Author: admin

ಮಂಗಳೂರು: ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ವಿಶ್ವ ಬೆಳಕು ಸೌಹಾರ್ದ ಸಹಕಾರ ನಿಯಮಿತದಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾನುವಾರ ಕದ್ರಿ ಶ್ರೀ ಗೋರಕ್ಷನಾಥ ಮಿನಿ ಹಾಲ್ ನಲ್ಲಿ ಜರಗಿತು. ಖ್ಯಾತ ನಿರೂಪಕ ನವೀನ್ ಶೆಟ್ಟಿೆ ಎಡ್ಮೆಮಾರ್‌ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ಆಟಿಯ ದಿನಗಳು ಕಷ್ಟಕರವಾಗಿದ್ದವು. ಬಿರುಸಿನ ಮಳೆಯ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಇಲ್ಲದೆ ಕಷ್ಟದಲ್ಲಿ ದಿನಗಳೆಯಬೇಕಾಗಿತ್ತು. ಅಂದಿನ ದಿನಗಳನ್ನು ನೆನಪಿಸುವ ಸಲುವಾಗಿ ಈ ಆಟಿಡೊಂಜಿ ಕಾರ್ಯಕ್ರಮಗಳನ್ನು ಅಲ್ಲಲ್ಲಿಆಚರಿಸಲಾಗುತ್ತಿದೆ ಎಂದು ಹೇಳಿದರು. ಪ್ರತಿಭಾನ್ವಿತರಿಗೆ ಸನ್ಮಾನ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಮೂಲತ್ವ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಲಕ್ಷ್ಮೀಶ ಕೋಟ್ಯಾನ್‌, ಕಲ್ಪನಾ ಕೋಟ್ಯಾನ್, ಮಹೇಶ್‌ ಅಮೀನ್,  ಪ್ರಶಾಂತ್ ರೈ ಶೈನಿ, ಜಯಶ್ರೀ ಕುಡುಪು ಹಾಗೂ ರಾಮ್‌ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ: ಇಮೇಲ್: sahakaraspandana@gmail.com ಮಾಹಿತಿಗೆ: 9901319694

Read More

ಕೇಂದ್ರ ಸರ್ಕಾರದ ಮುಂದಿದೆ ಪ್ರಸ್ತಾವನೆ ನವದೆಹಲಿ; ಸಹಕಾರಿ ಕ್ಷೇತ್ರದಲ್ಲಿ ಶೀಘ್ರ ರಾಷ್ಟ್ರೀಯ ಮಟ್ಟದ ಕೋ ಆಪರೇಟಿವ್‌ ಯುನಿವರ್ಸಿಟಿ ಆರಂಭವಾಗಲಿದೆ. ಸಂಸತ್‌ನಲ್ಲಿ ಗುರುವಾರ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಸಹಕಾರ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಯ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಇದಕ್ಕೆ ರೂಪುರೇಷೆ ತಯಾರಿಸಿ, ಹಣಕಾಸು ಹೊಂದಿಸಲಾಗುತ್ತಿದೆ ಎಂದು ತಿಳಿಸಿದರು. https://chat.whatsapp.com/Ge11n7QCiMj5QyPvCc0H19 ಸಹಕಾರ ಸಚಿವಾಲಯವು ರಾಷ್ಟ್ರೀಯ ಮಟ್ಟದ ಸಹಕಾರ ವಿಶ್ವವಿದ್ಯಾಲಯ ಆರಂಭಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸಹಕಾರ ವಲಯದಲ್ಲಿ ತಂತ್ರಜ್ಞಾನ ಆಧಾರಿತ, ಆಡಳಿತ ನಿರ್ವಹಣೆಯ ಶಿಕ್ಷಣ ಮತ್ತು ತರಬೇತಿ ನೀಡುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ. ಜೊತೆಗೆ ಸಹಕಾರಿ ವಲಯದಲ್ಲಿ ಸಂಶೋಧನೆಗಳು, ಅಭಿವೃದ್ಧಿ ಮತ್ತು ಸಹಕಾರ ಕ್ಷೇತ್ರವನ್ನು ಮ್ತಷ್ಟು ಬಲಪಡಿಸುವ ಇರಾದೆ ಇದರಲ್ಲಿದೆ ಎಂದು ತಿಳಿಸಿದರು. ಪ್ರಸ್ತಾವಿತ ವಿಶ್ವವಿದ್ಯಾಲಯದ ಕುರಿತಂತೆ ವಿವಿಧ ಸಚಿವಾಲಯಗಳು/ಇಲಾಖೆಗಳು, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಸಹಕಾರ/ಸಂಘಗಳು, ಸಹಕಾರಿ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳು, ಸಂಸ್ಥೆಗಳ ಜೊತೆ ವ್ಯಾಪಕ ಸಮಾಲೋಚನೆ ನಡೆಸಿ ಉದ್ದೇಶಿತ ವಿಶ್ವವಿದ್ಯಾನಿಲಯದ…

Read More

ಡೈರಿ ವಲಯದಲ್ಲಿ ಅತಿ ಹೆಚ್ಚು ಕೋ ಆಪರೇಟಿವ್‌ ಸೊಸೈಟಿಗಳು ಮಹಾರಾಷ್ಟ್ರ, ಗುಜರಾತ್‌ನಲ್ಲಿಗರಿಷ್ಠ ಸಹಕಾರಿ ಸಂಸ್ಥೆಗಳು ರಾಜ್ಯಸಭೆಯಲ್ಲಿ ಸಹಕಾರಿ ಸಚಿವ ಅಮಿತ್‌ ಶಾ ಮಾಹಿತಿ ನವದೆಹಲಿ: ಕೇಂದ್ರದ ಸಹಕಾರ ಸಚಿವಾಲಯ, ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಸಮಗ್ರ ರಾಷ್ಟ್ರೀಯ ಸಹಕಾರಿ ಡೇಟಾಬೇಸ್ (NCD) ಅನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಡೈರಿ, ಮಹಿಳಾ ಕಲ್ಯಾಣ ಮತ್ತು ಬುಡಕಟ್ಟು ಎಸ್‌ಸಿ/ಎಸ್‌ಟಿ ಸಹಕಾರಿ ಸೇರಿದಂತೆ ವಿವಿಧ ವಲಯಗಳ ಡೇಟಾಗಳ ಮಾಹಿತಿಗಳಿವೆ. ಎನ್‌ಸಿಡಿ ಪೋರ್ಟಲ್ ಪ್ರಕಾರ, ದೇಶದಲ್ಲಿ ಒಟ್ಟು 8,09,303 ಸಹಕಾರ ಸಂಘಗಳಿವೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ವೇಳೆ ಮಾತನಾಡಿದ ಸಹಕಾರ ಸಚಿವ ಅಮಿತ್‌ ಶಾ, ರಾಜ್ಯವಾರು ಮತ್ತು ವಲಯವಾರು ಸಹಕಾರಿಗಳ ವಿವರಗಳು ರಾಷ್ಟ್ರವ್ಯಾಪಿ ಸಹಕಾರಿ ಮೂಲಸೌಕರ್ಯವನ್ನು ಬಲಪಡಿಸಲು ಕಾರಣವಾಗುತ್ತದೆ ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ 2,22,324, ಗುಜರಾತ್‌ನಲ್ಲಿ 82,143, ತೆಲಂಗಾಣದಲ್ಲಿ 60,619, ಮಧ್ಯಪ್ರದೇಶ 53,134, ಕರ್ನಾಟಕ 45,461, ಉತ್ತರಪ್ರದೇಶ 44,579, ಹರ್ಯಾಣ 32,860, ಬಿಹಾರ 26,655, ಪಂಜಾಬ್‌ 19,074, ಆಂಧ್ರಪ್ರದೇಶ 17,675, ಅಸ್ಸಾಮ್‌ 11,204 ಸೊಸೈಟಿಗಳನ್ನು ಹೊಂದಿವೆ. ಡೈರಿ ವಲಯದಲ್ಲಿ…

Read More

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಹಾಗೂ ಮರಗಳ ಸಂರಕ್ಷಣೆಗೆ ಸಿದ್ಧಸಿರಿ ಸೌಹಾರ್ದ ಸಹಕಾರಿಯ ವತಿಯಿಂದ 10 ಲಕ್ಷ ರೂ. ದೇಣಿಗೆಯನ್ನು ಜಿಲ್ಲಾಧಿಕಾರಿ ಡಿ.ಭೂಬಾಲನ್‌ ಅವರಿಗೆ ಹಸ್ತಾಂತರಿಸಲಾಯಿತು. ಗಿಡ ಮರಗಳ ರಕ್ಷಣೆಗೆ ಸಂಬಂಧಿಸಿ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಶಾಸಕ ಹಾಗೂ ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್‌ ಹಾಗೂ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಣಯದಂತೆ  ದೇಣಿಗೆ ಹಸ್ತಾಂತರ ಮಾಡಲಾಯಿತು. ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಮಾತನಾಡಿ, ಸಿದ್ಧಸಿರಿ ಸೌಹಾರ್ದ ಸಹಕಾರಿಯು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ನೇತೃತ್ವದಲ್ಲಿ ನಿರಂತರವಾಗಿ ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಕೋವಿಡ್‌ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಲಸಿಕಾ ಕಾರ್ಯದಲ್ಲಿ ತೊಡಗಿಸಿಕೊಂಡು ಮನೆಮನೆಗೆ ಭೇಟಿ ನೀಡಿ ಕೋವಿಡ್‌ ಲಸಿಕೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಿತ್ತು ಎಂದು ಹೇಳಿದರು. ಈ ಹಿಂದೆ ವೃಕ್ಷೋತ್ಥಾನ ಅಭಿಯಾನಕ್ಕೆ 10 ಲಕ್ಷ ರೂ. ನೀಡಲಾಗಿತ್ತು. ಈ ಬಾರಿ ನಗರದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು 10…

Read More

ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯ ಅಭಿಪ್ರಾಯ ಮಂಗಳೂರು: ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ನೂತನ ರಾಷ್ಟ್ರೀಯ ಸಹಕಾರಿ ನೀತಿಯನ್ನು ಒಂಬತ್ತು ಆದ್ಯತೆಗಳಲ್ಲಿ ಮೊದಲ ಆದ್ಯತೆಯಾಗಿ ಪ್ರಸ್ತಾಪ ಮಾಡಿರುವುದನ್ನು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯ ಸ್ವಾಗತಿಸಿದ್ದಾರೆ. ದೇಶದ ಸಹಕಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ವ್ಯವಸ್ಥಿತ, ಕ್ರಮಬದ್ಧ ಮತ್ತು ಸಮಗ್ರ ವಿಷಯಗಳನ್ನೊಳಗೊಂಡ ರಾಷ್ಟ್ರೀಯ ಸಹಕಾರಿ ನೀತಿಯನ್ನು ಹಣಕಾಸು ಸಚಿವರು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಮತ್ತು ಸರ್ಕಾರ ನಿಗದಿಪಡಿಸಿರುವ ಒಂಬತ್ತು ಆದ್ಯತಾ ವಲಯಗಳ ಪೈಕಿ ಇದನ್ನು ಮೊದಲ ಆದ್ಯತಾ ವಲಯದಲ್ಲಿ ಪರಿಗಣಿಸಿರುವುದು ಉತ್ತಮ ಅಂಶ. ಈ ನೀತಿಯು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಯ ವೇಗವನ್ನು ಗುರುತಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪೂರಕವಾಗಲಿದೆ ಎಂದು ಡಾ.ಹರೀಶ್‌ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಮುದ್ರಾ ಸಾಲದ ಮಿತಿ ಹೆಚ್ಚಳ ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ. ಇಟ್ಟಿರುವುದರಿಂದ ಆ ವಲಯದ ಸಮಗ್ರ ಅಭಿವೃದ್ಧಿಗೆ ಕಾರಣವಾಗಲಿದೆ. ಮುದ್ರಾ ಸಾಲ ಯೋಜನೆಯಡಿ ಸಾಲದ…

Read More

ಕೇಂದ್ರ ಬಜೆಟ್‌ನಲ್ಲಿ ಮಕ್ಕಳಿಗಾಗಿಯೇ ಉಳಿತಾಯ ಯೋಜನೆ ಪ್ರಕಟಿಸಿದ ಹಣಕಾಸು ಸಚಿವೆ ಮಂಗಳೂರು: ಎನ್‌ಡಿಎ ಸರಕಾರದಲ್ಲಿ ಸತತ ಏಳನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಕಳಿಗಾಗಿಯೇ ಹೊಸ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ. ಎನ್‌ಪಿಎಸ್‌ ವಾತ್ಸಲ್ಯ ಯೋಜನೆ ಎಂಬ ಹೆಸರಿನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿ ಅಪ್ರಾಪ್ತರಿಗಾಗಿ ಮಕ್ಕಳ ಪಾಲಕರು ಮತ್ತು ಷೋಷಕರು ಈ ಯೋಜನೆ ಆರಂಭಿಸಬಹುದು. ಮಕ್ಕಳು ವಯಸ್ಸಿಗೆ ಬಂದ ನಂತರ ಇದನ್ನು ಪೂರ್ಣ ಪ್ರಮಾಣದ ಎನ್‌ಪಿಎಸ್ ಸ್ಕೀಂ ಆಗಿ ಬದಲಾಯಿಸಲು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೆತ್ತವರು ಅಥವಾ ಪೋಷಕರು ಎನ್‌ಪಿಎಸ್‌ ವಾತ್ಸಲ್ಯ ಮೂಲಕ ದೀರ್ಘಾವಧಿಯ ಉಳಿತಾಯ ಯೋಜನೆ ಆರಂಭಿಸಬಹುದು. ಈ ಯೋಜನೆ ಮೂಲಕ ಮಕ್ಕಳ ಹೆಸರಿನಲ್ಲಿ ಪಾಲಿಸಿಗಳನ್ನು ತೆಗೆದುಕೊಂಡು, ಹೆತ್ತವರು ಅಥವಾ ಪೋಷಕರು ಹಣ ಹೂಡಬಹುದು. ಮಕ್ಕಳು ವಯಸ್ಸಿಗೆ ಬಂದ ಮೇಲೆ ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಾಗಿ (ಎನ್‌ಪಿಎಸ್) ಪರಿವರ್ತಿಸಲು ಅವಕಾಶವಿದೆ. ಮಕ್ಕಳಿಗಾಗಿಯೇ ಆರಂಭಿಸಿರುವ ಹೊಸ ಸ್ಕೀಮ್‌…

Read More

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿ ಘೋಷಿಸಲಾಗಿದ್ದು ಇದರಿಂದ ವೇತನ ಪಡೆಯುವವರಿಗೆ ನೆರವಾಗಲಿದೆ. ಮುಂದಿನ 6 ತಿಂಗಳ ಅವಧಿಯಲ್ಲಿ ಕಸ್ಟಮ್ಸ್ ಸುಂಕ ರಚನೆಯ ಸಮಗ್ರ ಪರಿಶೀಲನೆ ನಡೆಸುವ ಭರವಸೆಯನ್ನು ವಿತ್ತ ಸಚಿವರು ನೀಡಿದ್ದಾರೆ. ಇ-ಕಾಮರ್ಸ್‌ನಲ್ಲಿ ಟಿಡಿಎಸ್ ದರವನ್ನು 0.1% ಕ್ಕೆ ಇಳಿಸಲಾಗುವುದು. ದತ್ತಿಗಳಿಗೆ ಎರಡು ತೆರಿಗೆ ವಿನಾಯಿತಿ ಆಡಳಿತಗಳನ್ನು ಒಂದಾಗಿ ವಿಲೀನ, ಚಿನ್ನ ಮತ್ತು ಬೆಳ್ಳಿ ಮೇಲಿನ ಸುಂಕ ತಗ್ಗಿಸಿ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಮತ್ತು ಪ್ಲಾಟಿನಂ ಮೇಲೆ 6.5% ಕ್ಕೆ ಇಳಿಸಲು ಪ್ರಸ್ತಾಪ ನೀಡಲಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿರುವವರಿಗೆ 50,000 ರೂ.ನಿಂದ 75,000 ರೂ.ಗೆ ಹೆಚ್ಚಳ ಮಾಡಲಾಗಿದೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಹೊಸ ತೆರಿಗೆ ಸ್ಲ್ಯಾಬ್‌ಗಳು: 3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ 3 ಲಕ್ಷದಿಂದ 7 ಲಕ್ಷದವರೆಗಿನ ಆದಾಯಕ್ಕೆ ಶೇ.5 ತೆರಿಗೆ 7 ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ.10 ತೆರಿಗೆ 10 ಲಕ್ಷದಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ.15 ತೆರಿಗೆ 12 ಲಕ್ಷದಿಂದ…

Read More

ಕೃಷಿ ಕ್ಷೇತ್ರ, ಯುವಕರಿಗೆ ಕೊಡುಗೆಗಳ ಮಹಾಪೂರ ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಮಂಡಿಸಿರುವ ಬಜೆಟ್‌ನಲ್ಲಿ ರಾಷ್ಟ್ರೀಯ ಸಹಕಾರಿ ನೀತಿಯ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಇದರ ರೂಪುರೇಷೆ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಈ ಮಧ್ಯೆ ಆಂಧ್ರಪ್ರದೇಶ ಮತ್ತು ಬಿಹಾರದ ಸರ್ವತೋಮುಖ ಬೆಳವಣಿಗೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಅಲ್ಲದೆ ಕೃಷಿ ಕ್ಷೇತ್ರ ಮತ್ತು ಯುವಜನಾಂಗದ ಮೇಲೆ ವಿಶೇಷ ಕೊಡುಗೆ ಪ್ರಕಟಿಸಲಾಗಿದ್ದು ಗ್ರಾಮೀಣಾಭಿವೃದ್ಧಿಗೂ ೨.೬೬ ಲಕ್ಷ ಕೋಟಿ ರೂ. ಘೋಷಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಸಿಗಡಿ ಸಾಕಾಣೆ ಮ್ತು ಅದರ ಮಾರುಕಟ್ಟೆಗೆ ಸಂಬಂಧಿಸಿ ಹಣಕಾಸು ಒದಗಿಸುವ ಯೋಜನೆ ಪ್ರಕಟಿಸಿದೆ. ಉದ್ಯೋಗ ಹುಡುಕುವವರಿಗೆ ಬಂಪರ್ ಉಡುಗೊರೆ ಸರ್ಕಾರದ 9 ಆದ್ಯತೆಗಳಲ್ಲಿ ಒಂದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ. ಇದರ ಅಡಿಯಲ್ಲಿ, ಮೊದಲ ಬಾರಿಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ನೆರವು ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು. ಈ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮೂರು…

Read More

ಆಶ್ರಮದಲ್ಲಿ 180 ಮಂದಿಗೆ ವ್ಯವಸ್ಥೆ ಮಂಗಳೂರು: ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.‌ ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಹೊಸಬೆಳಕು ಸೇವಾ ಟ್ರಸ್ಟ್ ಬೈಲೂರು ಇದರ ಆಶ್ರಮವಾಸಿಗಳಿಗೆ ನೆರವು ನೀಡುವ ಕಾರ್ಯಕ್ರಮ ಶನಿವಾರ ಹೊಸಬೆಳಕು ಸೇವಾ ಟ್ರಸ್ಟ್‌ನ ಸಭಾಂಗಣದಲ್ಲಿ ನೆರವೇರಿತು. ಸಮಾರಂಭದ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅವರು ಆಶ್ರಮಕ್ಕೆ 1300 ವ್ಯಾಟ್ಸ್ ಪ್ರಿಸ್ಟೇಜ್ ಮಿಕ್ಸಿ, 25 ನೀಲ್ ಕಮಲ್ ಚೇರ್, 25 ತಲೆದಿಂಬು, 50 ಕೆಜಿ ಅಕ್ಕಿ ಮತ್ತು ಅಡುಗೆ ಸಾಮಗ್ರಿ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಶ್ರಮ ವಾಸಿಗಳಿಗೆ ನೆರವು ನೀಡಿರುವುದು ಸಂಸ್ಥೆಯ ಸ್ಥಾಪಕಾಧ್ಯಕ್ಷ ದಿ.ಪಾಲ್ಕೆ ಬಾಬುರಾಯ ಆಚಾರ್ ಅವರ ಆತ್ಮಕ್ಕೆ ಖುಷಿ ತಂದಿರಬಹದು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಹರಿನಾರಾಯಣ ಭಂಡಿ ಪೆರ್ಡೂರು ಮಾತನಾಡಿ, ಸೇವಾಶ್ರಮದ ಕಾರ್ಯವೈಖರಿಯನ್ನು ಶ್ಲಾಘಿಸಿ ಎಲ್ಲರೂ ಆರೋಗ್ಯವಂತರಾಗಿ ಎಂದು ಶುಭಹಾರೈಸಿದರು. ಸಂಸ್ಥೆಯ ಸಂಸ್ಥಾಪಕಿ ತನುಜಾ ತರುಣ್ ಮಾತನಾಡಿ, ಸುಮಾರು ಹತ್ತು ವರ್ಷಗಳಿಂದ ಆಶ್ರಮದ ನಿರ್ವಹಣೆಯ ಬಗ್ಗೆ ವಿವರಿಸಿ ಸಾಧನೆಯನ್ನು…

Read More

ಬಲ್ನಾಡು ಸಿಎ ಬ್ಯಾಂಕ್‌ ಕೇಂದ್ರ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅಭಿಪ್ರಾಯ ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್ ಗಳು ಯಶಸ್ವಿಯಾಗಿ ತಮ್ಮ ಸೇವೆ ವಿಸ್ತರಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಬಲಿಷ್ಠವಾಗಿದ್ದು, 28 ವರ್ಷಗಳಿಂದ ಕೃಷಿ ಸಾಲಗಳು ಶೇ.100ರಷ್ಟು ಮರುಪಾವತಿಯಾಗುತ್ತಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಹೇಳಿದರು. ಬಿಳಿಯೂರು ಕಟ್ಟೆಯಲ್ಲಿರುವ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿಯ ನೂತನ ಸುಸಜ್ಜಿತ ಕಟ್ಟಡ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು. ಆಡಳಿತ ಕಚೇರಿ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಗೌಡ ನೇತೃತ್ವದಲ್ಲಿ ಉತ್ತಮ ಕಟ್ಟಡ ನಿರ್ಮಿಸಿ ಸಮಾಜಕ್ಕೆ ಅರ್ಪಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿ ಮಾಡಿದೆ ಎಂದರು. ನೂತನ ಗೋದಾಮು ಕಟ್ಟಡ ಉದ್ಘಾಟಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್‌ ರೈ…

Read More