿಕಾರಕ ಎಂದು ಹೇಳಿತ್ತು. ಇಂದಿರಾನಗರ, ಮೆಜೆಸ್ಟಿಕ್, ಜಯನಗರ ಮತ್ತು ಇನ್ನೂ ಕೆಲವು ನಿಲ್ದಾಣಗಳಲ್ಲಿ ಅಮುಲ್ ಕರ್ನಾಟಕದ ಚಿಲ್ಲರೆ ವ್ಯಾಪಾರಕ್ಕೆ ವಿಸ್ತರಿಸುತ್ತಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಅಧಿಕೃತ ನೋಂದಣಿ ಕೇಂದ್ರ ಸಹಕಾರ ಸಚಿವಾಲಯದ ಕ್ರಾಂತಿಕಾರಿ ಹೆಜ್ಜೆ ಟ್ಯಾಕ್ಸಿ ಚಾಲಕರ ಸಬಲೀಕರಣ, ಸಹಕಾರಿ ಉದ್ಯಮಶೀಲತೆಯ ಉತ್ತೇಜನ ಗುರಿ ನವದೆಹಲಿ: ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯವಾಕ್ಯದೊಂದಿಗೆ ಮುಂದಡಿಯಿಡುತ್ತಿರುವ ಕೇಂದ್ರ ಸಹಕಾರ ಸಚಿವಾಲಯವು ತೆಗೆದುಕೊಂಡಿರುವ ಕ್ರಾಂತಿಕಾರಿ ಹೆಜ್ಜೆಯೊಂದರಲ್ಲಿ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಸಂಸ್ಥೆಯನ್ನುಅಧಿಕೃತವಾಗಿ ನೋಂದಣಿ ಮಾಡಲಾಗಿದೆ. ಟ್ಯಾಕ್ಸಿ ಚಾಲಕರನ್ನು ಸಬಲೀಕರಣಗೊಳಿಸುವ ಮತ್ತು ಸಹಕಾರಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸಚಿವಾಲಯವು, ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಅನ್ನು ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆಯಡಿ ಅಧಿಕೃತವಾಗಿ ನೋಂದಣಿ ಮಾಡಿದೆ. ಇದು ದೆಹಲಿ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಸದ್ಯಕ್ಕೆ ಕಾರ್ಯವ್ಯಾಪ್ತಿಯನ್ನು ಹೊಂದಿದೆ. https://chat.whatsapp.com/EbVKVnWB6rlHT1mWtsgbch ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC)ದಿಂದ ಉತ್ತೇಜಿಸಲ್ಪಟ್ಟ ಸಹಕಾರ್ ಟ್ಯಾಕ್ಸಿ, ಭಾರತದ ಏಳು ಪ್ರಮುಖ ಸಹಕಾರಿ ಸಂಸ್ಥೆಗಳಾದ ಅಮುಲ್, ನಾಫೆಡ್‌, ನಬಾರ್ಡ್‌, ಇಫ್ಕೋ, ಕ್ರಿಭ್ಕೋ, ಎನ್‌ಡಿಡಿಬಿ ಮತ್ತು ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (NCEL) ಗಳಿಂದ ಬೆಂಬಲ ಪಡೆಯಲಿದೆ. ಸಹಕಾರಿ…

Read More