ವಿಟ್ಲ: ಇಲ್ಲಿನ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಜೀವ ಪೂಜಾರಿ ನಿಡ್ಯ, ಉಪಾಧ್ಯಕ್ಷರಾಗಿ ಬಾಬು ಕೊಪ್ಪಳ ಆಯ್ಕೆಯಾಗಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ -ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಸಂಘದ ನಿರ್ದೇಶಕರುಗಳಾಗಿ ಡಾ.ಗೀತಪ್ರಕಾಶ್ ಎ, ರಾಘವ ಪೂಜಾರಿ, ಜಗದೀಶ್ ಪಾಣೆಮಜಲು, ಅಭಿಜಿತ್ ಜೆ, ಸಂಜೀವ ಪೂಜಾರಿ ಎಂ, ರವಿ ಬಿ.ಕೆ, ಮಾಧವ ಪೂಜಾರಿ, ಶ್ರೀಧರ ಬಿ, ಪ್ರಕಾಶ್ ಕೆ, ವನಿತಾ ಚಂದ್ರಹಾಸ ಮತ್ತು ಶ್ವೇತಾ ಪದ್ಮನಾಭ ಇವರು ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ವಿಲಾಸ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ ಪಿ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com









