ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಣೆ: ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಹೇಳಿಕೆ
ಕಾರ್ಕಳ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ 888. 29 ಕೋಟಿ ರೂ. ವ್ಯವಹಾರ ನಡೆಸಿ, 4.55 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಲು ತೀರ್ಮಾನಿಸಿದೆ ಎಂದು ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಹೇಳಿದರು.
ಜೋಡುರಸ್ತೆಯಲ್ಲಿಯಲ್ಲಿರುವ ರಾಜಾಪುರ ಸ್ವಾರಸ್ವತ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಭಾನುವಾರ ಜರುಗಿದ ಸೊಸೈಟಿಯ 28ನೇ ವಾರ್ಷಿಕ ಮಹಾಸಭೆಯಲ್ಲಿ 2023-2024ರ ಸಾಲಿನ ವ್ಯವಹಾರದ ಪ್ರಗತಿಯ ಅಂಕಿ ಅಂಶವನ್ನು ನೀಡಿ ಮಾತನಾಡಿದ ರವೀಂದ್ರ ಪ್ರಭು ಅವರು, ಸೊಸೈಟಿಯು ರೂ. 4.59 ಕೋಟಿ ಪಾಲು ಬಂಡವಾಳ, ರೂ. 22. 38 ಕೋಟಿ ರೂ. ಸ್ವಂತ ನಿಧಿ, ರೂ. 183. 22 ಕೋಟಿ ರೂ. ಠೇವಣಿ ಹಾಗೂ 150. 21 ಕೋಟಿ ರೂ. ಹೊರಬಾಕಿ ಸಾಲ ಹೊಂದಿ -ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದೆ. ಇದಕ್ಕೆ ಸದಸ್ಯರು, ಗ್ರಾಹಕರು ಸಹಕಾರಿ ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸವೇ ಕಾರಣ ಎಂದು ಹೇಳಿದರು.
https://chat.whatsapp.com/Ge11n7QCiMj5QyPvCc0H19
ಸೊಸೈಟಿಯ ನಿರ್ದೇಶಕ ಹರೀಶ ನಾಯಕ್ ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ನಾಯಕ್ 2023-2024ನೇ ಸಾಲಿನ ವಾರ್ಷಿಕ ವರದಿ, ಆರ್ಥಿಕ ತಖ್ತೆ ಹಾಗೂ 2024-25ನೇ ಸಾಲಿನ ಅಂದಾಜು ಬಜೆಟ್ ಮಂಡಿಸಿದರು. 2023-2024ನೇ ಸಾಲಿನಲ್ಲಿ ಬಜೆಟ್‌ಗಿಂತ ಹೆಚ್ಚಿಗೆ ಖರ್ಚಾದ ವಿವರಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.
ಸೊಸೈಟಿಯ ನಿರ್ದೇಶಕರಾದ ಹರಿಶ್ಚಂದ್ರ ತೆಂಡುಲ್ಕರ್ ಮಾಳ, ಹರೀಶ್ ನಾಯಕ್ ಅಜೆಕಾರು, ರಮಾನಾಥ ನಾಯಕ್ ಕುಕ್ಕುಂದೂರು, ಸದಾನಂದ ಪಾಟ್ಕರ್ ಬಜಗೋಳಿ, ಮಂಜುನಾಥ ಪ್ರಭು ಹೆಬ್ರಿ, ಸಚ್ಚಿದಾನಂದ ಪ್ರಭು ಕಣಂಜಾರು, ವಿಶ್ವನಾಥ ಪಾಟ್ಕರ್ ಬೆಳ್ಳಣ್, ಸುನಿಲ್ ನಾಯಕ್ ಮಟ್ಟಾರು, ರಾಮಕೃಷ್ಣ ತೆಂಡುಲ್ಕರ್ ಹಿರ್ಗಾನ, ಕಲಾವತಿ ಯು. ನಾಯಕ್ ಹಿರ್ಗಾನ, ರಂಜಿತ್ ಕುಮಾರ್ ಪೆರ್ಡೂರು, ದಿನೇಶ್ ನಾಯಕ್ ಹೆರ್ಮುಂಡೆ, ಹರೀಶ್ ಬಿ.ನಾಯಕ್ ಪಳ್ಳಿ, ದೇವೇಂದ್ರ ನಾಯಕ್ ಎಳ್ಳಾರೆ ಉಪಸ್ಥಿತರಿದ್ದರು. ಕೇಂದ್ರ ಕಚೇರಿಯ ವ್ಯವಸ್ಥಾಪಕ ಉದಯ ಪ್ರಭು ವಂದಿಸಿದರು.
ಸಭೆಯ ಬಳಿಕ ಪ್ರಸಿದ್ಧ ಕಲಾಧರ ಯಕ್ಷಗಾನ ಬಳಗ, ಜಲವಳ್ಳಿ ಇವರಿಂದ ನಾಗಶ್ರೀ ಯಕ್ಷಗಾನ ಜರುಗಿತು. ಈ ಸಂದರ್ಭ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾದ ಜಲವಳ್ಳಿ ವಿದ್ಯಾಧರ ರಾವ್ ಅವರನ್ನು ಅಭಿನಂದಿಸಲಾಯಿತು.
ಸಾಧಕ ಐವರು ವಿದ್ಯಾರ್ಥಿಗಳಿಗೆ ಸನ್ಮಾನ
ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾಲಿಬಾಲ್ ಆಟಗಾರ ದೀಕ್ಷಿತ್ ನಾಯಕ್ ಕಬ್ಯಾಡಿ, ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಬ್ಯಾಂಕ್ ಪಡೆದ ಸಮ್ಯಕ್ ಆರ್.ಪ್ರಭು ಕಾರ್ಕಳ, ವಾಣಿಜ್ಯ ವಿಭಾಗದಲ್ಲಿ 5ನೇ ರ್ಯಾಂಕ್ ಪಡೆದ ಭಕ್ತಿ ಕಾಮತ್ ಎಳ್ಳಾರೆ, ರಾಜೀವ ಗಾಂಧಿ ವಿಶ್ವವಿದ್ಯಾಲಯ ಬೆಂಗಳೂರು ಬಿ.ಪಿ.ಎಚ್. ನಲ್ಲಿ 1ನೇ ರ್ಯಾಂಕ್ ಪಡೆದ ಅಶಿತಾ ನಾಯಕ್ ಎಳ್ಳಾರೆ, 2023ರಲ್ಲಿ ಬಿ.ಕಾಂ ಪದವಿಯಲ್ಲಿ 8ನೇ ರ್ಯಾಂಕ್ ಪಡೆದ ಶ್ರೀನಿಧಿ ನಾಯಕ್ ಮಿಯ್ಯಾರು ಅವರನ್ನು ಸನ್ಮಾನಿಸಲಾಯಿತು. ಕಳೆದ ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಒಟ್ಟು 23 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷರಾದ ನೀರೆ ರವೀಂದ್ರ ನಾಯಕ್ ಅಭಿನಂದನಾ ಭಾಷಣ ಮಾಡಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com