Top News

    ತ್ರಿಭುವನ್ ಸಹಕಾರಿ ವಿವಿ ಆಡಳಿತ ಮಂಡಳಿ ರಚನೆ

    June 3, 2025

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ. 55.46 ಲಕ್ಷ ನಿವ್ವಳ ಲಾಭ
    News

    ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ. 55.46 ಲಕ್ಷ ನಿವ್ವಳ ಲಾಭ

    adminBy adminSeptember 25, 2024

    ಮಹಾಸಭೆಯಲ್ಲಿ ಶೇ.20 ಡಿವಿಡೆಂಡ್ ಘೋಷಣೆ
    ಉತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಗೌರವಾರ್ಪಣೆ

    ಕಾರ್ಕಳ: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘವು ಆರ್ಥಿಕ ವರ್ಷದಲ್ಲಿ ರೂ.147 ಕೋಟಿ ವ್ಯವಹಾರ ನಡೆಸಿದ್ದು ರೂ.55.46 ಲಕ್ಷ ನಿವ್ವಳ ಲಾಭ ಗಳಿಸಿದೆ.

    https://chat.whatsapp.com/Ge11n7QCiMj5QyPvCc0H19
    ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸಂತೋಷ್ ರಾವ್ ಮಾತನಾಡಿ ಸಂಘದ 2023-2024ನೇ ಸಾಲಿನಲ್ಲಿ ಸಂಘದ ಪ್ರಗತಿ ಹಾಗೂ ಸಂಘವು ಆರ್ಥಿಕ ಸಾಲಿನಲ್ಲಿ ನಡೆಸಿದ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವಾರ್ಷಿಕ ಸಾಲಿನ ಅಂತ್ಯಕ್ಕೆ ಸಂಘವು ರೂ.30.55 ಲಕ್ಷ ಪಾಲು ಬಂಡವಾಳ ಹೊಂದಿದ್ದು ರೂ. 29.57 ಕೋಟಿ ಠೇವಣಿ ಸಂಗ್ರಹವಾಗಿದೆ. ರೂ.25.57 ಕೋಟಿ ಸಾಲ ವಿತರಿಸಿದ್ದು ರೂ. 34.63 ಕೋಟಿ ದುಡಿಮೆ ಬಂಡವಾಳ ಹೊಂದಿದೆ. ಶೇ.2೦ ಡಿವಿಡೆಂಡ್‌ ನೀಡಲು ನಿರ್ಧರಿಸಲಾಗಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಅರುಣ್ ಕುಮಾರ್ ಎಸ್.ವಿ ಇವರನ್ನು ಸಂಘದ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಭೆಯಲ್ಲಿ ಘೋಷಿಸಿದರು.


    ಅರುಣ್ ಕುಮಾರ್ ಎಸ್.ವಿ ಮಾತನಾಡಿ ಸಂಘವು ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿದ್ದು ಸಾಲ ವಸೂಲಾತಿ ಉತ್ತಮ ರೀತಿಯಲ್ಲಿದೆ. ಸಿಬ್ಬಂದಿಗಳ ದಕ್ಷ, ಪ್ರಾಮಾಣಿಕ ದುಡಿಮೆಯಿಂದ ಸಂಘವು ಅಭಿವೃದ್ದಿ ಹೊಂದುತ್ತದೆ ಎಂದರು.


    ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಶ್ರೀ, 2024-2025ನೇ ಸಾಲಿನ ಬಜೆಟ್‌ ಮಂಡಿಸಿದರು. ಸಂದೀಪ್ ನಾಯಕ್ ಮಹಾಸಭೆಯ ನೋಟಿಸ್‌ ಓದಿ ದಾಖಲಿಸಿದರು. ದಿನೇಶ್ ಕುಮಾರ್ ವೈ 2023-24ನೇ ಸಾಲಿನ ಬಜೆಟಿಗಿಂತ ಜಾಸ್ತಿ ಖರ್ಚಾಗಿರುವದನ್ನು ಓದಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು.


    ಸಂಘದ ಉಪಾಧ್ಯಕ್ಷ ವೃಷಭರಾಜ್ ಕಡಂಬ, ನಿರ್ದೇಶಕರಾದ ಸಂದೀಪ್ ನಾಯಕ್, ತ್ರಿವಿಕ್ರಮ ಕಿಣಿ, ದಿನೇಶ್ ಕುಮಾರ್ ವೈ, ಯೋಗೀಶ್ ಸಾಲ್ಯಾನ್, ಪಾಂಡುರಂಗ ನಾಯಕ್, ಗಣೇಶ್, ಸಂಜೀವ ನಾಯ್ಕ್, ಸುಶ್ಮಿತಾ, ದೀಪಾ ಎಸ್.ವಾಗ್ಳೆ, ಪುಷ್ಪರಾಜ್ ಎಸ್.ಶೆಟ್ಟಿ, ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

    ಸಂಘವನ್ನು ಅಭಿವೃದ್ಧಿಯತ್ತ ಸಾಗುವಲ್ಲಿ ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ, ಹನಿದೈನಿಕ ಸಂಗ್ರಾಹಕರಿಗೆ, ಗ್ರಾಹಕ ಮಿತ್ರರಿಗೆ ಹಾಗೂ ಸಂಘದ ಸದಸ್ಯರಿಗೆ ಇಲಾಖಾಧಿಕಾರಿಯವರಿಗೆ ಸಂಘದ ಅಧ್ಯಕ್ಷ ಸಂತೋಷ್ ರಾವ್ ಕೃತಜ್ಞತೆ ಸಲ್ಲಿಸಿದರು.


    ದೀಪಾ ಎಸ್.ವಾಗ್ಳೆ ಪ್ರಾರ್ಥಿಸಿದರು. ಯೋಗೀಶ್ ಸಾಲಿಯಾನ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ವೃಷಭರಾಜ್ ಕಡಂಬ ವಂದಿಸಿದರು. ಪ್ರತಿಭಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

    Arun Kumar V.S Banking Cooperative Cooperative Registrar Karkala Santhosh Rao Shree Durgaparameshwari Vividhoddesha Sahakara Sangha Spandana Spandana NEws
    Previous Articleಎಡಪದವು ವ್ಯವಸಾಯ ಸೇವಾ ಸಹಕಾರ ಸಂಘ ಶೇ.20 ಡಿವಿಡೆಂಡ್ ಘೋಷಣೆ
    Next Article ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ 4.04 ಲಕ್ಷ ರೂ. ಲಾಭ

    Related Posts

    News

    ತ್ರಿಭುವನ್ ಸಹಕಾರಿ ವಿವಿ ಆಡಳಿತ ಮಂಡಳಿ ರಚನೆ

    June 3, 2025
    News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025
    News

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ತ್ರಿಭುವನ್ ಸಹಕಾರಿ ವಿವಿ ಆಡಳಿತ ಮಂಡಳಿ ರಚನೆ

    June 3, 2025

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.