Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನವಮೈತ್ರಿ ಸೌಹಾರ್ದ ಸಹಕಾರಿ ಸಂಘಕ್ಕೆ 51.81 ಲಕ್ಷ ರೂ. ಲಾಭ; ಶೇಕಡ 10 ಲಾಭಾಂಶ ನೀಡಲು ನಿರ್ಧಾರ
    News

    ನವಮೈತ್ರಿ ಸೌಹಾರ್ದ ಸಹಕಾರಿ ಸಂಘಕ್ಕೆ 51.81 ಲಕ್ಷ ರೂ. ಲಾಭ; ಶೇಕಡ 10 ಲಾಭಾಂಶ ನೀಡಲು ನಿರ್ಧಾರ

    adminBy adminSeptember 22, 2025

    ಮೂಡುಬಿದಿರೆ: ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯು ಶಿರ್ತಾಡಿ ಹೋಟೆಲ್ ಶ್ರೀ ಬ್ರಹ್ಮ ರೆಸಿಡೆನ್ಸಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸತೀಶ್ ವಿ.ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿತು.

    https://chat.whatsapp.com/JVAtKKe2M19AFO3W5629ZS?mode=ems_copy_t
    2೦12ರಲ್ಲಿ ಪ್ರಾರಂಭಗೊಂಡ ನವಮೈತ್ರಿ ಸಹಕಾರಿಯು 13 ವರ್ಷಗಳನ್ನು ಪೂರೈಸಿ ಶಿರ್ತಾಡಿ, ನಾರಾವಿ ಮತ್ತು ಅಳದಂಗಡಿಯಲ್ಲಿ ಶಾಖೆ ಹೊಂದಿ ಸದಸ್ಯ ಗ್ರಾಹಕರಿಗೆ ವ್ಯವಹಾರ ನಡೆಸಲು ಅನುಕೂಲ ಕಲ್ಪಿಸಿದೆ. ಸಹಕಾರಿಯು 20.36 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, 17.07 ಕೋಟಿ ಸದಸ್ಯ ಠೇವಣಿ ಹೊಂದಿದೆ. ಪ್ರಸಕ್ತ ವರ್ಷದಲ್ಲಿ 51.81 ಲಕ್ಷ ರೂ. ಲಾಭ ಪಡೆದುಕೊಂಡಿದೆ. ಸಹಕಾರಿ ಸಂಘವು ಸದಸ್ಯರ ಅನುಕೂಲಕ್ಕಾಗಿ ಯುನಿಕ್ಸ್ ಮೊಬೈಲ್ ಆಪ್ ಬಿಡುಗಡೆಗೊಳಿಸಿದ್ದು, ಇದರ ಮೂಲಕ ಗ್ರಾಹಕರು ಸಂಘದಲ್ಲಿನ ವ್ಯವಹಾರವನ್ನು ತಿಳಿದುಕೊಳ್ಳಬಹುದಾಗಿದೆ. ಪ್ರಸಕ್ತ ವರ್ಷದಲ್ಲಿ ಶೇಕಡ 10 ಲಾಭಾಂಶ ನೀಡಲು ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ. ಒಟ್ಟಾರೆಯಾಗಿ ಪ್ರಸಕ್ತ ವರ್ಷ ಇನ್ನೂರು ಕೋಟಿ ರೂ. ವ್ಯವಹಾರವನ್ನು ಮಾಡಿ ಮೆಚ್ಚುಗೆ ಗಳಿಸಿದೆ. ಇ ಸ್ಟ್ಯಾಂಪಿಂಗ್, ಪಹಣಿ ಪತ್ರ ಸೇವೆ, ಯಶಸ್ವಿನಿ, ಸ್ವಸಹಾಯ ಸಂಘಗಳ ಚಟುವಟಿಕೆ ಮುಂತಾದ ಕಾರ್ಯಯೋಜನೆಗಳನ್ನು ಸಂಘವು ನಡೆಸುತ್ತಿದೆ.


    ಶಿರ್ತಾಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಮೈತ್ರಿ ಸೌಧ ಕೇಂದ್ರ ಕಚೇರಿ ಸಹಿತ ವಾಣಿಜ್ಯ ಸಂಕೀರ್ಣದ ಉದ್ಘಾಟನೆಯನ್ನು ಶೀಘ್ರದಲ್ಲೇ ನಡೆಸಲು ತೀರ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ವಿನಯ ಹೆಗ್ಡೆ, ನಿರ್ದೇಶಕರಾದ ಎಸ್ ಪ್ರವೀಣ್ ಕುಮಾರ್, ಮಹಾವೀರ ಜೈನ್, ಮಹಾವೀರ ಮುದ್ಯ, ಲ್ಯಾನ್ಸಿ ಡೇಸಾ, ಫ್ರಾಂಕಿ ಎಲ್ ಪಿಂಟೊ, ರಕ್ಷಿತ್ ಆರ್, ಅರುಣ್ ಎನ್ ಶೆಟ್ಟಿ, ಸದಾನಂದ ಪೂಜಾರಿ, ಬಬಿತಾ ಆರ್ ಶೆಟ್ಟಿ, ಶಾರದಾ ಸುವರ್ಣ, ರವೀಂದ್ರ ಬಿ ಅಮೀನ್ ವೇದಿಕೆಯಲ್ಲಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಜೆಕೆ ವರದಿ ಮಂಡಿಸಿ ಶಾಖಾ ವ್ಯವಸ್ಥಾಪಕ ಸತೀಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಯುನಿಗ್ಸ್ ಆಪ್ ಬಳಕೆ ಬಗ್ಗೆ ಮಾಹಿತಿ ನೀಡಿದರು. ಹೊನ್ನಪ್ಪ ಸ್ವಾಗತಿಸಿ ಸುಚೇತಾ ಆಚಾರ್ಯ ಪ್ರಾರ್ಥನೆಗೈದರು. ರಾಜ್ಯವರ್ಮ ಜೈನ್ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Aladangady Hotel Shree Brahma residency Naravi Navamaitri Vividhoddesha Souharda Sahakari Sangha Shirtady Shirtady Shirthady Uniks Mobile App
    Previous Articleಹೊಸಾಡು ಸೇವಾ ಸಹಕಾರ ಸಂಘದಿಂದ ಶೇ.10 ಡಿವಿಡೆಂಡ್ ಘೋಷಣೆ
    Next Article ನಂದಿನಿ ಪತ್ತಿನ ಸಹಕಾರ ಸಂಘ ಕಟೀಲು ಶೇ.10 ಡಿವಿಡೆಂಡ್ ಘೋಷಣೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.