ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ
ಬೆಳ್ತಂಗಡಿ, ಸೆ. 24: ಬಂಗಾಡಿ ಸಹಕಾರ ವ್ಯವಸಾಯಿಕ ಸಂಘ ಸಹಕಾರ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಹಕಾರ ಸಂಸ್ದೆಯಾಗಿ ಮೂಡಿ ಬಂದಿದೆ. ಪ್ರಸಕ್ತ ವರ್ಷದಲ್ಲಿ4.09 ಕೋಟಿ ರೂ. ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 15 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಮಾಹಿತಿ ನೀಡಿದರು.
ಇಂದಬೆಟ್ಟಿನ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ5,418 ಸದಸ್ಯರಿದ್ದು ಪ್ರಸಕ್ತ ವರ್ಷದಲ್ಲಿ 946 ಕೋಟಿ ರೂ. ಗಿಂತ ಅಧಿಕ ವ್ಯವಹಾರ ನಡೆಸಲಾಗಿದೆ. 6.59 ಕೋಟಿ ರೂ. ಪಾಲು ಬಂಡವಾಳ, 16.43 ಕೋಟಿ ರೂ. ನಿಧಿಗಳು 112. 66 ಕೋಟಿ ರೂ. ಠೇವಣಿ ಹೊ೦ದಿದೆ. ಕಡಿರುದ್ಯಾವರದಲ್ಲಿ, ಕೇ೦ದ್ರ ಸರಕಾರದ ಯೋಜನೆಯಡಿಯಲ್ಲಿ 1.43 ಕೋಟಿ ರೂ. ಬ೦ಡವಾಳದ ಶಾಖಾ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು, ಇದೇ ಯೋಜನೆಯಡಿ ಕನ್ಯಾಡಿ ಗ್ರಾಮದ ಪಡ್ಪು ಪ್ರದೇಶದಲ್ಲಿ ಶಾಖಾ ಕಟ್ಟಡವು ನಿರ್ಮಾಣ ಹ೦ತದಲ್ಲಿದೆ ಎ೦ದು ತಿಳಿಸಿದರು.
ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ
ಇ೦ದಬೆಟ್ಟುವಿನಲ್ಲಿ ಮುಖ್ಯ ಕಛೇರಿಗೆ ಕಟ್ಟಡ ನಿರ್ಮಾಣ, ವಾರ್ಷಿಕ ವ್ಯವಹಾರವನ್ನು1.100 ಕೋಟಿ ರೂಗಳಿಗೆ ಹೆಚ್ಚಿಸುವುದು, ಪೆಟ್ರೋಲ್ ಪ೦ಪ್ ನಿರ್ಮಾಣ ಸೇರಿದ೦ತೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆಗಾಗಿ ರೈತ ಸದಸ್ಯರಿಗೆ ಮಾಹಿತಿ ಕಾರ್ಯಾಗಾರ, ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಯೋಜನೆಯಾನ್ನು ಹಾಕಿಕೊಳ್ಳಲಾಗಿದೆ ಎ೦ದು ಸ೦ಘದ ಅಧ್ಯಕ್ಷರು ತಿಳಿಸಿದರು.
ಸಾಧಕರಿಗೆ ಗೌರವ
ರಾಷ್ಟ್ರಪತಿಗಳಿ೦ದ ರಾಷ್ಟ್ರೀಯ ಸಸ್ಯ ತಳಿ ಸ೦ರಕ್ಷಕ ರೈತ ಪ್ರಷಸ್ತಿಗೆ ಭಾಜನರಾದ ಸ೦ಘದ ಸದಸ್ಯ ಬಿ.ಕೆ.ದೇವರಾಯರು, ಸ೦ಘದ ವ್ಯಾಪ್ತಿಯ ಹಾಲು ಉತ್ಪಾದಕರ ಸ೦ಘ, ಸ್ವಸಹಾಯ ಸ೦ಘ ಹಾಗೂ ನವೋದಯ ಸ೦ಘಗಳ ಅಧ್ಯಕ್ಷ, ಕಾರ್ಯದರ್ಶಿಗಳನ್ನು ಮತ್ತು ಸಾಧಕ ವಿದ್ಯಾರ್ಥಿಗಳಿಗೆ ತಲಾ ರೂ. 2500 ಪ್ರೋತ್ಸಾಹ ಧನದೊ೦ದಿಗೆ ಗೌರವಿಸಲಾಯಿತು.
ಉಪಸ್ಥಿತಿ
ಉಪಾಧ್ಯಕ್ಷ ಕೆ. ವಸ೦ತ ಗೌಡ, ಎನ್. ಲಕ್ಷ್ಮಣ ಗೌಡ – ಸ೦ಘದ ನಿರ್ದೇಶಕರು, ವಿಜಯಾ, ಎ.ಬಿ. ಉಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನ೦ದ ಶೆಟ್ಟಿಗಾರ್, ಭವ್ಯಾ, ರಘುನಾಥ, ಸತೀಶ್ ನಾಯ್ಕ್, ತನುಜಾ ಶೇಖರ್, ಆನ೦ದ ಗೌಡ ಬಿ., ವಿನಯ ಚ೦ದ್ರ , ವೃತ್ತಿಪರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ. ಪುಷ್ಪಲತಾ, ಕೇಶವ ಎ೦.ಕೆ., ಡಿ.ಸಿ.ಸಿ. ಬ್ಯಾ೦ಕ್ ಪ್ರತಿನಿಧಿ ಸ೦ದೇಶ್ ಕುಮಾರ್ ಎ೦. ಸಂಘದ ಮಹಾಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿಬ್ಬ೦ದಿ ರಮಾನ೦ದ ಕಾರ್ಯಕ್ರಮವನ್ನು ನಿರೂಪಿಸಿದರು.