ಮಂಗಳೂರು: ದೇಶದ ಸ್ವಾತಂತ್ರ್ಯದ ನಿಜ ಅರ್ಥವನ್ನು ದೇಶದ ಜನ ಅರ್ಥೈಸಿಕೊಳ್ಳಬೇಕು, ಹಲವಾರು ಹೋರಾಟಗಾರರ ತ್ಯಾಗ, ಬಲಿದಾನ ಮೂಲಕ ದೊರಕಿಸಿಕೊಟ್ಟಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು ಹಾಗೂ ಇವತ್ತು ದೇಶದ ಬಾಹ್ಯ ಭದ್ರತೆಯ ಜೊತೆ ತಲೆದೋರಿರುವ ಆಂತರಿಕ ಭದ್ರತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದು ನಿವೃತ್ತ ಸೇನಾನಿ ರವಿಚಂದ್ರ ಹೇಳಿದರು.
ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಧ್ವಜಾರೋಹಣಗೈದು ಸಂದೇಶ ನೀಡಿದರು.
ಅಧ್ಯಕ್ಷತೆ ವಹಿಸಿದ ಬ್ಯಾಂಕಿನ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳು ಕೇವಲ ಸರಕಾರಿ ಕಾರ್ಯಕ್ರಮಗಳಾದೇ ದೇಶದ ಸರ್ವ ಜನರ ಸಾಮೂಹಿಕ ಆಚರಣೆಯ ಸ್ವರೂಪವನ್ನು ಪಡೆದುಕೊಳ್ಳಬೇಕೆಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭ ಬ್ಯಾಂಕಿನ ಹಿರಿಯ ಸದಸ್ಯ ಮಣ್ಣಗುಡ್ಡೆ ಯೋಗೀಶ್ ಆಚಾರ್ಯ, ರಾಜೇಂದ್ರ ಪೇಜಾವರ, ಬ್ಯಾಂಕಿನ ಸಲಹೆಗಾರ ಜಯರಾಮ ಶೆಟ್ಟಿ, ಕಾಳಿಕಾ ಸೇವಾ ಸಮಿತಿಯ ಅಧ್ಯಕ್ಷ ವಿವೇಕ್ ಜೆ, ನಿರ್ದೇಶಕಿ ರೇಶ್ಮಾ ಚಂದನ್, ಹಿರಿಯ ವಕೀಲ ವಸಂತ ಅಡ್ಯಂತಾಯ, ಪ್ರಧಾನ ವ್ಯವಸ್ಥಾಪಕ ಸುರೇಶ್ ಕುಮಾರ್ ಬಿ., ಮತ್ತು ಬ್ಯಾಂಕಿನ ಗ್ರಾಹಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.