ಕಟೀಲು: ನಂದಿನಿ ಪತ್ತಿನ ಸಹಕಾರ ಸಂಘ ಕಟೀಲು ಇದರ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಸಂಘದ ಅಧ್ಯಕ್ಷರಾದ ಕೆ.ನೀಲಯ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಆಡಳಿತ ಕಚೇರಿಯ ವಠಾರದಲ್ಲಿ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಕೆರಮ ಸ್ವಾಗತಿಸಿದರು. ಸಾಮಾನ್ಯ ಸಭೆಯ ನೋಟೀಸ್ ಅನ್ನು ಸಂಘದ ಸಿಬ್ಬಂದಿ ದಿವ್ಯಾ ಡಿ.ಅಮೀನ್ ಓದಿದರು. ಕಳೆದ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಕೆರಮ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಬಬಿತಾ ಎಂ 2024-25ನೇ ಸಾಲಿನ ಆಡಳಿತ ವರದಿ ಮಂಡಿಸಿ, 2025-26ನೇ ಸಾಲಿನ ಲೆಕ್ಕ ಪರಿಶೋಧಕರ ನೇಮಕಾತಿ ಬಗ್ಗೆ ಮಂಡಿಸಿದರು.
2025-26ನೇ ಸಾಲಿನ ಬಜೆಟ್ ಅನ್ನು ಸಂಘದ ಹಿರಿಯ ಸಿಬ್ಬಂದಿ ದಿವ್ಯಾ ಡಿ.ಅಮೀನ್ ಮಂಡಿಸಿದರು. ಕಳೆದ ಸಾಲಿನ ಬಜೆಟ್‌ಗಿಂತ ಹೆಚ್ಚು ಆದ ಖರ್ಚನ್ನು ಸಂಘದ ಹಿರಿಯ ನಿರ್ದೇಶಕರಾದ ಸೀತಾರಾಮ ಬಂಗೇರ ಮಂಡಿಸಿದರು. ನಿರ್ದೇಶಕರಾದ ಬಿ.ಲತಾ 2025-26ನೇ ಸಾಲಿನ ಕ್ರಿಯಾ ಯೋಜನೆಗಳನ್ನು ಮಂಡಿಸಿದರು. 2024–25ನೇ ಸಾಲಿನ ಲೆಕ್ಕ ಪರಿಶೋಧಿತ ಆರ್ಥಿಕ ತಖ್ತೆಗಳನ್ನು, ನಿವ್ವಳ ಲಾಭದ ವಿಂಗಡಣೆಯನ್ನು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಕೆರಮ ಮಂಡಿಸಿದರು. 2024-25ನೇ ಸಾಲಿನಲ್ಲಿ ಸಂಘವು ರೂ. 13,04,800.71 ಲಾಭ ಗಳಿಸಿದ್ದು, ಶೇಕಡಾ 10 ಡಿವಿಡೆಂಡ್ ಘೋಷಿಸಲಾಯಿತು.



ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕೀರ್ತನ್ ಕಟೀಲು, ಕೃಷಿ ಕ್ಷೇತ್ರದ ಸಾಧಕ ದಯಾನಂದ ಶೆಟ್ಟಿ ಎಕ್ಕಾರು, ಸಮಾಜಸೇವಾ ಕ್ಷೇತ್ರದಲ್ಲಿ ತಿಮ್ಮಪ್ಪ ಕೋಟ್ಯಾನ್ ಕಟೀಲು ಇವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 90%ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ 6 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಹಕಾರ ಸಂಘದ ಕಾನೂನು ಸಲಹೆಗಾರರಾದ ಟಿ.ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು. ಪರಿವರ್ತನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಕೃಷ್ಣಾನಂದ ಡಿ., ಏಳಿಂಜೆ ಸೌಹಾರ್ದ ಸಹಕಾರಿ ಸಂಘದ ಸಿಇಒ ರೇಷ್ಮಾ ಶೆಟ್ಟಿ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಲೋಕಯ ಸಾಲ್ಯಾನ್ ಉಪಸ್ಥಿತರಿದ್ದರು. ಪರಿಸರ ಜಾಗೃತಿ ಮತ್ತು ಸಸಿಗಳನ್ನು ನೆಡುವ ಜಾಗೃತಿ ಉತ್ತೇಜಿಸುವ ಸಲುವಾಗಿ ಸಹಕಾರ ಸಂಘದ ವತಿಯಿಂದ ಪ್ರತಿಯೊಬ್ಬ ಸದಸ್ಯರಿಗೂ ತೋಟಗಾರಿಕೆ ಇಲಾಖೆಯಿಂದ ಒಂದೊಂದು ಕಸಿ ಮಾಡಿದ ಹಣ್ಣು ಹಂಪಲುಗಳ ಗಿಡಗಳನ್ನು ನೀಡಲಾಯಿತು. ನಿರ್ದೇಶಕರಾದ ಗಣೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಸೀತಾರಾಮ ಬಂಗೇರ, ಪ್ರೇಮರಾಜ ಶೆಟ್ಟಿ, ಜಯ ಡಿ.ಪೂಜಾರಿ, ಗಣೇಶ ಆಚಾರ್ಯ, ವೈಲೆಟ್ ಡಿಸೋಜ, ಲಲಿತಾ, ಬಿ.ಲತಾ, ಅನಿತಾ ಶೆಟ್ಟಿ, ರತ್ನಾ ಉಪಸ್ಥಿತರಿದ್ದರು. ನಿರ್ದೇಶಕರಾದ ರುಕ್ಮಯ ವಂದಿಸಿದರು. ನಿರ್ದೇಶಕ ಅಮರ್ ಪ್ರಸಾದ್ ಶೆಟ್ಟಿ ಮುದಲಾಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು.

