ಐದನೇ ವಾರ್ಷಿಕ ಮಹಾಸಭೆ ಸಂಪನ್ನ
ಪರಿಸರ ಪ್ರೇಮಿ ಮಾಧವ ಉಳ್ಳಾಲ್‌ಗೆ ಸನ್ಮಾನ
ಮಂಗಳೂರು: ಸಫಲ ಸೌಹಾರ್ದ ಸಹಕಾರಿಯ ಐದನೇ ವಾರ್ಷಿಕ ಮಹಾಸಭೆ ಕೈಕಂಬದ ಮಾತೃಭೂಮಿ ಗ್ರ್ಯಾಂಡ್ ಗ್ಯಾಲಕ್ಸಿ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ್ದು ಶೇ.12ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ.
ಸಲಹಾ ಸಮಿತಿ ಸದಸ್ಯ ರವೀಂದ್ರ ಮಂಜೇಶ್ವರ ಕಾರ್ಯಕ್ರಮ ಉದ್ಘಾಟಿಸಿದರು. ನಿರ್ದೇಶಕ ಭಾಸ್ಕರ ಸಫಲಿಗೆ ಎಡಪದವು ಸ್ವಾಗತಿಸಿದರು. ಸಂಘದ ಸದಸ್ಯ, ಉಳ್ಳಾಲ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರನ್ನುಸನ್ಮಾನಿಸಲಾಯಿತು. ದೀಪಕ್ ಅಡ್ಯಾರ್ ಸಮ್ಮಾನ ಪತ್ರ ವಾಚಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕ ಪ್ರಮೋದ್ ಕುಮಾರ್ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಕೆ, ವಾರ್ಷಿಕ ವರದಿ, ಕಳೆದ ಸಾಲಿನ ಲೆಕ್ಕಪತ್ರ 2024-25ರ ಸಾಲಿನ ಬಜೆಟ್, 2024-25 ಸಾಲಿನ ಉದ್ದೇಶಿತ ಕಾರ್ಯ ಚಟುವಟಿಕೆಗಳು, ಹೊಸ ಶಾಖೆಗಳು, ಹೊಸ ಸಿಬಂದಿ ನೇಮಕಾತಿ ವಿಚಾರಗಳ ಮಂಡನೆ ಮಾಡಿ ಅದಕ್ಕೆ ಅನುಮತಿ ಪಡೆದುಕೊಂಡರು.
https://chat.whatsapp.com/Ge11n7QCiMj5QyPvCc0H19
ಸದಸ್ಯರಾದ ಸುಂದರ ಶೆಟ್ಟಿ ಕಣ್ಣೂರು ನಾರಾಯಣ ಸಫಲ್ಯ, ಚಂದ್ರಶೇಖರ್ ಎಸ್.ಎಡಪದವು, ಪದ್ಮನಾಭ ಪಜೀರ್ ಮಾರ್ಗದರ್ಶನ, ಸಲಹೆ ನೀಡಿದರು. ನಿರ್ದೇಶಕರ ಪರವಾಗಿ ಮೋಹಿನಿ ಎಚ್. ಮಾತನಾಡಿದರು.
ಸಂಘದ ಉಪಾಧ್ಯಕ್ಷ ಪ್ರೇಮಾನಂದ ಎ, ನಿರ್ದೇಶಕರಾದ ಭಾಸ್ಕರ ಸಪಳಿಗ, ವೆಂಕಟೇಶ್ ಎಂ, ಪಿ.ಗೋಪಾಲಕೃಷ್ಣ, ಅನಿಲ್ ಕುಮಾರ್, ಮಹಾಬಲ ಅಡ್ಯಾರ್, ಮೋನಪ್ಪ ಪೊಳಲಿ, ತಿರುಮಲೇಶ್ ಬೆಳ್ಳೂರು, ಮೋಹಿನಿ ಎಚ್, ಸತ್ಯಪ್ರಭ, ನಾಮನಿರ್ದೇಶಿತ ನಿರ್ದೇಶಕರಾದ ವಿಜಯಕುಮಾರ್, ಸೂರಜ್ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಹರಿದಾಸ್ ಯು ವಂದಿಸಿದರು.
ಮೆಲ್ಕಾರಿನಲ್ಲಿ ನೂತನ ಶಾಖೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜೀವ ಅಡ್ಯಾರ್, ನಾಲ್ಕು ವರ್ಷಗಳ ಅವಧಿಯಲ್ಲಿ ಸಫಲ ಸೌಹಾರ್ದ ಸಹಕಾರಿ ಸಂಘ ಬೆಳೆದು ಬಂದ ಹಾದಿ, ನಾಲ್ಕು ಶಾಖೆ ತೆರೆದು ಪ್ರತಿ ವರ್ಷ ಹೆಚ್ಚಿನ ಡಿವಿಡೆಂಡ್ ನೀಡುತ್ತ ಬಂದಿದೆ. 2020ರಲ್ಲಿ 65 ಲಕ್ಷ ರೂ. ಪಾಲು ಬಂಡವಾಳದಲ್ಲಿ ಆರಂಭವಾದ ಸಂಘ ಇಂದು 2.93 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 21.70 ಕೋಟಿ ರೂ. ಠೇವಣಿ ಹೊಂದಿದ್ದು, 19.17 ಕೋಟಿ ರೂ. ಸಾಲ ನೀಡಲಾಗಿದೆ. 70.35 ಕೋಟಿ ರೂ. ವಹಿವಾಟು ಹೊಂದಿದೆ. 61,90,000 ರೂ. ಲಾಭ ಗಳಿಸಿದೆ ಎಂದು ಹೇಳಿದರು. ಮುಂದಿನ 2-3 ತಿಂಗಳಲ್ಲಿ ಬಂಟ್ವಾಳದ ಮೆಲ್ಕಾರಿನಲ್ಲಿ ನೂತನ ಶಾಖೆ ತೆರೆಯುವುದಾಗಿ ತಿಳಿಸಿದರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: sahakaraspandana@gmail.com
ಮಾಹಿತಿಗೆ: 9901319694