ಮಂಗಳೂರು: ವೈಜ್ಞಾನಿಕ ಮಣ್ಣಿನ ವಿಶ್ಲೇಷಣೆಯ ಮೂಲಕ ಉತ್ತಮ ಬೆಳೆ ಇಳುವರಿ ಸಾಧಿಸಲು ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಕ್ಯಾಂಪ್ಕೊ ಪುತ್ತೂರು ಶಾಖೆಯಲ್ಲಿ ಮಣ್ಣಿನ ಪರೀಕ್ಷಾ ಘಟಕವನ್ನು ಪ್ರಾರಂಭಿಸಲಾಗಿದ್ದು ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಶುಕ್ರವಾರ ಉದ್ಘಾಟಿಸಿದರು.
https://chat.whatsapp.com/EbVKVnWB6rlHT1mWtsgbch
ಈ ಮಣ್ಣು ಪರೀಕ್ಷಾ ಯಂತ್ರವು ಮಣ್ಣಿನಲ್ಲಿರುವ 12 ಪ್ರಮುಖ ಪೋಷಕಾಂಶಗಳನ್ನು ವಿಶ್ಲೇಷಿಸುವ ಜೊತೆಗೆ ಪೋಷಕಾಂಶಗಳ ನಿರ್ವಹಣೆಗೆ ಸಂಕ್ಷಿಪ್ತ ಶಿಫಾರಸುಗಳನ್ನು ನೀಡುತ್ತದೆ. ರೈತರು ಮಣ್ಣಿನ ಪೋಷಕಾಂಶಗಳ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ನಿಖರವಾದ ಮಣ್ಣಿನ ಪರೀಕ್ಷೆಯ ಮೂಲಕ ಸಮತೋಲಿತ ಪೋಷಕಾಂಶಗಳ ನಿರ್ವಹಣೆ ಮಾಡುವುದು ಅತ್ಯಗತ್ಯ. ಈ ಉತ್ತಮವಾದ ಸೇವೆಯನ್ನು ಕ್ಯಾಂಪ್ಕೊ ಸದಸ್ಯರು ಸದುಪಯೋಗ ಮಾಡಿಕೊಳ್ಳಬೇಕಾಗಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಮನವಿ ಮಾಡಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ನಿರ್ದೇಶಕ ರಾಘವೇಂದ್ರ ಭಟ್, ಎ.ಆರ್.ಡಿ.ಎಫ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೇಶವ ಭಟ್, ಕ್ಯಾಂಪ್ಕೊ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com