Author: admin

ಎಂಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಅನಿಲ್ ಲೋಬೊ ಶ್ಲಾಘನೆ ಬೆಳ್ಮಣ್: ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರೂ ಪ್ರೀತಿ ಮತ್ತು ಸಮರ್ಪಣಾ ಮನೋಭಾವದಿಂದ ಶಿಕ್ಷಕರು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅಭಿಪ್ರಾಯಪಟ್ಟರು. https://chat.whatsapp.com/EbVKVnWB6rlHT1mWtsgbch ಎಂಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆಯಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸದಾಗಿ ಆರಂಭವಾದ ಎಂಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆಯು ಕೇವಲ ಆರು ತಿಂಗಳಲ್ಲಿ ₹ 6 ಕೋಟಿಗೂ ಮೀರಿದ ವಹಿವಾಟು ಸಾಧಿಸಿದೆ. ಇದು ಎಂಸಿಸಿ ಬ್ಯಾಂಕಿಗೆ ಸ್ಥಳೀಯ ಸಮುದಾಯದ ಬಲವಾದ ಬೆಂಬಲಕ್ಕೆ ಸಾಕ್ಷಿಯಾಗಿದೆ. ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ದೂರದೃಷ್ಟಿಯ ಹೆಜ್ಜೆ ಇಡುವುದು ಮಹತ್ವಪೂರ್ಣ. ಶಿಕ್ಷಕರು ತಮ್ಮ ಸಮರ್ಪಣಾ ಭಾವದ ಸೇವೆ ಮುಂದುವರಿಸಬೇಕು ಎಂದು ಹೇಳಿದರು. ಮುಲ್ಲಡ್ಕ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾದರ್ ಮಿಲ್ಟನ್ ಫೆರ್ನಾಂಡಿಸ್, ನಿವೃತ್ತ ಶಿಕ್ಷಕಿ ಮತ್ತು ಸೈಂಟ್ ಜೋಸೆಫ್ ಇಂಗ್ಲಿಷ್…

Read More

ರಾಯಚೂರು: ಇಲ್ಲಿನ ಶಿವ ಪಾರ್ವತಿ ಗಣೇಶ ಪತ್ತಿನ ಸೌಹಾರ್ದ ಸಹಕಾರಿ ಸಂಘದ 9ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಭಾನುವಾರ ರಾಯಚೂರಿನ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ನಾಗಪ್ಪ ಹೊರಪ್ಯಾಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು. https://chat.whatsapp.com/EbVKVnWB6rlHT1mWtsgbch ಸಹಕಾರಿಯು 13.04 ಕೋಟಿ ರೂ. ವ್ಯವಹಾರ ದಾಟಿದ್ದು 8.28 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ರೂ. 6.18 ಕೋಟಿ ಸಾಲ ವಿತರಣೆ ಮಾಡಲಾಗಿದೆ ಸಾಲ ವಸೂಲಾಯಿತಿ 95 ಪ್ರತಿಶತ ದಾಖಲಾಗಿದೆ ಎಂದು ಅಧ್ಯಕ್ಷ ನಾಗಪ್ಪ ಹೊರಪ್ಯಾಟಿ ಮಾಹಿತಿ ನೀಡಿ, ಸಹಕಾರಿಯ ಸದಸ್ಯರಿಗೆ ಶೇ.12 ಲಾಭಾಂಶ (ಡಿವಿಡೆಂಡ್‌) ಘೋಷಿಸಿದರು. ಶಿವ ಪಾರ್ವತಿ ಗಣೇಶ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಏಳಿಗೆಗೆ ಕಾರಣರಾದ ಸಹಕಾರಿಯ ಸರ್ವ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ, ಸಹಕಾರಿಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಪಿಗ್ಮಿ ಏಜೆಂಟರುಗಳಿಗೆ, ಮತ್ತು ಸಹಕಾರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು. ಸಭೆಯ ಉದ್ಘಾಟನೆ ಬಳಿಕ…

Read More

ಗುಬ್ಬಿ: ಶಿವಬಸವ ನೌಕರರ ಸೌಹಾರ್ದ ಸಹಕಾರಿ ಸಂಘ ಹೆಂಜೇರು ನಿಲಯ ಕುವೆಂಪು ನಗರ ರಸ್ತೆ ಗುಬ್ಬಿ ಇದರ 2024-2025ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸೆಪ್ಟೆಂಬರ್‌ 14ರಂದು ಗುಬ್ಬಿ ಎಂ.ಜಿ ರಸ್ತೆಯ ಶುಭೋದಯ ಆಂಗ್ಲ ಶಾಲಾ ಆವರಣದಲ್ಲಿ ನಿಗದಿಯಾಗಿದೆ. https://chat.whatsapp.com/EbVKVnWB6rlHT1mWtsgbch ಬೆಳಗ್ಗೆ 11ಕ್ಕೆ ಸಭೆ ನಿಗದಿಯಾಗಿದ್ದು ಶಿವಬಸವ ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಎಸ್.ಯೋಗಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ಉಮೇಶ್, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗುಬ್ಬಿ ತಾಲೂಕು ಅಧ್ಯಕ್ಷರಾದ ಸೋಮಶೇಖರಯ್ಯ ಎಚ್‌.ಸಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತುರುವೇಕೆರೆ ತಾಲೂಕು ಘಟಕದ ಅಧ್ಯಕ್ಷರಾದ ಪರಶಿವಮೂರ್ತಿ ಎಸ್.ಎನ್, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತುಮಕೂರು ತಾಲೂಕು ಘಟಕದ ಅಧ್ಯಕ್ಷರಾದ ನಿಜಲಿಂಗಪ್ಪ ಭಾಗವಹಿಸಲಿದ್ದಾರೆ. ಶಿವಬಸವ ನೌಕರರ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶಿವಣ್ಣ…

Read More

ನವದೆಹಲಿ: ದೇಶದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಸಿ.ಪಿ.ರಾಧಾಕೃಷ್ಣನ್ ಅವರನ್ನು ಭಾರತದಾದ್ಯಂತ ಸಹಕಾರಿ ಧುರೀಣರು ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳಿಂದ ಹಿಡಿದು ತಳಮಟ್ಟದ ನಾಯಕರವರೆಗೆ, ಎನ್‌ಡಿಎ ಅಭ್ಯರ್ಥಿಯ ಗೆಲುವನ್ನು ಅಭಿನಂದಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಮಂಗಳವಾರ ಉಪರಾಷ್ಟ್ರಪತಿ ಚುನಾವಣೆ ನಡೆದಿದ್ದು, ಸಿ.ಪಿ ರಾಧಾಕೃಷ್ಣನ್‌ ಅವರು, ಇಂಡಿಯಾ ಕೂಟದ ಅಭ್ಯರ್ಥಿ ಆರ್‌.ಸುದರ್ಶನ ರೆಡ್ಡಿ ಅವರನ್ನು ಸೋಲಿಸಿ ಉಪರಾಷ್ಟ್ರಪತಿ ಹುದ್ದೆಗೆ ಏರಿದ್ದರು. ಫಲಿತಾಂಶ ಘೋಷಣೇಯಾದ ಸ್ವಲ್ಪ ಹೊತ್ತಿನಲ್ಲೇ ಭಾರತದ ರಾಷ್ಟ್ರೀಯ ಸಹಕಾರಿ ಒಕ್ಕೂಟ (ಎನ್‌ಸಿಯುಐ) ಅಧ್ಯಕ್ಷ ದಿಲೀಪ್‌ ಸಂಘಾನಿ, ಸಿ.ಪಿ. ರಾಧಾಕೃಷ್ಣನ್ ಅವರನ್ನು ಅಭಿನಂದಿಸಿದ್ದಾರೆ. ಸಹಕಾರ ಭಾರತಿ ಅಧ್ಯಕ್ಷ ಉದಯ್ ಜೋಶಿ ಶುಭಾಶಯ ತಿಳಿಸಿದ್ದಾರೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಅಧ್ಯಕ್ಷ ವಿಶಾಲ್ ಸಿಂಗ್ ಕೂಡ ಸಿ.ಪಿ ರಾಧಾಕೃಷ್ಣನ್‌ ಅವರನ್ನು ಅಭಿನಂದಿಸಿದ್ದಾರೆ. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ಮಂಡಳಿ ಸದಸ್ಯ ಧನಂಜಯ್ ಸಿಂಗ್ ರಾಧಾಕೃಷ್ಣನ್ ಅವರನ್ನು ಅಭಿನಂದಿಸಿದ್ದು ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಧಾಕೃಷ್ಣನ್‌ ಅವರ ನಾಯಕತ್ವ ಮತ್ತು ಸ್ಫೂರ್ತಿದಾಯಕ ಮಾರ್ಗದರ್ಶನದಲ್ಲಿ…

Read More

ರೂ. 5.04 ಕೋಟಿ ಲಾಭ, ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ವಾರ್ಷಿಕ ಮಹಾಸಭೆ ಭಾನುವಾರ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನವನದ ಬಳಿ ಇರುವ “ಸ್ಪರ್ಶಾ ಕಲಾ ಮಂದಿರ”ದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸುರೇಶ ಕುಲಾಲ್‌ರವರ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಸಭೆಯಲ್ಲಿ 2024-25ನೇ ಸಾಲಿಗೆ ಶೇ.17ರಂತೆ ಡಿವಿಡೆಂಡ್ ನೀಡಲು ನಿರ್ಧರಿಸಲಾಯಿತು. https://chat.whatsapp.com/EbVKVnWB6rlHT1mWtsgbch ಸಂಘದಲ್ಲಿ 9047 ಸದಸ್ಯರಿದ್ದು ಪಾಲು ಬಂಡವಾಳ ರೂ. 9.09 ಕೋಟಿ, ಠೇವಣಾತಿಗಳು ರೂ.229.47 ಕೋಟಿ, ನಿಧಿಗಳು 19.78 ಕೋಟಿ, ವಿನಿಯೋಗಗಳು 55.55 ಕೋಟಿ, ಸಾಲಗಳು ರೂ. 216.37 ಕೋಟಿ, ವಸೂಲಾತಿ ಶೇಕಡ 95.04 ಆಗಿರುತ್ತದೆ. 2024-25ನೇ ಸಾಲಿನಲ್ಲಿ ರೂ. 1158.43 ಕೋಟಿ ವ್ಯವಹಾರ ನಡೆಸಿ ರೂ. 5.04 ಕೋಟಿ ಲಾಭ ಗಳಿಸಿದೆ. ಸಂಘದ ದುಡಿಯುವ ಬಂಡವಾಳ ರೂ.259.66 ಕೋಟಿ ಆಗಿದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ದಾಖಲಾಗಿದೆ. ಸಂಘದ ಸದಸ್ಯರಿಗೆ ಠೇವಣಿ ಮುಖೇನ ಉತ್ತಮ ಸೇವಾ ಸೌಲಭ್ಯ ನೀಡುವಂತಹ ಸಮಾಜ ಸಂಧ್ಯಾ ಸಮೃದ್ಧಿ ನಿಧಿಯನ್ನು…

Read More

ಮೂಡುಬಿದಿರೆ: ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜರಗಿತು. https://chat.whatsapp.com/EbVKVnWB6rlHT1mWtsgbch ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಹಾಗೂ ನಿರ್ದೇಶಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ನಿರ್ದೇಶಕರಾದ ದಯಾನಂದ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಜನ್ಯ ಡಿ.ಶೆಟ್ಟಿ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಡಾ.ನಾಗರಾಜ್ ಶೆಟ್ಟಿ ವಂದಿಸಿದರು. ಸಂಸ್ಥೆಯು 12 ವರ್ಷಗಳಿಂದ ನಡೆದುಕೊಂಡು ಬರುತಿದ್ದು ವಾರ್ಷಿಕ ಲಾಭ 35,74,951.75 ರೂ. ಆಗಿದ್ದು, ಸದಸ್ಯರಿಗೆ 12% ಡಿವಿಡೆಂಡ್ ನೀಡಲಾಗಿದೆ. ಕೃಷಿ ಕ್ಷೇತ್ರ ದಲ್ಲಿ ಸಾಧನೆಗೈದು 2023-24ನೇ ಸಾಲಿನ ರಾಜ್ಯ ಮಟ್ಟದ ಕರ್ನಾಟಕ ಸರಕಾರದ ಕೃಷಿ ಕ್ಷೇತ್ರ ದಲ್ಲಿನ ಅನನ್ಯ ಸೇವೆಗಾಗಿ “ಉದಯೋನ್ಮುಖ ಕೃಷಿ ಪಂಡಿತ”ಪ್ರಶಸ್ತಿ ಪಡೆದ ಡಾ.ನಾಗರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಉಳ್ಳಾಲ: ಜಯಭಾರತ ಸೌಹಾರ್ದ ಸಹಕಾರಿ ಸಂಘ ತೊಕ್ಕೊಟ್ಟು ಇದರ ವಾರ್ಷಿಕ ಸಾಮಾನ್ಯ ಸಭೆಯು ಶನಿವಾರ ನಡೆಯಿತು. 2024ರ ಏಪ್ರಿಲ್‌ 14ರಂದು ತೊಕ್ಕೊಟ್ಟು ಜಂಕ್ಷನ್‌ನ ಗ್ರ್ಯಾಂಡ್‌ ಸಿಟಿಯಲ್ಲಿ ಉದ್ಘಾಟಿಸಿ ವ್ಯವಹಾರ ಪ್ರಾರಂಭಿಸಲಾಗಿದ್ದು, 13 ಚುನಾಯಿತ ನಿರ್ದೇಶಕರಿಂದ ಮುನ್ನಡೆಯುತ್ತಿದೆ. ಅಧ್ಯಕ್ಷರಾಗಿ ವಿಕ್ರಮ್‌ ಬಂಗೇರ, ಉಪಾಧ್ಯಕ್ಷರಾಗಿ ಆನಂದ ಗಟ್ಟಿ ಕಾರ್ಯನಿರ್ವಹಿಸುತ್ತಿದ್ದು, ಕೆ.ನಾರಾಯಣ ಶೆಟ್ಟಿ, ನೋರ್ಬರ್ಟ್‌ ಡಿಸೋಜ, ಸಂದೇಶ್‌ ಡಿ.ಪೂಜಾರಿ, ಡಾ.ಭಾರತಿ ಆರ್‌., ಆದರ್ಶ ಕೆ.ಎಸ್‌., ವಿಜಯಲಕ್ಷ್ಮಿ, ಚಂದ್ರಿಕಾ ರೈ, ಸಂದೀಪ ಪೂಜಾರಿ, ಸುಜಿತಾ ಹಾಗೂ ಶಿವರಾಜ್‌ ನಿರ್ದೇಶಕರಾಗಿದ್ದಾರೆ. ಆಡಳಿತಾತ್ಮಕ ನಿರ್ದೇಶಕರಾಗಿ ಶಶಿಧರ ಶೆಟ್ಟಿ ಕಟೀಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜಯಲಕ್ಷ್ಮೀ ಎ.ಎಸ್‌ ಕಾರ್ಯನಿರ್ವಹಿಸುತ್ತಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಂಘದಲ್ಲಿ 481 ಎ ತರಗತಿ ಸದಸ್ಯರಿದ್ದು, ವರದಿ ವರ್ಷದ ಆರಂಭದಲ್ಲಿ 6,12,900 ರೂ. ಶೇರು ಬಂಡವಾಳವಿದ್ದು ಪ್ರಸಕ್ತ ವರ್ಷ 2,77,700 ರೂ. ಶೇರು ಬಂಡವಾಳ ಜಮೆಯಾಗಿದ್ದು, 4,73,600 ರೂ. ಪಾವತಿಯಾಗಿ ವರ್ಷಾಂತ್ಯಕ್ಕೆ 4,17,000 ಶೇರು ಬಂಡವಾಳವಿದೆ. 2,00,46,210 ರೂ. ವಿವಿಧ ಠೇವಣಾತಿಗಳಿವೆ. ನೀಡಲಾಗಿರುವ ಸಾಲ ಶೇ.100ರಷ್ಟು ಮರುಪಾವತಿಯಾಗಿದ್ದು, ಸಂಘದ ಆಡಳಿತ ಮಂಡಳಿ,…

Read More

ಮೂಡುಬಿದಿರೆ: ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ 11ನೇ ವರ್ಷದ ಮಹಾಸಭೆಯು ಭಾನುವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು. ಸಹಕಾರಿಯ ಅಧ್ಯಕ್ಷ ರಂಜಿತ್ ಪೂಜಾರಿ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಸಂಘವು 2.32 ಕೋಟಿ ರೂ. ಸ್ವಸಹಾಯ ಸಂಘಗಳಿಗೆ ಸಾಲ ನೀಡುತ್ತಾ ಬಂದಿದೆ. ಮಾತ್ರವಲ್ಲದೇ 2019ರಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ವೈದ್ಯಕೀಯ ನೆರವು, ವಿದ್ಯಾಭ್ಯಾಸದ ನೆರವು, ಶೌಚಗೃಹದ ನೆರವು ಹಾಗೂ ಮನೆ ಕಟ್ಟುವವರಿಗೆ ಧನಸಹಾಯವನ್ನು ವಿಶೇಷ ಸೇವಾ ಮನೋಭಾವನೆಯನ್ನಿಟ್ಟುಕೊಂಡು ಬಂದ ಲಾಭಾಂಶದಲ್ಲಿ ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ಸಹಕಾರಿ ಸಂಘ ತೊಡಗಿಸಿಕೊಂಡಿದೆ ಎಂದರು. https://chat.whatsapp.com/EbVKVnWB6rlHT1mWtsgbch ವಾರ್ಷಿಕವಾಗಿ ಸಂಸ್ಥೆಯ ಆದಾಯದಲ್ಲಿ 2.50 ಲಕ್ಷ ರೂ. ಅನ್ನು ಸ್ವಸಹಾಯ ಸಂಘಗಳನ್ನು ಸೇರಿಸಿ, ಸಮಾಜದ ಅಗತ್ಯಗಳಿಗೆ ಸ್ಪಂದಿಸಿ ಸಾಮಾಜಿಕ ಕಾರ್ಯಗಳಲ್ಲೂ ಪಂಚಶಕ್ತಿ ಸಹಕಾರಿ ಸಂಸ್ಥೆಯೂ ನೆರವಾಗುತ್ತಿದೆ. ಈ ಬಾರಿ ಪುರಸಭೆ ಮುಂಭಾಗದಲ್ಲಿ ಫಾರ್ಚೂನರ್ ಬಿಲ್ಡಿಂಗ್‌ನಲ್ಲಿ 1 ಕೋಟಿ ರೂ. ವೆಚ್ಚದ ಸ್ವಂತ ಕಟ್ಟಡವನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಸ್ವಂತ ಕಟ್ಟಡಕ್ಕೆ ಸಹಕಾರಿ…

Read More

ವಿಶ್ವಕರ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಎ.ಆಚಾರ್ಯ ಅಭಿಪ್ರಾಯ ಮಂಗಳೂರು: ದೇವಮಾನವ ಕೀರ್ತಿಶೇಷ ಪಾಲ್ಕೆ ಬಾಬುರಾಯ ಆಚಾರ್ಯರ ತ್ಯಾಗ, ಸೇವೆ, ಸಮರ್ಪಣಾ ಭಾವಗಳ ನೆನಪು ಬದುಕಿಗೆ ದಾರಿದೀಪವಾಗಬೇಕು. ದೇವಮಾನರೆಂದೇ ಕರೆಯಲ್ಪಡುವ ಪಾಲ್ಕೆ ಬಾಬುರಾಯ ಆಚಾರ್ಯರು ‘ಸರಳ ಜೀವನ, ಉದಾತ್ತ ಚಿಂತನೆ’ ಇದು ಅವರ ಬದುಕಿನ ಬಹುಮುಖ್ಯ ಮೌಲ್ಯವಾಗಿತ್ತು “ಇಂದಿಗೂ ಸಾವಿರಾರು ಜನರ ಹೃದಯದಲ್ಲಿ ಪಾಲ್ಕೆ ಬಾಬುರಾಯ ಆಚಾರ್ಯರು ಜೀವಂತವಾಗಿದ್ದಾರೆ ಎಂದು ವಿಶ್ವಕರ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಎ.ಆಚಾರ್ಯ ಅಭಿಪ್ರಾಯಪಟ್ಟರು. https://chat.whatsapp.com/EbVKVnWB6rlHT1mWtsgbch ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ ಆಯೋಜಿಸಿದ್ದ ವಜ್ರಮಹೋತ್ಸವ ಮತ್ತು ಸಂಸ್ಥೆಯ ಸ್ಥಾಪಕರಾದ ಪಾಲ್ಕೆ ಬಾಬುರಾಯ ಆಚಾರ್ಯರ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರ ಬಿಡಿಸುವ ಸ್ಪರ್ಧೆಯ ಚಿತ್ರ ಸಿಂಚನ -2025 ಸಮಾರಂಭದಲ್ಲಿ ಶುಭಾಶಂಸನೆ ನೀಡಿದರು. ಪಾಲ್ಕೆ ಬಾಬುರಾಯ ಆಚಾರ್ಯರನ್ನು ದೇವಮಾನವನಾಗಿಸಿದ ಮೌಲ್ಯ ಅದು ‘ಧರ್ಮ’. ಪಾಲ್ಕೆಯವರು ಪ್ರಾಜ್ಞರ ಸಹವಾಸ, ಸಹಕಾರದಿಂದ ಧರ್ಮವನ್ನು ಅರಿತು ಆಚರಿಸಿದವರು, ಎಲ್ಲರಿಗೂ ಲೇಸನ್ನೇ ಬಯಸುವ ವಿಶಾಲ ಹೃದಯವುಳ್ಳವರಾಗಿದ್ದರು. ಸ್ವಸಮಾಜದ ಬಂಧುಗಳಿಂದ ಮಾತ್ರವಲ್ಲದೆ ಅನ್ಯ ಸಮಾಜದವರಿಂದಲೂ…

Read More

ಮೂಡುಬಿದಿರೆಯಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ನಾಲ್ಕನೇ ಶಾಖೆ ಉದ್ಘಾಟಿಸಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಶುಭಾಷಯ ಮೂಡುಬಿದಿರೆ: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ನೂತನ ನಾಲ್ಕನೇ ಶಾಖೆಯನ್ನು ಮೂಡುಬಿದಿರೆಯಲ್ಲಿ ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್‌.ರಾಜೇಂದ್ರ ಕುಮಾ‌ರ್ ಅವರು ಜ್ಯೋತಿನಗರದ ಮಹಾಲಸ ಕಟ್ಟಡದಲ್ಲಿ ಉದ್ಘಾಟಿಸಿದರು. https://chat.whatsapp.com/EbVKVnWB6rlHT1mWtsgbch ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೊಸೈಟಿ ಬ್ಯಾಂಕ್‌ಗಳ ಸ್ಥಾಪನೆ ಸುಲಭ, ಕರ್ನಾಟಕ ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹಕಾರಿ ಬ್ಯಾಂಕುಗಳು ಲಾಭದಾಯಕವಾಗಿ ನಡೆಯುತ್ತಿದೆ. ವಸಂತ್ ಬೆರ್ನಾರ್ಡ್ ಅಧ್ಯಕ್ಷರಾಗಿರುವ ಪ್ರಿಯದರ್ಶಿನಿ ಸೊಸೈಟಿಯ ನಾಲ್ಕನೇ ಶಾಖೆ ಇದಾಗಿದ್ದು ಅತಿವೇಗದಲ್ಲೇ ಹತ್ತನೇ ಶಾಖೆಯೂ ಉದ್ಘಾಟನೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಮೂಲ್ಕಿ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವರಾದ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ, ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ…

Read More