ಉಜಿರೆ: ಉಜಿರೆ ಅನುಗ್ರಹ ವಿವಿದೋದ್ದೇಶ ಸಹಕಾರಿ ಸಂಘದ 13ನೇ ವಾರ್ಷಿಕ ಮಹಾಸಭೆಯು
ಸೆ.23ರಂದು ಉಜಿರೆ ಎಸ್. ಕೆ. ಮೆಮೋರಿಯಲ್ ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ವಲೇರಿಯನ್ ರೋಡ್ರಿಗಸ್ ಅವರು ಅಧ್ಯಕ್ಷತೆ ವಹಿಸಿದರು.
ಉಪಾಧ್ಯಕ್ಷ ಅನಿಲ್ ಡಿಸೋಜಾ ನಿರ್ದೇಶಕರಾದ ಸಿಲ್ವಸ್ಟರ್ ಮೋನಿಸ್, ಸುನಿಲ್ ಮೊರಾಸ್, ಅರುಣ್ ಸಂದೇಶ್ ಡಿಸೋಜಾ, ಗೀತಾ ಡಿಸೋಜಾ, ಫೆಲಿಕ್ಸ್
ಡಿಸೋಜಾ, ಬೆನೆಡಿಕ್ಟಾ ಸಲ್ದಾನ ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘವು ಒಟ್ಟು ರೂ. 34.59 ಲಕ್ಷ ಪಾಲು ಬಂಡವಾಳ ಮತ್ತು 3322 ಸದಸ್ಯರನ್ನು ಹೊಂದಿದೆ. 4,159.83 ಲಕ್ಷ ಠೇವಣಿ ಸಂಗ್ರಹಿಸಿ 169 ಕೋಟಿ ವ್ಯವಹಾರ ನಡೆಸಿ ರೂ 50.67 ಲಕ್ಷ ನಿವ್ವಳ ಲಾಭ ಗಳಿಸಿ ಶೇಕಡ 18% ಡಿವಿಡೆಂಡ್ ಘೋಷಿಸಲಾ ಯಿತು.
ಸಾಮಾಜಿಕ ಚಟುವಟಿಕೆಗಳಿಗೆ ಸಾರ್ವಜನಿಕ ಹಿತಾಸಕ್ತಿ ನಿಧಿಯಿಂದ ರೂ. 2,45,547/- ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ರೂ. 1,06,969/- ವ್ಯಯಿಸಲಾಗಿದೆ ಎ0ದು ಅಧ್ಯಕ್ಷರು ತಿಳಿಸಿದರು.
ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುಬೇದಾರ್ ಮೆಲ್ವಿನ್ ಫರ್ನಾಂಡಿಸ್, ಉಜಿರೆ ಗ್ರಾಮ ಪಂಚಾಯತ್ ನೂತನ ಸದಸ್ಯರಾಗಿ ಆಯ್ಕೆಯಾದ ಅನಿಲ್ ಪ್ರಕಾಶ್ ಡಿಸೋಜಾ, ವಕೀಲೆ ಅನ್ಸಿಲ್ಲ ಪ್ರೀತಿ ಪಿಂಟೊ, ವೈದ್ಯ ವೃತ್ತಿ ಮಾಡುತ್ತಿರುವ ಡಾ. ರೂಪಲ್ ನೊರೂಂನ್ಹ, ಎಂ. ಕಾಂ. ಪದವಿಯಲ್ಲಿ ಕಾಲೇಜು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಜಾನೆಟ್ ಸೆರಾವೊ, ಇವರನ್ನು ಸನ್ಮಾನಿಸಲಾಯಿತು.
ಉತ್ತಮ ಅಂಕ ಗಳಿಸಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ವೈದ್ಯಕೀಯ ನೆರವು, ನೂತನ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ಮತ್ತು ಪಿಗ್ಮಿ ಸಂಗ್ರಹಕರಿಗೆ ಆರ್ಥಿಕ ನೆರವು ವಿತರಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ವಾರ್ಷಿಕ ವರದಿಯನ್ನು ಮಂಡಿಸಿದರು.
ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜ ಸ್ವಾಗತಿಸಿದರು, ನಿರ್ದೇಶಕ ಸಿಲ್ವೆಸ್ಟರ್ ಮೋನಿಸ್ ವಂದಿಸಿ, ನಿರ್ದೇಶಕಿ ಗೀತಾ ಅವರು ಕಾರ್ಯಕ್ರಮ ನಿರೂಪಿಸಿದರು.
ನಿರ್ದೇಶಕ ಸುನಿಲ್ ಮೊರಾಸ್ ಸನ್ಮಾನಿತರ ಪರಿಚಯ ಮಾಡಿದರು.