Author: admin
ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಹಳೆಕೋಟೆ ಬೆಳ್ತಂಗಡಿ ಇದರ ಆಡಳಿತ ಮಂಡಳಿ ನಿರ್ದೇಶಕರ ಅವಿರೋಧ ಆಯ್ಕೆ ನಡೆಸಲಾಗಿದೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಾಮಾನ್ಯ ಕ್ಷೇತ್ರದಿಂದ ಹೆಚ್. ಪದ್ಮ ಗೌಡ ಬೆಳಾಲು, ಕುಶಾಲಪ್ಪ ಗೌಡ ಪೂವಾಜೆ, ಗೋಪಾಲಕೃಷ್ಣ ಬಿ.ಗುಲ್ಲೋಡಿ, ಜಯಾನಂದ ಗೌಡ ಟಿ ಪ್ರಜ್ವಲ್, ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ದೇವಸ, ಮಾಧವ ಗೌಡ ಬೆಳ್ತಂಗಡಿ, ಸುರೇಶ್ ಬಿ.ಕೌಡಂಗೆ, ಯಶವಂತ ಬಿ.ಟಿ ಬೆಳಾಲು, ಸುನೀಲ್ ಅಣವು, ಪುರಂದರ ಗೌಡ ಎನ್. ಮೊಗ್ರು, ಮಹಿಳಾ ಕ್ಷೇತ್ರದಿಂದ ಉಷಾದೇವಿ ಕಿನ್ಯಾಜೆ, ಭವಾನಿ ಕೆ.ಗೌಡ ಮೂಡಾಯೂರು, ಹಿಂದುಳಿದ ವರ್ಗ ಬಿಯಿಂದ ಶ್ರೀನಾಥ್ ಕೆ.ಎಂ ನಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರಿಯ ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ಟಿ ಎಸ್ ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಮೈಸೂರು: ಇಲ್ಲಿನ ಸಪ್ತರ್ಷಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ ರಜತ ಮಹೋತ್ಸವ ಸಂಭ್ರಮ ಆಗಸ್ಟ್ 25ರಂದು ಭಾನುವಾರ ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಬೆಳಗ್ಗೆ 10.15ರಿಂದ ನಡೆಯಲಿದೆ. ಅವಧೂತ ದತ್ತಪೀಠಾಧಿಪತಿ ಜಗದ್ಗುರು ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು, ಕರಕಮಲ ಸಂಜಾತರು, ದತ್ತಪೀಠ ಉತ್ತರಾಧಿಕಾರಿ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಉದ್ಘಾಟನೆ ಹಾಗೂ ಆಶೀರ್ವಚನ ನೆರವೇರಿಸುವರು. ಸಪ್ತರ್ಷಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಪ್ತಶ್ರೀ ಸವಿ ಸಂಚಿಕೆ ಬಿಡುಗಡೆ ಮಾಡುವರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಶಾಸಕ ಜಿ.ಟಿ.ದೇವೇಗೌಡ ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನಗೌಡ ಸಹಕಾರಿಗಳಿಗೆ ಅಭಿನಂದನೆ ಸಲ್ಲಿಸುವರು. ಶಾಸಕ ಟಿ.ಎಸ್. ಶ್ರೀವತ್ಸ ಅಂಚೆ ಚೀಟಿ ಬಿಡುಗಡೆ ಮಾಡುವರು. ಮೈಸೂರು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ. ರಾಜೀವ್ ಸಪ್ತರ್ಷಿ ಅಂಚೆ ಕಾರ್ಡ್ ಬಿಡುಗಡೆ ಮಾಡುವರು…
ಗುಜರಾತ್ ರಾಜ್ಯದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ ಅಹಮದಾಬಾದ್: ಭಾರತದ ರಾಷ್ಟ್ರಪತಿ ಎಂದು ಕರೆಸಿಕೊಂಡಿರುವ ಮಹಾತ್ಮ ಗಾಂಧಿ ಜನ್ಮ ತಾಳಿದ ರಾಜ್ಯ ಗುಜರಾತ್ ಈಗ ಏಷ್ಯಾದಲ್ಲೇ ಅತಿ ಶ್ರೀಮಂತ ಹಳ್ಳಿಯನ್ನೂ ಜಗತ್ತಿಗೆ ಪರಿಚಯಿಸಿದೆ. ಗುಜರಾತ್ ರಾಜ್ಯದ ಕಛ್‌ನಲ್ಲಿರುವ ಮಾಧಾಪುರ ಗ್ರಾಮ ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದೆ. ಈ ಗ್ರಾಮದ ಜನರ ನಿರಖು ಠೇವಣಾತಿ (ಎಫ್‌ಡಿ) ಎಷ್ಟೆಂದರೆ ಏಳು ಸಾವಿರ ಕೋಟಿ ರೂ. ಇಲ್ಲಿಯ ಒಬ್ಬೊಬ್ಬ ವ್ಯಕ್ತಿ ಬ್ಯಾಂಕಿನಲ್ಲಿ 15ರಿಂದ 20 ಲಕ್ಷ ಠೇವಣಿ ಇರಿಸಿದ್ದಾರೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಈ ಹಳ್ಳಿಯಲ್ಲಿ ಪಟೇಲ್ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು 32,000ದಷ್ಟು ಜನಸಂಖ್ಯೆಯಿದೆ. 2011ರ ಜನಗಣತಿ ಪ್ರಕಾರ ಇಲ್ಲಿನ ಜನಸ೦ಖ್ಯೆ 17,000ದಷ್ಟಿತ್ತು. ವ್ಯಾಪಾರವನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಹೆಚ್ಚಿನವರು ವಿದೇಶದಲ್ಲಿ ನೆಲೆಸಿದ್ದಾರೆ. ಆದಾಗ್ಯೂ ತಮ್ಮ ತವರು ಹಳ್ಳಿಯನ್ನು ಇವರು ಮರೆತಿಲ್ಲ. ವಿದೇಶದಲ್ಲಿ ನೆಲೆಯಾಗಿದ್ದರೂ ಜನರು ತಮ್ಮ ತವರು ಗ್ರಾಮದಲ್ಲಿರುವ ಬ್ಯಾಂಕ್‌ಗಳಲ್ಲೇ ಹಣ ಠೇವಣಿ ಇರಿಸಿದ್ದಾರೆ. 20 ಸಾವಿರದಷ್ಟು ಮನೆಗಳಿರುವ ಈ ಗ್ರಾಮದ 1,200 ಕುಟುಂಬಗಳು ವಿದೇಶದಲ್ಲಿದ್ದು,…
ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಮತ್ತು ಲಲಿತಕಲಾ ಸಹಕಾರಿ ಲಿಮಿಟೆಡ್(ಎನ್‌ಎಎಫ್‌ಎಫ್‌ಎಸಿ -ನ್ಯಾಶನಲ್ ಫಿಲ್ಮ್ ಆಂಡ್ ಫೈನ್ ಆರ್ಟ್ಸ್ ಕೋಆಪರೇಟಿವ್ಸ್ ಲಿಮಿಟೆಡ್)ನ ಅಧ್ಯಕ್ಷರಾಗಿ ರಂಜಿತ್ ಸಿಂಗ್ ಅಲಿಯಾಸ್ ಟಿಟು ಆಯ್ಕೆಯಾಗಿದ್ದಾರೆ. ಇವರು ಹಿರಿಯ ಸಹಕಾರಿ ಧುರೀಣ ದಿ.ತಪೇಶ್ವರ್ ಸಿಂಗ್ ಅವರ ಪುತ್ರ. ಮಂಗಳವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಬಿ.ಡಿ.ಭೂಕಾಂತ್ ಮತ್ತು ಸಂಜಯ್ ಜೈನ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ರಂಜಿತ್ ಸಿಂಗ್, ಹಿಂದೆ ಅಧ್ಯಕ್ಷರಾಗಿದ್ದ ರಾಮ್ ಇಕ್ಬಾಲ್ ಸಿಂಗ್ ಅವರ ಸ್ಥಾನ ತುಂಬಲಿದ್ದಾರೆ. ರಂಜಿತ್ ಸಿಂಗ್ ದೇಶದ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ಆಪ್ತರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ರಂಜಿತ್ ಸಿಂಗ್ ಮತ್ತು ಅವರ ಪುತ್ರ ವಿಶಾಲ್ ಸಿಂಗ್ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಪಕ್ಷ ಸೇರ್ಪಡೆಯಾದ ಕೂಡಲೇ ಅವರಿಗೆ ಉನ್ನತ ಹುದ್ದೆ ಲಭಿಸಿದೆ. ವಿಶಾಲ್ ಸಿಂಗ್ ಎನ್‌ಸಿಸಿಎಫ್‌ನ ಚೇರ್ಮನ್ ಆಗಿದ್ದು, ರಂಜಿತ್ ಸಿಂಗ್ ಎನ್‌ಎಎಫ್‌ಎಫ್‌ಎಸಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿ.ಎಚ್.ಅಮೀನ್, ದಿಲೀಪ್ ಸಂಘಾನಿ, ಚಂದ್ರಪಾಲ್ ಸಿಂಗ್ ಯಾದವ್, ವಿ.ಕೆ.ದುಬೆ, ರಾಮ್ ಇಕ್ಬಾಲ್…
ಅಹಮದಾಬಾದ್: ಕ್ಷೀರೋದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿರುವ ಅಮುಲ್ ಸಹಕಾರಿ ಸಮಿತಿಯು ಜಾಗತಿಕವಾಗಿ ಬಲಿಷ್ಠ ಆಹಾರ ಮತ್ತು ಡೈರಿ ಬ್ರಾಂಡ್ ಎಂಬ ಬಿರುದು ಪಡೆದುಕೊಂಡಿದೆ. ಬ್ರಿಟಿನ್‌ನ ‘ಬ್ರಾಂಡ್ ಫೈನಾನ್ಸ್’ನ 2024ರ ಗ್ಲೋಬಲ್ ಫುಡ್ ಆ್ಯಂಡ್ ಡ್ರಿಂಕ್ಸ್ ವರದಿಯಲ್ಲಿ ಅಮುಲ್‌ಗೆ ಈ ಸ್ಥಾನ ನೀಡಲಾಗಿದ್ದು, AAA+ ರೇಟಿಂಗ್ ಗಿಟ್ಟಿಸಿಕೊಂಡಿದೆ. 2023ರಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದ ಅಮುಲ್ 2024ರಲ್ಲಿ ಮೊದಲ ಸ್ಥಾನಕ್ಕೇರಿದೆ. ಅನಂತರದ ಎರಡು ಸ್ಥಾನ ಚೀನಾದ ಡೈರಿಗಳ ಪಾಲಾಗಿದೆ. ಈ ಬಗ್ಗೆ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮುಲ್, ‘ಜಗತ್ತಿನ ಮುಂಚೂಣಿಯ ಬ್ರ್ಯಾಂಡ್ ಕನ್ಸಲ್ವೆನ್ಸಿ ‘ಬ್ರ್ಯಾಂಡ್ ಫೈನಾನ್ಸ್’ ತನ್ನ ವರದಿಯಲ್ಲಿ ನಮಗೆ (ಅಮುಲ್) ಬಲಿಷ್ಠ ಫುಡ್, ಡೈರಿ ಮತ್ತು ನಾನ್ ಆಲ್ಕೋಹಾಲಿಕ್ ಬ್ರ್ಯಾಂಡ್‌ನ ಸ್ಥಾನ ನೀಡಿದ್ದು, ಈ ಸಾಧನೆ ಸಂತೋಷ ತಂದಿದೆ’ ಎಂದು ಪ್ರತಿಕ್ರಿಯಿಸಿದೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಗುಜರಾತ್ ಮೂಲದ ಅಮುಲ್ ವಾರ್ಷಿಕವಾಗಿ 11 ಬಿಲಿಯನ್ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಇದರ ಮೌಲ್ಯ 80 ಸಾವಿರ ಕೋಟಿ (10 ಬಿಲಿಯನ್ ಡಾಲರ್) ರೂ. ಆಗಿದೆ. 36 ಲಕ್ಷಕ್ಕೂ ಅಧಿಕ…
ಉಜಿರೆ: ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಉಜಿರೆ ಶಾಖೆಯಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯ ಚೆಕ್ ಅನ್ನು ಇತ್ತೀಚೆಗೆ ವಿತರಿಸಲಾಯಿತು. ವಿಶ್ವಕರ್ಮ ಸಹಕಾರ ಬ್ಯಾಂಕ್ ಉಜಿರೆ ಶಾಖೆಯ ಗ್ರಾಹಕ ರಾಧಾಕೃಷ್ಣ ಎಂಬುವವರು ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಬ್ಯಾಂಕ್‌ನಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಜೀವನ್‌ಜ್ಯೋತಿ ವಿಮಾ ಯೋಜನೆಯಡಿ ವಿಮೆ ರೂ.2 ಲಕ್ಷ ರೂ. ಮಂಜೂರಾಗಿತ್ತು. ಅದರ ಚೆಕ್ ಅನ್ನು ಬ್ಯಾಂಕಿನ ಅಧ್ಯಕ್ಷ ಡಾ.ಎಸ್ ಆರ್ ಹರೀಶ್ ಆಚಾರ್ಯ ಅವರು ಫಲಾನುಭವಿ ತಾರಾ ಅವರಿಗೆ ವಿತರಿಸಿದರು. ಬ್ರಾಂಚ್ ಮ್ಯಾನೇಜರ್ ಲೋಕೇಶ್ ಎಸ್.ಆರ್ ಮತ್ತು ಸಹಾಯಕ ಶಾಖಾ ವ್ಯವಸ್ಥಾಪಕ ಎಂ.ಸುರೇಶ್ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ ಪುತ್ತೂರು : ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿ ರಾಜ್ಯಾದ್ಯಂತ 19 ಶಾಖೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 23ನೇ ವಾರ್ಷಿಕ ಮಹಾಸಭೆ ಸಹಕಾರಿಯ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ಭಾನುವಾರ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಹಕಾರಿಯ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ, ಸಹಕಾರಿಯೂ ಗಣನೀಯ ಪ್ರಗತಿ ಸಾಧಿಸಲು ಕಾರಣರಾದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು. ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿಯ ವ್ಯವಹಾರದಲ್ಲಿ ಗಣನೀಯ ಪ್ರಗತಿಯಾಗಿದ್ದು ಇದಕ್ಕೆ ಕಾರಣರಾದ ಸದಸ್ಯರನ್ನು ಅಭಿನಂದಿಸಿದರು. ಸರಸ್ವತಿ ಸಹಕಾರಿಯು ರಾಜ್ಯಾದ್ಯಂತ 19 ಶಾಖೆಗಳ ಮೂಲಕ ಸದಸ್ಯರಿಗೆ ಸೇವೆಯನ್ನು ನೀಡುತ್ತಿದೆ. ರಾಜ್ಯ ಸರಕಾರವು ಸಹಕಾರಿಕಾಯ್ದೆಯ ತಿದ್ದುಪಡಿ ಮಾಡಿದ್ದು, ಇವುಗಳ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದರು. 2023 -24ರ ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯಲ್ಲಿ 45,077 ಸದಸ್ಯರಿದ್ದು, ರೂ 9.75 ಕೋಟಿ ಪಾಲು ಬಂಡವಾಳವಿದೆ. ಸಹಕಾರಿಯು ರೂ. 24.05 ಕೋಟಿ ವಿವಿಧ ನಿಧಿಗಳನ್ನು ಹೊಂದಿ ಸದೃಢವಾಗಿದೆ.…
ಮಂಗಳೂರು: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 20ನೇ ಶಾಖೆ ಕಿನ್ನಿಗೋಳಿಯಲ್ಲಿ ಆಗಸ್ಟ್ 28ರಂದು ಕಿನ್ನಿಗೋಳಿ ಬಸ್‌ಸ್ಟ್ಯಾಂಡ್ ಬಳಿಯ ದುರ್ಗಾದಯಾ ಬಿಲ್ಡಿಂಗ್‌ನಲ್ಲಿ ಬೆಳಗ್ಗೆ 10.30ಕ್ಕೆ ಉದ್ಘಾಟನೆಯಾಗಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಗೌರವ ಮಾರ್ಗದರ್ಶಕಿ, ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಉಪಸ್ಥಿತಿ ವಹಿಸುವರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಸಹಕಾರ ರತ್ನ ಲಯನ್ ಎ.ಸುರೇಶ್ ರೈ ಅಧ್ಯಕ್ಷತೆ ವಹಿಸುವರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್, ದುರ್ಗಾದಯ ಕಾಂಪ್ಲೆಕ್ಸ್‌ನ ಮಾಲಕ ಕೆ.ಸೀತಾರಾಮ್ ಶೆಟ್ಟಿ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಗುತ್ತಿಗೆದಾರ, ಕಿನ್ನಿಗೋಳಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಹೆಗ್ಡೆ, ಕಟೀಲು ಶ್ರೀ…
ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ಕೆ.ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರು ಸಹಕಾರ ಸೌಧ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 15ರಂದು ಕೋಟೆಕಾರಿನಲ್ಲಿ ನಡೆಯಲಿದೆ. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸುವರು. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಕೆವಿಎಸ್‌ಎಸ್ ಕನ್ವೆನ್ಶನ್ ಹಾಲ್ ಉದ್ಘಾಟಿಸುವರು. ಸಂಸದ ಕ್ಯಾ.ಬ್ರಿಜೇಶ್ ಚೌಟ ದೀಪ ಪ್ರಜ್ವಲನೆ ಮಾಡುವರು. ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಅಧ್ಯಕ್ಷತೆ ವಹಿಸುವರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿರುವರು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಬಿ.ಎಂ.ಫಾರೂಕ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಡಿ.ಎಸ್.ಗಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ಎಚ್.ಎನ್.ರಮೇಶ್, ಸಹಾಯಕ ಉಪನಿಬಂಧಕ ಸುಧೀರ್ ಕುಮಾರ್ ಜೆ, ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಮೋನಪ್ಪ…
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಮಂಗಳೂರು ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜಯಂತಿ ಆಚರಣೆಯನ್ನು ಸಂಘದ ಪ್ರಧಾನ ಕಛೇರಿಯಲ್ಲಿ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು ಧಾರ್ಮಿಕ ಚಿಂತಕ ಹಾಗೂ ಸಂಘದ ಹಿರಿಯ ಸದಸ್ಯ ಮಾಧವ ಸುವರ್ಣ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಸಿಬ್ಬಂದಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಪುರೋಹಿತರಾದ ರಾಜೇಶ್ ಶಾಂತಿ ಗುರುಪೂಜೆ ನಡೆಸಿದರು. ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ಉಪಾಧ್ಯಕ್ಷ ನೇಮಿರಾಜ್ ಪಿ, ನಿರ್ದೇಶಕರಾದ ಜಿ.ಪರಮೇಶ್ವರ್ ಪೂಜಾರಿ, ಸೀತಾರಾಮ್ ಎನ್., ರಮಾನಾಥ್ ಸನಿಲ್, ಗೋಪಾಲ್ ಎಮ್, ಉಮಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಸಲಹೆಗಾರರಾದ ಅಶೋಕ್ ಕುಮಾರ್, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ವಾಮನ್ ಕೆ ಹಾಗೂ ಸಂಘದ ಸದಸ್ಯರು ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್:…
