ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ನವರಾತ್ರಿಯ ಸಂದರ್ಭಕ್ಕೆ ಬೇಕಾಗುವಂತ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ 5000 ಪ್ರಸಾದ ನೀಡುವ ಕೈಚೀಲಗಳು ಮತ್ತು ಭಕ್ತರಿಗೆ ದೇವಸ್ಥಾನದಲ್ಲಿ ಊಟಕ್ಕೆಂದು 500 ಸ್ಟೀಲ್ ತಟ್ಟೆಗಳನ್ನು ಶುಕ್ರವಾರ ದೇವಸ್ಥಾನದ ಆಡಳಿತ ಮೊಕ್ತೇಸರ ಅರುಣ ಐತಾಳ್ ಅವರಿಗೆ ದೇವಸ್ಥಾನದಲ್ಲಿ ಹಸ್ತಾಂತರಿಸಲಾಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಅವರು ದೇವಸ್ಥಾನಕ್ಕೆ ವಸ್ತುಗಳನ್ನು ಹಸ್ತಾಂತರಿಸಿ ಮಾತನಾಡಿ, ಶ್ರೀಶಾ ಸೊಸೈಟಿಯು ಆರಂಭವಾಗಿ ಆರು ವರ್ಷಗಳಾದ ಶುಭವಸರದಲ್ಲಿ ಮಂಗಳೂರಿನ ಗ್ರಾಮದೇವತೆ ಮಂಗಳಾದೇವಿಯ ಭಕ್ತರಿಗೆ ಅನುಕೂಲವಾಗುವಂತ ಊಟದ ತಟ್ಟೆಗಳನ್ನು ಹಾಗೂ ದೇವರ ಪ್ರಸಾದ ನೀಡಲು ಚೀಲಗಳನ್ನು ದೇವಸ್ಥಾನಕ್ಕೆ ನೀಡಲು ಅವಕಾಶ ದೊರಕಿದ್ದು ನಮ್ಮ ಸೌಭಾಗ್ಯ. ಶ್ರೀ ಮಂಗಳಾದೇವಿಯು ನಮ್ಮ ನಿಮ್ಮನ್ನೆಲ್ಲಾ ಸಕಲ ಸೌಭಾಗ್ಯಗಳನ್ನಿತ್ತು ಅನುಗ್ರಹಿಸಲಿ ಎಂದು ಮಾತೆಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅರುಣ ಐತಾಳ್ ಅವರು ಶ್ರೀಶಾ ಸೌಹಾರ್ದ ಸೊಸೈಟಿಯ ಈ ದೊಡ್ಡ ಕೊಡುಗೆ ದೇವಸ್ಥಾನಕ್ಕೆ ತುಂಬಾ ಉಪಯೋಗವಾಗಲಿದೆ. ಶ್ರೀಶಾ ಸೊಸೈಟಿಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಶ್ರೀಶಾ ಸೊಸೈಟಿಯ ಉಪಾಧ್ಯಕ್ಷ ಉದಯ ವಿ. ಶಾಸ್ತ್ರಿ, ನಿರ್ದೇಶಕರಾದ ಸುರೇಶ್ ಬೈಂದೂರು, ವತ್ಸಲ ಬಾಬು, ಎಂ.ಎಸ್.ಮಾಧವ, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜ, ಸೊಸೈಟಿಯ ವ್ಯವಸ್ಥಾಪಕರುಗಳಾದ ಕುಸುಮಾ ಐತಾಳ್, ದೀಪ್ತಿ, ಗಾಯತ್ರಿ, ಪಂಚಮಿ,
ಹಿರಿಯರಾದ ರಘುರಾಮ ರಾವ್ ಮುಂತಾದವರಿದ್ದರು.

