Author: admin

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಲೆಟ್ ಮರುಪಾವತಿ ಯೋಜನೆಯಡಿಯಲ್ಲಿ ಚಿನ್ನದ ಸಾಲಗಳ ಅಸ್ತಿತ್ವದಲ್ಲಿರುವ ಮಿತಿಯನ್ನು ಹೆಚ್ಚಿಸಿದೆ. ಕೆಲವು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ₹2 ಲಕ್ಷದಿಂದ ₹4 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಶುಕ್ರವಾರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ನೀತಿ ಸಭೆಯ ಫಲಿತಾಂಶಗಳನ್ನು ಪ್ರಕಟಿಸಿದರು. ಗೋಲ್ಡ್ ಲೋನ್ ಎರವಲುದಾರರು ಕೆಲವು ನಗರ ಸಹಕಾರಿ ಬ್ಯಾಂಕ್‌ಗಳಿಂದ ಬುಲೆಟ್ ಮರುಪಾವತಿ ಆಯ್ಕೆಯ ಅಡಿಯಲ್ಲಿ ಈಗ ರೂ 4 ಲಕ್ಷದವರೆಗೆ ಚಿನ್ನದ ಸಾಲವನ್ನು ಪಡೆಯಬಹುದು . ಈ ಕ್ರಮವು ಸಾಲವನ್ನು ಚಿನ್ನದ ಸಾಲವನ್ನು ಮರುಪಾವತಿಸಲು ಬುಲೆಟ್ ಪಾವತಿಗೆ ಆದ್ಯತೆ ನೀಡುವ ಕೆಲವು ಸಾಲಗಾರರಿಗೆ ಹೆಚ್ಚು ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿದೆ. ಬುಲೆಟ್ ಮರುಪಾವತಿ ಆಯ್ಕೆಯಲ್ಲಿ, ಸಾಲಗಾರರು ಸಂಪೂರ್ಣ ಅಸಲು ಮತ್ತು ಬಡ್ಡಿ ಮೊತ್ತವನ್ನು ಸಾಲದ ಅವಧಿಯ ಕೊನೆಯಲ್ಲಿ ಪಾವತಿಸಬೇಕಾಗುತ್ತದೆ.ಅಕ್ಟೋಬರ್ 6 ರಂದು ಆರ್‌ಬಿಐ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಮಾರ್ಚ್ 31, 2023 ರಂತೆ ನಿಗದಿತ ಪಿಎಸ್‌ಎಲ್ ಗುರಿಗಳನ್ನು ಪೂರೈಸಿದ ಯುಸಿಬಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಮಾರ್ಚ್ 31,…

Read More

ಪ್ರಸ್ತುತ ರೆಪೋ ದರ 6.5% ರಷ್ಟು ಇದ್ದು, ಇದನ್ನು ಯಥಾಸ್ಥಿತಿ ಉಳಿಸಿಕೊಳ್ಳಲು ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ನಿರ್ಧರಿಸಿದೆ. ಮುಂಬೈ (ಅಕ್ಟೋಬರ್ 6, 2023): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪ್ರಮುಖ ರೆಪೋ ದರವನ್ನು  ಸತತ ನಾಲ್ಕನೇ ಬಾರಿಗೆ ಬದಲಾಯಿಸದೆ ಇರಲು ತೀರ್ಮಾನಿಸಿದೆ. ಸದ್ಯ ರೆಪೋ ದರ 6.5% ರಷ್ಟು ಇದ್ದು, ಇದನ್ನು ಬದಲಿಸದೆ ಇರಲು ನಿರ್ಧರಿಸಿದೆ. RBI ಇದೀಗ ಸತತ 4 ನೇ ಬಾರಿಯೂ ತನ್ನ ರೆಪೋ ದರವನ್ನು ಬದಲಾಯಿಸದೇ ಇರಲು ತೀರ್ಮಾನಿಸಿದೆ ಹಾಗೂ ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.ರೆಪೋ ದರ ಎಂದರೆ ಏನು ?ರೆಪೋ ದರವು RBI ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವ ಬಡ್ಡಿ ದರವಾಗಿದೆ.

Read More

ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸುವುದು, ಬೆದರಿಸುವುದು ಆತ್ಮಹತ್ಯೆಗೆ ಪ್ರಚೋದನೆಯಾಗಲಾರದು ಸಾಲ ಮರುಪಾವತಿ ಮಾಡಬೇಕೆಂದು ಒತ್ತಾಯಪಡಿಸುವುದು ಅಥವಾ ಬಲವಂತಪಡಿಸುವುದು ಆತ್ಮಹತ್ಯೆಗೆ ಪ್ರಚೋದನೆ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.ನೀಡಿದ ಸಾಲವನ್ನು ಮರಳಿ ಪಡೆಯಲು ಮಾಡುವ ಪ್ರಯತ್ನಗಳು ಆತ್ಮಹತ್ಯೆಗೆ ಪ್ರಚೋದನೆಯಾಗಲಾರದೆಂದು ಮಾನ್ಯ ಉಚ್ಛ ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ ಮತ್ತು ಈ ಕಾರಣದಿಂದ ಆರೋಪಿಯನ್ನು ಐಪಿಸಿ ಸೆಕ್ಷನ್ 306ರ ಅಡಿ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಉಚ್ಛ ನ್ಯಾಯಾಲಯವು ಉಲ್ಲೇಖಿಸಿದೆ ಹಾಗು  ಸಾಲ ಮರುಪಾವತಿಗೆ ಒತ್ತಾಯಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆರೋಪಿ ವಿಧಿಸಿದ್ದ ಶಿಕ್ಷೆಯನ್ನು ಅದು ರದ್ದುಗೊಳಿಸುತ್ತಾ ಈ ಆಭಿಪ್ರಾಯವನ್ನು ವ್ಯಕ್ತಪಡಿಸಿದೆ.

Read More

ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ (ನಿ) ಇದರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ ನಿ. ಇದರ 34ನೇ ಮಹಾ ಸಭೆಯು ದಿನಾಂಕ: 4.09.2023ರಂದು ನಗರದ “ಹೋಟೇಲ್ ಶ್ರೀನಿವಾಸ್ “ನಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಸಿ. ಪ್ರಭಾಕರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಕಾರ್ಯವೈಖರಿ, ಮತ್ತು ಸಂಘ ಬೆಳೆಯಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ಮಾಡುವ ಇಂಗಿತ ವ್ಯಕ್ತಪಡಿಸಿ ಸದಸ್ಯರೆಲ್ಲರೂ ಒಗ್ಗಟ್ಟಿನಲ್ಲಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದರು. ವರದಿ ವರ್ಷದಲ್ಲಿ ಸಂಘವು ಒಟ್ಟು 4013 ಸದಸ್ಯರನ್ನು ಹೊಂದಿದ್ದು ರೂ. 5,42,00,500 ಪಾಲು ಬಂಡವಾಳವನ್ನು, ರೂ. 47,30,92,595 ಠೇವಣಿ ಹೊಂದಿದ್ದು, ರೂ.61,48,98,037 ದುಡಿಯುವ ಬಂಡವಾಳದೊಂದಿಗೆ ಒಟ್ಟು ರೂ.90,01,83,530 ವ್ಯವಹಾರ ನಡೆಸಿದ್ದು ವರ್ಷಾಂತ್ಯಕ್ಕೆ ಒಟ್ಟು ರೂ.43,21,21,950 ಹೊರಬಾಕಿ ಸಾಲ ಇರುತ್ತದೆ. ನಿಧನ ಹೊಂದಿದ ಸಂಘದ ಸದಸ್ಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಾಜ್ಯ ಮಟ್ಟದ ಮತ್ತು ಜಿಲ್ಲಾ ಉತ್ತಮ ಶಿಕ್ಷಕ…

Read More

ಅಕ್ಟೋಬರ್ 3 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI), ನಿಯಮ ಉಲ್ಲಂಘನೆಗಾಗಿ ನಾಲ್ಕು ಸಹಕಾರಿ ಬ್ಯಾಂಕ್‌ಗಳಿಗೆ ವಿತ್ತೀಯ ದಂಡವನ್ನು ವಿಧಿಸಿದೆ ಎಂದು ಘೋಷಿಸಿತು. ಸರ್ವೋದಯ ಸಹಕಾರಿ ಬ್ಯಾಂಕ್, ಧನೇರಾ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್, ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಮಣಿನಗರ ಕೋ-ಆಪರೇಟಿವ್ ಬ್ಯಾಂಕ್ ಗಳು ಈ ಪಟ್ಟಿಯಲ್ಲಿ ಸೇರಿವೆ. ಕೇಂದ್ರ ಬ್ಯಾಂಕ್ ಮಣಿನಗರ ಸಹಕಾರಿ ಬ್ಯಾಂಕ್‌ಗೆ 1 ಲಕ್ಷ ರೂಪಾಯಿ ದಂಡ, ಜನತಾ ಸಹಕಾರಿ ಬ್ಯಾಂಕ್‌ಗೆ 3.50 ಲಕ್ಷ ರೂಪಾಯಿ ದಂಡ, ಧನೇರಾ ಮರ್ಕೆಂಟೈಲ್ ಕೋ ಆಪರೇಟಿವ್ ಬ್ಯಾಂಕ್‌ಗೆ 6.50 ಲಕ್ಷ ರೂಪಾಯಿ ದಂಡ ಮತ್ತು 6 ಲಕ್ಷ ರೂಪಾಯಿ ದಂಡ ವಿಧಿಸಿದೆ. ಬಿಡುಗಡೆ ಮಾಡಿರುವ ಪ್ರಕಾರ ಸರ್ವೋದಯ ಸಹಕಾರಿ ಬ್ಯಾಂಕ್‌ಗೆ ವಿತ್ತೀಯ ದಂಡವನ್ನು ವಿಧಿಸಲಾಗಿದೆ ಏಕೆಂದರೆ ಬ್ಯಾಂಕ್ ತನ್ನ ನಿರ್ದೇಶಕರೊಬ್ಬರ ಸಂಬಂಧಿಗೆ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದೆ ಮತ್ತು ನಿರ್ದೇಶಕರ ಸಂಬಂಧಿಕರು ಮತ್ತು ಇಂಟರ್-ಬ್ಯಾಂಕ್ ಒಟ್ಟು ಮಾನ್ಯತೆ ಮಿತಿಯನ್ನು ಉಲ್ಲಂಘಿಸಿದ್ದಾರೆ. ಇದಲ್ಲದೆ, ಬ್ಯಾಂಕ್ ಇಂಟರ್-ಬ್ಯಾಂಕ್ ಕೌಂಟರ್‌ಪಾರ್ಟಿ ಮಾನ್ಯತೆ ಮಿತಿಯನ್ನು…

Read More

ಮೈಸೂರು ದಸರಾ ಮಹೋತ್ಸವ-2023ರ ಅಂಗವಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಮತ್ತು ದಸರಾ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಸಹಯೋಗದೊಂದಿಗೆ ಮೈಸೂರು ಕಲಾ ಮಂದಿರದ ಆವರಣದಲ್ಲಿ ಅ.14 ರಿಂದ ನಡೆಯುವ ಸಾಂಪ್ರದಾಯಿಕ ಕಾವ್ಯ ಶಿಲ್ಪಕಲಾ ಶಿಬಿರಕ್ಕೆ ಭಾಗವಹಿಸಲು ಶಿಲ್ಪಿಗಳಾಗಿ ಆಯ್ಕೆಯಾಗಿರುವ ಸಮಿತ್ರ ಸ್ಪಂದನ ಸ್ವಸಹಾಯ ಗುಂಪಿನ ಅಧ್ಯಕ್ಷರಾದ ಶ್ರೀ ಶಶಿಧರ ಆಚಾರ್ಯ ಇವರಿಗೆ ಸ್ಪಂದನ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ದಸರಾ ಮಹೋತ್ಸವ-2023ರ ಅಂಗವಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಮತ್ತು ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ 2023 ಸಹಯೋಗದೊಂದಿಗೆ ಸಾಂಪ್ರದಾಯಿಕ ಕಾವ್ಯ ಶಿಲ್ಪಕಲಾ ಶಿಬಿರವನ್ನು ದಿನಾಂಕ:14-10-20023 ರಿಂದ 15-10-2023ರವರೆಗೆ ಕಲಾಮಂದಿರ ಆವರಣ, ಮೈಸೂರು ಇಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರಕ್ಕೆ ಅಕಾಡೆಮಿಯು ಶ್ರೀ ಶಶಿಧರ ಆಚಾರ್ಯ ರನ್ನು ಶಿಲ್ಪಿಗಳಾಗಿ ಆಯ್ಕೆ ಮಾಡಿದ್ದು, ಶಿಬಿರದಲ್ಲಿ ಭಾಗವಹಿಸಿ ಸೃಜನಶೀಲ ಶಿಲ್ಪಗಳನ್ನು ರಚಿಸಿಕೊಡಲು ಕೋರಿದೆ. ಈ ಸಂದರ್ಭದಲ್ಲಿ ಸ್ಥಳೀಯ ವಸತಿ ಮತ್ತು ಇನ್ನಿತರ ವ್ಯವಸ್ಥೆಯ ಅನುಕೂಲತೆಯನ್ನು ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ…

Read More

ಕರ್ನಾಟಕ ಪ್ರಗತಿಪರ ಸಹಕಾರಿಗಳ ವೇದಿಕೆಯ ವತಿಯಿಂದ ಸಹಕಾರಿ ಸಂಘಗಳಿಗೆ ಅನ್ವಯಿಸುವಂತೆ ಆದಾಯ ತೆರಿಗೆ ಮತ್ತು ಸಹಕಾರ ಚುನಾವಣೆಯ ಕುರಿತು ದಿನಾಂಕ 07-10-2023, ಶನಿವಾರದಂದು ಕಾರ್ಯಗಾರ ನೆಡೆಸಲು ಉದ್ದೇಶಿಸಿದೆ. ಈ ಒಂದು ದಿನದ ಕಾರ್ಯಾಗಾರಕ್ಕೆ ಪೋಷಕ ಸಹಕಾರ ಸಂಘಗಳು, ಸಹಕಾರ ಸಂಘದ ಪ್ರತಿನಿಧಿಗಳು ಹಾಗೂ ಆಸಕ್ತಿಯುಳ್ಳ ಎಲ್ಲಾ ಸಹಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲು ಕೋರಿದೆ. ಕಾರ್ಯಗಾರ ನೆಡೆಯುವ ಸ್ಥಳ ಪ್ರಕಾಶ್ ಕೆಫೆ, ಚಾಮರಾಜನಗರ, ಬೆಂಗಳೂರು.

Read More

ಬೆಳ್ತಂಗಡಿ : ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆಯು ಸೆ. 24ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಜರಗಿತು. ವಾರ್ಷಿಕ ಲೆಕ್ಕಪತ್ರವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ಮಂಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ನಿರ್ದೇಶಕರಾದ ಸೋಮೇ ಗೌಡ, ನಾರಾಯಣಗೌಡ ದೇವಸ್ಯ, ಜಯಾನಂದ ಗೌಡ,ಗೋಪಾಲಕೃಷ್ಣ ಗುಲ್ಲೋಡಿ, ಮಾಧವ ಗೌಡ, ಗೋಪಾಲಕೃಷ್ಣ ಜಿ. ಕೆ, ಸುರೇಶ್ ಕೌಡಂಗೆ, ಯಶವಂತ್ ಬನಂದೂರು, ಶ್ರೀಮತಿ ಉಷಾದೇವಿ ಕಿನ್ಯಾಜೆ,ಶ್ರೀಮತಿ ಭವಾನಿ ಗೌಡ, ಸುನಿಲ್ ಅನಾವು ಉಪಸ್ಥಿತರಿದ್ದರು. ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿ,ಸೋಮಂತಡ್ಕ ಶಾಖೆಯ ಉಮೇಶ್ ಗೌಡ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಜಯಾನಂದ ಗೌಡ ಧನ್ಯವಾದವಿತ್ತರು. ತದನಂತರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸಂಘದ ಸದಸ್ಯರಿಂದ ಕೆಲವೊಂದು ಭಾಗದಲ್ಲಿ ಶಾಖೆ ತೆರೆಯಲು ಹಾಗೆಯೇ ಸಂಘದ ವತಿಯಿಂದ ಶಾಖೆ ತೆರೆಯಲು ಪ್ರಸ್ತಾವನೆ ಸಲ್ಲಿಸಿದರು. ಸಂಘದ ಅಧ್ಯಕ್ಷರ ಮಾತು ಸಂಘವು ಸದಸ್ಯರ ಮತ್ತು ಸಿಬ್ಬಂಧಿಗಳ ಬೆಂಬಲದಿಂದ 55.63ಕೋಟಿ ವ್ಯವಹಾರ ನಡೆಸಿ 27.92ಲಕ್ಷ ಲಾಭಗಳಿಸಿದ್ದು ಶೇಕಡಾ 8%ಡಿವಿಡೆಂಟ್ ನೀಡುವುದಾಗಿ…

Read More

ಉಜಿರೆ: ಉಜಿರೆ ಅನುಗ್ರಹ ವಿವಿದೋದ್ದೇಶ ಸಹಕಾರಿ ಸಂಘದ 13ನೇ ವಾರ್ಷಿಕ ಮಹಾಸಭೆಯುಸೆ.23ರಂದು ಉಜಿರೆ ಎಸ್. ಕೆ. ಮೆಮೋರಿಯಲ್ ನಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ ವಲೇರಿಯನ್ ರೋಡ್ರಿಗಸ್ ಅವರು ಅಧ್ಯಕ್ಷತೆ ವಹಿಸಿದರು.ಉಪಾಧ್ಯಕ್ಷ ಅನಿಲ್ ಡಿಸೋಜಾ ನಿರ್ದೇಶಕರಾದ ಸಿಲ್ವಸ್ಟರ್ ಮೋನಿಸ್, ಸುನಿಲ್ ಮೊರಾಸ್, ಅರುಣ್ ಸಂದೇಶ್ ಡಿಸೋಜಾ, ಗೀತಾ ಡಿಸೋಜಾ, ಫೆಲಿಕ್ಸ್ಡಿಸೋಜಾ, ಬೆನೆಡಿಕ್ಟಾ ಸಲ್ದಾನ ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘವು ಒಟ್ಟು ರೂ. 34.59 ಲಕ್ಷ ಪಾಲು ಬಂಡವಾಳ ಮತ್ತು 3322 ಸದಸ್ಯರನ್ನು ಹೊಂದಿದೆ. 4,159.83 ಲಕ್ಷ ಠೇವಣಿ ಸಂಗ್ರಹಿಸಿ 169 ಕೋಟಿ ವ್ಯವಹಾರ ನಡೆಸಿ ರೂ 50.67 ಲಕ್ಷ ನಿವ್ವಳ ಲಾಭ ಗಳಿಸಿ ಶೇಕಡ 18% ಡಿವಿಡೆಂಡ್ ಘೋಷಿಸಲಾ ಯಿತು.ಸಾಮಾಜಿಕ ಚಟುವಟಿಕೆಗಳಿಗೆ ಸಾರ್ವಜನಿಕ ಹಿತಾಸಕ್ತಿ ನಿಧಿಯಿಂದ ರೂ. 2,45,547/- ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ರೂ. 1,06,969/- ವ್ಯಯಿಸಲಾಗಿದೆ ಎ0ದು ಅಧ್ಯಕ್ಷರು ತಿಳಿಸಿದರು. ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುಬೇದಾರ್ ಮೆಲ್ವಿನ್ ಫರ್ನಾಂಡಿಸ್, ಉಜಿರೆ ಗ್ರಾಮ ಪಂಚಾಯತ್ ನೂತನ…

Read More

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ( ನಿ.) ಬೆಂಗಳೂರು ಇದರ ೧೯ ನೇ ವಾರ್ಷಿಕ ಸಾಮಾನ್ಯ ಸಭೆಯು ಕೆ.ಇ.ಬಿ ಇಂಜಿನಿಯರ್ಸ್,ಸರ್.ಎo ವಿಶ್ವೇಶ್ವರಯ್ಯ ಸಭಾಂಗಣ, ಸಿಲ್ವರ್ ಜುಬಿಲಿ ಬಿಲ್ಡಿಂಗ್, ಬೆಂಗಳೂರಿನಲ್ಲಿ ಮಹಾಮಂಡಳದ ಅಧ್ಯಕ್ಷರಾದ ಶ್ರೀಮತಿ ಕೆ. ಲಲಿತ ಜಿ. ಟಿ. ದೇವೇಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಾಮಾನ್ಯ ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚು ಮುದ್ರಾಂಕ ಶುಲ್ಕ ಪಡೆದು ಹಾಗೂ ಇ-ಸ್ಟಾಂಪಿoಗ್ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿರುವ ಸಹಕಾರ ಸಂಘಗಳಿಗೆ ಸನ್ಮಾನ ಸಮಾರಂಭವು ಜರುಗಿತು.ಈ ಸಂದರ್ಭದಲ್ಲಿ ೨೦೨೨-೨೩ ನೇ ಸಾಲಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅತೀ ಹೆಚ್ಚು ಮೊತ್ತದ ಇ ಸ್ಟಾಂಪಿoಗ್ ಮುದ್ರಿಸಿರುವ ಸಂಘ ಎಂಬ “ಪ್ರಶಂಸಾ ಫಲಕವ” ನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಹಾಗೂ ಮಹಾಮಂಡಳದ ನಿರ್ದೇಶಕರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರ್ ರವರಿಗೆ ಮಹಾಮಂಡಳದ ಅಧಕ್ಷ್ಯರಾದ ಶ್ರೀಮತಿ ಕೆ. ಲಲಿತ ಜಿ. ಟಿ. ದೇವೇಗೌಡ ಇವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸನ್ಮಾನ…

Read More