ಪಿಯುಸಿ, ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ
ಗುರುಪುರ: ಎಡಪದವು ವ್ಯವಸಾಯ ಸೇವಾ ಸಹಕಾರ ಸಂಘ ಇದರ 2023-24ನೇ ಮಹಾಸಭೆ ಸಂಘದ ಅಧ್ಯಕ್ಷ ನೀಲಯ ಎಂ.ಅಗರಿಯವರ ಅಧ್ಯಕ್ಷತೆಯಲ್ಲಿ ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಸಾಧನ ಸಭಾಂಗಣದಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿ ಎಸ್ 2023-24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, 2024-2025ನೇ ಸಾಲಿನ ಆಯ-ವ್ಯಯ ಪಟ್ಟಿ ಮುಂದಿನ ಅಭಿವೃದ್ಧಿ ಯೋಜನೆಗಳನ್ನು ಮಂಡಿಸಿದರು.
https://chat.whatsapp.com/Ge11n7QCiMj5QyPvCc0H19
ಒಟ್ಟು 4250 “ಎ” ತರಗತಿ ಸದಸ್ಯರಿದ್ದು ಒಟ್ಟು ಠೇವಣಿ ರೂ. 28.81 ಕೋಟಿ ಆಗಿದೆ. ಸದಸ್ಯರ ಬೇಡಿಕೆಗೆ ಅನುಗುಣವಾಗಿ ರೂ. 24.76 ಕೋಟಿ ಸಾಲ ವಿತರಿಸಲಾಗಿದೆ. ಈ ಪೈಕಿ ರೈತ ಸದಸ್ಯರಿಗೆ ರೂ.6.9 ಕೋಟಿ ಕೃಷಿ ಉದ್ದೇಶಗಳಿಗೆ ಸಾಲ ವಿತರಿಸಿ ಶೇಕಡಾ 96ರಷ್ಟು ಸಾಲ ವಸೂಲಾಗಿದೆ. ಸಂಘವು ರೂ.53.34 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇಕಡಾ 20 ಡಿವಿಡೆಂಡ್ ಘೋಷಿಸಿದೆ.
109 ನವೋದಯ ಸ್ವ-ಸಹಾಯ ಗುಂಪು ರಚಿಸಿ, ರೂ.2.42 ಕೋಟಿ ಸಾಲ ನೀಡಲಾಗಿದೆ. 2023-2024ನೇ ಸಾಲಿಗೆ ಸನ್ನದು ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನೆ ಜರಗಿದ್ದು ಸಂಘವು ‘ಎ’ ದರ್ಜೆಗೆ ವರ್ಗೀಕರಿಸಲ್ಪಟ್ಟಿದೆ.
ದ್ವಿತಿಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ. ವಿಧ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ನೀಲಯ ಎಂ.ಅಗರಿ, ಉಪಾಧ್ಯಕ್ಷೆ ಮೋಹಿನಿ ಎಚ್.ಮಿಜಾರು, ನಿರ್ದೇಶಕರಾದ ನೋರ್ಬರ್ಟ್ ಮತಾಯಸ್, ರಾಜೇಶ್ ವಿ.ಸುವರ್ಣ, ಹರ್ಷಲತಾ, ಗುರುಪ್ರಸಾದ್ ರೈ, ಪ್ರಶಾಂತ್, ಮಾಧವ ದೇವಾಡಿಗ, ರಿಚಾರ್ಡ್ ಮೆಂಡೋನ್, ವಿಶ್ವವಾಥ, ಸಂತೋಷ್ ಗೌಡ, ವಲಯ ಮೇಲ್ವಿಚಾರಕರಾದ ಸಂಜಯ್ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com