ಮಹತ್ವದ ತೀರ್ಪು ಪ್ರಕಟಿಸಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು: ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿ ಸೆಕ್ಷನ್ 128A ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಗುರುವಾರ ಮಹತ್ವದ ತೀರ್ಪು ನೀಡಿದೆ.
ಇದರಿಂದ ಸಹಕಾರ ಸಂಘಗಳ ಸ್ವಾಯತ್ತೆಗೆ ಧಕ್ಕೆ ಎಂದು ಸಹಕಾರ ಸಂಘಗಳ ಪರ ಹಿರಿಯ ವಕೀಲ ಎ.ಕೇಶವ ಭಟ್ ವಾದಿಸಿದ್ದರು. ಇದು ಸಂವಿಧಾನಬಾಹಿರ. ತಿದ್ದುಪಡಿ ಸಂವಿಧಾನದ ಆರ್ಟಿಕಲ್ 19(1)ಸಿ ಯ ಉಲ್ಲಂಘನೆ ಎಂದು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಹೈಕೋರ್ಟ್ ಪೀಠ ತೀರ್ಪು ಪ್ರಕಟಿಸಿದೆ.
https://chat.whatsapp.com/Ge11n7QCiMj5QyPvCc0H19
ರಾಜ್ಸಯ ಸರ್ಕಾರವು 2023ರಲ್ಲಿ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ಮಾಡಿದ್ದ ತಿದ್ದುಪಡಿಯನ್ನು ನ್ಯಾಯಾಲಯ ಸಂವಿಧಾನಬಾಹಿರವೆಂದು ಆದೇಶಿಸಿದೆ.
ಈ ವಿಚಾರದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ಗುರುವಾರ ಪ್ರಕಟಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಕೇಶವ್ ಭಟ್, ಮೊದಲಿನಿಂದಲೂ ಸಹಕಾರ ಸಂಘಗಳ ಬಳಿ ಇದ್ದ ಸಿಬ್ಬಂದಿಯ ನೇಮಕ, ವರ್ಗಾವಣೆ ಮತ್ತು ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನು ಸರ್ಕಾರ ಕಬಳಿಸಿದೆ. ಈ ನಿಟ್ಟಿನಲ್ಲಿಯೇ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ತಿದ್ದುಪಡಿ ಮಾಡಿದ್ದು ಇದು ಸಂವಿಧಾನಬಾಹಿರವಾಗಿದೆ ಎಂದಿದ್ದರು.
ಅಲ್ಲದೆ, ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಸರ್ಕಾರ ಸೇರಿದಂತೆ ಮೂರನೇ ವ್ಯಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಇದರ ಹೊರತಾಗಿ ಕಾರ್ಯಾಚರಿಸಿದರೆ ಸಂವಿಧಾನಕದ ಕಲಂ 19(ಸಿ) ಉಲ್ಲಂಘನೆಯಾಗುತ್ತದೆ. ಇಲ್ಲೂ ಸಹ ಸರ್ಕಾರ ಏಕಪಕ್ಷೀಯವಾಗಿ ಕಾಯ್ದೆಗೆ ತಿದ್ದುಪಡಿ ಮಾಡಿ ಸಹಕಾರ ಸಂಘಗಳ ಬಳಿ ಇರುವ ಅಧಿಕಾರವನ್ನು ತನ್ನ ವ್ಯಾಪ್ತಿಗೆ ಒತ್ತಾಯಪೂರ್ವಕವಾಗಿ ತೆಗೆದುಕೊಂಡಿದೆ. ಇದು ನಿಯಮ ಬಾಹಿರ ಮತ್ತು ಸರ್ಕಾರಕ್ಕೆ ಸಹಕಾರ ಸಂಘಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಅಧಿಕಾರವಿಲ್ಲ ಎಂದು ಅವರು ತಿಳಿಸಿದ್ದರು.
ಅಲ್ಲದೆ, ಸರ್ಕಾರ ಸಿಬ್ಬಂದಿ ನೇಮಕ ಮತ್ತು ವರ್ಗಾವಣೆ ಅಧಿಕಾರ ತೆಗೆದುಕೊಂಡರೆ ಅದು ರಾಜಕೀಯಕ್ಕೆ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೊನೆಗೆ ಅದು ಸಹಕಾರ ಸಂಘಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ತಿದ್ದುಪಡಿಯನ್ನು ರದ್ದುಗೊಳಿಸಬೇಕು, ಸಹಕಾರ ಸಂಘಗಳಿಗೆ ಇರುವ ತನ್ನ ಸಿಬ್ಬಂದಿ ನೇಮಕದ ಮೇಲಿನ ಸ್ವಾತಂತ್ರ್ಯವನ್ನು ಸಂಘಗಳಿಗೆ ಬಿಟ್ಟುಕೊಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694