ಬೆಳ್ತಂಗಡಿ : ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆಯು ಸೆ. 24ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಜರಗಿತು.
ವಾರ್ಷಿಕ ಲೆಕ್ಕಪತ್ರವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ಮಂಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ನಿರ್ದೇಶಕರಾದ ಸೋಮೇ ಗೌಡ, ನಾರಾಯಣಗೌಡ ದೇವಸ್ಯ, ಜಯಾನಂದ ಗೌಡ,ಗೋಪಾಲಕೃಷ್ಣ ಗುಲ್ಲೋಡಿ, ಮಾಧವ ಗೌಡ, ಗೋಪಾಲಕೃಷ್ಣ ಜಿ. ಕೆ, ಸುರೇಶ್ ಕೌಡಂಗೆ, ಯಶವಂತ್ ಬನಂದೂರು, ಶ್ರೀಮತಿ ಉಷಾದೇವಿ ಕಿನ್ಯಾಜೆ,ಶ್ರೀಮತಿ ಭವಾನಿ ಗೌಡ, ಸುನಿಲ್ ಅನಾವು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿ,ಸೋಮಂತಡ್ಕ ಶಾಖೆಯ ಉಮೇಶ್ ಗೌಡ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಜಯಾನಂದ ಗೌಡ ಧನ್ಯವಾದವಿತ್ತರು.
ತದನಂತರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸಂಘದ ಸದಸ್ಯರಿಂದ ಕೆಲವೊಂದು ಭಾಗದಲ್ಲಿ ಶಾಖೆ ತೆರೆಯಲು ಹಾಗೆಯೇ ಸಂಘದ ವತಿಯಿಂದ ಶಾಖೆ ತೆರೆಯಲು ಪ್ರಸ್ತಾವನೆ ಸಲ್ಲಿಸಿದರು.
ಸಂಘದ ಅಧ್ಯಕ್ಷರ ಮಾತು
ಸಂಘವು ಸದಸ್ಯರ ಮತ್ತು ಸಿಬ್ಬಂಧಿಗಳ ಬೆಂಬಲದಿಂದ 55.63ಕೋಟಿ ವ್ಯವಹಾರ ನಡೆಸಿ 27.92ಲಕ್ಷ ಲಾಭಗಳಿಸಿದ್ದು ಶೇಕಡಾ 8%ಡಿವಿಡೆಂಟ್ ನೀಡುವುದಾಗಿ ತಿಳಿಸಿದರು. ಸಂಘವು ಉತ್ತಮ ಸ್ಥಿತಿಯಲ್ಲಿದ್ದು ಸದಸ್ಯರೆಲ್ಲರೂ ಇನ್ನು ಹೆಚ್ಚಿನ ಒತ್ತು ಕೊಟ್ಟು ಬಂಡವಾಳ ಹೆಚ್ಚು ಹರಿಸಿದಲ್ಲಿ ಸಂಘದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮುಂಬರುವ ದಿನಗಳಲ್ಲಿ ಸೂಕ್ತ ಸ್ಥಳದಲ್ಲಿ ಸಂಘದ ನೂತನ ಶಾಖೆ ಆರಂಭ ಮಾಡುವ ಆಲೋಚನೆ ಆಡಳಿತ ಮಂಡಳಿಗಿದೆ. ಸಂಘದಲ್ಲಿ ಎಫ್ ಡಿ ಗೆ ಬಡ್ಡಿ ದರ 9.50%ಇತ್ತು ಈಗ 10%ಗೆ ಏರಿಸಿದ್ದೇವೆ ಇನ್ನೆರಡು ವರ್ಷದಲ್ಲಿ 25ಕೋಟಿ ಲೋನ್ ನೀಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ನಮ್ಮ ಸಂಸ್ಥೆಯ ಭಾಗವಾಗಿರುವ ವಿದ್ಯಾಸಂಸ್ಥೆಯಲ್ಲಿ ಪಿ ಯು ಕಾಲೇಜಿಗೆ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸೇರ್ಪಡೆ ಗೊಂಡಿದ್ದು ಸಂಸ್ಥೆ ಗೆ ಬೇಕಾದ ಅಗತ್ಯತೆಗೆ 5.50ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾನವಾಗುತ್ತಿದ್ದು ಸರಕಾರದಿಂದ 1.5ಕೋಟಿ ಅನುದಾನ ಬರುವ ನಿರೀಕ್ಷೆ ಇದೆ ನಿರ್ದೇಶಕರುಗಳು, ಸದಸ್ಯರುಗಳು ದೊಡ್ಡ ಮೊತ್ತದ ದೇಣಿಗೆ ನೀಡಿ ಸಹಕರಿಸುತ್ತಿದ್ದಾರೆ ಡಿಸಂಬರ್ ಗೆ ಕಟ್ಟಡ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದು ಇನ್ನು ಹೆಚ್ಚಿನ ಸದಸ್ಯರು ಕಟ್ಟಡದ ಕೆಲಸಕ್ಕೆ ಕೈ ಜೋಡಿಸಬೇಕು.1000ಜನ ಕುಳಿತುಕೊಳ್ಳಬಹುದಾದ ಸುಂದರ ಸಬಾಭವನ ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆ ಈಗಾಗಲೇ ಮಾಡಿದ್ದೇವೆ ವಿದ್ಯಾಸಂಸ್ಥೆ ಗೆ ಬೇಕಾದ ಸುಸಜ್ಜಿತ ಲೈಬ್ರೆರಿ, ಮಿನಿ ಸೆಮಿನಾರ್ ಹಾಲ್ ಈ ನೂತನ ಕಟ್ಟಡದಲ್ಲಿ ಇರಲಿದೆ ಎಂದು ತಿಳಿಸಿದರು.