ನಬಾರ್ಡ್ ವಾರ್ಷಿಕ ವರದಿಯಲ್ಲಿ ಉಲ್ಲೇಖ
ನವದೆಹಲಿ: ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿ ಸಂಘಗಳಿದ್ದರೂ 18,497 ಗ್ರಾಮ ಪಂಚಾಯಿತಿಗಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮುಟ್ಟಿಲ್ಲ. ನಬಾರ್ಡ್‌ನ 2023-24ರ ವಾರ್ಷಿಕ ವರದಿ ಈ ಮಾಹಿತಿ ತೆರೆದಿಟ್ಟಿದೆ.
ದೇಶದ ಐದು ರಾಜ್ಯಗಳಲ್ಲೇ ಒಟ್ಟಾರೆ ಸಹಕಾರಿಗಳ 57 ಶೇಕಡಾ ಸಂಖ್ಯೆಯಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲೇ ಈ 57 ಶೇಕಡಾ ಸಹಕಾರಿಗಳ ಸಂಖ್ಯೆಯಿದೆ. ದೇಶದಲ್ಲಿ ಸಹಕಾರಿ ಕ್ಷೇತ್ರದ ಚಟುವಟಿಕೆಗಳು ವಿಶಾಲವಾಗಿ ಹರಡಿದ್ದರೂ ಎಲ್ಲಾ ರಾಜ್ಯಗಳಲ್ಲಿ ಇದು ಒಂದೇ ಸಮನಾಗಿಲ್ಲ. ಮಹಾರಾಷ್ಟ್ರ ಒಂದರಲ್ಲೇ ದೇಶದ ಸಹಕಾರಿಗಳ ಪೈಕಿ ನಾಲ್ಕನೇ ಒಂದರಷ್ಟು ಸಂಖ್ಯೆಯಿದೆ ಎಂದು ವರದಿ ಹೇಳಿದೆ. 18,497 ಗ್ರಾಮ ಪಂಚಾಯಿತಿಗಳಲ್ಲಿ ಪ್ಯಾಕ್ಸ್‌ನ ಚಟುವಟಿಕೆಗಳು ಇನ್ನೂ ಶುರುವಾಗಿಲ್ಲ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
https://chat.whatsapp.com/Ge11n7QCiMj5QyPvCc0H19
ಏಷ್ಯಾ ವಲಯದಲ್ಲಿ ಭಾರತವು ಅತಿ ಹೆಚ್ಚು ಸಹಕಾರಿಗಳನ್ನು ಹೊಂದಿರುವ ಎರಡನೇ ದೇಶವೆನಿಸಿದೆ.(ಜಪಾನ್ ನಂತರದ ಸ್ಥಾನ) ಜಾಗತಿಕವಾಗಿ ಆರನೇ ಸ್ಥಾನದಲ್ಲಿದೆ(ಅಮೆರಿಕಾ, ಫ್ರಾನ್ಸ್, ಜರ್ಮನಿ, ಬ್ರೆಜಿಲ್ ಮತ್ತು ಜಪಾನ್ ಮೊದಲ ಐದು ಸ್ಥಾನದಲ್ಲಿರುವ ದೇಶಗಳು). ವಾರ್ಷಿಕ ವಹಿವಾಟಿನ ಲೆಕ್ಕಾಚಾರದಲ್ಲಿ ಭಾರತದ ಇಫ್ಕೋ 72ನೇ ಸ್ಥಾನ, ಅಮುಲ್ 90ನೇ ಸ್ಥಾನ ಮತ್ತು ಕ್ರಿಭ್ಕೋ 236ನೇ ಸ್ಥಾನದಲ್ಲಿದೆ ಎಂದು ನಬಾರ್ಡ್ ವರದಿ ಮಾಹಿತಿ ನೀಡಿದೆ.
ಶ್ವೇತ ಕ್ರಾಂತಿಯ ಪರಿಣಾಮ ಭಾರತದಲ್ಲಿ ಹಾಲು ಉತ್ಪಾದಕ ಡೈರಿಗಳು ಹೆಚ್ಚಾಗಿ ರಚನೆಯಾಗಿ ಹಾಲಿನ ಕೊರತೆಯ ದೇಶ ಎಂಬ ಹಣೆಪಟ್ಟಿ ಕಳಚಿ ಇದೀಗ ದೇಶವು ಜಾಗತಿಕವಾಗಿ ಅತಿಹೆಚ್ಚು ಹಾಲು ಉತ್ಪಾದಿಸುವ ದೇಶ ಎಂಬ ಖ್ಯಾತಿ ಪಡೆದಿದೆ. ಭಾರತದ ಜಿಡಿಪಿಯಲ್ಲಿ ಶೇಕಡಾ 5ರಷ್ಟು ಪಾಲು ಹಾಲು ಮತ್ತು ಹಾಲಿನ ಉತ್ಪನ್ನಗಳ ಮೂಲಕ ಬರುತ್ತಿದೆ ಎಂಬುದು ನಬಾರ್ಡ್ ವರದಿಯ ಮುಖ್ಯ ಅಂಶದಲ್ಲಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694