ಮೈಸೂರು: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಆಶೀರ್ವಾದದಿಂದ 2019ರಲ್ಲಿ ಸ್ಥಾಪನೆಗೊಂಡ ಮೈಸೂರಿನ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸೌಹಾರ್ದ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಜಗದೀಶ್ ಹೆಬ್ಬಾರ್ ಕಾರಿಜ ಆಯ್ಕೆಯಾಗಿದ್ದಾರೆ.
2024-25 ರಿಂದ 2029-30 ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆ ಆಗಸ್ಟ್ 4ರಂದು ನಡೆದು ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಪದಾಧಿಕಾರಿಗಳ ಚುನಾವಣೆ ಆಗಸ್ಟ್ 12ರಂದು ನಡೆದಿದ್ದು, ಅಧ್ಯಕ್ಷರಾಗಿ ಜಗದೀಶ್ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಕಳೆದ 25 ವರ್ಷಗಳಿಂದ ಅನೇಕ ಸಂಘ ಸಂಸ್ಥೆಗಳಲ್ಲಿ ನಾಯಕತ್ವ ವಹಿಸಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದು ಜಾಗರಣ ವೇದಿಕೆ, ಸಹಕಾರ ಭಾರತಿ, ವಿಶ್ವ ಹಿಂದು ಪರಿಷದ್‌ಗಳಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿರುತ್ತಾರೆ. ಪ್ರಸ್ತುತ ವಿಶ್ವ ಹಿಂದು ಪರಿಷತ್‌ನ ಮೈಸೂರು ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ 24 ವರ್ಷಗಳ ಅನುಭವದೊಂದಿಗೆ ತರಬೇತುದಾರರಾಗಿ, ಸಲಹೆಗಾರರಾಗಿ ಸಹಕಾರ ಸಂಘಗಳ ಸ್ಥಾಪನೆಯಲ್ಲಿ ಸಹಾಯಕರಾಗಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಸಂಸ್ಥೆಯ ಉಪಾಧ್ಯಕ್ಷರಾಗಿ ಆರೂರು ವಾಸುದೇವ ರಾವ್ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಸ್ವತಃ ಇಂಜಿನಿಯರ್ ಆಗಿದ್ದು, ಬಡಾವಣೆ ಅಬಿವೃದ್ಧಿದಾರರಾಗಿ ‘ಶ್ರೀಕೃಷ್ಣ ಪ್ರಾಜೆಕ್ಟ್’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇದಲ್ಲದೆ, ಮೈಸೂರಿನ ‘ಶ್ರೀ ವಿವೇಕಬಾಲೋದ್ಯಾನ’ ಎಂಬ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಂ.ಕೃಷ್ಣದಾಸ್ ಪುರಾಣಿಕ್, ಪಿ.ಜಯರಾಮ್ ಭಟ್, ಜೆ.ಸುಬ್ರಮಣ್ಯ, ಪಿ.ವಿ.ನಾಗೇಶ್, ಪಿ.ಎಸ್.ಚಂದ್ರಶೇಖರ್, ಸುಪ್ರಭಾ ಎಸ್.ಭಟ್, ಶುಭಾ ಶಾಸ್ತ್ರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಐದು ವರ್ಷಗಳಲ್ಲಿ, ಪ್ರತಿ ವರ್ಷಾಂತ್ಯದಲ್ಲಿ ಸದಸ್ಯರಿಂದ ಬರಬೇಕಾದ ಯಾವುದೇ ಸಾಲದ ಕಂತುಗಳು ಬಾಕಿಯಿಲ್ಲದಂತೆ ನಿರ್ವಹಣೆ ಮಾಡಲಾಗಿರುವುದು ಈ ಸಹಕಾರ ಸಂಘದ ಹೆಗ್ಗಳಿಕೆ. ಇದಲ್ಲದೆ, ಮೊದಲ ಎರಡು ವರ್ಷಗಳಲ್ಲಿ ನಷ್ಟವಿದ್ದರೂ, ನಂತರದ ವರ್ಷಗಳಲ್ಲಿ ಲಾಭ ಗಳಿಸಿ, 2023-24ರ ವರ್ಷಾಂತ್ಯದಲ್ಲಿ ರೂ. 4,01,303/-ಗಳಷ್ಟು ಲಾಭ ಗಳಿಸಿರುತ್ತದೆ. ಸದರಿ ರೂ. 47.60 ಲಕ್ಷ ಠೇವಣಿ, ರೂ. 4.33 ಲಕ್ಷ ಮೀಸಲು ನಿಧಿ, ರೂ. 10.71 ಲಕ್ಷ ಮೀಸಲು ಠೇವಣಿ, ಮತ್ತು ರೂ. 14.55 ಲಕ್ಷ ಷೇರು ಬಂಡವಾಳವನ್ನು ಹೊಂದಿದ್ದು, ರೂ. 55.86 ಸಾಲ ನೀಡಿದ್ದು, ಮಾದರಿ ಆರೋಗ್ಯಕರ ಸಹಕಾರ ಸಂಘವಾಗಿ ಬೆಳೆದುಬಂದಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694