ಮಂಗಳೂರು:- ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ ನಿ. ಯೆಯ್ಯಾಡಿ ಪದವು ಮಂಗಳೂರು ಇದರ ೨೦೨೨-೨೩ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ದಿನಾಂಕ ೨೩-೦೯-೨೦೨೩ ರ ಶನಿವಾರದಂದು ಪ್ರಧಾನ ಶಾಖೆ ಯೆಯ್ಯಾಡಿ ಪದವು ವಿಮಾನ ನಿಲ್ದಾಣ ರಸ್ತೆ ಇಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀ ಉರ್ಬಾನ್ ಪಿಂಟೋ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಹಕಾರಿಯು ೨೦೨೨-೨೩ ನೇ ಸಾಲಿನಲ್ಲಿ ರೂ ೩೮.೩೪ ಕೋಟಿ ವ್ಯವಹಾರ ದಾಖಲಿಸಿ ವರ್ಷಾಂತ್ಯಕ್ಕೆ ರೂ. ೫.೪೭ ಲಕ್ಷಗಳ ನಿವ್ವಳ ಲಾಭ ಗಳಿಸಿ ತನ್ನ ಸದಸ್ಯರಿಗೆ ಶೇ ೭% ಲಾಭಾಂಶವನ್ನು ಘೋಷಿಸಲಾಯಿತು.
ಉಪಾಧ್ಯಕ್ಷರಾದ ಶ್ರೀ ಸದಾಶಿವ ಬಂಗೇರ ಇವರು ಸ್ವಾಗತ ಕೋರಿ, ಶಾಖಾ ವ್ಯವಸ್ಥಾಪಕಿ ಶ್ರೀಮತಿ ಪ್ರಿಯಾ ಇವರು ವರದಿ ಮಂಡಿಸಿದರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ರಾಜೇಶ್ ಎಂ ಬಿ ಮುಂದಿನ ಸಾಲಿನ ಆಯವ್ಯಯ ಮತ್ತು ವರದಿ ಸಾಲಿನ ಲಾಭ ವಿಂಗಡಣೆ ಮಂಡಿಸಿದರು. ಶಾಖಾ ವ್ಯವಸ್ಥಾಪಕಿ ಶ್ರೀಮತಿ ಮಾಯಾ ಲೆಕ್ಕ ಪರಿಶೋಧನಾ ವರದಿ ಮಂಡಿಸಿ ನಿರ್ದೇಶಕರಾದ ಶ್ರೀ ಎಡ್ವರ್ಡ್ ಸಿಕ್ವೇರಾ ಇವರು ವಂದನಾರ್ಪಣೆ ಮಾಡಿದರು.
ಸಹಕಾರಿಯ ನಿರ್ದೇಶಕರುಗಳಾದ ಶ್ರೀ ಶೈಲೇಶ್ ಮಲ್ಯ, ಶ್ರೀ ರವಿ ಪ್ರಸಾದ್ ಶೆಟ್ಟಿ, ಶ್ರೀ ಸುಬ್ರಹ್ಮಣ್ಯ ರಾವ್, ಶ್ರೀ ದಿನೇಶ್ ರಾವ್, ಶ್ರೀ ಆರ್ ಕೆ ಪುರುಷೋತ್ತಮ್, ಶ್ರೀ ನವೀನ್ ಚಂದ್ರ, ಶ್ರೀ ಅಶೋಕ್ ಕುಮಾರ್, ಶ್ರೀ ಕುಶಲ ಪೂಜಾರಿ, ಶ್ರೀ ರವಿ ಸುವರ್ಣ ಮತ್ತು ಶ್ರೀಮತಿ ಸುರೇಖಾ ಪುರುಷೋತ್ತಮ್ ಹಾಗೂ ಸಲಹ ಮಂಡಳಿ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Previous Articleಸ್ಪಂದನ ಕೋ ಆಪರೇಟಿವ್ ಸೊಸೈಟಿ ಲಿ. ಮಡಂತ್ಯಾರು ಶಾಖೆಯ ಉದ್ಘಾಟನೆ
Related Posts
Add A Comment