ಬಳ್ಳಾರಿ: ಇಲ್ಲಿನ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಎಂಟನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 21ರಂದು ಬೆಳಗ್ಗೆ 11ಕ್ಕೆ ಬಳ್ಳಾರಿಯ ಸಂಗನಕಲ್ಲು ರಸ್ತೆಯ ಕೆಪಿಟಿಸಿಎಲ್ ಆವರಣದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ ಸಮುದಾಯ ಭವನದಲ್ಲಿ ನಡೆಯಲಿದೆ.
ಅದೇ ದಿನ ಬೆಳಗ್ಗೆ 9ರಿಂದ 10.30ರ ತನಕ ಕಚೇರಿಯ ಸ್ವಂತ ಕಟ್ಟಡದಲ್ಲಿ ಪೂಜೆ ಹಮ್ಮಿಕೊಳ್ಳಲಾಗಿದೆ.
2017ರಲ್ಲಿ ಆರಂಭವಾದ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘವು ಕೇವಲ 8 ವರ್ಷಗಳ ಅವದಿಯಲ್ಲಿ ಸಹಕಾರ ಕ್ಷೇತ್ರದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಪ್ರಾರಂಭದ ದಿನಗಳಲ್ಲಿ ರೂ.42 ಲಕ್ಷ ಷೇರು ಹಣದೊಂದಿಗೆ ಪ್ರಾರಂಭವಾದ ಈ ಸಹಕಾರಿ ಸಂಘವು ಸದಸ್ಯರ ಷೇರು ಬಂಡವಾಳ, ಠೇವಣಿ, ನಿರಂತರ ಪಿಗ್ಮಿ ಯೋಜನೆ, ಸಿ.ಆರ್.ಡಿ ಯೋಜನೆ, ಚಾಲ್ತಿ ಖಾತೆಗಳ ಮೂಲಕ ಬಂಡವಾಳ ದೃಢೀಕರಿಸಿ ದುಡಿಯುವ ಬಂಡವಾಳದ ಆರ್ಥಿಕ ಬಲವನ್ನು ಹೆಚ್ಚಿಸಿಕೊಂಡು ಪತ್ತಿನ ವ್ಯಾಪಾರ ವಹಿವಾಟಿನ ಮೂಲಕ ವೃತ್ತಿಪರತೆಯಿಂದ ಮುನ್ನೆಡೆಸುತ್ತ ಬಂದಿದೆ. ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯ ಸಿರಗುಪ್ಪ, ಕಂಪ್ಲಿ, ಹೂವಿನ ಹಡಗಲಿಗಳಲ್ಲಿ ಶಾಖೆಗಳನ್ನು ತೆರೆಯುವುದರ ಮೂಲಕ ವ್ಯಾಪಾರ ವಹಿವಾಟು ವೃದ್ಧಿಸಿಕೊಂಡು ಷೇರುದಾರರ, ಠೇವಣಿದಾರರ ಹಾಗೂ ಸಮಾಜದ ವಿಶ್ವಾಸಕ್ಕೆ ಪಾತ್ರವಾಗಿದೆ.
https://chat.whatsapp.com/Ge11n7QCiMj5QyPvCc0H19
ಈ ಸಹಕಾರಿ ಸಂಘದ ಕಾಣದಿರುವ ಆಸ್ತಿ ಎಂದರೆ ಠೇವಣಿದಾರರ ವಿಶ್ವಾಸ. ಸಹಕಾರ ಕ್ಷೇತ್ರದಲ್ಲಿನ ಪ್ರತಿಯೊಬ್ಬ ಠೇವಣಿದಾರನೂ ಸಂಘದಲ್ಲಿನ ವೃತ್ತಿಪರ ಆಡಳಿತ, ಠೇವಣಿಗಳ ಭದ್ರತೆಯ ವಿಚಾರಗಳನ್ನು ಮನದಟ್ಟು ಮಾಡಿಕೊಂಡೇ ಹಣ ಹೂಡುತ್ತಾರೆ. ಇಂತಹ ಗ್ರಾಹಕರನ್ನು ಉತ್ತೇಜಿಸಿ ಪೋಷಿಸಿಸುವ ಜವಾಬ್ದಾರಿಯು ಆಡಳಿತ ಮಂಡಳಿಯ ಮೇಲಿದ್ದು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಠೇವಣಿದಾರರ, ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವ ವಿಷಯಗಳಲ್ಲಿ ದಕ್ಷತೆಯಿಂದ ಕೂಡಿದ ವ್ಯಾಪಾರ ವಹಿವಾಟನ್ನು ವೃತ್ತಿಪರತೆಯಿಂದ ನಿರ್ವಹಿಸುವಂತಾಗಲು ಸಿಬ್ಬಂದಿಯ ಪಾತ್ರ ಬಹಳಷ್ಟು ಮುಖ್ಯವಾಗಿದ್ದು ಇಂದಿನ ಸಹಕಾರಿಯ ಬೆಳವಣಿಗೆಗೆ ಸಿಬ್ಬಂದಿಗಳ ಕಾರ್ಯಕ್ಷಮತೆಯೂ ಕಾರಣವಾಗಿದೆ. ಶಾಸನಬದ್ದ ಲೆಕ್ಕಪರಿಶೋಧಕರು ಸಂಘದ ಲೆಕ್ಕಪತ್ರಗಳನ್ನು ಪರಿಶೀಲಿಸಿ, ಸಂಘದ ಆಡಳಿತ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ‘ಎ’ ವರ್ಗೀಕರಣ ನೀಡಿದ್ದಾರೆ. ಸಹಕಾರಿಯು ಪ್ರಾರಂಭಿಸಿದ 8 ವರ್ಷಗಳಲ್ಲಿ ಸ್ವಂತ ಕಟ್ಟಡ ಹೊಂದಿದ್ದು ಪ್ರಸಕ್ತ ವರ್ಷದಲ್ಲಿ ಮಹಾಸಭೆಯ ಒಪ್ಪಿಗೆ ಪಡೆದು ಉಪಶಾಖೆಯ ಜೊತೆಗೆ ಸಹಕಾರಿಯ ಆಡಳಿತ ಕಛೇರಿಯ ಪ್ರಾರಂಭಿಸುವ ಮೊದಲ ಹೆಜ್ಜೆ ಇಡಲಾಗುವುದು ಎಂದು ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸಪ್ಪ ಕೇಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಡಳಿತ ಮಂಡಳಿ: ಬಸಪ್ಪ ಕೇಣಿ(ಅಧ್ಯಕ್ಷರು), ಎರ್ರಿಸ್ವಾಮಿ ಬೈಲುವದ್ದಿಗೇರಿ(ಉಪಾಧ್ಯಕ್ಷರು), ವೈ.ಶಂಭುಲಿಂಗಪ್ಪ(ಮುಖ್ಯ ಕಾರ್ಯನಿರ್ವಹಣಾಧಿಕಾರಿ), ನಿರ್ದೇಶಕರು: ಹಾವಿನಾಳ್ ಬಸವರಾಜ್, ಕಲ್ಗುಡಿ ಮಂಜನಾಥ, ಜಿ.ವೀರೇಶ್, ಟೆಂಗಿನಕಾಯಿ ಮಹಾಂತೇಶ್, ಹೆಚ್ ಹೇಮಾದ್ರಿ, ಜಿ.ಜಡೇಮೂರ್ತಿ, ಕೆ.ಎಂ.ಚನ್ನರಾಮೇಶ್ವರ, ಬಾಡದ ಪ್ರಕಾಶ್, ಶಿವಾ ರಮೇಶ್, ವಂಟೆ ನಾಗರಾಜ್, ಹಾವಿನಾಳ್ ನೀಲಾವತಿ, ಜಿ.ಉಮಾದೇವಿ. ಕಾರ್ಯನಿರತ ನಿರ್ದೇಶಕರು: ಆರ್.ಮಲ್ಲಿಕಾರ್ಜುನ ಗೌಡ, ಗಾಳಿ ರಾಜಶೇಖರ, ಮುಂಡವಾಡ ಉಮೇಶ. ನಾಮ ನಿರ್ದೇಶಕರು: ಜಾನೇಕುಂಟೆ ತಿಪ್ಪೇರುದ್ರಪ್ಪ, ಶಿಡಿಗಿನಮೊಳೆ ಬಸವರಾಜ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com