Author: admin

ವಿಷನ್‌ ಸಹಕಾರ್‌ ಸೇ ಸಮೃದ್ಧಿ ಕಾರ್ಯಕ್ರಮಕ್ಕೆ ಪೂರಕವಾಗಿ ಕ್ರಮ ಲೋಕಸಭೆಯಲ್ಲಿ ಸಹಕಾರ ಸಚಿವ ಅಮಿತ್‌ ಶಾ ಮಾಹಿತಿ ನವದೆಹಲಿ: ಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರದ ಸಹಕಾರದಿಂದ ಸಮೃದ್ಧಿ ವಿಷನ್‌ಗೆ ಪೂರಕವಾಗಿ ಈ ಕ್ರಮಗಳು ಜಾರಿಯಾಗಲಿವೆ. ಸಹಕಾರ ಸಂಘಗಳ ಹಲವಾರು ಕಾರ್ಯಚಟುವಟಿಕೆಗಳಿಗೆ ತೆರಿಗೆ ವಿನಾಯಿತಿ, ನಗದು ವಹಿವಾಟಿನಲ್ಲಿ ಟಿಡಿಎಸ್ ವಿಧಿಸುವಲ್ಲಿನ ಮಿತಿಯಲ್ಲಿ ಹೆಚ್ಚಳ ಇತ್ಯಾದಿ ಉಪಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸಹಕಾರ ಸಚಿವ ಅಮಿತ್‌ ಶಾ ಹೇಳಿದರು. ಲೋಕಸಭೆಯಲ್ಲಿ ಮಾಹಿತಿ ನೀಡಿದ ಸಚಿವ ಅಮಿತ್‌ ಶಾ, ಸಹಕಾರ ಸಂಘಗಳ ಆದಾಯದ ಮೇಲಿನ ಸರ್ಚಾರ್ಜ್‌ನಲ್ಲಿ ಕಡಿತ ಮಾಡುವುದರ ಸುಳಿವು ನೀಡಿದರು. ಸರ್ಚಾರ್ಜ್‌ ರೂ. 1 ಕೋಟಿ ಮತ್ತು ರೂ. 10 ಕೋಟಿ ನಡುವಿನ ಆದಾಯಕ್ಕೆ 12% ರಿಂದ 7% ಕ್ಕೆ ಇಳಿಕೆಯಾಗಿದೆ. ಈ ಕಡಿತವು ಸಹಕಾರಿ ಸಂಘಗಳು ಮತ್ತು ಅದರ ಸದಸ್ಯರ, ವಿಶೇಷವಾಗಿ ಗ್ರಾಮೀಣ ಮತ್ತು ಕೃಷಿ ಸಮುದಾಯಗಳ ಆದಾಯವನ್ನು ಹೆಚ್ಚಿಸುವ…

Read More

ಎಸ್‌ಸಿಡಿಸಿಸಿ ಬ್ಯಾಂಕ್‌ ಕೋಡಿಕಲ್‌ ಶಾಖೆ ಸ್ಥಳಾಂತರಿತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಅಭಿಪ್ರಾಯ ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಬಹಳ ದೊಡ್ಡ ಸಾಧನೆ ಮಾಡಿದೆ. ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ದಕ್ಷ ನಾಯಕತ್ವದಲ್ಲಿ ಬ್ಯಾಂಕಿಂಗ್‌ ಸೇವೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಮುಂಚೂಣಿಯಲ್ಲಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ನ ಕೋಡಿಕಲ್‌ ಶಾಖೆಯನ್ನು ಉರ್ವ ಮಾರಿಗುಡಿ ಕಟ್ಟಡದ ನೆಲ ಅಂತಸ್ತಿನಲ್ಲಿ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂಎನ್‌.ರಾಜೇಂದ್ರ ಕುಮಾರ್‌ ಉದ್ಘಾಟಿಸಿ ಮಾತನಾಡಿ, ಗ್ರಾಹಕರಿಗೆ ಸಮರ್ಪಕ ಸೇವೆ ಒದಗಿಸುವಾಗ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುತ್ತಿದೆ. 110 ವರ್ಷಗಳ ಇತಿಹಾಸದಲ್ಲಿ 113 ಶಾಖೆಗಳ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್‌ ಜನರಿಗೆ ಸಮರ್ಥ ಸೇವೆ ನೀಡುತ್ತಿದೆ. 28 ವರ್ಷಗಳಿಂದ ಶೇ.100ರಷ್ಟು ಸಾಲ ಮರುಪಾವತಿ ಆಗುತ್ತಿದೆ. ಗ್ರಾಮಾಂತರ ಪ್ರದೇಶದ ಮಹಿಳೆಯರ ಸ್ಥಾವಲಂಬಿ ಜೀವನಕ್ಕಾಗಿ ನವೋದಯ ಸ್ವಸಹಾಯ ಸಂಘಗಳ ಮೂಲಕ ಸಾಲದ ವ್ಯವಸ್ಥೆ ಮಾಡಿದ್ದು, ಶೇ.99. 2೦ರಷ್ಟು ಮರುಪಾವತಿ ಆಗುತ್ತಿದೆ. ಜಿಲ್ಲೆಯಲ್ಲಿ ಸಾಲ ದೊರೆಯದ ಕಾರಣಕ್ಕೆ…

Read More

ಬೃಹತ್‌ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ  ಬೃಹತ್‌ ರಕ್ತದಾನ ಶಿಬಿರ ಮಂಗಳೂರು: ದುಶ್ಚಟಮುಕ್ತ ಸಮಾಜ ನಮಗಿಂದು ಬೇಕಾಗಿದೆ. ಇದನ್ನು ನಿರ್ಮಾಣ ಮಾಡುವುದು ಹೇಗೆ? ಆ ಬಗ್ಗೆ ಒಂದಷ್ಟು ಸ್ವಚ್ಛ ಮನಸ್ಸುಗಳು ಆಲೋಚನೆ ಮಾಡಬೇಕು. ಜೊತೆಗೆ ದುಶ್ಚಟಮುಕ್ತ, ಕೌಶಲ್ಯಭರಿತ ಹಾಗೂ ಸ್ವಚ್ಛ ಭಾರತ ನಿರ್ಮಾಣವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಭಾನುವಾರ ಒಡಿಯೂರು ಪೂಜ್ಯ ಗುರುದೇವಾನಂದ ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ, ಸೇವಾ ಸಂಭ್ರಮ ಪ್ರಯುಕ್ತ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್‌ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಆದ್ಯತೆ ಆಗಬೇಕು.…

Read More

ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿ ಸುರತ್ಕಲ್: ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ ವಾರ್ಷಿಕ 217 ಕೋಟಿ ರೂ. ಒಟ್ಟು ವ್ಯವಹಾರ ನಡೆಸಿದ್ದು, 41,26,686.43 ರೂ. ನಿವ್ವಳ ಲಾಭ ಗಳಿಸಿದೆ. ಪ್ರಸ್ತುತ ಸಾಲಿನಲ್ಲಿ ಸಂಘವು ಗ್ರಾಹಕರಿಗೆ ಶೇ.18 ಡಿವಿಡೆಂಡ್‌ ನೀಡಲು ನಿರ್ಧರಿಸಿದೆ. ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸುರತ್ಕಲ್ ಸಿಟಿ ಸ್ಕ್ವೇರ್ ನಲ್ಲಿ ನಡೆದಿದ್ದು ಈ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಂಘವು 16 ವರ್ಷಗಳಿಂದ ನಿರಂತರ ಲಾಭ ಗಳಿಸುತ್ತಿದ್ದು, ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿಯಲ್ಲಿ ವರ್ಗೀಕರಣಗೊಂಡಿದೆ. ಸಂಘವು ಕ್ಲೌಡ್ ತಂತ್ರಾಂಶವನ್ನು ಹಾಗೂ ಆರ್‌ಟಿಜಿಎಸ್/ನೆಫ್ಟ್ ಸೇವೆ, ವಾಹನ ವಿಮಾ ಸೌಲಭ್ಯ ಹಾಗೂ ಇ-ಸ್ಟಾಂಪಿಂಗ್ ಸೇವೆ ಹೊಂದಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ತಿಳಿಸಿದರು. ಸಂಘವು ತನ್ನ ಕ್ಷಿಪ್ರ ಹಾಗೂ ಪಾರದರ್ಶಕ ಬೆಳವಣಿಗೆಯ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್‌ 2022-23ನೇ ಸಾಲಿನ ಸಾಧನಾ ಪ್ರಶಸ್ತಿ…

Read More

ಮಂಗಳೂರು: ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಬೆಳ್ಳಂಪಳ್ಳಿಯ ಜೈಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಅಗತ್ಯ ವಸ್ತುಗಳ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯರು ಶಾಲೆಗೆ, ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಸ್ಟೀಲ್ ಬಟ್ಟಲು ಮತ್ತು ಲೋಟಗಳನ್ನು ಹಸ್ತಾಂತರಿಸಿ, ಹಿಂದೆ ಬೆಳ್ಳಂಪಳ್ಳಿ ಶಾಖೆಯ ಉದ್ಘಾಟನಾ ಸಂದರ್ಭ ಕಾರ್ಯಕ್ರಮ ನೆರವೇರಿಸಲು ಸ್ಥಳಾವಕಾಶ ನೀಡಿದ ಈ ಶಾಲೆಗೆ ಇಂದು ಅಗತ್ಯ ವಸ್ತುಗಳನ್ನು ನೀಡುವ ಅವಕಾಶ ದೊರೆತಿರುವುದು ಹೆಮ್ಮೆಯ ವಿಷಯ ಎಂದರು. ಹಾವಂಜೆ -ಬೆಳ್ಳಂಪಳ್ಳಿ -ಕುಕ್ಕೆಹಳ್ಳಿ ವಿಶ್ವಕರ್ಮ ಸಮಾಜೋದ್ದಾರಕ ಸಂಘದ ಅಧ್ಯಕ್ಷ ಗೋಪಾಲ ಆಚಾರ್ಯ ಕೀಳಿಂಜೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬೆಳ್ಳಂಪಳ್ಳಿ- ಕುಕ್ಕಿಕಟ್ಟೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ, ಪೆರ್ಡೂರು ಶಾಖೆಯ ನಿವೃತ್ತ ಹಿರಿಯ ಶಾಖಾ ವ್ಯವಸ್ಥಾಪಕ ನಾಗರಾಜ ಪ್ರಭು ಬಿ, ಜೈಹಿಂದ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಂಪಳ್ಳಿ ಶಾಲಾ ಸಂಚಾಲಕ ಬಿ.ಹರೀಶ್…

Read More

ಹಂಪನಕಟ್ಟೆ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಆಯೋಜನೆ ಮಂಗಳೂರು: ಒಡಿಯೂರು ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ, ಸೇವಾ ಸಂಭ್ರಮ ಪ್ರಯುಕ್ತ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಗಸ್ಟ್‌ 4ರಂದು ಭಾನುವಾರ ಬೆಳಗ್ಗೆ 9.30ರಿಂದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಬೃಹತ್‌ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಲಿದೆ. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಮತ್ತು ವಿವಿಧ ಘಟಕಗಳು, ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ, ಬಂಟರ ಸಂಘ ಜಪ್ಪು, ಯುವ ರೆಡ್‌ಕ್ರಾಸ್‌ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಶ್ರೀ ಗುರುದೇವ ಸೇವಾ ಬಳಗ ಮಂಗಳೂರು, ಜಪ್ಪಿನಮೊಗರು ಬಂಟರ ಸಂಘ, ಕ್ರೀಡಾ ಭಾರತಿ ಮಂಗಳೂರು, ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ…

Read More

ಐದನೇ ವಾರ್ಷಿಕ ಮಹಾಸಭೆ ಸಂಪನ್ನ ಪರಿಸರ ಪ್ರೇಮಿ ಮಾಧವ ಉಳ್ಳಾಲ್‌ಗೆ ಸನ್ಮಾನ ಮಂಗಳೂರು: ಸಫಲ ಸೌಹಾರ್ದ ಸಹಕಾರಿಯ ಐದನೇ ವಾರ್ಷಿಕ ಮಹಾಸಭೆ ಕೈಕಂಬದ ಮಾತೃಭೂಮಿ ಗ್ರ್ಯಾಂಡ್ ಗ್ಯಾಲಕ್ಸಿ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ್ದು ಶೇ.12ರಷ್ಟು ಡಿವಿಡೆಂಡ್‌ ಘೋಷಿಸಲಾಗಿದೆ. ಸಲಹಾ ಸಮಿತಿ ಸದಸ್ಯ ರವೀಂದ್ರ ಮಂಜೇಶ್ವರ ಕಾರ್ಯಕ್ರಮ ಉದ್ಘಾಟಿಸಿದರು. ನಿರ್ದೇಶಕ ಭಾಸ್ಕರ ಸಫಲಿಗೆ ಎಡಪದವು ಸ್ವಾಗತಿಸಿದರು. ಸಂಘದ ಸದಸ್ಯ, ಉಳ್ಳಾಲ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರನ್ನುಸನ್ಮಾನಿಸಲಾಯಿತು. ದೀಪಕ್ ಅಡ್ಯಾರ್ ಸಮ್ಮಾನ ಪತ್ರ ವಾಚಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕ ಪ್ರಮೋದ್ ಕುಮಾರ್ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಕೆ, ವಾರ್ಷಿಕ ವರದಿ, ಕಳೆದ ಸಾಲಿನ ಲೆಕ್ಕಪತ್ರ 2024-25ರ ಸಾಲಿನ ಬಜೆಟ್, 2024-25 ಸಾಲಿನ ಉದ್ದೇಶಿತ ಕಾರ್ಯ ಚಟುವಟಿಕೆಗಳು, ಹೊಸ ಶಾಖೆಗಳು, ಹೊಸ ಸಿಬಂದಿ ನೇಮಕಾತಿ ವಿಚಾರಗಳ ಮಂಡನೆ ಮಾಡಿ ಅದಕ್ಕೆ ಅನುಮತಿ ಪಡೆದುಕೊಂಡರು. https://chat.whatsapp.com/Ge11n7QCiMj5QyPvCc0H19 ಸದಸ್ಯರಾದ ಸುಂದರ ಶೆಟ್ಟಿ ಕಣ್ಣೂರು ನಾರಾಯಣ…

Read More

ರಾಜ್ಯಸಭೆಯಲ್ಲಿ ಹಣಕಾಸು ರಾಜ್ಯ ಸಚಿವ ಪಂಕಜ್‌ ಚೌಧರಿ ಮಾಹಿತಿ ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ 2014ರಿಂದ ವಿವಿಧ ಕಾರಣಗಳಿಗಾಗಿ 78 ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಪರವಾನಗಿ ರದ್ದು ಮಾಡಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್‌ ಚೌಧರಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ಅಸಮರ್ಪಕ ಬಂಡವಾಳ, ಕಳಪೆ ಲಾಭ ಗಳಿಕೆ, ಹದಗೆಡುತ್ತಿರುವ ಹಣಕಾಸಿನ ಸ್ಥಿತಿಗತಿಗಳು, ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಹೂಡಿಕೆದಾರರಿಂದ ಠೇವಣಾತಿ ಈ ಎಲ್ಲ ಕಾರಣಗಳಿಂದ ಬ್ಯಾಂಕ್‌ಗಳ ಪರವಾನಗಿ ಹಿಂಪಡೆಯಲಾಗಿದೆ. 2024ರ ಜನವರಿಯಿಂದ ಜುಲೈ ತನಕ 10, 2023ರಲ್ಲಿ 18 ಪಟ್ಟಣ ಸಹಕಾರ ಬ್ಯಾಂಕ್‌ಗಳ ಲೈಸೆನ್ಸ್‌ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸಹಕಾರಿ ಬ್ಯಾಂಕ್‌ಗಳ ಪರಿಣಾಮಕಾರಿ ಕಾರ್ಯನಿರ್ವಹಣೆ ಮತ್ತು ಹಣಕಾಸಿನ ಸ್ಥಿತಿಗತಿ ಮೇಲೆ ನಿಗಾ ಇಡಲು ಆರ್‌ಬಿಐ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು. https://chat.whatsapp.com/Ge11n7QCiMj5QyPvCc0H19 ನಬಾರ್ಡ್‌ ಮಾಹಿತಿಯ ಪ್ರಕಾರ 2014ರಿಂದ ಯಾವುದೇ ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳು, ರಾಜ್ಯಮಟ್ಟದ ಸಹಕಾರಿ ಬ್ಯಾಂಕ್‌ಗಳು ಹಾಗೂ ಜಿಲ್ಲಾ ಕೇಂದ್ರ…

Read More

ಮಂಗಳೂರು: ಮಂಗಳೂರಿನ ನಾರಾಯಣಗುರು ಯುವ ವೇದಿಕೆಯ ರಜತ ಸಂಭ್ರಮ ಸಲುವಾಗಿ ಭಾನುವಾರ ಮಂಗಳೂರು ಪುರಭವನದಲ್ಲಿ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿವೇತನ ವಿತರಣೆ, ಸಾಧನಾಶೀಲರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸಾಧನೆಗಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್‌ ಬೋಳಾರ್‌ ಅವರನ್ನು ಸನ್ಮಾನಿಸಲಾಯಿತು. https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಶ್ರೀ ಸುದರ್ಶನ್ ಕೊಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ.ಹರಿಪ್ರಸಾದ್ ಅವರನ್ನೂ ಗೌರವಿಸಲಾಯಿತು. ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ನಮ್ಮ ಕುಡ್ಲ ಸಂಸ್ಥೆ ಮುಖ್ಯಸ್ಥ ಲೀಲಾಕ್ಷ ಕರ್ಕೇರ, ಡೀನೆಟ್ ಮ್ಯಾನೇಜಿಂಗ್ ಡೈರೆಕ್ಟರ್ ಸಂದೇಶ್ ಪೂಜಾರಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಟಿ.ಸುವರ್ಣ, ಶಿಕ್ಷಣ ತಜ್ಞೆ ಶಶಿಲೇಖಾ, ಪೊಲೀಸ್ ಅಧಿಕಾರಿ ಹರೀಶ್ ಪದವಿನಂಗಡಿ, ಹೋಮಿಯೋಪಥಿ ವೈದ್ಯ ಡಾ.ಶಿವಪ್ರಸಾದ್, ಶಿರ್ಡಿಬಾಬ ರಿಯಲ್ ಎಸ್ಟೇಟ್ ಮಾಲೀಕ ರತೀಂದ್ರನಾಥ್,…

Read More

ಮಹಾರಾಷ್ಟ್ರದ ಹರಿಬಾವು ಬಾಡಗೆಗೆ ಒಲಿದ ಗವರ್ನರ್‌ ಪಟ್ಟ ದೆಹಲಿ: ಹಿರಿಯ ಸಹಕಾರಿ, ಮಹಾರಾಷ್ಟ್ರದ ಹರಿಬಾವು ಬಾಡಗೆ ರಾಜಸ್ಥಾನದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಸಹಕಾರಿ ಕ್ಷೇತ್ರದಿಂದ ರಾಜಕಾರಣಕ್ಕೆ ಕಾಲಿಟ್ಟಿದ್ದ ಬಾಡಗೆ ಮೊದಲಿಗೆ ಸಹಕಾರ ಕ್ಷೇತ್ರದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಔರಂಗಾಬಾದ್‌ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರಾಗಿದ್ದ ಇವರು ಸಹಕಾರ ಭಾರತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಂಭಾಜಿನಗರ(ಔರಂಗಾಬಾದ್‌) ಮೂಲದವರಾದ ಇವರು, ಮರಾಠವಾಡದಲ್ಲಿ ಅತ್ಯುತ್ತಮ ಸಹಕಾರ ಬ್ಯಾಂಕ್‌ಗಳಲ್ಲೊಂದಾದ ದೇವಗಿರಿ ನಗರಿ ಸಹಕಾರಿ ಬ್ಯಾಂಕ್‌ನ ಸ್ಥಾಪಕರಲ್ಲೊಬ್ಬರಾಗಿದ್ದರು. ಛತ್ರಪತಿ ಸಂಭಾಜಿ ರಾಜೆ ಸಹಕಾರ್‌ ಉದ್ಯೋಗ್‌ನ ಮುಖ್ಯಸ್ಥರಾಗಿದ್ದರಲ್ಲದೆ, ಪುಣೆಯ ಜನತಾ ಸಹಕಾರಿ ಬ್ಯಾಂಕ್‌ನ ಷೇರುದಾರರಾಗಿದ್ದರು. 1945ರ ಆಗಸ್ಟ್‌ 17ರಂದು ಜನಿಸಿದ್ದ ಇವರು, 2004ರಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ಕೂಡ ಆಗಿದ್ದರು. 5 ಅವಧಿಗೆ ಫುಲಂಬ್ರಿ ಕ್ಷೇತ್ರದ ಶಾಸಕರಾಗಿದ್ದರು. ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ: Email: editor@sahakaraspandana.in, sahakaraspandana@gmail.com ಮಾಹಿತಿಗೆ: 9901319694.

Read More