ಕೇಂದ್ರ ಸರ್ಕಾರದ ಮುಂದಿದೆ ಪ್ರಸ್ತಾವನೆ
ನವದೆಹಲಿ; ಸಹಕಾರಿ ಕ್ಷೇತ್ರದಲ್ಲಿ ಶೀಘ್ರ ರಾಷ್ಟ್ರೀಯ ಮಟ್ಟದ ಕೋ ಆಪರೇಟಿವ್ ಯುನಿವರ್ಸಿಟಿ ಆರಂಭವಾಗಲಿದೆ. ಸಂಸತ್‌ನಲ್ಲಿ ಗುರುವಾರ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಸಹಕಾರ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಯ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಇದಕ್ಕೆ ರೂಪುರೇಷೆ ತಯಾರಿಸಿ, ಹಣಕಾಸು ಹೊಂದಿಸಲಾಗುತ್ತಿದೆ ಎಂದು ತಿಳಿಸಿದರು.
https://chat.whatsapp.com/Ge11n7QCiMj5QyPvCc0H19
ಸಹಕಾರ ಸಚಿವಾಲಯವು ರಾಷ್ಟ್ರೀಯ ಮಟ್ಟದ ಸಹಕಾರ ವಿಶ್ವವಿದ್ಯಾಲಯ ಆರಂಭಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸಹಕಾರ ವಲಯದಲ್ಲಿ ತಂತ್ರಜ್ಞಾನ ಆಧಾರಿತ, ಆಡಳಿತ ನಿರ್ವಹಣೆಯ ಶಿಕ್ಷಣ ಮತ್ತು ತರಬೇತಿ ನೀಡುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ. ಜೊತೆಗೆ ಸಹಕಾರಿ ವಲಯದಲ್ಲಿ ಸಂಶೋಧನೆಗಳು, ಅಭಿವೃದ್ಧಿ ಮತ್ತು ಸಹಕಾರ ಕ್ಷೇತ್ರವನ್ನು ಮ್ತಷ್ಟು ಬಲಪಡಿಸುವ ಇರಾದೆ ಇದರಲ್ಲಿದೆ ಎಂದು ತಿಳಿಸಿದರು. ಪ್ರಸ್ತಾವಿತ ವಿಶ್ವವಿದ್ಯಾಲಯದ ಕುರಿತಂತೆ ವಿವಿಧ ಸಚಿವಾಲಯಗಳು/ಇಲಾಖೆಗಳು, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಸಹಕಾರ/ಸಂಘಗಳು, ಸಹಕಾರಿ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳು, ಸಂಸ್ಥೆಗಳ ಜೊತೆ ವ್ಯಾಪಕ ಸಮಾಲೋಚನೆ ನಡೆಸಿ ಉದ್ದೇಶಿತ ವಿಶ್ವವಿದ್ಯಾನಿಲಯದ ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ಉದ್ದೇಶಿತ ಸಹಕಾರ ಸಚಿವಾಲಯವು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಲ್ಲಷ್ಟು ಸ್ವಾವಲಂಬನೆ ಸಾಧಿಸುವ ಗುರಿ ಇಡಲಾಗಿದೆ. ಈ ವಿಶ್ವವಿದ್ಯಾಲಯವು ಸಹಕಾರ ವಲಯದೊಂದಿಗೆ ಸಮಗ್ರ ಪ್ರಗತಿಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅಮಿತ್ ಶಾ ಹೇಳಿದರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694