Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿಯಿಂದ ಬೆಳ್ಳಂಪಳ್ಳಿ ಶಾಲೆಯ ಮಕ್ಕಳ ಅಗತ್ಯ ವಸ್ತುಗಳ ಹಸ್ತಾಂತರ
    News

    ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿಯಿಂದ ಬೆಳ್ಳಂಪಳ್ಳಿ ಶಾಲೆಯ ಮಕ್ಕಳ ಅಗತ್ಯ ವಸ್ತುಗಳ ಹಸ್ತಾಂತರ

    adminBy adminAugust 3, 2024

    ಮಂಗಳೂರು: ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಬೆಳ್ಳಂಪಳ್ಳಿಯ ಜೈಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಅಗತ್ಯ ವಸ್ತುಗಳ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯರು ಶಾಲೆಗೆ, ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಸ್ಟೀಲ್ ಬಟ್ಟಲು ಮತ್ತು ಲೋಟಗಳನ್ನು ಹಸ್ತಾಂತರಿಸಿ, ಹಿಂದೆ ಬೆಳ್ಳಂಪಳ್ಳಿ ಶಾಖೆಯ ಉದ್ಘಾಟನಾ ಸಂದರ್ಭ ಕಾರ್ಯಕ್ರಮ ನೆರವೇರಿಸಲು ಸ್ಥಳಾವಕಾಶ ನೀಡಿದ ಈ ಶಾಲೆಗೆ ಇಂದು ಅಗತ್ಯ ವಸ್ತುಗಳನ್ನು ನೀಡುವ ಅವಕಾಶ ದೊರೆತಿರುವುದು ಹೆಮ್ಮೆಯ ವಿಷಯ ಎಂದರು. ಹಾವಂಜೆ -ಬೆಳ್ಳಂಪಳ್ಳಿ -ಕುಕ್ಕೆಹಳ್ಳಿ ವಿಶ್ವಕರ್ಮ ಸಮಾಜೋದ್ದಾರಕ ಸಂಘದ ಅಧ್ಯಕ್ಷ ಗೋಪಾಲ ಆಚಾರ್ಯ ಕೀಳಿಂಜೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬೆಳ್ಳಂಪಳ್ಳಿ- ಕುಕ್ಕಿಕಟ್ಟೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ, ಪೆರ್ಡೂರು ಶಾಖೆಯ ನಿವೃತ್ತ ಹಿರಿಯ ಶಾಖಾ ವ್ಯವಸ್ಥಾಪಕ ನಾಗರಾಜ ಪ್ರಭು ಬಿ, ಜೈಹಿಂದ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಂಪಳ್ಳಿ ಶಾಲಾ ಸಂಚಾಲಕ ಬಿ.ಹರೀಶ್ ಹೆಗ್ಡೆ, ಜೈಹಿಂದ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಂಪಳ್ಳಿಯ ಮುಖ್ಯೋಪಾಧ್ಯಾಯ ಸುಭಾಷ್ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.

    https://chat.whatsapp.com/Ge11n7QCiMj5QyPvCc0H19

    ಶಾಲೆಯ ಸಂಚಾಲಕ ಬಿ.ಹರೀಶ್ ಹೆಗ್ಡೆ ಹಾಗೂ ಮುಖ್ಯೋಪಾಧ್ಯಾಯ ಸುಭಾಷ್ ನಾಯಕ್ ಶಾಲೆಯನ್ನು ಗುರುತಿಸಿ ಅಗತ್ಯ ವಸ್ತುಗಳನ್ನು ನೀಡಿದ ಸಲುವಾಗಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಶಾಲೆಯ ಅಧ್ಯಾಪಕಿ ಮಲ್ಲಿಕಾ ಮಾತನಾಡಿ, ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ನೀಡಿದ ಅಗತ್ಯ ವಸ್ತುಗಳು ದೇವರಿಗೆ ಸಮರ್ಪಣೆ ಆದಂತೆ ಎಂದು ಹರಸಿದರು. ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಯಿತು. ಸಂಜೆ ಸಂಸ್ಥೆಯ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಯಿತು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮೂರ್ತಿ, ಕೆ.ಶಶಿಕಾಂತ ಆಚಾರ್ಯ, ಉಡುಪಿ ಶಾಖೆಯ ವ್ಯವಸ್ಥಾಪಕ ಬಿ.ಲಕ್ಷ್ಮೀನಾರಾಯಣ ಆಚಾರ್ಯ, ಮಾರಾಟಾಧಿಕಾರಿ ಜಯಪ್ರಕಾಶ್ ಬಿ.ಎಸ್, ನಿವೃತ್ತ ಸಿಬ್ಬಂದಿ ಸುರೇಶ್ ಬಿ, ಉಪೇಂದ್ರ ಆಚಾರ್ಯ ಬಿ., ಗಂಗಾಧರ ಕೆ.ಬಿ., ರತ್ನಾಕರ ಆಚಾರ್ಯ, ರಜನಿ ಆರ್.ರಾವ್, ವಿನೋದ ಎಸ್.ಆಚಾರ್ಯ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಬೆಳ್ಳಂಪಳ್ಳಿ ಶಾಖೆಯ ಪ್ರಭಾರ ಶಾಖಾ ವ್ಯವಸ್ಥಾಪಕ ಮೋಹನದಾಸ ಆಚಾರ್ಯ ಟಿ.ಬಿ ಕಾರ್ಯಕ್ರಮ ನಿರೂಪಿಸಿ, ಕಿರಿಯ ಸಹಾಯಕ ಸುಧೀರ್ ಕುಮಾರ್ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
    ಇಮೇಲ್: sahakaraspandana@gmail.com
    ಮಾಹಿತಿಗೆ: 9901319694

    Bellamaplli Cooperative Jai Hind School S K Goldsmiths Industrial Co Operative Society Sahakara Spandana Souharda Sahakari Spandana Cooperative Spandana NEws
    Previous Articleಒಡಿಯೂರು ಸ್ವಾಮೀಜಿಯವರ ಜನ್ಮದಿನ ಪ್ರಯುಕ್ತ ಆ.4ರಂದು ರಕ್ತದಾನ ಶಿಬಿರ
    Next Article ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರ ಸಂಘ ಶೇ.18 ಡಿವಿಡೆಂಡ್‌

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.