Author: admin
ದೇಶ ಕಂಡ ಅಪ್ರತಿಮ ಶಿಕ್ಷಕ, ರಾಷ್ಟ್ರ ಸಂತ, ವಿದ್ವಾಂಸ, ಶಿಕ್ಷಣ ತಜ್ಞ, ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ. ಎ.ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮದಿನ ಇಂದು. ಈ ದೇಶದ ಎಲ್ಲ ನಾಗರಿಕರಿಗೆ ಮುಖ್ಯವಾಗಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಆದರ್ಶವಾಗಿರುವ ಮೇರು ವ್ಯಕ್ತಿತ್ವ ಹೊಂದಿರುವ ನಮ್ಮ ಹೆಮ್ಮೆಯ ಮಾಜಿ ರಾಷ್ಟ್ರಪತಿಯವರ ಹುಟ್ಟಿದ ದಿನ ಒಂದು ರಾಷ್ಟ್ರೀಯ ಹಬ್ಬದಂತೆ ನಾಡೆಲ್ಲಾ ಆಚರಿಸಬೇಕಿತ್ತು! ಭಾರತ ಚಂದ್ರನ ಅಂಗಳದಲ್ಲಿ ಧ್ವಜವನ್ನು ಹಾರಿಸಿರುವ ಈ ಸಂದರ್ಭದಲ್ಲಿ ದೇಶದ ವೈಜ್ಞಾನಿಕ ಬೆಳವಣಿಗೆಗೆ ತಳಹದಿಯನ್ನು ಹಾಕಿಕೊಟ್ಟ, ಭವ್ಯ- ನವ ಭಾರತದ ಕಲ್ಪನೆಯನ್ನು ಬಿತ್ತಿದ ಆ ರಾಷ್ಟ್ರಸಂತನ ಜನ್ಮ ದಿನ ಕೇವಲ ಒಂದು ಶುಭಾಶಯದ ಸಂದೇಶದಲ್ಲಿ ಮುಗಿಸಬೇಕಾಗಿ ಬಂದದ್ದು ನೋವಿನ ಸಂಗತಿ! ಇಂದಿನ ವಿಧ್ಯಾರ್ಥಿ ಸಮೂಹ ಅರಿಯ-ತಿಳಿಯ ಬೇಕಾದದ್ದು ಈ ಮಹಾತ್ಮನ ಜೀವನ ಗಾಥೆಯನ್ನು. ಬಹುಶ ಈ ಮಹಾತ್ಮನ ಹೆಸರಿನಲ್ಲಿ ಯಾವುದೆ ಒಟ್ ಬ್ಯಾಂಕ್ (Vote Bank) ರಾಜಕೀಯಕ್ಕೆ ಅವಕಾಶ ಇಲ್ಲದಿರುವ ಕಾರಣ ಇರಬಹುನೋ ಈ ಪುಣ್ಯ ದಿನ ಮರೆತು…
ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಮೊದಲ ದಿನದ ಶುಭಾಶಯಗಳು ದುರ್ಗೆಯ ನವ ಅವತಾರಗಳಲ್ಲಿ ಒಬ್ಬಳು ಶೈಲಪುತ್ರಿ. ಪರ್ವತರಾಜ ಹಿಮವಂತನ ಮಗಳು ಈಕೆ. ಶೈಲ ಎಂದರೆ ಬೆಟ್ಟ (ಪರ್ವತ) ಎಂದರ್ಥ. ಪ್ರಜಾಪ್ರತಿ ಬ್ರಹ್ಮನ ಮಗ ದಕ್ಷ ತನ್ನ 27 ಹೆಣ್ಣು ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿಸಿದ್ದ ಹಾಗೂ ಮತ್ತೊಬ್ಬ ಮಗಳು ದಾಕ್ಷಾಯಿಣಿಯನ್ನು ಸ್ಮಶಾನವಾಸಿ ಶಿವನನ್ನು ವರಿಸುತ್ತಾಳೆ. ಶಿವನನ್ನು ಕಂಡರೆ ದಕ್ಷನಿಗೆ ಬಹಳಾ ಸಿಟ್ಟು. ತನ್ನ ಸೌಂದರ್ಯವತಿ ಮಗಳು ಸ್ಮಶಾನವಾಸಿಯಾದ ಶಿವನು ಮದುವೆಯಾಗಿದ್ದನ್ನು ಸಹಿಸಲಲಾಗಲಿಲ್ಲಾ. ಒಂದು ಬಾರಿ ದಕ್ಷ ಮಹಾ ಯಜ್ಞವೊಂದನ್ನು ಆಯೋಜಿಸಿ ಸಕಲರನ್ನೂ ಆಹ್ವಾನಿಸಿದ್ದನು. ಬ್ರಹ್ಮ, ಶಿವಾದಿಯಾಗಿ ಎಲ್ಲರೂ ಬಂದಿದ್ದರು. ಯಜ್ಞಕ್ಕೆ ದಕ್ಷ ಆಗಮಿಸಿದಾಗ ಗೌರವಾರ್ಥವಾಗಿ ಬ್ರಹ್ಮ ಮತ್ತು ಶಿವನನ್ನು ಬಿಟ್ಟು ಉಳಿದೆಲ್ಲರೂ ಎದ್ದು ನಿಂತರು. ಶಿವ ಏಳದೇ ಇದ್ದದ್ದು ಹಮನಿಸಿದ ದಕ್ಷನಿಗೆ ಕೋಪ ನೆತ್ತಿಗೇರಿತು. ಇದರ ಪ್ರತೀಕಾರಕ್ಕಾಗಿ ದಕ್ಷ ಮತ್ತೊಂದು ಯಜ್ಞವನ್ನು ಆಯೋಜಿಸಿ ಅದಕ್ಕೆ ಶಿವ ಮತ್ತು ತನ್ನ ಮಗಳು ದಾಕ್ಷಾಯಿಣಿಯನ್ನು ಹೊರತುಪಡಿಸಿ ಉಳಿದೆಲ್ಲರನ್ನು ಆಹ್ವಾನಿಸುವನು. ತನ್ನ ತಂದೆಯವರು ಯಜ್ಞ…
ಆತ್ಮಶಕ್ತಿ ವಿವಿದ್ಧೋದೇಶ ಸಹಕಾರಿ ಸಂಘ(ನಿ.) ಮಂಗಳೂರು ಇದರ ಮುಡಿಪು ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ, ಕಟ್ಟೆ ಫ್ರೆಂಡ್ಸ್ (ರಿ.) ಮುಡಿಪು, ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ.) ಬಾಳೆಪುಣಿ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು, ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಹಾಗೂ ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯ ತಂಡದವರಿಂದ ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ದಿನಾಂಕ ೧೪.೧೦.೨೦೨೩ ನೇ ಶನಿವಾರ ಬೆಳಗ್ಗೆ ಸಮಯ ೯.೩೦ರಿಂದ ಮಧ್ಯಾಹ್ನ ೧.೦೦ರ ವರೆಗೆ ಗೋಪಾಲಕೃಷ್ಣ ಸಭಾಗೃಹ, ಅಮ್ಮೆಂಬಳ, ಮುಡಿಪು ಇಲ್ಲಿ ಆಯೋಜಿಸಲಾಗಿದೆ. ಈ ವೈದ್ಯಕೀಯ ಶಿಬಿರದಲ್ಲಿ ಈ ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತç ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ , ಮಧುಮೇಹ ತಪಾಸಣೆ , ಬಿ. ಪಿ ತಪಾಸಣೆ , ಜನರಲ್ ವೈದ್ಯಕೀಯ…
ತಾ:11-10-2023,ಬೆಂಗಳೂರು: ಮುಂದಿನ ದಿನಗಳಲ್ಲಿ ನಡೆಯಬಹುದಾದ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ಸಲುವಾಗಿ ಟೆಲಿಕಮ್ಯುನಿಕೇಶನ್ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರವು, ವಿಶಿಷ್ಟವಾದ ಧ್ವನಿ ಮತ್ತು ಕಂಪನ ಮೂಲಕ ಮುನ್ನೆಚ್ಚರಿಕೆ ನೀಡಲು ಮುಂದಾಗಿದೆ. ಅದರಂತೆ ರಾಜ್ಯದಲ್ಲಿ ಇಂದು ಅಂದರೆ ಅ. 12ರಂದು ಸದ್ರಿ ವ್ಯವಸ್ಥೆಯ ಪರೀಕ್ಷೆ ನಡೆಸಲಿದೆ. ಈಗಾಗಲೇ ಮೊಬೈಲ್ ಬಳಕೆದಾರರಿಗೆ ಈ ಕುರಿತಾದ ಸಂದೇಶಗಳು ರವಾನೆಯಾಗಿದೆ. ಫೋನ್‌ನಲ್ಲಿ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್ ಶಬ್ದ ಹಾಗೂ ಸಂದೇಶ ಫ್ಲಾಶ್ ಆಗಲಿದೆ. ಬಳಕೆದಾರರು ಸರಿ ಎಂದು ಒತ್ತುವವರೆಗೂ ಈ ಬೀಪ್ ಇರಲಿದೆ. ಇದು ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಿದ ಸ್ಯಾಂಪಲ್ ಪರೀಕ್ಷಾ ಸಂದೇಶವಾಗಿದ್ದು, ಇದನ್ನು ನಿರ್ಲಕ್ಷಿಸಬಹುದಾಗಿದೆ ಮತ್ತು ಬಳಕೆದಾರರು ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಯನ್ನು ಹಾಗೂ ಮಾಹಿತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ. ಭೂಕಂಪ, ಸುನಾಮಿ, ಅಥವಾ ಯಾವುದೇ ಇನ್ನಿತರ ಅನಾಹುತಗಳು ನಡೆಯಬಹುದಾದ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣ…
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ಶಾಖೆಯ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ನಾಟೆಕಲ್ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಹಾಗೂ ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ, ಶ್ರೀ ಆನಂದ ಕೆ ಹಾಗೂ ಶ್ರೀ ಅಬ್ಬಾಸ್ ಎಮ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ನಾಟೆಕಲ್ ಶಾಖೆಯು ವ್ಯವಸ್ಥಿತವಾಗಿ ರೂಪಿಸಲು ಹಾಗೂ ಹೆಚ್ಚಿನ ಪ್ರಗತಿ ಹೊಂದಲು ನಾಟೆಕಲ್ ಪರಿಸರದವರ ಸಹಕಾರವೇ ಕಾರಣ. ಗ್ರಾಹಕರು ಒಳ್ಳೆಯ ವ್ಯವಹಾರವನ್ನು ನೀಡುತ್ತಿದ್ದು ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವುದರ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮುಡಿಪು ಪರಿಸರದಲ್ಲೂ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು…
ಸಹಕಾರಿ ಸಂಘಗಳು ಮತ್ತು ಸಹಕಾರಿ ಆಂದೋಲನಗಳು ತಳಮಟ್ಟದ ಸಮಾಜದ ಬೆನ್ನೆಲುಬು ಎಂದು ಮಂಗಳೂರು ಮಹಾನಗರ ಪಾಲಿಕೆಯ ಬೆಂದೂರು ವಾರ್ಡ್ ಕಾರ್ಪೊರೇಟರ್ ಶ್ರೀ ನವೀನ್ ಆರ್ ಡಿಸೋಜಾ ಹೇಳಿದರು. ಅವರು ನೂತನವಾಗಿ ನೋಂದಣಿಯಾದ ಸೇಂಟ್ ಅಲ್ಫೋನ್ಸಾ ಸೌಹಾರ್ದ ಸಹಕಾರಿ ಸಂಘ ನಿ.(ಆರ್) ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜನರು ತಮ್ಮ ಸಂಪಾದನೆಯನ್ನು ಸಮಾಜಕ್ಕೆ ಸಾಲವಾಗಿ ನೀಡಿದಾಗ ಸಹಕಾರಿ ಸಂಘಗಳು ವೇಗವಾಗಿ ಬೆಳೆಯುತ್ತವೆ ಎಂದರು. ಹಣದ ಅಗತ್ಯವಿರುವ ಜನರು ಅದನ್ನು ಕಡಿಮೆ ಬಡ್ಡಿಗೆ ಪಡೆಯುತ್ತಾರೆ ಮತ್ತು ಆದ್ದರಿಂದ ಅವರು ಹೆಚ್ಚು ಬಡ್ಡಿಯನ್ನು ವಿಧಿಸುವ ಲೇವಾದೇವಿದಾರರ ಕೈಯಿಂದ ಪಾರಾಗಬಹುದು ಎಂದು ಹೇಳಿದರು. “ಚರ್ಚ್‌ನೊಂದಿಗಿನ ನನ್ನ ಒಡನಾಟವು 25 ವರ್ಷಗಳಿಗಿಂತಲೂ ಹೆಚ್ಚಿದೆ ಮತ್ತು ನೀವು ಒಂದು ಸಮುದಾಯವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬೆಳೆಯುತ್ತಿರುವ ರೀತಿಯಲ್ಲಿ ನಾನು ತುಂಬಾ ಹೆಮ್ಮೆಪಡುತ್ತೇನೆ” ಎಂದು ಶ್ರೀ ನವೀನ್ ಆರ್ ಡಿಸೋಜ ಹೇಳಿದರು. ಕಂಕನಾಡಿಯ ಸೈಂಟ್ ಅಲ್ಫೋನ್ಸಾ ಫೊರೇನ್ ಚರ್ಚ್‌ನ ಧರ್ಮ ಗುರುಗಳಾದ ರೆ.ಫಾ. ಮಾಣಿ ವೇಲುತೆಡತುಪರಂಬಿಲ್ ಅವರ ಶ್ರಮ ಮತ್ತು…
ಕೇಂದ್ರ ಸರ್ಕಾರದಿಂದ ಸಹಕಾರಿ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಮಹತ್ವದ ತೀರ್ಮಾನ : ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕೋ-ಆಪರೇಟಿವ್ ರಿಜಿಸ್ಟ್ರಾರ್ಗಳ ಕಂಪ್ಯೂಟರೀಕರಣಕ್ಕೆ ನಿಧಿ ಬಿಡುಗಡೆ
ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಕಂಪ್ಯೂಟೀಕರಣ ಯೋಜನೆ ರೀತಿಯಲ್ಲಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಎಆರ್ಡಿಬಿಗಳ ಗಣಕೀಕೃತ ಕಾರ್ಯಕ್ಕೆ ಅನುಮೋದನೆ ನೀಡಲಾಗಿದೆ . ಸೆಂಟ್ರಲ್ ರಿಜಿಸ್ಟ್ರಾರ್ ರೀತಿಯಲ್ಲಿ ಸಹಕಾರಿ ಸಂಸ್ಥೆಗಳ ರಿಜಿಸ್ಟ್ರಾರ್ ಕಚೇರಿಗಳನ್ನು ನ್ಯಾಷನಲ್ ಯೂನಿಫೈಡ್ ಸಾಫ್ಟ್ವೇರ್ ಮೂಲಕ ಕಂಪ್ಯೂಟರೀಕರಣಗೊಳಿಸುವುದಾಗಿಯೂ ಹಾಗೂ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸೆಂಟ್ರಲ್ ಪ್ರಾಜೆಕ್ಟ್ ಮಾನಿಟರಿಂಗ್ ಯೂನಿಟ್ ಅನ್ನು ಆರಂಭಿಸುವುದಾಗಿ ತಿಳಿಸಲಾಗಿದೆ. ಇದರ ಅಂದಾಜು ವೆಚ್ಚ 225 ಕೋಟಿ ರೂ ಎಂದಿದೆ. ನವದೆಹಲಿ, ಅಕ್ಟೋಬರ್ 8: ದೇಶದ ಸಹಕಾರಿ ಕ್ಷೇತ್ರಕ್ಕೆ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Union Ministry of Cooperation) ಪ್ರಮುಖ ತೀರ್ಮಾನಗಳನ್ನು ಇದೀಗ ಕೈಗೊಂಡಿದೆ. ದೇಶದ ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ರಿಜಿಸ್ಟ್ರಾರ್ಗಳನ್ನು (registrars of cooperatives) ಸಂಪೂರ್ಣವಾಗಿ ಕಂಪ್ಯೂಟರೀಕರಿಸಲಾಗುವುದಾಗಿಯೂ ಈ ಪೈಕಿ 13 ರಾಜ್ಯಗಳಲ್ಲಿರುವ 1,851 ಕೃಷಿ ಮತ್ತು ಗ್ರಾಮೀಣಾಭವೃದ್ಧಿ ಬ್ಯಾಂಕ್ಗಳನ್ನೂ (ಎಆರ್ಡಿಬಿ) ಸದೃಡವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಿಡಲು ಆದೇಶಿಸಿದೆ. ಈ ಯೋಜನೆಯು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ (Primary Agriculture Credit…
ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಮ್) ಬೆಂಗಳೂರು ಇವರಿಂದ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ (ನಿ.) ಪಡೀಲ್, ಮಂಗಳೂರು ಇವರ ಸಮನ್ವಯದಲ್ಲಿ ಮಂಗಳೂರು ಕೇಂದ್ರವಾಗಿಸಿಕೊಂಡು ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮಾ(ಹೆಚ್.ಡಿ.ಸಿ.ಎಮ್) ಕೋರ್ಸಿನ ದೂರ ಶಿಕ್ಷಣದ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಯಾದ ಶ್ರೀಮತಿ ವನಿತಾ ಡಿ, ದ್ವಿತೀಯ ರ‍್ಯಾಂಕ್ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ಸಿಬ್ಬಂದಿಯಾದ ಶ್ರೀಮತಿ ದೀಪಿಕಾ ಸನಿಲ್ ಹಾಗೂ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಯಾದ ಶ್ರೀ ಕೃಷ್ಣಪ್ಪ ಎ. ತೃತೀಯ ರ‍್ಯಾಂಕ್ ಪಡೆದಿರುತ್ತಾರೆ. ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಫಾರ್ ಕೋ-ಆಪರೇಟಿವ್ ಟ್ರೈನಿಂಗ್ (ಎನ್.ಸಿ.ಸಿ.ಟಿ) ಇದರ ಅಂಗಸಂಸ್ಥೆ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಮ್) ಬೆಂಗಳೂರು, ಇವರಿಂದ ನಡೆಸಲ್ಪಡುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ (ಹೆಚ್.ಡಿ.ಸಿ.ಎಮ್) ತರಬೇತಿಯನ್ನು ಕಳೆದ ಎಳು ವರ್ಷಗಳಿಂದ ಮಂಗಳೂರನ್ನು ಕೇಂದ್ರಿಕೃತವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಅವಿಭಜಿತ ದ.ಕ, ಉಡುಪಿ ಮತ್ತು ಕಾಸರಗೋಡ್…
ರೆಪೋ ದರವನ್ನು ಯಥಾಸ್ಥಿತಿ ಕಾಯ್ದಿರಿಸಿದ ಆರ್‌ಬಿಐ ಶುಕ್ರವಾರ ಅಂತಿಮಗೂಂಡ ಆರ್‌ಬಿಐ ದ್ವೈಮಾಸಿಕ ಎಂಪಿಸಿ ಸಭೆಯಲ್ಲಿ ತೆಗೆದುಕೊಂಡ ಹೊಸ ಹಣಕಾಸು ನೀತಿಯ ಪ್ರಮುಖ ನಿರ್ಧಾರಗಳು ಇಲ್ಲಿವೆ ನೋಡಿ. ○ ರೆಪೊ ದರವನ್ನು ಸ್ಥಿರವಾಗಿರಿಸಲು ಆರ್‌ಬಿಐ ನಿರ್ಧರಿಸಿದೆ. ಇದರರ್ಥ ರೆಪೊ ದರವು 6.5 % ಸ್ಥಿರವಾಗಿರುತ್ತದೆ. ಆದರೆ SDF ದರವು 6.25 % ಮತ್ತು NCF (MSF) ದರ ಮತ್ತು ಬ್ಯಾಂಕ್ ದರವು 6.75 % ಉಳಿಯುತ್ತದೆ. ○ ಆರ್‌ಬಿಐ ‘ವಸತಿ ಹಿಂಪಡೆಯುವಿಕೆ’ ನೀತಿಯನ್ನು ಅಳವಡಿಸಿಕೊಂಡಿದೆ. ಹಣದುಬ್ಬರವನ್ನು ನಿಯಂತ್ರಿಸಲು ಬ್ಯಾಂಕ್ ಕೆಲಸ ಮಾಡುತ್ತಿದೆ. ○ ಭಾರತದ ಜಿಡಿಪಿಗೆ ಸಂಬಂಧಿಸಿದಂತೆ, 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 6.5ರಷ್ಟು ಹೆಚ್ಚಾಗಬಹುದು ಎಂದು ಆರ್‌ಬಿಐ ಹೇಳಿದೆ. ○ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.6.5 ಆಗಿರಬಹುದು. ಅದೇ ಸಮಯದಲ್ಲಿ, ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕವು ಶೇಕಡಾ 5.7 ಇರಬಹುದು. ಅದೇ ರೀತಿ, ಮುಂದಿನ ಪ್ರಸಕ್ತ ಹಣಕಾಸು ವರ್ಷದ 2024-25 ರ ಮೊದಲ…
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗಂಜಿಮಠ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಗಂಜಿಮಠ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಕೃಷ್ಣ ಕೆ. ಅಮೀನ್, ಕೆ.ನಾರಾಯಣ ಕಾರಂತ್ , ಶ್ರೀ ಸೋಹನ್ ಅತಿಕಾರಿ, ಶ್ರೀ ದಯಾನಂದ್, ಶ್ರೀ ಸುನೀಲ್ ಮನೋಜ್ ಫೆರ್ನಾಂಡಿಸ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘದ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿ ವರ್ಗ ಹಾಗೂ ಎಲ್ಲಾ ಗ್ರಾಹಕರ ಸಹಕಾರದಿಂದ ಪ್ರತಿ ವರ್ಷದಂತೆ ಈ ವರ್ಷವು ಸಂಘವು ಹೆಚ್ಚಿನ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ. ಸಂಘವು ಇ-ಸ್ಟಾಂಪಿಂಗ್ ಸೇವೆಗೆ ಕಳೆದ ೯ ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿಯನ್ನು ಪಡೆಯುದರೊಂದಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡೆದುಕೊಂಡ ಹೆಮ್ಮೆ ನಮ್ಮದಾಗಿದೆ. ಇ-ಸ್ಟಾಂಪಿಂಗ್ ಸೇವೆಯು ಬೆಳಿಗ್ಗೆ…
