Author: admin
ಉಪ್ಪಿನಂಗಡಿ: ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ವಾರ್ಷಿಕ 4.04 ಲಕ್ಷ ರೂ. ಲಾಭ ಗಳಿಸಿದ್ದು ಲಾಭಾಂಶದಲ್ಲಿ ಅರ್ಹ ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರೋಬರ್ಟ್ ಡಿಸೋಜ ಹೇಳಿದರು. ಉಪ್ಪಿನಂಗಡಿಯ ದೀನರ ಕನ್ಯಾಮಾತೆ ದೇವಾಲಯದ ಹಾಲ್‌ನಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ವರ್ಷಾಂತ್ಯದಲ್ಲಿ 41,44,500.00 ರೂ. ಪಾಲು ಬಂಡವಾಳ ಸಂಗ್ರಹಿಸಿದ್ದು, 8,14,26,876.15 ರೂ. ವಿವಿಧ ಖಾತೆಗಳಲ್ಲಿ ಜಮೆ ಇರುತ್ತದೆ. ಆರ್ಥಿಕ ವರ್ಷದ ಕೊನೆಗೆ ರೂ. 33,77,59,845.75 ವ್ಯವಹಾರ ಮಾಡಿದ್ದು 4.04 ಲಕ್ಷ ಲಾಭ ಬಂದಿದೆ ಎಂದು ಮಾಹಿತಿ ನೀಡಿದರು. https://chat.whatsapp.com/Ge11n7QCiMj5QyPvCc0H19 ಸಂಘದ ನಿರ್ದೇಶಕರಾದ ಗ್ರೆಗೋರಿ ಲೋಬೊ, ವಿನ್ಸೆಂಟ್ ಮಿನೇಜಸ್, ಸಿಲ್ವೆಸ್ಟರ್ ವೇಗಸ್, ಸೆಬೆಸ್ಟಿಯನ್ ಲೋಬೊ, ಐರಿನ್ ಬೋಬೊ ಉಪಸ್ಥಿತರಿದ್ದರು. ಉಪ್ಪಿನಂಗಡಿ ಕೇಂದ್ರ ಕಚೇರಿಯ ಗುಮಾಸ್ತೆ ತನುಶ್ರೀ ಹಾಗೂ ಕಡಬ ಶಾಖೆಯ ಪೂಜಾಶ್ರೀ ಬಿ. ಪ್ರಾರ್ಥಿಸಿದರು. ನೆಲ್ಯಾಡಿ ಶಾಖೆಯ ಗುಮಾಸ್ತ ಜೋನ್ನಿ ಡಿಸೋಜ ಹಿಂದಿನ ಸಭೆಯ ನಡವಳಿಗಳನ್ನು…
ಮಹಾಸಭೆಯಲ್ಲಿ ಶೇ.20 ಡಿವಿಡೆಂಡ್ ಘೋಷಣೆ ಉತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಗೌರವಾರ್ಪಣೆ ಕಾರ್ಕಳ: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘವು ಆರ್ಥಿಕ ವರ್ಷದಲ್ಲಿ ರೂ.147 ಕೋಟಿ ವ್ಯವಹಾರ ನಡೆಸಿದ್ದು ರೂ.55.46 ಲಕ್ಷ ನಿವ್ವಳ ಲಾಭ ಗಳಿಸಿದೆ. https://chat.whatsapp.com/Ge11n7QCiMj5QyPvCc0H19 ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸಂತೋಷ್ ರಾವ್ ಮಾತನಾಡಿ ಸಂಘದ 2023-2024ನೇ ಸಾಲಿನಲ್ಲಿ ಸಂಘದ ಪ್ರಗತಿ ಹಾಗೂ ಸಂಘವು ಆರ್ಥಿಕ ಸಾಲಿನಲ್ಲಿ ನಡೆಸಿದ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವಾರ್ಷಿಕ ಸಾಲಿನ ಅಂತ್ಯಕ್ಕೆ ಸಂಘವು ರೂ.30.55 ಲಕ್ಷ ಪಾಲು ಬಂಡವಾಳ ಹೊಂದಿದ್ದು ರೂ. 29.57 ಕೋಟಿ ಠೇವಣಿ ಸಂಗ್ರಹವಾಗಿದೆ. ರೂ.25.57 ಕೋಟಿ ಸಾಲ ವಿತರಿಸಿದ್ದು ರೂ. 34.63 ಕೋಟಿ ದುಡಿಮೆ ಬಂಡವಾಳ ಹೊಂದಿದೆ. ಶೇ.2೦ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಅರುಣ್ ಕುಮಾರ್ ಎಸ್.ವಿ ಇವರನ್ನು ಸಂಘದ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಭೆಯಲ್ಲಿ ಘೋಷಿಸಿದರು. ಅರುಣ್…
ಪಿಯುಸಿ, ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಗುರುಪುರ: ಎಡಪದವು ವ್ಯವಸಾಯ ಸೇವಾ ಸಹಕಾರ ಸಂಘ ಇದರ 2023-24ನೇ ಮಹಾಸಭೆ ಸಂಘದ ಅಧ್ಯಕ್ಷ ನೀಲಯ ಎಂ.ಅಗರಿಯವರ ಅಧ್ಯಕ್ಷತೆಯಲ್ಲಿ ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಸಾಧನ ಸಭಾಂಗಣದಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿ ಎಸ್ 2023-24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, 2024-2025ನೇ ಸಾಲಿನ ಆಯ-ವ್ಯಯ ಪಟ್ಟಿ ಮುಂದಿನ ಅಭಿವೃದ್ಧಿ ಯೋಜನೆಗಳನ್ನು ಮಂಡಿಸಿದರು. https://chat.whatsapp.com/Ge11n7QCiMj5QyPvCc0H19 ಒಟ್ಟು 4250 “ಎ” ತರಗತಿ ಸದಸ್ಯರಿದ್ದು ಒಟ್ಟು ಠೇವಣಿ ರೂ. 28.81 ಕೋಟಿ ಆಗಿದೆ. ಸದಸ್ಯರ ಬೇಡಿಕೆಗೆ ಅನುಗುಣವಾಗಿ ರೂ. 24.76 ಕೋಟಿ ಸಾಲ ವಿತರಿಸಲಾಗಿದೆ. ಈ ಪೈಕಿ ರೈತ ಸದಸ್ಯರಿಗೆ ರೂ.6.9 ಕೋಟಿ ಕೃಷಿ ಉದ್ದೇಶಗಳಿಗೆ ಸಾಲ ವಿತರಿಸಿ ಶೇಕಡಾ 96ರಷ್ಟು ಸಾಲ ವಸೂಲಾಗಿದೆ. ಸಂಘವು ರೂ.53.34 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇಕಡಾ 20 ಡಿವಿಡೆಂಡ್ ಘೋಷಿಸಿದೆ. 109 ನವೋದಯ ಸ್ವ-ಸಹಾಯ ಗುಂಪು ರಚಿಸಿ, ರೂ.2.42 ಕೋಟಿ ಸಾಲ ನೀಡಲಾಗಿದೆ.…
ಮಂಗಳೂರು: 2023-24ನೇ ಸಾಲಿನಲ್ಲಿ ಅತ್ಯಧಿಕ ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳನ್ನು ಖರೀದಿಸಿ ಮಾರಾಟ ಮಾಡಿರುವುದಕ್ಕೆ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘ ನಿಯಮಿತದ ಮಹಾಸಭೆಯಲ್ಲಿ ಮಂಗಳವಾರ ಎಡಪದವು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ದ್ವಿತೀಯ ಬಹುಮಾನ ನೀಡಿ ಪುರಸ್ಕರಿಸಿದೆ. https://chat.whatsapp.com/Ge11n7QCiMj5QyPvCc0H19 ಸಂಸ್ಥೆಯ ಪರವಾಗಿ ಅಧ್ಯಕ್ಷ ನೀಲಯ ಅಗರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿ ಅವರು ಅಭಿನಂದನಾ ಪತ್ರ ಸ್ವೀಕರಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ, ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಂಗಳೂರು: ಪದವು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಪದವು ಕೈಕಂಬ, ಮಂಗಳೂರು, ಇದರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷೆ ಸುಮನಾ ಶರಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2023-24ರ ಸಾಲಿನಲ್ಲಿ 2.72 ಕೋಟಿ ರೂ. ಪಾಲು ಬಂಡವಾಳ ಹೊಂದಿದ್ದು ರೂ. 43.73 ಕೋಟಿ ಠೇವಣಿ ಹಾಗೂ ರೂ. 7.12 ಕೋಟಿ ನಿಧಿಗಳು ಇದೆ. ರೂ.38.81 ಕೋಟಿ ಸಾಲದ ಹೊರಬಾಕಿ ಇದೆ. 2023-24ರ ಸಾಲಿನಲ್ಲಿ ರೂ. 1.35 ಕೋಟಿ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಿಸಲಾಗಿದೆ. ಸದ್ರಿ ಸಂಘವು ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ಎ ತರಗತಿ ಕಾಯ್ದುಕೊಂಡಿದೆ. ಸಂಘದ ಆರ್ಥಿಕ ಲೆಕ್ಕಪತ್ರಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಂಡು ಮಂಜೂರು ಮಾಡಲಾಯಿತು. ಅಧ್ಯಕ್ಷೆ ಸುಮನಾ ಶರಣ್ ಸ್ವಾಗತಿಸಿ, ಸಂಘದ ಸಮಗ್ರ ಚಿತ್ರಣವನ್ನು ವಿವರಿಸಿದರು. 2024-25ರ ಸಾಲಿಗೆ ಸಂಘದ ಕಾರ್ಯಚಟುವಟಿಕೆಗಳ ವಿವರಣೆ ನೀಡಿ ಅಭಿವೃದ್ಧಿಗಾಗಿ ಸರ್ವ ಸದಸ್ಯರ ಸಹಕಾರ ಕೋರಿದರು. https://chat.whatsapp.com/Ge11n7QCiMj5QyPvCc0H19…
14.26 ಕೋಟಿ ರೂ. ವ್ಯಾಪಾರ ವಹಿವಾಟು, ಶೇ.15 ಡಿವಿಡೆಂಡ್ ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ ಮಂಗಳೂರು (ಹಾಪ್‌ಕಾಮ್ಸ್) ಇದರ 2023-24ನೇ ಸಾಲಿನ ಮಹಾಸಭೆ ಬಲ್ಮಠದ ಶಾಂತಿ ನಿಲಯದಲ್ಲಿ ಜರಗಿತು. https://chat.whatsapp.com/Ge11n7QCiMj5QyPvCc0H19 ಸಂಸ್ಥೆಯು ವರದಿ ವರ್ಷದಲ್ಲಿ 14.26 ಕೋಟಿ ರೂ. ವ್ಯಾಪಾರ ವಹಿವಾಟಿನೊಂದಿಗೆ 34.86 ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ಅನ್ನು ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಘೋಷಣೆ ಮಾಡಿದರು. ಮುಂದಿನ ಕರ್ನಾಟಕ ಮಹಾಮಂಡಳದ ಯೋಜನೆಯಲ್ಲಿ ತೋಟಗಾರಿಕೆ ಅನುದಾನದಿಂದ ಪಡೀಲಿನ ತೋಟಗಾರಿಕೆ ಇಲಾಖೆಯ ಖಾಲಿ ಇರುವ ಸ್ಥಳದಲ್ಲಿ ರೈತರಿಂದ ತೆಂಗಿನಕಾಯಿ ಖರೀದಿಸುವ ಮತ್ತುಸಗಟು ವ್ಯಾಪಾರ ಕೇಂದ್ರದ ಮೂಲಭೂತ ಸೌಕರ್ಯಕ್ಕಾಗಿ 70 ಲಕ್ಷ ರೂ. ಅನುದಾನ ಮತ್ತುತೆಂಗಿನಕಾಯಿ ಸುಲಿಯುವ ವಿದ್ಯುತ್ ಚಾಲಿತ ಯಂತ್ರೋಪಕರಣ ಖರೀದಿಗಾಗಿ 4.25 ಲಕ್ಷ ರೂ. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ವರದಿ ವರ್ಷದಲ್ಲಿ ಹಾಪ್‌ಕಾಮ್ಸ್ ಸಂಸ್ಥೆಯು ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯಲ್ಲಿ ಮುಂದುವರಿದಿರುತ್ತದೆ.…
ಮಕ್ಕಳಿಗೆ ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಂಗಳೂರು ಸ್ಟೋರ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಭಾಸ್ಕರ್ ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಹಕಾರಿಯ ಅಧ್ಯಕ್ಷ ಭಾಸ್ಕರ್ ರಾವ್ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಿಸಿದರು. ಜೆ.ಕೊರಗಪ್ಪ, ಯು.ಟಿ.ಇಫ್ತಿಕಾರ್ ಫರೀದ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು. ಉಷಾ ಭವಾನಿ ಶಂಕರ್, ಶುಭಾ ಪ್ರಶಾಂತ್, ನಾಗಪ್ರಭ ಕೃಷ್ಣ ಭಟ್, ಸುಧೀರರಾಜ್ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ, ವೈದ್ಯಕೀಯ ನೆರವು ವಿತರಣೆ ಕಾರ್ಯಕ್ರಮ ನಡೆಯಿತು. https://chat.whatsapp.com/Ge11n7QCiMj5QyPvCc0H19 ಸಹಕಾರಿಯ ಸದಸ್ಯರಾದ ಸತೀಶ್ ನಾಯಕ್, ನಾನಿರ್ದೇಶಿತ ಕಾರ್ಪೊರೇಟರ್ ಸತೀಶ್ ಪೆಂಗಾಲ್, ಸಮಾಜಸೇವಕಿ ಮೋನಾ ಟೆಲ್ಲಿಸ್, ೫೫ ವರ್ಷಗಳಿಂದ ಕಾರು ಚಾಲಕರಾಗಿರುವ ಹಿರಿಯರಾದ ನಾರಾಯಣ, ಸಮಾಜಸೇವಕ ರಘುವೀರ್ ಅವರನ್ನು ಗೌರವಿಸಲಾಯಿತು. ಬಳಿಕ ಯು.ಟಿ ಇಫ್ತಿಕಾರ್ ಫರೀದ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಐವನ್…
ಬಂಟ್ವಾಳ: ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆಯಿತು. https://chat.whatsapp.com/Ge11n7QCiMj5QyPvCc0H19 ಸಂಘದ ಅಧ್ಯಕ್ಷ ಕೆ.ಜಯಂತ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಂತ ನಾಯಕ್ ಸಂಘದ ಸದಸ್ಯರಿಗೆ ಲಾಭಾಂಶದಲ್ಲಿ ಶೇ.25 ಡಿವಿಡೆಂಡ್ ಘೋಷಿಸಿದರು. ನೂತನವಾಗಿ ಆರಂಭವಾಗಲಿರುವ ಮಂಗಲಪದವು ಶಾಖೆಯ ಮಾಹಿತಿ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾ ವಿ.ಹೊಳ್ಳ ವಾರ್ಷಿಕ ವರದಿ ಮಂಡಿಸಿದರು. ಸಂಘವು ಗತವರ್ಷದಲ್ಲಿ ರೂ. 14262.26 ಲಕ್ಷ ರೂ. ವ್ಯವಹಾರ ನಡೆಸಿ ರೂ.40.87 ಲಕ್ಷ ರೂ. ಲಾಭ ಗಳಿಸಿದೆ. ಶೇ.98.88 ಸಾಲ ವಸೂಲಾಗಿದ್ದು ಆಡಿಟ್ ವರ್ಗೀಕರಣದಲ್ಲಿ ಎ ತರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸಂಘದ ನಿರ್ದೇಶಕರಾದ ಪದ್ಮನಾಭ ಬಿ, ಉಮಾವತಿ ಶೆಟ್ಟಿ, ಚಂದು ನಾಯ್ಕ, ಎನ್.ಶಿವಶಂಕರ್, ಶ್ರೀಧರ ಎನ್., ರವಿಕುಮಾರ್, ರಂಜಿತ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಕೆ.ಎನ್.ಗಂಗಾಧರ ಆಳ್ವ ಸ್ವಾಗತಿಸಿ, ವಂದಿಸಿದರು, ನಿರ್ದೇಶಕ ಸುನೀಲ್ ಫ್ರಾನ್ಸಿಸ್ ಲೂಯಿಸ್…
ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲು ನಿರ್ಧಾರ: ಸಂಘದ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ ಹರ್ಕೂರು ಹೇಳಿಕೆ ಮರವಂತೆ: ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಶ್ರೀಮೂಕಾಂಬಿಕಾ ಸಭಾಭವನದಲ್ಲಿ ಸೋಮವಾರ ನಡೆಯಿತು. https://chat.whatsapp.com/Ge11n7QCiMj5QyPvCc0H19 ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ ಹರ್ಕೂರು ಮಾತನಾಡಿ, ಸಂಘವು ಸದಸ್ಯರು ಮತ್ತು ನಿರ್ದೇಶಕ ಮಂಡಳಿಯ ಸಹಕಾರದಿಂದ ಹಂತಹಂತವಾಗಿ ಅಭಿವೃದ್ಧಿ ಕಾಣುತ್ತ ಇಂದು ಕುಂದಾಪುರ ತಾಲೂಕಿನಲ್ಲಿ ಉತ್ತಮ ಸಹಕಾರಿ ಸಂಘವಾಗಿ ಗುರುತಿಸಿಕೊಂಡಿದೆ. ರೈತರು ಮತ್ತು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಕಿಕೊಂಡಿದ್ದ ವಿಶೇಷ ಯೋಜನೆಗಳಿಂದಾಗಿ ಜನರ ಪ್ರೀತಿ ವಿಶ್ವಾಸ ಗಳಿಸಿದೆ. ಬೆಳೆ ವಿಮೆ ಸೌಲಭ್ಯ ಮತ್ತು ಪಂಪ್‌ಸೆಟ್‌ಗಳಿಗೆ ರೈತರು ಆಧಾರ್ ಜೋಡಣೆ ಮಾಡಿಕೊಳ್ಳುವುದರ ಮುಖೇನ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು. ಪ್ರಸ್ತುತ ಸಾಲಿನಲ್ಲಿ ಸಂಘವು 80.59 ಲಕ್ಷ ರೂ. ಲಾಭ ಗಳಿಸಿದ್ದು, ಸಂಘದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಸಂಘದ ಸಿಇಒ…
ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಣೆ: ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಹೇಳಿಕೆ ಕಾರ್ಕಳ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ 888. 29 ಕೋಟಿ ರೂ. ವ್ಯವಹಾರ ನಡೆಸಿ, 4.55 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಲು ತೀರ್ಮಾನಿಸಿದೆ ಎಂದು ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಹೇಳಿದರು. ಜೋಡುರಸ್ತೆಯಲ್ಲಿಯಲ್ಲಿರುವ ರಾಜಾಪುರ ಸ್ವಾರಸ್ವತ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಭಾನುವಾರ ಜರುಗಿದ ಸೊಸೈಟಿಯ 28ನೇ ವಾರ್ಷಿಕ ಮಹಾಸಭೆಯಲ್ಲಿ 2023-2024ರ ಸಾಲಿನ ವ್ಯವಹಾರದ ಪ್ರಗತಿಯ ಅಂಕಿ ಅಂಶವನ್ನು ನೀಡಿ ಮಾತನಾಡಿದ ರವೀಂದ್ರ ಪ್ರಭು ಅವರು, ಸೊಸೈಟಿಯು ರೂ. 4.59 ಕೋಟಿ ಪಾಲು ಬಂಡವಾಳ, ರೂ. 22. 38 ಕೋಟಿ ರೂ. ಸ್ವಂತ ನಿಧಿ, ರೂ. 183. 22 ಕೋಟಿ ರೂ. ಠೇವಣಿ ಹಾಗೂ 150. 21 ಕೋಟಿ ರೂ. ಹೊರಬಾಕಿ ಸಾಲ ಹೊಂದಿ -ಸರ್ವಾಂಗೀಣ…
